Indian Garlic Vs Chinese Garlic : ಮಾರುಕಟ್ಟೆಗೆ ಬಂದಿದೆ ಚೀನಿ ಬೆಳ್ಳುಳ್ಳಿ, ನೀವು ಖರೀದಿಸುವ ಬೆಳ್ಳುಳ್ಳಿ ದೇಸಿಯೇ, ಚೀನಿಯೇ ಎಂದು ಗುರುತಿಸುವುದು ಹೇಗೆ?
ಭಾರತೀಯ ಮಾರುಕಟ್ಟೆಗಳಲ್ಲಿ ನಿಷೇಧಿತ ಚೀನೀ ಬೆಳ್ಳುಳ್ಳಿಯು ಎಂಟ್ರಿ ಕೊಟ್ಟಿದೆ. ರಾಜ್ಯದ ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಯಲ್ಲಿ ಚೀನಿ ಬೆಳ್ಳುಳ್ಳಿಯನ್ನು ಅಗ್ಗದ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ನೀವೇನಾದ್ರೂ ಅಗ್ಗದ ಬೆಲೆಗೆ ಬೆಳ್ಳುಳ್ಳಿ ಸಿಗುತ್ತದೆಯೆಂದು ಖರೀದಿಸುತ್ತೀರಿಯಾದರೆ ಇದು ದೇಸಿ ಬೆಳ್ಳುಳ್ಳಿಯೇ ಎಂದು ಖಾತರಿ ಪಡಿಸಿಕೊಳ್ಳುವುದು ಒಳ್ಳೆಯದು. ಹಾಗಾದ್ರೆ ದೇಸಿ ಬೆಳ್ಳುಳ್ಳಿ ಹಾಗೂ ಚೀನಿ ಬೆಳ್ಳುಳ್ಳಿಗಿರುವ ವ್ಯತ್ಯಾಸವನ್ನು ಗುರುತಿಸುವುದು ಹೇಗೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಭಾರತೀಯರ ಬಹುತೇಕ ದಿನನಿತ್ಯ ಆಹಾರಗಳಲ್ಲಿ ಬಳಕೆಯಾಗುವ ಬೆಳ್ಳುಳ್ಳಿ ಆರೋಗ್ಯಕರ ಗುಣಗಳನ್ನು ಹೊಂದಿದ್ದು ಆಹಾರದ ಪರಿಮಳ ಹಾಗೂ ರುಚಿಯನ್ನು ಹೆಚ್ಚಿಸುತ್ತದೆ. ಆದರೆ ಇದೀಗ ರಾಸಾಯನಿಕಯುಕ್ತ ನಿಷೇಧಿತ ಚೀನಿ ಬೆಳ್ಳುಳ್ಳಿ ದೇಶ ಹಾಗೂ ರಾಜ್ಯದ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಬೆಳ್ಳುಳ್ಳಿ ಬೆಲೆ ಗಗನಕ್ಕೆ ಏರಿದ ಹಿನ್ನಲೆಯಲ್ಲಿ ಚೀನಿ ಬೆಳ್ಳುಳ್ಳಿಯನ್ನು ಅಗ್ಗದ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಚೀನಾದಲ್ಲಿ ಬೆಳ್ಳುಳ್ಳಿಗೆ ಹೆಚ್ಚು ರಾಸಾಯನಿಕ ಉಪಯೋಗಿಸಲಾಗುತ್ತದೆ. ಹೀಗಾಗಿ ಆರೋಗ್ಯಕ್ಕೆ ಹಾನಿಕಾರಕವಾಗಿರುವ ಈ ಚೈನೀಸ್ ಬೆಳ್ಳುಳ್ಳಿಯನ್ನು ಹತ್ತು ವರ್ಷಗಳ ಹಿಂದೆಯೇ ಭಾರತದಲ್ಲಿ ನಿಷೇಧಿಸಲಾಗಿದೆ. ಕಡಿಮೆ ಬೆಲೆಯಲ್ಲಿ ಬೆಳ್ಳುಳ್ಳಿಯನ್ನು ಸಿಗುತ್ತದೆಯೇ ಎಂದು ಖರೀದಿ ಮಾಡುವ ಮುನ್ನ ಇದು ದೇಸಿ ಬೆಳ್ಳುಳ್ಳಿಯೇ, ಚೀನಿ ಬೆಳ್ಳುಳ್ಳಿಯೇ ಎಂದು ತಿಳಿದುಕೊಳ್ಳುವುದು ಒಳಿತು.
ದೇಸಿ ಬೆಳ್ಳುಳ್ಳಿಗಿಂತ ಚೀನಿ ಬೆಳ್ಳುಳ್ಳಿ ಹೇಗೆ ಭಿನ್ನ?
- ದೇಸಿ ಹಾಗೂ ಚೀನಿ ಬೆಳ್ಳುಳ್ಳಿಯ ಭೌತಿಕ ರಚನೆಯಿಂದ ಇದರ ವ್ಯತ್ಯಾಸವನ್ನು ಸುಲಭವಾಗಿ ಗುರುತಿಸಬಹುದು. ಚೀನಿ ಬೆಳ್ಳುಳ್ಳಿಯ ಗಾತ್ರವು ಚಿಕ್ಕದಾಗಿದೆ. ಆದರೆ ಭಾರತೀಯ ಬೆಳ್ಳುಳ್ಳಿ ಗಾತ್ರದಲ್ಲಿ ದೊಡ್ಡದಾಗಿರುತ್ತದೆ.
- ಚೀನಿ ಬೆಳ್ಳುಳ್ಳಿಯು ಪ್ರಕಾಶಮಾನವಾದ ಬಿಳಿ ಅಥವಾ ಗುಲಾಬಿ ಬಣ್ಣವನ್ನು ಹೊಂದಿರುತ್ತದೆ. ಆದರೆ ದೇಸಿ ಬೆಳ್ಳುಳ್ಳಿಯ ಪದರವು ಅನೇಕ ಚುಕ್ಕೆಗಳನ್ನು ಹೊಂದಿವೆ. ಅದರ ಸಿಪ್ಪೆಯು ಬಿಳಿಯಿಂದ ಗುಲಾಬಿ ಅಥವಾ ತಿಳಿ ಕಂದು ಬಣ್ಣದ್ದಲ್ಲಿರುತ್ತದೆ.
- ಚೀನಾದ ಬೆಳ್ಳುಳ್ಳಿಯು ವಾಸನೆಯಲ್ಲಿ ಭಾರತೀಯ ಬೆಳ್ಳುಳ್ಳಿಗಿಂತ ಸ್ವಲ್ಪ ಭಿನ್ನವಾಗಿದೆ. ಚೀನಿ ಬೆಳ್ಳುಳ್ಳಿ ಕಟು ವಾಸನೆಯನ್ನು ಹೊಂದಿರುವುದಿಲ್ಲ. ಬದಲಾಗಿ ಸೌಮ್ಯವಾದ ಪರಿಮಳ ಹೊಂದಿರುತ್ತದೆ. ಆದರೆ ಈ ದೇಸಿ ಬೆಳ್ಳುಳ್ಳಿಯು ಕಟು ವಾಸನೆಯನ್ನು ಹೊಂದಿರುತ್ತದೆ.
- ಚೀನಿ ಬೆಳ್ಳುಳ್ಳಿಯು ಸುಲಭವಾಗಿ ಸಿಪ್ಪೆಯನ್ನು ಸುಲಿಯಬಹುದು. ಹೀಗಾಗಿ ಈ ಬೆಳ್ಳುಳ್ಳಿಯು ಖರೀದಿದಾರರಿಗೆ ಹೆಚ್ಚು ಆಕರ್ಷಿಸುತ್ತದೆ. ಆದರೆ ಭಾರತೀಯ ಬೆಳ್ಳುಳ್ಳಿಯು ಸಣ್ಣ ಮತ್ತು ಉತ್ತಮವಾದ ಮೊಗ್ಗುಗಳನ್ನು ಹೊಂದಿರುತ್ತದೆ, ಇದರ ಸಿಪ್ಪೆ ಸುಲಿಯಲು ಸ್ವಲ್ಪ ಕಷ್ಟವಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ