AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

International Albinism Awareness Day 2024 : ಆಲ್ಬಿನಿಸಂ ಬಗ್ಗೆ ತಪ್ಪು ಕಲ್ಪನೆ ಬೇಡ, ರೋಗದ ಬಗ್ಗೆ ಇರಲಿ ಅರಿವು

ಆಲ್ಬಿನಿಸಂ ಸಮಸ್ಯೆಯ ಕುರಿತು ಜಾಗೃತಿ ಮೂಡಿಸಲು ಉದ್ದೇಶದಿಂದಾಗಿ ಪ್ರತಿ ವರ್ಷ ಜೂನ್ 13ರಂದು ಅಂತಾರಾಷ್ಟ್ರೀಯ ಆಲ್ಬಿನಿಸಂ ಜಾಗೃತಿ ದಿನವನ್ನಾಗಿ ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನದ ಇತಿಹಾಸ ಹಾಗೂ ಮಹತ್ವದ ಬಗೆಗಿನ ಮಾಹಿತಿಯೂ ಇಲ್ಲಿದೆ.

International Albinism Awareness Day 2024 : ಆಲ್ಬಿನಿಸಂ ಬಗ್ಗೆ ತಪ್ಪು ಕಲ್ಪನೆ ಬೇಡ, ರೋಗದ ಬಗ್ಗೆ ಇರಲಿ ಅರಿವು
ಸಾಂದರ್ಭಿಕ ಚಿತ್ರ
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Jun 13, 2024 | 9:49 AM

Share

ವಿಶ್ವಾದ್ಯಂತ ಹಲವಾರು ಜನರು ಅಲ್ಬಿನಿಸಂ ರೋಗದಿಂದ ಬಳಲುತ್ತಿದ್ದಾರೆ. ಬಿಳಿ ಚರ್ಮ, ಬಿಳಿ ಕೂದಲು ಮತ್ತು ಬಣ್ಣ ರಹಿತ ಕಣ್ಣುಗಳನ್ನು ಹೊಂದಿದ್ದು, ಇದು ಆಲ್ಬಿನಿಸಂ ಎಂಬ ಕಾಯಿಲೆಗೆ ತುತ್ತಾದವರ ಲಕ್ಷಣವಾಗಿದೆ. ಇಂತಹ ಜನರನ್ನು ನೋಡುವ ದೃಷ್ಟಿಕೋನವೇ ಬದಲಾಗಿದೆ. ಆಲ್ಬನಿಸಂ ಹೊಂದಿರುವವರನ್ನು ನಿರ್ದಿಷ್ಟ ಸಮುದಾಯದವರು ಎನ್ನುವ ತಪ್ಪು ಕಲ್ಪನೆಯಿದೆ. ಹೀಗಾಗಿ ಈ ಆಲ್ಬಿನಿಸಂ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ತಪ್ಪು ಕಲ್ಪನೆಯನ್ನು ತೊಡೆದು ಹಾಕುವ ಅಂತರಾಷ್ಟ್ರೀಯ ಆಲ್ಬಿನಿಸಂ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ.

ಏನಿದು ಆಲ್ಬಿನಿಸಂ ಸಮಸ್ಯೆ?

ಆಲ್ಬಿನಿಸಂ ಒಂದು ಸಾಂಕ್ರಾಮಿಕವಲ್ಲದ, ತಳೀಯವಾಗಿ ಆನುವಂಶಿಕವಾಗಿ ಬರುವ ಕಾಯಿಲೆಯಾಗಿದೆ. ಚರ್ಮ, ಕಣ್ಣುಗಳು ಮತ್ತು ಕೂದಲಿನಲ್ಲಿ ಮೆಲನಿನ್ ಕೊರತೆಯಿಂದಾಗಿ ಬಣ್ಣರಹಿತವಾಗಿರುತ್ತದೆ. ಆಲ್ಬಿನಿಸಂ ಸಮಸ್ಯೆಯಿಂದ ಬಳಲುತ್ತಿರುವ ಜನರು ಚರ್ಮದ ಕ್ಯಾನ್ಸರ್‌ಗೆ ಗುರಿಯಾಗುವ ಸಾಧ್ಯತೆಗಳೇ ಅಧಿಕವಾಗಿದೆ. ಅದಲ್ಲದೆ, ಕಣ್ಣುಗಳಲ್ಲಿ ಮೆಲನಿನ್ ಕೊರತೆಯಿಂದಾಗಿ ದೃಷ್ಟಿಹೀನತೆಗೂ ಗುರಿಯಾಗುವ ಸಾಧ್ಯತೆಯಿದೆ.

ಅಂತರಾಷ್ಟ್ರೀಯ ಆಲ್ಬಿನಿಸಂ ಜಾಗೃತಿ ದಿನದ ಇತಿಹಾಸ

ಡಿಸೆಂಬರ್ 18, 2014 ರಂದು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯಿಂದ ಜೂನ್ 13 ರಂದು ಅಂತರಾಷ್ಟ್ರೀಯ ಆಲ್ಬಿನಿಸಂ ಜಾಗೃತಿ ದಿನವನ್ನು ಘೋಷಿಸಲಾಯಿತು. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯು ಈ ನಿರ್ಣಯವನ್ನು ಅಂಗೀಕರಿಸಿತು. ಆಲ್ಬಿನಿಸಂ ಹೊಂದಿರುವ ಜನರ ವಿರುದ್ಧ ಶೋಷಣೆ ಮತ್ತು ತಾರತಮ್ಯವನ್ನು ತಡೆಗಟ್ಟಲು ಈ ದಿನವನ್ನು ಆಚರಿಸಲು ಮುಂದಾಯಿತು. ಹೀಗಾಗಿ 2015 ರಲ್ಲಿ ಮೊದಲ ಬಾರಿಗೆ ಅಂತರಾಷ್ಟ್ರೀಯ ಆಲ್ಬಿನಿಸಂ ಜಾಗೃತಿ ದಿನವನ್ನು ಆಚರಿಸಲಾಯಿತು.

ಇದನ್ನೂ ಓದಿ: ಕಣ್ಣಲ್ಲಿ ನೀರು ಸುರಿಯುವುದು ಹಾಗೂ ತುರಿಕೆಗೆ ಇಲ್ಲಿದೆ ಸಿಂಪಲ್​ ಮನೆಮದ್ದು

ಅಂತರಾಷ್ಟ್ರೀಯ ಆಲ್ಬಿನಿಸಂ ಜಾಗೃತಿ ದಿನದ ಮಹತ್ವ

ಆಲ್ಬಿನಿಸಂ ಕಾಯಿಲೆಯ ಬಗ್ಗೆ ಅರಿವು ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. ಈ ಕಾಯಿಲೆಯಿಂದ ಬಳಲುತ್ತಿರುವ ಜನರ ಜೀವನದ ಅಪಾಯಗಳು ಮತ್ತು ಭವಿಷ್ಯದ ಹಾದಿಯನ್ನು ಎಲ್ಲರಿಗೂ ತಿಳಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಹೀಗಾಗಿ ಈ ದಿನದಂದು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: