AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತಮ ಆಲೋಚನೆಗಳಿಂದ ಸಂಬಂಧವು ಹೂವಿನಂತೆ ಅರಳುತ್ತೆ, ಹುಳುಕಿದ್ದರೆ ಮುದುಡುತ್ತೆ

ಕುಟುಂಬದಲ್ಲಿ ಎಲ್ಲರ ಮನಸ್ಸು ಒಂದೇ ರೀತಿಯಾಗಿರಬೇಕೆಂದೇನಿಲ್ಲ, ಆದರೆ ಆಲೋಚನೆ ಹೇಗೆ ಇರಲಿ ಕುಟುಂಬದ ಪರವಾಗಿ ಯೋಚಿಸುವ ಮನಸ್ಸಿರಬೇಕು.

ಉತ್ತಮ ಆಲೋಚನೆಗಳಿಂದ ಸಂಬಂಧವು ಹೂವಿನಂತೆ ಅರಳುತ್ತೆ, ಹುಳುಕಿದ್ದರೆ ಮುದುಡುತ್ತೆ
Image Credit source: Healthshots.com
ನಯನಾ ರಾಜೀವ್
|

Updated on: Aug 08, 2023 | 3:00 PM

Share

ಕುಟುಂಬದಲ್ಲಿ ಎಲ್ಲರ ಮನಸ್ಸು ಒಂದೇ ರೀತಿಯಾಗಿರಬೇಕೆಂದೇನಿಲ್ಲ, ಆದರೆ ಆಲೋಚನೆ ಹೇಗೆ ಇರಲಿ ಕುಟುಂಬದ ಪರವಾಗಿ ಯೋಚಿಸುವ ಮನಸ್ಸಿರಬೇಕು. ಅದೇ ವಿಷಯಕಾರಿ ಸಂಬಂಧಗಳು ಮಾನಸಿಕ ಆರೋಗ್ಯವನ್ನು ಕೆಡಿಸುತ್ತದೆ, ನಿಮ್ಮನ್ನು ನೋಯಿಸುತ್ತದೆ. ವಿಷಕಾರಿ ಸಂಬಂಧಗಳು ನಿಮ್ಮ ಮಾನಸಿಕ ಆರೋಗ್ಯಕ್ಕೆ ಹೇಗೆ ಮಾರಕವಾಗಬಹುದು ಎಂಬುದರ ಬಗ್ಗೆ ತಿಳಿಯೋಣ.

ಎಲ್ಲದಕ್ಕೂ ನಿಮ್ಮನ್ನು ದೂಷಿಸುವುದು ಯಾರೇ ತಪ್ಪು ಮಾಡಿದರೂ ನಿಮ್ಮನ್ನೇ ದೂಷಿಸುವುದು, ಏನೇ ಕೆಲಸವಾದರೂ ನೀವೇ ಮಾಡಬೇಕು ಅದರ ಪರಿಣಾಮವನ್ನು ನೀವೇ ಎದುರಿಸಬೇಕಾಗುತ್ತದೆ. ಸಣ್ಣ ಸಣ್ಣ ವಿಚಾರಕ್ಕೂ ಭಯದಿಂದ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಸ್ವಇಚ್ಛೆಯಿಂದ ಏನೂ ಮಾಡಲು ಸಾಧ್ಯವಿಲ್ಲ ನಿಮ್ಮ ಸ್ವಂತ ಇಚ್ಛೆಯಿಂದ ಏನನ್ನೂ ಮಾಡಲು ಸಾಧ್ಯವಿಲ್ಲ, ಎಲ್ಲರೂ ನಿಮ್ಮನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಮನಸ್ಸಿನಲ್ಲಿ ಭಯ ಕುಳಿತಿರುತ್ತದೆ, ನಿಮ್ಮ ಕನಸುಗಳು ನಾಶವಾಗುತ್ತವೆ, ದುಃಖ ಉಮ್ಮಳಿಸಿ ಬರುತ್ತದೆ, ಹತಾಶೆ ನಿಮ್ಮೊಳಗೆ ಓಡಾಡುತ್ತದೆ.

ಆತಂಕ ವಿಷಕಾರಿ ಸಂಬಂಧಗಳು ನಿಮ್ಮನ್ನು ಮಾನಸಿಕವಾಗಿ ಹಿಂಸಿಸಲು ಯಾವಾಗಲೂ ಸಮಯವನ್ನು ಕಾಯುತ್ತಿರುತ್ತದೆ, ನೀವು ಮಾಡದ ತಪ್ಪಿಗೂ ಶಿಕ್ಷೆ ಅನುಭವಿಸಬೇಕಾಗುತ್ತದೆ, ನಿಮ್ಮ ಆಲೋಚನೆಗಳನ್ನು ಹಿಡಿದಿಡಲು ಪ್ರಯತ್ನಿಸುತ್ತಿರುತ್ತಾರೆ. ಆಗ ನೀವು ಒತ್ತಡ ಮತ್ತು ಆತಂಕಕ್ಕೆ ಬಲಿಯಾಗುತ್ತೀರಿ.

ಮತ್ತಷ್ಟು ಓದಿ: ಸಂತೋಷದ ಪ್ರೇಮ ಜೀವನವನ್ನು ಬಯಸಿದರೆ, ಆಚಾರ್ಯ ಚಾಣಕ್ಯರ ಈ 4 ಸಲಹೆಗಳನ್ನು ನೆನಪಿನಲ್ಲಿಡಿ

ವೈವಾಹಿಕ ಜೀವನದ ಮೇಲೆ ಪರಿಣಾಮ ಕುಟುಂಬದಲ್ಲಿ ಎಲ್ಲರನ್ನೂ ನೋಡಿಕೊಳ್ಳುವ ಭರದಲ್ಲಿ ನಿಮ್ಮ ವೈವಾಹಿಕ ಜೀವನದಲ್ಲಿ ಖುಷಿಯಾಗಿರಲು ಸಾಧ್ಯವಿಲ್ಲ. ಗಂಡ ಮತ್ತು ಹೆಂಡತಿಯ ನಡುವೆ ಭಿನ್ನಾಭಿಪ್ರಾಯ ಶುರುವಾಗುತ್ತದೆ.

ದಿನವಿಡೀ ಮನೆಕೆಲಸಗಳಲ್ಲಿ ನಿರತರಾಗಿರುವ ಕಾರಣ, ನಿಮಗಾಗಿ ಯಾವುದೇ ಸಮಯವನ್ನು ಕಳೆಯಲು ನಿಮಗೆ ಸಾಧ್ಯವಾಗುವುದಿಲ್ಲ. ನಿಮ್ಮ ಸಂಗಾತಿ ಜತೆಗೆ ಹೊರಗೆ ಹೋಗಿ ಸ್ವಲ್ಪ ಸಮಯ ಕಳೆಯಿರಿ ಜತೆ ಊಟವನ್ನು ಮಾಡಿ, ಇದು ನಿಮ್ಮ ಮಾನಸಿಕ ಆರೋಗ್ಯಕ್ಕೆ ಪ್ರಯೋಜನ ನೀಡಬಹುದು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ