ಕೆಲವರು ದುಃಖ ಹಾಗೂ ಸಂತೋಷದ ಕ್ಷಣದಲ್ಲಿ ಈ ಬಿಯರ್ ಕುಡಿಯುವ ಮೂಲಕ ಎಂಜಾಯ್ ಮಾಡುತ್ತಾರೆ. ಇದು ಆಲ್ಕೋಹಾಲ್ಯುಕ್ತ ಪಾನೀಯಗಳಲ್ಲಿ ಒಂದಾಗಿದ್ದು, ಪಾರ್ಟಿಯ ವೇಳೆ ಹೆಚ್ಚಿನವರು ಆಯ್ಕೆ ಮಾಡುವುದೇ ಈ ಪಾನೀಯವನ್ನು. ಇದರಲ್ಲಿ ಆಲ್ಕೋಹಾಲ್ ಅಂಶವು ಕಡಿಮೆಯಿರುವ ಕಾರಣ ಇತರ ಪಾನೀಯಗಳಿಗಿಂತ ಕಡಿಮೆ ಹಾನಿಕಾರಕ ಎನ್ನಲಾಗಿದೆ. ಈ ಬಾರಿ ಆಗಸ್ಟ್ 2 ರಂದು ಅಂತಾರಾಷ್ಟ್ರೀಯ ಬಿಯರ್ ದಿನ ದಿನವನ್ನು ಆಚರಿಸಲಾಗುತ್ತಿದೆ.
ಅಮೇರಿಕಾದ ಕ್ಯಾಲಿಫೋರ್ನಿಯಾದ ಸಾಂಟಾ ಕ್ರೂಜ್ನ ಜೆಸಿ ಅವ್ಶಲೋವ್ನ್ ಎಂಬ ವ್ಯಕ್ತಿಯಿಂದಲೇ ಬಿಯರ್ ದಿನವನ್ನು ಆಚರಿಸಲಾಯಿತು. ಹೌದು, ಅಮೇರಿಕಾದಲ್ಲಿ ಸ್ಥಳೀಯ ಕಾರ್ಯಕ್ರಮವಾಗಿ ಬಿಯರ್ ದಿನ ಹುಟ್ಟಿಕೊಂಡಿತು. ಮೊದಲು ಈ ಕಾರ್ಯಕ್ರಮವನ್ನು ಸ್ಥಳೀಯ ಮಟ್ಟದಲ್ಲಿ ಮಾತ್ರ ಆಚರಿಸಲಾಗುತ್ತಿತು. ಇದರ ಜನಪ್ರಿಯತೆ ಹೆಚ್ಚಾದ ಕಾರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲಾಯಿತು. 2007 ರಿಂದ 2012 ರ ವರೆಗೆ ಈ ದಿನವನ್ನು ಆಗಸ್ಟ್ 5 ರಂದು ಆಚರಿಸಲಾಯಿತು. 2012 ರ ನಂತರದಲ್ಲಿ ಆಗಸ್ಟ್ ತಿಂಗಳ ಮೊದಲ ಶುಕ್ರವಾರದಂದು ಬಿಯರ್ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. ಈ ದಿನದಂದು ವಿದೇಶಗಳಲ್ಲಿ ಸ್ನೇಹಿತರು, ಕುಟುಂಬ ಸದಸ್ಯರೊಂದಿಗೆ ಪಬ್ ಗಳಿಗೆ ತೆರಳಿ ಬಿಯರ್ ಕುಡಿದು ಸಂಭ್ರಮಿಸುತ್ತಾರೆ. ಇಲ್ಲದಿದ್ದರೆ ಮನೆಯಲ್ಲೇ ಪಾರ್ಟಿಯನ್ನು ಆಯೋಜಿಸುತ್ತಾರೆ.
ಇದನ್ನೂ ಓದಿ: ವಿಶ್ವ ಸ್ತನ್ಯಪಾನ ಸಪ್ತಾಹ ದಿನವನ್ನು ಆಚರಿಸುವುದು ಏಕೆ? ಏನಿದರ ಮಹತ್ವ?
ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ