ನಿಮ್ಮನ್ನು ಹಿಂಬಾಲಿಸುವ ಮಾಜಿ ಗೆಳತಿ – ಗೆಳೆಯನ ಬಗ್ಗೆ ಇರಲಿ ಎಚ್ಚರಿಕೆ

ಹಿಂಬಾಲಿಸುವ ನಿಮ್ಮ ಹಳೆಯ ಪ್ರೀತಿಯ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಇನ್ನೊಬ್ಬರನ್ನು ಹಿಂಬಾಲಿಸುವುದು, ಅದರಲ್ಲೂ ಹುಡುಗಿಯರನ್ನು ಹಿಂಬಾಲಿಸುವುದು ಕಾನೂನಿನ ಪ್ರಕಾರ ಅಪರಾಧ.

ನಿಮ್ಮನ್ನು ಹಿಂಬಾಲಿಸುವ ಮಾಜಿ ಗೆಳತಿ - ಗೆಳೆಯನ ಬಗ್ಗೆ ಇರಲಿ ಎಚ್ಚರಿಕೆ
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on:Aug 07, 2023 | 5:52 PM

ಪ್ರೀತಿಯನ್ನು ಕಳೆದುಕೊಳ್ಳುವುದು ಸುಲಭ, ಆದರೆ ಆ ಪ್ರೀತಿಯನ್ನು ಪಡೆಯಲು ಎಷ್ಟೆಲ್ಲಾ ಕಷ್ಟಪಟ್ಟಿರಬಹುದು ಎಂಬುದನ್ನು ಒಂದು ಬಾರಿ ಯೋಚಿಸಿ. ಏಕೆಂದರೆ ಪ್ರೀತಿಯಲ್ಲಿ ಜಗಳ, ಕೋಪ ಎಲ್ಲವೂ ಸಹಜ, ಆದರೆ ಅದನ್ನು ಅನುಸರಿಸಿಕೊಂಡು ಹೋಗುವುದು ಉತ್ತಮ. ಒಂದು ಬಾರಿ ಆ ಪ್ರೀತಿಯನ್ನು ಕಳೆದುಕೊಂಡರೆ ಮತ್ತೆ ಸಿಗುವುದು ಕಷ್ಟ, ಒಂದು ವೇಳೆ ಇದು ಸಾಧ್ಯವಿಲ್ಲ ಇಬ್ಬರ ಸಂಬಂಧವನ್ನು ಕೊನೆಗೊಳಿಸುವ ಎಂಬ ಕಠಿಣ ನಿರ್ಧಾರಕ್ಕೆ ಬಂದಿದ್ದರೆ, ಅದು ನಿಮ್ಮ ಯೋಚನೆಗೆ ಬಿಟ್ಟಿದ್ದು. ಈ ಸಂಬಂಧ ಕಳೆದುಕೊಂಡ ಬಳಿಕ ಮುಂದೇನು? ಮತ್ತೊಬ್ಬ ಗೆಳೆಯ ಅಥವಾ ಗೆಳತಿ ಎಂಬ ಯೋಚನೆ ಹೋಗುವುದು ಸಹಜ, ಆದರೆ ಈ ಹಿಂದೆ ಕಳೆದುಕೊಂಡ ಸಂಬಂಧದ ನೆನಪುಗಳು ಕಾಡುತ್ತಲೇ ಇರುತ್ತದೆ. ಈ ನೆನಪುಗಳ ಜತೆಗೆ ಪ್ರೀತಿಸಿದ ಹುಡುಗ ಅಥವಾ ಹುಡುಗಿ ಕೂಡ ಕಾಡುತ್ತಾರೆ. ಹೌದು ಪ್ರೀತಿ ಕಳೆದುಕೊಂಡ ದುಃಖದಲ್ಲಿ ಕೆಲವೊಂದು ಹುಡುಗ- ಹುಡುಗಿಯರು ಪ್ರೀತಿಸಿದವರನ್ನು ಮತ್ತೊಬ್ಬರ ಜತೆಗೆ ನೋಡಿದಾಗ ಕಿರಿಕಿರಿ ಅನಿಸುತ್ತದೆ. ಅನೇಕ ಬಾರಿ ಈ ಕಿರಿಕಿರಿ ದ್ವೇಷಕ್ಕೂ ಕಾರಣವಾಗಬಹುದು.

ತಾನು ಪ್ರೀತಿಸಿದ ಹುಡುಗಿ ಅಥವಾ ಹುಡುಗ ಮತ್ತೊಬ್ಬರ ಜತೆಗೆ ಸುತ್ತಾಡುತ್ತಿದ್ದಾರೆ ಎಂದಾಗ ಅವರನ್ನು ಹಿಂಬಾಲಿಸಿ ಅವರಿಗೆ ತೊಂದರೆ ನೀಡುವುವವರು ಹೆಚ್ಚು. ಹೀಗೆ ಹಿಂಬಾಲಿಸುವ ನಿಮ್ಮ ಹಳೆಯ ಪ್ರೀತಿಯ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಇನ್ನೊಬ್ಬರನ್ನು ಹಿಂಬಾಲಿಸುವುದು, ಅದರಲ್ಲೂ ಹುಡುಗಿಯರನ್ನು ಹಿಂಬಾಲಿಸುವುದು ಕಾನೂನಿನ ಪ್ರಕಾರ ಅಪರಾಧ. ನಿಮ್ಮ ಹಳೆಯ ಗೆಳತಿ ಅಥವಾ ಗೆಳೆಯ ನಿಮಗೆ ತೊಂದರೆ ನೀಡಬೇಕು ಎಂದು ನಿಮ್ಮನ್ನು ಹಿಂಬಾಲಿಸುತ್ತಿದ್ದರೆ ಖಂಡಿತ ಈ ಎಚ್ಚರಿಕೆ ಕ್ರಮವನ್ನು ಪಾಲಿಸಲೇಬೇಕು:

ಮನೆಯ ಭದ್ರತೆ ಬಗ್ಗೆ ಗಮನ ಇರಲಿ: ನಿಮ್ಮನ್ನು ಹಿಂಬಾಲಿಸುವವರು ಮನೆಯವರೆಗೂ ಬರಬಹುದು ಅದಕ್ಕಾಗಿ ಹೆಚ್ಚಿನ ಜಾಗರೂಕರಾಗಿರಬೇಕು. ಮನೆಯಲ್ಲಿ CCTV ಇಂತಹ ಭದ್ರತಾ ವ್ಯವಸ್ಥೆಗಳು ಇರಲಿ.

ಏಕಾಂಗಿಯಾಗಿ ಓಡಾಡಬೇಡಿ: ನಿಮ್ಮನ್ನು ಹಿಂಬಾಲಿಸುವವರು, ನೀವು ಒಂಟಿಯಾಗಿರುವಾಗ ಹೆಚ್ಚಾಗಿ ನಮ್ಮನ್ನು ಸಮೀಪಿಸಲು ಧೈರ್ಯ ಮಾಡುತ್ತಾರೆ. ಏಕಾಂಗಿಯಾಗಿ ಹೋಗುವುದನ್ನು ಸ್ವಲ್ಪ ಕಡಿಮೆ ಮಾಡಿ. ನಾವು ಹೊರಗೆ ಇರುವಾಗ ಎಲ್ಲಾ ಸಮಯದಲ್ಲೂ ನಾವು ಕುಟುಂಬದ ಸದಸ್ಯರು ಇರುವುದು ಉತ್ತಮ ಅಥವಾ ಸ್ನೇಹಿತರು ನಮ್ಮೊಂದಿಗೆ ಇರಬೇಕು.

ಇದನ್ನೂ ಓದಿ: ಉತ್ತಮ ದಾಂಪತ್ಯ ಜೀವನಕ್ಕಾಗಿ ಹೊಂದಾಣಿಕೆಯ ಟಿಪ್ಸ್​​

ಎಲ್ಲದಕ್ಕೂ  ಸಿದ್ಧರಾಗಿರಿ : ಇದೊಂದು ಯುದ್ಧದಂತೆ ಸ್ನೇಹಿತರು ಶತ್ರುಗಳಾದಾಗ ನಮ್ಮ ರಕ್ಷಣೆ ನಾವೇ ಮಾಡಬೇಕು, ಆತ್ಮರಕ್ಷಣೆಗಾಗಿ ಪೆಪ್ಪರ್ ಪುಡಿ, ಸಣ್ಣ ಚಾಕುಗಳನ್ನು ಇಟ್ಟುಕೊಳ್ಳುವುದು ಉತ್ತಮ, ಜತೆಗೆ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಶಕ್ತರಾಗಿರಬೇಕು.

ಕುಟುಂಬವನ್ನು ರಕ್ಷಿಸಿ : ನಿಮ್ಮ ಮೇಲಿನ ಕೋಪದಿಂದ ನಿಮ್ಮ ಮನೆಯವರ ಮೇಲೆಯು ದಾಳಿ ಮಾಡಬಹುದು. ನಿಮ್ಮನ್ನು ಹಿಂಬಾಲಿಸುವವರು ಗಂಭೀರ ಮಾನಸಿಕ ಸ್ಥಿತಿಯನ್ನು ಹೊಂದಿರುತ್ತಾರೆ.

ಮೊಬೈಲ್ ಸಂಖ್ಯೆ ಬದಲಾಯಿಸಿ : ಮೊದಲು ನಿಮ್ಮ ಫೋನ್​​ ನಂಬರ್​ ಬದಲಾಯಿಸಿ. ಇಲ್ಲದಿದ್ದರೆ ಖಂಡಿತ ಬೆದರಿಕೆ ಸಂದೇಶ ಅಥವಾ ಫೋನ್ ಕರೆಗಳನ್ನು ಸ್ವೀಕರಿಸಬೇಕಾಗುತ್ತದೆ. ಅದಕ್ಕಾಗಿ ಸಂಪರ್ಕ ಸಂಖ್ಯೆಯನ್ನು ಬದಲಾಯಿಸುವುದು ಉತ್ತಮ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 5:47 pm, Mon, 7 August 23