ದೀಪಾವಳಿ ಹಬ್ಬಕ್ಕೆ ಇನ್ನೇನು ಕ್ಷಣಗಣನೆ ಶುರುವಾಗಿದೆ. ಹಬ್ಬದ ದಿನಗಳು ಸಮೀಪಿಸುತ್ತಿದ್ದಂತೆ ಮನೆಯನ್ನು ಶುಚಿಗೊಳಿಸುವ ಕೆಲಸವು ಭರದಿಂದ ಸಾಗುತ್ತಿದೆ. ಮನೆಯಲ್ಲಿನ ನಕಾರಾತ್ಕಕತೆಯನ್ನು ತೊಡೆದುಹಾಕಿ ಹಬ್ಬದ ದಿನ ಸಕರಾತ್ಮಕತೆ ಮತ್ತು ಸಮೃದ್ಧಿಯನ್ನು ಬರಮಾಡಿಕೊಳ್ಳಲು ಹೆಚ್ಚಿನ ಜನರು ಸಂಪೂರ್ಣ ಮನೆಯನ್ನು ಸ್ವಚ್ಛಗೊಳಿಸುತ್ತಾರೆ. ಮನೆಯನ್ನು ಶುಚಿಗೊಳಿಸುವಂತೆ, ಹಬ್ಬದ ದಿನ ಮನೆಯನ್ನು ಸುಂದರವಾಗಿ ಅಲಂಕರಿಸುವುದು ಕೂಡಾ ಅಷ್ಟೇ ಮುಖ್ಯ. ಆದರೆ ಹೆಚ್ಚಿನವರು ಯಾವ ರೀತಿ ಮನೆಯನ್ನು ಅಲಂಕರಿಸಿದರೆ ಸೂಕ್ತ ಎಂಬ ಗೊಂದಲದಲ್ಲಿರುತ್ತಾರೆ. ನೀವು ಕೂಡ ಅದೇ ರೀತಿ ಗೊಂದಲದಲ್ಲಿದ್ದರೆ, ಈ ಕೆಲವೊಂದು ಸಲಹೆಗಳನ್ನು ಅನುಸರಿಸುವ ಮೂಲಕ ಮನೆಯನ್ನು ಅಲಂಕರಿಸಿ.
ದೀಪಾವಳಿ ಹಬ್ಬದಂದು ಮನೆಯನ್ನು ದೀಪಗಳಿಂದ ಅಲಂಕರಿಸಬಹುದು. ಬೆಳಕಿನ ಹಬ್ಬದಲ್ಲಿ ಮನೆಯನ್ನು ದೀಪಗಳಿಂದ ಅಲಂಕರಿಸುವುದೇ ಒಂದು ಚೆಂದ. ಮಾರುಕಟ್ಟೆಗಳಲ್ಲಿ ಹಲವು ವಿಧದ ಆಂಟಿಕ್ ಡಿಸೈನ್ಸ್ ದೀಪಗಳಿವೆ. ಆ ದೀಪಗಳನ್ನು ಬಳಸಿಕೊಂಡು ಮನೆಯನ್ನು ಅಲಂಕರಿಸಬಹುದು. ಹಾಗೂ ದೇವರ ಕೋಣೆಯಲ್ಲಿ ಹ್ಯಾಂಗಿಗ್ ದೀಪಗಳನ್ನಿಟ್ಟು ಅಲಂಕರಿಸಬಹುದು. ಮನೆಯ ಮುಖ್ಯ ದ್ವಾರದ ಬಳಿ, ಅಂಗಳದಲ್ಲಿ ಹಾಗೂ ಮನೆಯ ಮೂಳೆಗಳಲ್ಲಿ (ಕಾರ್ನರ್) ಹೂವುಗಳಿಂದ ಸುಂದರವಾದ ರಂಗೋಲಿಯನ್ನು ಬಿಡಿಸಿ, ಆ ರಂಗೋಲಿಯ ಸುತ್ತಲೂ ದೀಪಗಳಿಂದ ಅಲಂಕರಿಸಬಹುದು. ಈ ರೀತಿಯಾಗಿ ಪೂರ್ತಿ ಮನೆಯನ್ನು ದೀಪಗಳಿಂದ ಅಲಂಕರಿಸಬಹುದು. ಈ ದೀಪಾಲಂಕಾರ ಮನೆಗೆ ಸಂಪ್ರಾದಾಯಿಕ ನೋಟವನ್ನು ನೀಡುವುದು ಮಾತ್ರವಲ್ಲದೆ ಹಬ್ಬದ ಕಳೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. .
ಹಬ್ಬಗಳಲ್ಲಿ ಮನೆಯ ಅಲಂಕಾರದ ವಿಷಯ ಬಂದಾಗ ಮೊದಲು ನೆನಪಾಗುವುದೇ ಹೂವಿನ ಅಲಂಕಾರ. ಈ ಬಾರಿಯ ದೀಪಾವಳಿಯ ಹಬ್ಬಕ್ಕೆ ಮನೆಗೆ ಅಲಂಕಾರಿಕ ವಸ್ತುಗಳನ್ನು ಖರೀದಿಸಲು ಸಾಕಷ್ಟು ಸಮಯವಿಲ್ಲ ಎಂದಾದರೆ, ನೀವು ಸರಳವಾಗಿ ಹೂವಿನ ಅಲಂಕಾರ ಮಾಡಬಹುದು. ಮನೆಯ ಮುಖ್ಯ ದ್ವಾರ ಹಾಗೂ ದೇವರ ಕೋಣೆಯ ಬಾಗಿಲಿಗೆ ಹಳದಿ ಮತ್ತು ಕೇಸರಿ ಬಣ್ಣದ ಚೆಂಡು ಹೂವಿನ ಮಾಲೆಯನ್ನು ಹಾಕಿ ಅಲಂಕರಿಸಬಹುದು. ಅಲ್ಲದೆ ವಿವಿಧ ರೀತಿಯ ಹೂಮಾಲೆಗಳೂ ಮಾರುಕಟ್ಟೆಯಲ್ಲಿ ಲಭ್ಯವಿದೆ, ಅವುಗಳಿಂದಲೂ ಅಲಂಕರಿಸಬಹುದು. ಹೂವುಗಳಿಂದ ರಂಗೋಲಿಯನ್ನು ಬಿಡಿಸಿ ಅದರ ಸುತ್ತಲೂ ದೀಪಗಳನ್ನಿಟ್ಟು ಅಲಂಕಾರ ಮಾಡಬಹುದು. ಅಥವಾ ನೀವು ವಿವಿಧ ಡಿಸೈನ್ಗಳಲ್ಲಿ ಲಭ್ಯವಿರುರ ಕ್ಯಾಂಡಲ್ಗಳನ್ನು ಕೂಡಾ ಅಲಂಕಾರಕ್ಕೆ ಬಳಸಿಕೊಳ್ಳಬಹುದು.
ಇದನ್ನೂ ಓದಿ: ಸಮೃದ್ಧಿಗಾಗಿ ದೀಪಾವಳಿಯಂದು ಖರೀದಿಸಬೇಕಾದ 5 ವಸ್ತುಗಳು
ರಂಗೋಲಿಯನ್ನು ಸಕಾರಾತ್ಮಕತೆಯ ಸಂಕೇತವೆಂದು ಪರಿಗಣಿಸಲಾಗಿದೆ. ಜೊತೆಗೆ ಇದು ಎಲ್ಲಾ ಹಬ್ಬಗಳಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ನೀವು ಈ ಬಾರಿಯ ದೀಪಾವಳಿ ಹಬ್ಬದಂದು ನಿಮ್ಮ ಮನೆಯನ್ನು ರಂಗೋಲಿಯಿಂದ ಅಲಂಕರಿಸಬಹುದು. ರಂಗೋಲಿ ತಯಾರಿಸಲು ಬೇಕಾದ ವಿವಿಧ ಬಣ್ಣಗಳು ಮತ್ತು ಇತರ ಅಗತ್ಯ ವಸ್ತುಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿದೆ. ಇದನ್ನು ಬಳಸಿಕೊಂಡು ಮನೆಯ ಅಂಗಳ, ಮನೆಯ ಪ್ರವೇಶ ದ್ವಾರದ ಬಳಿ ಹಾಗೂ ದೇವರ ಕೋಣೆಯನ್ನು ರಂಗೋಲಿಯಿಂದ ಅಲಂಕರಿಸಬಹುದು. ರಂಗೋಲಿ ಪುಡಿಯಿಂದ ಮಾತ್ರವಲ್ಲದೆ ವಿವಿಧ ಬಣ್ಣದ ಹೂವುಗಳಿಂದಲೂ ಸುಂದರವಾದ ರಂಗೋಲಿಯನ್ನು ಬಿಡಿಸಬಹುದು. ರಂಗೋಲಿಯನ್ನು ಬಿಡಿಸಿ ಅದರ ಸುತ್ತ ದೀಪವನ್ನು ಅಥವಾ ಕ್ಯಾಂಡಲ್ ಇಟ್ಟು ಅಲಂಕರಿಸಬಹುದು. ವಾಸ್ತು ಪ್ರಕಾರ, ಯಾವುದೇ ಹಬ್ಬದಂದು ಮನೆಯ ಪ್ರವೇಶ ದ್ವಾರದ ಬಳಿ ತೋರಣ, ರಂಗೋಲಿ ಮತ್ತು ದೀಪಾಲಂಕಾರ ಮಾಡುವುದರಿಂದ ಮನೆಯಲ್ಲಿ ಸಕರಾತ್ಮಕತೆ ಮತ್ತು ಸಂಪತ್ತು ನೆಲೆಸುತ್ತದೆ ಎಂದು ಹೇಳಲಾಗುತ್ತದೆ.
ನೀವು ಮನೆಯ ಒಳಾಂಗಣವನ್ನು ದೀಪಗಳು ಹಾಗೂ ವಿವಿಧ ಅಲಂಕಾರಿಕ ವಸ್ತುಗಳಿಂದ ಅಲಕಂರಿಸುವಂತೆ, ಮನೆಯ ಹೊರಾಂಗಣವನ್ನು ಸ್ಟ್ರಿಂಗ್ ಲೈಟ್ಸ್ಗಳಿಂದ ಅಲಂಕರಿಸಬಹುದು. ಮನೆಯ ಗೋಡೆಯ ಸುತ್ತ ಅಥವಾ ಮನೆಯ ಮುಂಬಾಗವನ್ನು ಸ್ಟ್ರಿಂಗ್ ಲೈಟ್ಸ್ಗಳಿಂದ ಅಲಂಕರಿಸಬಹುದು. ಇದು ಹಬ್ಬದ ವಾತಾವರಣವನ್ನು ದುಪ್ಪಟ್ಟುಗೊಳಿಸುವಲ್ಲಿ ಯಾವುದೇ ಸಂಶಯವಿಲ್ಲ. ಮುಖ್ಯವಾಗಿ ಮನೆಯ ಮುಂಬಾಗದಲ್ಲಿ ಒಂದು ಸುಂದರವಾದ ಗೂಡುದೀಪವನ್ನಿಟ್ಟು ಅಲಂಕರಿಸಿ.
ನೀವು ದೀಪಾವಳಿಯ ಹಬ್ಬದಲ್ಲಿ ಮನೆಯ ಗೋಡೆಯನ್ನು ಅಲಂಕರಿಸಲು ಇಷ್ಟಪಟ್ಟರೆ ವಲ್ ಡೆಕೊರೇಷನ್ ವಸ್ತುಗಳನ್ನು ಬಳಸಬಹುದು. ಹಬ್ಬದ ಥೀಮ್ಗೆ ಸರಿಹೊಂದುವ ಹಲವಾರು ಬಗೆಯ ವಾಲ್ ಡೆಕೊರೇಷನ್ ಐಟಂಗಳು ಆನ್ಲೈನ್ಗಳಲ್ಲಿ ಹಾಗೂ ಮಾರುಕಟ್ಟೆಗಳಲ್ಲಿ ಲಭ್ಯವಿದೆ. ಅವುಗಳನ್ನು ಬಳಸಿಕೊಂಡು ಗೋಡೆಯನ್ನು ಅಲಂಕರಿಸಬಹುದು. ಪೇಪರ್ ಹೂವುಗಳಿಂದ ಡೆಕೊರೇಷನ್ ಮಾಡಲು ಇಷ್ಟಪಡಿದ್ದರೆ, ನೈಜ ಹೂಮಾಲೆಯಿಂದಲೂ ಮನೆಯ ಗೋಡೆಯ ಎರಡೂ ಬದಿಗಳನ್ನು ಅಲಂಕರಿಸಬಹುದು. ಹಾಗೂ ವಿವಿಧ ಡಿಸೈನ್ಗಳಲ್ಲಿ ಲಭ್ಯವಿರುವ ಸ್ಟ್ರಿಂಗ್ ಲೈಟಿಂಗ್ಸ್, ಎಲ್.ಇ.ಡಿ ದೀಪಗಳಿಂದಲೂ ಗೋಡೆಗಳು, ಬಾಗಿಲು, ಕಿಟಕಿಗಳನ್ನು ಅಲಂಕರಿಸಬಹುದು.
ಹಬ್ಬದ ದಿನ ಮನೆಗೆ ಸ್ನೇಹಿತರು ಮತ್ತು ನೆಂಟರಿಷ್ಟು ಬರುತ್ತಿದ್ದಾರೆ ಎಂದಾದರೆ ಮನೆಯನ್ನು ಸುಂದರವಾಗಿ ಅಲಂಕರಿಸುವುದು ಬಹಳ ಮುಖ್ಯ. ಮನೆಯಲ್ಲಿ ಹಬ್ಬದ ಕಳೆಯನ್ನು ಹೆಚ್ಚಿಸಲು ದೀಪ ಮತ್ತು ಹೂವಿನ ಅಲಂಕಾರ ಮಾಡುವಂತೆ, ಮನೆಗೆ ಸಂಪ್ರಾದಾಯಿಕತೆಯ ನೋಟವನ್ನು ನೀಡಲು ನೀವು ಮನೆಯ ಹಾಲ್, ಡೈನಿಂಗ್ ಏರಿಯಾದ ಸುತ್ತಲೂ ಹಬ್ಬದ ಥೀಮ್ಗೆ ಸರಿಹೊಂದುವ ಆಂಟಿಕ್ ಶೋಪಿಸ್ಗಳನ್ನು ಇಟ್ಟು ಅಲಂಕರಿಸಬಹುದು. ಅಥವಾ ಮನೆಯ ಕಾರ್ನರ್ಗಳಲ್ಲಿ ಸುಂದರವಾದ ಹೂಕುಂಡಗಳನ್ನಿಟ್ಟು ಅಲಂಕರಿಸಬಹುದು.
ದೀಪಾವಳಿ ಹಬ್ಬದ ದಿನ ಮನೆಗೆ ಸ್ನೇಹಿತರನ್ನು ಮತ್ತು ನೆಂಟರನ್ನು ಅಹ್ವಾನಿಸುತ್ತಿದ್ದೀರಿ ಎಂದಾದರೆ, ನೀವು ಮನೆಯ ಸೋಫಾ ಮತ್ತು ಕರ್ಟನ್ಗಳನ್ನು ಅಲಂಕರಿಸುವುದು ಬಹಳ ಮುಖ್ಯ. ಅಂತಹ ಸಂದರ್ಭದಲ್ಲಿ ನೀವು ಸೋಪಾದ ಪುಟ್ಟ ದಿಂಬುಗಳಿಗೆ ಆನೆ, ಮಂಡಲ ಡಿಸೈನ್ ಸೇರಿದಂತೆ ವಿವಿಧ ಬಗೆಯ ಫೆಸ್ಟಿವಲ್ ಡಿಸೈನ್ ಕುಷನ್ ಕವರ್ಗಳನ್ನು ಹಾಕಬಹುದು. ಅದೇ ರೀತಿ ಕಿಟಕಿಗಳಿಗೆ ಬಿಳಿ ಬಣ್ಣದ ತೆಳು ಕರ್ಟನ್ಗಳನ್ನು ಹಾಕಬಹುದು ಮತ್ತು ಕರ್ಟನ್ ಸುತ್ತಲೂ ಸ್ಟ್ರಿಂಗ್ ಲೈಟ್ಗಳಿಂದ ಅಲಂಕರಿಸಿದಾಗ, ಅದು ಮನೆಯಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸುವಲ್ಲಿ ಯಾವುದೇ ಅನುಮಾನವಿಲ್ಲ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 5:15 pm, Wed, 8 November 23