ಮಕ್ಕಳ ಜೊತೆಗೆ ಟ್ರಿಪ್ ಹೋಗುವಾಗ ಈ ಕ್ರಮಗಳನ್ನು ಅನುಸರಿಸಿದರೆ ನಿಮ್ಮ ಟ್ರಿಪ್ ಇನ್ನಷ್ಟು ವಂಡರ್‌ಫುಲ್!

ಪ್ರವಾಸ ಎಂದರೆ ಎಲ್ಲರಿಗೂ ಕೂಡ ಇಷ್ಟನೇ. ಮನಸ್ಸಿಗೆ ಹತ್ತಿರವಾಗುವ ಸ್ಥಳಕ್ಕೆ ಭೇಟಿ ನೀಡಿದರೆ ಅದಕ್ಕಿಂತ ಖುಷಿ ಮತ್ತೊಂದಿಲ್ಲ. ಆದರೆ ಮಕ್ಕಳ ಜೊತೆಗೆ ಪ್ರವಾಸ ಮಾಡುವುದು ಸುಲಭವಲ್ಲ ಬಿಡಿ. ಮಕ್ಕಳ ಜೊತೆಗೆ ದೂರದ ಸ್ಥಳಗಳಿಗೆ ಪ್ರಯಾಣ ಬೆಳೆಸುವುದು ಕೆಲವೊಮ್ಮೆ ಕಿರಿಕಿರಿ ಅನಿಸಬಹುದು. ಪ್ರಯಾಣದ ವೇಳೆಯಲ್ಲಿ ಕೆಲವೊಮ್ಮೆ ಆರೋಗ್ಯ ಕೈಕೊಟ್ಟರೆ ಟ್ರಿಪ್ ಮೂಡ್ ಹಾಳಾಗಬಹುದು. ಹೀಗಾಗಿ ಮಕ್ಕಳ ಜೊತೆಗೆ ಟ್ರಿಪ್ ಹೋಗುತ್ತಿದ್ದರೆ, ಈ ಟಿಪ್ಸ್ ಗಳನ್ನು ಅನುಸರಿಸುವುದನ್ನು ಮರೆಯಬೇಡಿ.

ಮಕ್ಕಳ ಜೊತೆಗೆ ಟ್ರಿಪ್ ಹೋಗುವಾಗ ಈ ಕ್ರಮಗಳನ್ನು ಅನುಸರಿಸಿದರೆ ನಿಮ್ಮ ಟ್ರಿಪ್ ಇನ್ನಷ್ಟು ವಂಡರ್‌ಫುಲ್!
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 23, 2024 | 12:37 PM

ಪ್ರಕೃತಿಯ ಸೌಂದರ್ಯ ಸವಿಯುತ್ತ ವಿವಿಧ ಸ್ಥಳಗಳಿಗೆ ಭೇಟಿ ನೀಡುವುದು . ತಮ್ಮ ಇಷ್ಟ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಪ್ರಯಾಣದ ಜೊತೆಜೊತೆಗೆ ಇಷ್ಟವಾದ ಹಾಡುಗಳು ಕೇಳುತ್ತ ಹೋದರೆ ಅದರ ಮಜಾನೇ ಬೇರೆ. ಆದರೆ ಮಕ್ಕಳಿರುವವರು ಟ್ರಿಪ್ ಎಂಜಾಯ್ ಮಾಡುವುದು ಸ್ವಲ್ಪ ಕಷ್ಟವೇ. ಸದಾ ಕಿರಿಕಿರಿಯನ್ನುಂಟು ಮಾಡುವ ಮಕ್ಕಳು ಇದ್ದು ಬಿಟ್ಟರೆ ಕೇಳುವುದೇ ಬೇಡ ಬಿಡಿ. ಹೀಗಾಗಿ ಮಕ್ಕಳ ಜೊತೆಗೆ ಟ್ರಿಪ್ ಹೋಗಲು ಪ್ಲಾನ್ ಮಾಡಿಕೊಂಡಿದ್ದರೆ ಸ್ಥಳಗಳ ಆಯ್ಕೆಯ ಬಗ್ಗೆ, ಕೆಲವು ಅಗತ್ಯ ಪರಿಕರಗಳು, ಹಾಗೂ ಇನ್ನಿತ್ತರ ವಿಚಾರಗಳ ಬಗ್ಗೆ ಗಮನ ಕೊಡಬೇಕಾಗುತ್ತದೆ.

ಮಕ್ಕಳ ಜೊತೆಗೆ ಟ್ರಿಪ್ ತೆರಳುವಾಗ ಈ ಬಗ್ಗೆ ತಿಳಿದಿರಲಿ

* ಸ್ಥಳಗಳ ಆಯ್ಕೆಯ ಬಗ್ಗೆ ಗಮನವಹಿಸಿ: ಮಕ್ಕಳ ಜೊತೆಗೆ ಟ್ರಿಪ್ ಪ್ಲಾನ್ ಮಾಡುವಾಗ ಸ್ಥಳಗಳ ಆಯ್ಕೆಯತ್ತ ಹೆಚ್ಚು ಗಮನವಹಿಸಬೇಕು. ಋತುಮಾನಕ್ಕೆ ಅನುಗುಣವಾಗಿ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಿ. ಕೆಲವೊಮ್ಮೆ ನೀವು ಆಯ್ಕೆ ಮಾಡಿಕೊಳ್ಳುವ ತಾಣಗಳಲ್ಲಿ ಹವಾಮಾನ ಬದಲಾವಣೆಯಿದ್ದರೆ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

* ವಾಹನಗಳ ಆಯ್ಕೆ ಸರಿಯಾಗಿರಲಿ: ಟ್ರಿಪ್​ಗೆ ಹೋಗಲು ಪ್ಲಾನ್ ಮಾಡಿಕೊಂಡಿದ್ದರೆ, ಸ್ವಂತ ವಾಹನಗಳಲ್ಲಿ ಹೋಗುವುದು ಬೆಸ್ಟ್ ಎನ್ನಬಹುದು. ಬಸ್ಸುಗಳಲ್ಲಿ ಓಡಾಡುವುದರಿಂದ ಮಕ್ಕಳು ಬೇಗನೇ ಸುಸ್ತಾಗಬಹುದು. ಇದು ನಿಮಗೂ ಕೂಡ ಕಿರಿಕಿರಿಯನ್ನುಂಟು ಮಾಡುತ್ತದೆ. ಈ ಸಮಯದಲ್ಲಿ ಮಕ್ಕಳು ನಿದ್ರೆಗೆ ಜಾರಿದರೆ ನಿಭಾಯಿಸಲು ಕಷ್ಟವಾಗಬಹುದು. ಹೀಗಾಗಿ ಕಾರು ತೆಗೆದುಕೊಂಡು ಹೋದರೆ, ಕಾರಿನ ಸೀಟಿನಲ್ಲಿ ಮಕ್ಕಳು ಆರಾಮದಾಯಕವಾಗಿ ಮಲಗಿಸಬಹುದು.

* ಹಗುರವಾಗಿ ಲಾಗೇಜ್ ಬ್ಯಾಗ್​​​ಗಳಿರಲಿ : ಮಕ್ಕಳ ಜೊತೆಗೆ ಟ್ರಿಪ್ ಹೋಗುವ ಲಾಗೇಜ್ ಬ್ಯಾಗ್​​​ಗಳು ಹಗುರವಿದ್ದರೇನೇ ಉತ್ತಮ. ಈ ಹೆವಿ ಲಾಗೇಜ್ ಗಳನ್ನು ತೆಗೆದುಕೊಂಡು ಹೋದರೆ ಮಕ್ಕಳ ಜೊತೆಗೆ ಲಾಗೇಜ್ ಬ್ಯಾಗ್ ಅನ್ನು ಹ್ಯಾಂಡಲ್ ಮಾಡಲು ಕಷ್ಟವಾಗಬಹುದು.

ಇದನ್ನೂ ಓದಿ:ಆಹಾರದಿಂದ ಲಾಂಗ್ ಟ್ರಿಪ್ ಮೋಜು ಮಸ್ತಿ ಹಾಳಾಗಬಾರದೆಂದರೆ, ಈ ವಿಷಯಗಳು ನೆಪನಪಿನಲ್ಲಿರಲಿ

* ಲಾಗೇಜ್​​​ನಲ್ಲಿ ಮಕ್ಕಳಿಗೆ ಅಗತ್ಯವಿರುವ ವಸ್ತುಗಳಿರಲಿ: ಲಾಗೇಜ್ ಬ್ಯಾಗ್ ನಲ್ಲಿ ಬಟ್ಟೆಯ ಜೊತೆಗೆ ಅಗತ್ಯ ವಸ್ತುಗಳನ್ನು ಇರಿಸಿಕೊಳ್ಳಿ. ಪವರ್ ಬ್ಯಾಂಕ್, ಔಷಧಿಗಳು, ವಾಟರ್ ಬಾಟಲ್ ಹಾಗೂ ಕ್ರೀಮ್ ಸೇರಿದಂತೆ ಇನ್ನಿತ್ತರ ವಸ್ತುಗಳನ್ನು ಜೊತೆಯಲ್ಲಿ ಇಟ್ಟುಕೊಂಡಿದ್ದರೆ ಒಳ್ಳೆಯದು.

* ಆಹಾರಗಳ ಬಗ್ಗೆ ಗಮನಕೊಡಿ: ಸುತ್ತಾಡಲು ಹೋಗಿದ್ದೇವೆ ಎನ್ನುವ ಕಾರಣಕ್ಕೆ ಮಕ್ಕಳು ವಿವಿಧ ತಿನಿಸುಗಳನ್ನು ತೆಗೆಸಿಕೊಡಿ ಎಂದು ನಿಮ್ಮ ಬಳಿ ಹಠಹಿಡಿಯುವುದು ಸಹಜ. ಆದರೆ ಪೋಷಕರು ಮಕ್ಕಳಿಗೆ ರಸ್ತೆ ಬದಿಯಲ್ಲಿ ಮಾರಾಟವಾಗುವ ಆಹಾರವನ್ನು ನೀಡದಿರುವುದು ಒಳ್ಳೆಯದು. ಆಹಾರ ಸೇವನೆಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಕೂಡ ಮಕ್ಕಳ ಆರೋಗ್ಯವು ಕೈಕೊಡಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ:

ರಾತ್ರೋರಾತ್ರಿ ಬಳ್ಳಾರಿ ಜೈಲಿನಿಂದ ಆಂಬ್ಯುಲೆನ್ಸ್​ ಮೂಲಕ ದರ್ಶನ್ ಶಿಫ್ಟ್
ರಾತ್ರೋರಾತ್ರಿ ಬಳ್ಳಾರಿ ಜೈಲಿನಿಂದ ಆಂಬ್ಯುಲೆನ್ಸ್​ ಮೂಲಕ ದರ್ಶನ್ ಶಿಫ್ಟ್
20 ರೂಪಾಯಿಗಾಗಿ ಜಗಳ; ರಿಕ್ಷಾ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
20 ರೂಪಾಯಿಗಾಗಿ ಜಗಳ; ರಿಕ್ಷಾ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ಜೈಲಿನಲ್ಲಿ ದರ್ಶನ್ ಭೇಟಿ ಬಳಿಕ ಬೇಸರ ಮಾಡಿಕೊಂಡು ಹೊರಟ ವಿಜಯಲಕ್ಷ್ಮಿ
ಜೈಲಿನಲ್ಲಿ ದರ್ಶನ್ ಭೇಟಿ ಬಳಿಕ ಬೇಸರ ಮಾಡಿಕೊಂಡು ಹೊರಟ ವಿಜಯಲಕ್ಷ್ಮಿ
ಪಾರ್ಕಿಂಗ್​ಗೆ ಅವಕಾಶ ನೀಡದ ಸೆಕ್ಯುರಿಟಿ ಮೇಲೆ ಮಹಿಳೆಯಿಂದ ಅಟ್ಯಾಕ್
ಪಾರ್ಕಿಂಗ್​ಗೆ ಅವಕಾಶ ನೀಡದ ಸೆಕ್ಯುರಿಟಿ ಮೇಲೆ ಮಹಿಳೆಯಿಂದ ಅಟ್ಯಾಕ್
ಪಾಕ್ ಪರ ಘೋಷಣೆ ಕೂಗಿದ್ದಕ್ಕೆ 21 ಬಾರಿ ಭಾರತ್ ಮಾತಾಕಿ ಜೈ ಹೇಳಿಸಿದ ಕೋರ್ಟ್!
ಪಾಕ್ ಪರ ಘೋಷಣೆ ಕೂಗಿದ್ದಕ್ಕೆ 21 ಬಾರಿ ಭಾರತ್ ಮಾತಾಕಿ ಜೈ ಹೇಳಿಸಿದ ಕೋರ್ಟ್!
ಸಿಎಂ, ಡಿಸಿಎಂ ಸಿಟಿ ರೌಂಡ್ಸ್​ ಹಾಕಿದರೂ ದುರಸ್ತಿಯಾಗದ ಬೆಂಗಳೂರು ರಸ್ತೆಗಳು
ಸಿಎಂ, ಡಿಸಿಎಂ ಸಿಟಿ ರೌಂಡ್ಸ್​ ಹಾಕಿದರೂ ದುರಸ್ತಿಯಾಗದ ಬೆಂಗಳೂರು ರಸ್ತೆಗಳು
ಬುಂಡೆಸ್ಲಿಗಾ 7ನೇ ದಿನದ ಪಂದ್ಯ; ಟಾಪ್ 5 ಗೋಲ್​ಗಳನ್ನು ಮಿಸ್ ಮಾಡಬೇಡಿ
ಬುಂಡೆಸ್ಲಿಗಾ 7ನೇ ದಿನದ ಪಂದ್ಯ; ಟಾಪ್ 5 ಗೋಲ್​ಗಳನ್ನು ಮಿಸ್ ಮಾಡಬೇಡಿ
ವಿರೋಧಪಕ್ಷಗಳ ನಾಯಕರಿಗೆ ನನ್ನನ್ನು ಕಂಡು ಹೊಟ್ಟೆಯುರಿ: ಸಿದ್ದರಾಮಯ್ಯ
ವಿರೋಧಪಕ್ಷಗಳ ನಾಯಕರಿಗೆ ನನ್ನನ್ನು ಕಂಡು ಹೊಟ್ಟೆಯುರಿ: ಸಿದ್ದರಾಮಯ್ಯ
ಪ್ರಧಾನಿ ಮೋದಿಯವರಿಗೋಸ್ಕರ ಎಲ್ಲವನ್ನು ಸಹಿಸಿಕೊಂಡಿದ್ದೇವೆ: ಕುಮಾರಸ್ವಾಮಿ
ಪ್ರಧಾನಿ ಮೋದಿಯವರಿಗೋಸ್ಕರ ಎಲ್ಲವನ್ನು ಸಹಿಸಿಕೊಂಡಿದ್ದೇವೆ: ಕುಮಾರಸ್ವಾಮಿ
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್