ಪ್ರಪಂಚದಾದ್ಯಂತ ಪ್ರತೀ ವರ್ಷ ಆಗಸ್ಟ್ 8 ರಂದು ಅಂತರರಾಷ್ಟ್ರೀಯ ಬೆಕ್ಕಿನ ದಿನ (International Cat Day) ವನ್ನು ಆಚರಿಸಲಾಗುತ್ತದೆ. ಈ ದಿನ ಬೆಕ್ಕು ಪ್ರಿಯರಿಗೆ(Cat Lover) ವಿಶೇಷ ದಿನವಾಗಿದೆ. ಮೊದಲ ಬಾರಿಗೆ 2002ರಲ್ಲಿ “ಇಂಟರ್ನ್ಯಾಷನಲ್ ಫಂಡ್ ಫಾರ್ ದಿ ಪ್ರೊಟೆಕ್ಷನ್ ಆಫ್ ಅನಿಮಲ್ಸ್” ವಿಶ್ವ ಬೆಕ್ಕು ದಿನದ ಪರಿಕಲ್ಪನೆಯನ್ನು ಜಾರಿಗೆ ತಂದಿತು. ಬೆಕ್ಕುಗಳು ಒಂಟಿಯಾಗಿರಲು ಹೆಚ್ಚು ಇಷ್ಟಪಡುವುದರಿಂದ ಯಾವುದೇ ಬಾಂಧವ್ಯವನ್ನು ಇಷ್ಟಪಡುವುದಿಲ್ಲ. ಆದರೆ ನಾಯಿಗಳು ಬಾಲವನ್ನು ಅಲ್ಲಾಡಿಸುವ ಮೂಲಕ ತಮ್ಮ ಸ್ನೇಹವನ್ನು ವ್ಯಕ್ತಪಡಿಸುತ್ತವೆ. ಆದ್ದರಿಂದ ನೀವು ಪ್ರಾಣಿ ಪ್ರಿಯರಾಗಿದ್ದು ಬೆಕ್ಕು ಹಾಗೂ ನಾಯಿ ಎರಡು ಮನೆಯಲ್ಲಿ ಸಾಕಿ ಅವೆರಡು ಅನ್ಯೋನ್ಯತೆಯಿಂದ ಇರಬೇಕು ಎಂದರೆ ಉತ್ತಮ ಬಾಂಧವ್ಯವನ್ನು ಹೊಂದುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿರುವ ಬೆಕ್ಕು ತಳಿಗಳ ಕುರಿತು ಪೆಟ್‌ಕನೆಕ್ಟ್‌ನ ಸಿಇಒ ದೇವಾಂಶಿ ಶಾ ಮಾಹಿತಿ ನೀಡಿದ್ದಾರೆ.
ದೇವಾಂಶಿ ಷಾ ಅವರು ನಾಯಿಗಳೊಂದಿಗೆ ಚೆನ್ನಾಗಿ ಹೊಂದಿಕೊಳ್ಳುವ ಅತ್ಯಂತ ಸ್ನೇಹಪರ ಬೆಕ್ಕು ತಳಿಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
1. ರಾಗ್ಡಾಲ್:
ರಾಗ್ಡಾಲ್ ತಳಿಯ ಬೆಕ್ಕು ಈ ನಾಯಿಗಳೊಂದಿಗೆ ಅತ್ಯುತ್ತಮ ಹೊಂದಾಣಿಕೆಯನ್ನು ಹೊಂದಿದೆ. ಇದು ಅನೇಕ ಸಾಕುಪ್ರಾಣಿಗಳನ್ನು ಹೊಂದಿರುವ ಮನೆಗಳಿಗೆ ಅತ್ಯುತ್ತಮ ಆಯ್ಕೆಯಾಗಿದೆ.
2. ಮೈನೆ ಕೂನ್:
ಮೈನೆ ಕೂನ್ ಸ್ನೇಹಪರ ಮತ್ತು ಹೊಂದಿಕೊಳ್ಳಬಲ್ಲ ಗುಣಲಕ್ಷಣ ಹೊಂದಿದ್ದು ಅದು ಮನುಷ್ಯ ಮತ್ತು ನಾಯಿಗಳೊಂದಿಗೆ ಬಲವಾದ ಬಂಧಗಳನ್ನು ರೂಪಿಸಿಕೊಳ್ಳುತ್ತದೆ. ಅದರ ಲವಲವಿಕೆಯ ವರ್ತನೆ ಮತ್ತು ಉತ್ಸುಕತೆಯು ಪ್ರಾಣಿ ಪ್ರಿಯ ಕುಟುಂಬಗಳಿಗೆ ಮೆಚ್ಚಿನ ಆಯ್ಕೆಯಾಗಿದೆ.
ಇದನ್ನೂ ಓದಿ: ಪಾರ್ಲೆ-ಗ್ಲೂಕೋ, ಪಾರ್ಲೆ-ಜಿ ಬಿಸ್ಕೆಟ್ ಆಗಿದ್ದು ಹೇಗೆ? ಈ ಬಿಸ್ಕೆಟ್ ಪ್ಯಾಕ್ನಲ್ಲಿರುವ ಮಗು ಯಾರು?
3. ಅಬಿಸ್ಸಿನಿಯನ್:
ಈ ಬೆಕ್ಕು ತಳಿ ಅತ್ಯಂತ ಪ್ರಾಚೀನ ತಳಿಗಳಲ್ಲಿ ಒಂದಾಗಿದೆ. ಮನೆಯ ಒಳಗಿನ ವಾತಾವಾರಣಕ್ಕಿಂತ ಹೊರಗಡೆ ಇರಲು ಹೆಚ್ಚು ಇಷ್ಟ ಪಡುವ ತಳಿಯಾಗಿದ್ದು, ಜೊತೆಗೆ ಮನರಂಜನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತದೆ. ಇದರ ಸಾಹಸಮಯ ಸ್ವಭಾವವು ಉತ್ಸಾಹಭರಿತ ಶ್ವಾನಗಳೊಂದಿಗೆ ಚೆನ್ನಾಗಿ ಬೆರೆಯುತ್ತದೆ.
4. ಬರ್ಮೀಸ್:
ಬರ್ಮೀಸ್ ಬೆಕ್ಕು ತಳಿಗಳು ಜನರೊಂದಿಗೆ ಹೆಚ್ಚು ಬೆರೆಯುತ್ತದೆ. ನಾಯಿಗಳು ಸೇರಿದಂತೆ ಇತರ ಸಾಕುಪ್ರಾಣಿಗಳೊಂದಿಗೆ ಉತ್ತಮ ಸ್ನೇಹದಿಂದ ಇರುವುದರಿಂದ ಪ್ರಾಣಿ ಪ್ರಿಯರ ಮನೆಗಳಿಗೆ ಅತ್ಯುತ್ತಮವಾದ ಸೇರ್ಪಡೆ ಬರ್ಮೀಸ್ ತಳಿಯ ಬೆಕ್ಕು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 10:55 am, Tue, 8 August 23