Egg Storage Tips: ಮೊಟ್ಟೆಗಳನ್ನು ಈ ರೀತಿ ಶೇಖರಿಸಿಟ್ಟರೆ ಹಲವು ದಿನಗಳವರೆಗೆ  ಕೆಡುವುದಿಲ್ಲ

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 28, 2023 | 6:48 PM

ಕೆಲವೊಬ್ಬರು ಮಾರುಕಟ್ಟೆಯಿಂದ ಒಮ್ಮೆಗೆ ಡಜನ್ ಗಟ್ಟಲೆ ಮೊಟ್ಟೆಗಳನ್ನು ತರುತ್ತಾರೆ. ಆದರೆ ಅವುಗಳನ್ನು ಸರಿಯಾದ ರೀತಿಯಲ್ಲಿ ಸಂಗ್ರಹಿಸಿಡದಿದ್ದಾಗ, ಅವುಗಳು ಬೇಗನೇ ಕೆಟ್ಟು ಹೋಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಮೊಟ್ಟೆಯಗಳನ್ನು ಸರಿಯಾದ ರೀತಿಯಲ್ಲಿ ಸಂಗ್ರಹಿಸಿಡುವುದು ತುಂಬಾ ಮುಖ್ಯ.  ಇಲ್ಲದಿದ್ದರೆ ಮೊಟ್ಟೆ ಅವಧಿಗೂ ಮುನ್ನವೇ  ಕೆಡುವ ಸಾಧ್ಯತೆ ತುಂಬಾ ಇರುತ್ತದೆ.

Egg Storage Tips: ಮೊಟ್ಟೆಗಳನ್ನು ಈ ರೀತಿ ಶೇಖರಿಸಿಟ್ಟರೆ ಹಲವು ದಿನಗಳವರೆಗೆ  ಕೆಡುವುದಿಲ್ಲ
ಸಾಂದರ್ಭಿಕ ಚಿತ್ರ
Follow us on

ಮೊಟ್ಟೆ ಪೋಷಕಾಂಶಗಳ ಸಮೃದ್ಧ ಮೂಲವಾಗಿದೆ. ಇದರಲ್ಲಿ  ಪ್ರೋಟೀನ್, ವಿಟಮಿನ್ ಡಿ, ವಿಟಮಿನ್ ಬಿ, ಕಬ್ಬಿಣಾಂಶ ಮತ್ತು ಇತರ ಪೋಷಕಾಂಶಗಳು ಉತ್ತಮ ಪ್ರಮಾಣದಲ್ಲಿದ್ದು, ಇವು ನಮ್ಮ   ಚರ್ಮ, ಕೂದಲಿನ ಆರೋಗ್ಯಕ್ಕೆ  ತುಂಬಾ ಪ್ರಯೋಜನಕಾರಿಯಾಗಿದೆ. ಹಾಗೂ  ನಿಯಮಿತವಾಗಿ ಸೀಮಿತ ಪ್ರಮಾಣದಲ್ಲಿ ಮೊಟ್ಟೆಯನ್ನು ತಿನ್ನುವ ಮೂಲಕ ಹೃದಯ, ಮೆದುಳು ಮತ್ತು ಮೂಳೆಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹೀಗೆ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿರುವ ಮೊಟ್ಟೆಯನ್ನು ಅನೇಕ ಜನರು ಒಮ್ಮೆಗೆ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿ ಮಾಡುತ್ತಾರೆ.  ಹೀಗೆ ತಂದ ಮೊಟ್ಟೆಗಳನ್ನು ಮನೆಯಲ್ಲಿ ಸರಿಯಾದ ರೀತಿಯಲ್ಲಿ ಸಂಗ್ರಹಿಸಿಡದಿದ್ದರೆ, ಅವುಗಳು  ಅವಧಿಗೂ ಮುನ್ನವೇ ಕೆಟ್ಟು ಹೋಗುವ ಸಾಧ್ಯತೆ ಹೆಚ್ಚಿರುತ್ತದೆ.  ಹಾಗಾಗಿ ಮೊಟ್ಟೆಯಗಳನ್ನು ಸರಿಯಾದ ರೀತಿಯಲ್ಲಿ ಸಂಗ್ರಹಿಸಿಡುವುದು ತುಂಬಾ ಮುಖ್ಯ.

ಮೊಟ್ಟೆಗಳು ಕೆಡದಂತೆ ಸಂಗ್ರಹಿಸಿಡಲು ಸರಿಯಾದ ಮಾರ್ಗ:

ಮೊಟ್ಟೆಗಳನ್ನು ಸಂಗ್ರಹಿಸಿಡಲು ಸುಲಭ ಮತ್ತು ಉತ್ತಮವಾದ ಮಾರ್ಗವೆಂದರೆ ಅವುಗಳನ್ನು ರೆಫ್ರಿಜರೇಟರ್ನಲ್ಲಿಡುವುದು. ಆದರೆ ನೀವು ಮೊಟ್ಟೆಯನ್ನು ರೆಫ್ರಿಜರೇಟರ್ನ ಮಧ್ಯದ ರ್ಯಾಕ್ನಲ್ಲಿ ಮಾತ್ರ ಸಂಗ್ರಹಿಸಿಡಬೇಕು. ಏಕೆಂದರೆ ಇಲ್ಲಿ ತಾಪಮಾನವು ಯಾವಾಗಲೂ ಒಂದೇ ರೀತಿ ಇರುತ್ತದೆ.  ನೀವು  ಮೊಟ್ಟೆಗಳನ್ನು ರೆಫ್ರಿಜರೇಟರ್ನ  ಬಾಗಿಲಿನ  ವಿಭಾಗದಲ್ಲಿ ಮೊಟ್ಟೆಗಳನ್ನು ಸಂಗ್ರಹಿಸಿದರೆ ಅದು ಬೇಗನೆ ಕೆಟ್ಟು ಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಅಷ್ಟೇ ಅಲ್ಲದೆ ರೆಫ್ರಿಜರೇಟರ್ನಲ್ಲಿ 4  ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಮಾತ್ರ ಮೊಟ್ಟೆಗಳನ್ನು ಸಂಗ್ರಹಿಸಿಡಬೇಕೆಂದು ಹೇಳಲಾಗುತ್ತದೆ.

ರೆಫ್ರಿಜರೇಟರ್ ಇಲ್ಲದೆ ಮೊಟ್ಟೆಗಳನ್ನು ಕೆಡದಂತೆ ಸಂಗ್ರಹಿಸಿಡುವುದು ಹೇಗೆ:

ನೀವು ಮೊಟ್ಟೆಗಳನ್ನು ಫ್ರಿಜ್ನಲ್ಲಿ ಇಡಲು ಬಯಸದಿದ್ದರೆ,  ಅವುಗಳನ್ನು ಸೆಣಬಿನ ಚೀಲ ಅಥವಾ ಮಣ್ಣಿನ ಪಾತ್ರೆಯಲ್ಲಿಯೂ ಸಂಗ್ರಹಿಸಿಡಬಹುದು. ಒಂದು ರಟ್ಟಿನ ಬುಟ್ಟಿಯನ್ನು ತೆಗೆದುಕೊಂಡು ಅದರ ಒಳಗೆ ಸೆಣಬಿನ ಗೋಣಿ ಚೀಲವನ್ನಿಟ್ಟು ಅದರ ಮೇಲೆ ಮೊಟ್ಟೆಯನ್ನು ಸಂಗ್ರಹಿಸಿಡಬಹುದು. ಅಥವಾ ಒಂದು ಮಣ್ಣಿನ ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ಒಣ ಹುಲ್ಲನ್ನಿಟ್ಟು ಅದರ ಮೇಲೆ ಮೊಟ್ಟೆಗಳನ್ನು ಸಂಗ್ರಹಿಸಿಡಬಹುದು.  ಈ ರೀತಿಯಾಗಿ ಮೊಟ್ಟೆಗಳನ್ನು ಸಂಗ್ರಹಿಸಿಟ್ಟರೆ ಅವುಗಳು ದೀರ್ಘಕಾಲದವರೆಗೆ ಕೆಡುವುದಿಲ್ಲ.

ಇದನ್ನೂ ಓದಿ: ಅತಿಯಾದ ಮೊಟ್ಟೆ ಸೇವನೆಯು ಒಳ್ಳೆಯದಲ್ಲ! ಆರೋಗ್ಯದ ಮೇಲೆ ಅಡ್ಡ ಪರಿಣಾಮ

ಮೊಟ್ಟೆ ಕೆಟ್ಟು ಹೋಗಿದೆಯೇ ಎಂದು ಪರೀಕ್ಷಿಸುವುದು ಹೇಗೆ?

ಮೊಟ್ಟೆ ತಿನ್ನಲು ಯೋಗ್ಯವಾಗಿದೆಯೇ ಅಥವಾ ಇಲ್ಲವೆ ಎಂಬುದನ್ನು ಪರೀಕ್ಷಿಸಲು ಒಂದು ಬಟ್ಟಲಿನಲ್ಲಿ ತಣ್ಣೀರನ್ನು  ನೀರನ್ನು ತೆಗೆದುಕೊಂಡು ಅದರಲ್ಲಿ ಮೊಟ್ಟೆಯನ್ನು ಹಾಕಿ. ತಾಜಾ ಮೊಟ್ಟೆ ನೀರಿನಲ್ಲಿ ಹಾಕಿದ ತಕ್ಷಣ ಮುಳುಗುತ್ತದೆ, ಆದರೆ ಹಾಳಾದ ಮೊಟ್ಟೆ ನೀರಿನಲ್ಲಿ ತೇಲುತ್ತದೆ.  ಇದಲ್ಲದೆ ನೀವು ಮೊಟ್ಟೆಯನ್ನು ಕೈಯಲ್ಲಿ ಹಿಡಿದು  ಅಲುಗಾಡಿಸುವ ಮೂಲಕವೂ ಮೊಟ್ಟೆ ಕೆಟ್ಟು ಹೋಗಿದೆಯೇ ಎಂದು ಪರಿಶೀಲಿಸಬಹುದು. ಹೀಗೆ ಮೊಟ್ಟೆಯನ್ನು ಅಲ್ಲಾಡಿಸುವಾಗ ಅದರಿಂದ ಶಬ್ದ ಬಂದರೆ ಅದು ಕೆಟ್ಟು ಹೋಗಿದೆ ಎಂದು ಅರ್ಥ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ