ಪಾರ್ಲೆ-ಗ್ಲೂಕೋ, ಪಾರ್ಲೆ-ಜಿ ಬಿಸ್ಕೆಟ್​ ಆಗಿದ್ದು ಹೇಗೆ? ಈ ಬಿಸ್ಕೆಟ್ ಪ್ಯಾಕ್​​​ನಲ್ಲಿರುವ ಮಗು ಯಾರು?

ಪಾರ್ಲೆ-ಜಿ (Parle-G) ಬಿಸ್ಕೆಟ್ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಪ್ರಸ್ತುತ ಕಾಲಘಟ್ಟದಲ್ಲಿ ತರಹೇವಾರಿ ಬಿಸ್ಕೆಟ್​​ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ, ಹೆಚ್ಚಿನವರು ಪಾರ್ಲೆ-ಜಿ ಬಿಸ್ಕೆಟ್ ತಿನ್ನಲು ಇಷ್ಟಪಡುತ್ತಾರೆ. ಈ ಬಿಸ್ಕೆಟ್ ಪೊಟ್ಟಣದಲ್ಲಿ ಪುಟ್ಟ ಹುಡುಗಿಯೊಬ್ಬಳ ಮುದ್ದಾದ ಚಿತ್ರವಿದೆ. ಈ ಭಾವಚಿತ್ರ ಯಾರದ್ದು ಎಂಬ ಗೊಂದಲ ದಶಕಗಳಿಂದ ಹಲವರಲ್ಲಿ ಕಾಡುತ್ತಿದೆ. ಅಷ್ಟಕ್ಕೂ ಆ ಹುಡುಗಿ ಯಾರು? ಅದು ಸುಧಾ ಮೂರ್ತಿಯವರ ಬಾಲ್ಯದ ಚಿತ್ರವೇ? ಈ ಎಲ್ಲದರ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಪಾರ್ಲೆ-ಗ್ಲೂಕೋ, ಪಾರ್ಲೆ-ಜಿ ಬಿಸ್ಕೆಟ್​ ಆಗಿದ್ದು ಹೇಗೆ? ಈ ಬಿಸ್ಕೆಟ್ ಪ್ಯಾಕ್​​​ನಲ್ಲಿರುವ ಮಗು ಯಾರು?
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Aug 04, 2023 | 6:51 PM

ನಮ್ಮ ದೇಶದಲ್ಲಿ ಇಂದಿಗೂ ಹೆಚ್ಚಿನವರಿಗೆ ಬಿಸ್ಕೆಟ್ ಎಂದಾಗ ಮೊದಲಿಗೆ ನೆನಪಿಗೆ ಬರುವುದೇ ಪಾರ್ಲೆ-ಜಿ (Parle-G). ದೇಶದಲ್ಲಿ ಪಾರ್ಲೆಜಿ ಬಿಸ್ಕೆಟ್ ರುಚಿ ನೋಡದವರು ಯಾರು ಇಲ್ಲ. ಪ್ರಸ್ತುತ ಕಾಲಘಟ್ಟದಲ್ಲಿ ತರಹೇವಾರಿ ಬಿಸ್ಕೆಟ್ ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ, ಹೆಚ್ಚಿನವರು ಪಾರ್ಲೆ-ಜಿ ಬಿಸ್ಕೆಟ್ ತಿನ್ನಲು ಇಷ್ಟಪಡುತ್ತಾರೆ. 12 ಕೆಲಸಗಾರರೊಂದಿಗೆ ಪ್ರಾರಂಭವಾದ ಈ ಬಿಸ್ಕೆಟ್ ಕಂಪೆನಿಯು ಇಂದು ವಿಶ್ವದಲ್ಲೇ ಅತೀ ಹೆಚ್ಚು ಮಾರಾಟವಾಗುವ ಬಿಸ್ಕೆಟ್ ಆಗಿದೆ. ಈ ಕಂಪೆನಿಯು ಪ್ರತಿವರ್ಷ 8000 ಕೋಟಿ ಮೌಲ್ಯ ಬಿಸ್ಕೆಟ್​​ಗಳನ್ನು ಮಾರಾಟ ಮಾಡುತ್ತಿದೆ. ಇದು ದಾಖಲೆ ಅಂತಾನೇ ಹೇಳಬಹುದು. ಈ ಬಿಸ್ಕೆಟ್ ಪೊಟ್ಟಣದಲ್ಲಿ ಒಬ್ಬ ಪುಟ್ಟ ಬಾಲಕಿಯ ಮುದ್ದಾದ ಚಿತ್ರವಿದೆ. ಈ ಹುಡುಗಿ ಯಾರು ಎಂಬ ಗೊಂದಲ ಅನೇಕರಲ್ಲಿದೆ. ಈ ಪುಟ್ಟ ಹುಡುಗಿ ಯಾರು? ಪಾರ್ಲೆ-ಜಿ ಕಂಪೆನಿ ಹೇಗೆ ಪ್ರಾರಂಭವಾಯಿತು ಎಂಬ ಆಸಕ್ತಿದಾಯಕ ಮಾಹಿತಿಯನ್ನು ತಿಳಿಯಿರಿ.

ಪಾರ್ಲೆ-ಜಿ ಕಂಪೆನಿ ಹೇಗೆ ಪ್ರಾರಂಭವಾಯಿತು:

ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ, ದೇಶದಲ್ಲಿ ಸ್ವದೇಶಿ ಉತ್ಪನ್ನಗಳ ಚಳುವಳಿ ಆರಂಭವಾದಾಗ 1929ರಲ್ಲಿ ಚೌಹಾಣ್ ಕುಟುಂಬದ ಮೋಹನ್ ಲಾಲ್ ದಯಾಳ್ ಅವರು ಮುಂಬೈ ನ ವಿಲೇ ಪಾರ್ಲೆಯಲ್ಲಿ ‘ಪಾರ್ಲೆ’ ಎಂಬ ಸ್ವದೇಶಿ ಕಂಪೆನಿಯನ್ನು ಸ್ಥಾಪಿಸಿದರು. ಇದರ ಹಿಂದಿನ ಕಥೆಯೂ ತುಂಬಾ ಕುತೂಹಲಕಾರಿಯಾಗಿದೆ. ಸ್ವತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಸ್ವದೇಶಿ ಉತ್ಪನ್ನಗಳಿಂದ ಪ್ರಭಾವಿತರಾದ ಮೋಹನ್ ಲಾಲ್ ದೇಶದಲ್ಲಿ ಮಿಠಾಯಿ ಉತ್ಪನ್ನಗಳನ್ನು ತಯಾರಿಸುವ ಚಿಂತನೆ ನಡೆಸಿದರು. ಇದಕ್ಕಾಗಿ ಅವರು ತಮ್ಮ ಜರ್ಮನಿಯ ಪ್ರವಾಸದ ಸಮಯದಲ್ಲಿ ಕಲಿತ ಕೌಶಲ್ಯದ ಅನುಭವಗಳನ್ನು ಬಳಸಿಕೊಂಡರು. ಜರ್ಮನಿಗೆ ಹೋದ ಸಂದರ್ಭದಲ್ಲಿ ಅಲ್ಲಿ ಬಿಸ್ಕೆಟ್ ತಯಾರಿಸುವ ಪರಿಣಿತಿಯನ್ನು ಸಂಪಾದಿಸಿದರು. ಅಲ್ಲದೆ ಬಿಸ್ಕೆಟ್ ತಯಾರಿಸಲು ಬೇಕಾದ ಬಿಡಿಭಾಗಗಳನ್ನು ಜರ್ಮನಿಯಿಂದ ಆಮದು ಮಾಡಿಕೊಳ್ಳುತ್ತಾರೆ. ಆಗಿನ ಕಾಲದಲ್ಲಿ ಅದರ ಮೌಲ್ಯ 60 ಸಾವಿರ ರೂಪಾಯಿಗಳು. ಮೋಹನ್ ಲಾಲ್ ಅವರು ತಮ್ಮ ಕೌಶಲ್ಯದ ಜೊತೆಗೆ ಕೇವಲ 12 ಕೆಲಸಗಾರರೊಂದಿಗೆ ಪಾರ್ಲೆ ಕಂಪೆನಿಯನ್ನು ಆರಂಭಿಸಿದರು. ನಂತರದಲ್ಲಿ ಇದು ದೇಶದ ಅತ್ಯಂತ ರುಚಿಕರವಾದ ಬಿಸ್ಕೆಟ್ ಆಗಿ ಹೊರಹೊಮ್ಮಿತು ಮತ್ತು ಪ್ರತಿಯೊಬ್ಬ ಭಾರತೀಯರ ಹೃದಯವನ್ನು ಗೆದ್ದಿತು.

ಮೊದಲು ಈ ಬಿಸ್ಕೆಟ್​​​ನ್ನು ಮಕ್ಕಳಿಗೆ ಗ್ಲೋಕೋಸ್ ಡೋಸ್ ನೀಡಲು ಪಾರ್ಲೆ-ಗ್ಲೂಕೋ ಎಂಬ ಹೆಸರಿನಲ್ಲಿ ಪ್ರಾರಂಭಿಸಲಾಯಿತು. 1980 ರಲ್ಲಿ ಗ್ಲೂಕೋ ಬದಲಿಗೆ, ಕಂಪೆನಿಯು ಕೇವಲ ಜಿ (G) ಅಂದರೆ ಪಾರ್ಲೆ-ಜಿ (Parle-G) ಎಂಬ ಹೆಸರನ್ನು ಬಳಸಲು ಪ್ರಾರಂಭಿಸಿತು. ಆರಂಭದಲ್ಲಿ ಜಿ ಎಂದರೆ ಗ್ಲೂಕೋಸ್ ಎಂದು ಕರೆಯಲಾಗಿತ್ತು. ನಂತರದಲ್ಲಿ ಜೀ ಎಂದರೆ ಪ್ರತಿಭೆ (ಜೀನಿಯಸ್) ಎಂದು ಕರೆಯಲಾಯಿತು. ಅಂದರೆ ಪ್ರತಿಭಾವಂತರು ಈ ಬಿಸ್ಕೆಟ್​​​ನ್ನು ತಿನ್ನುತ್ತಾರೆ ಎಂಬುದು ಕಂಪೆನಿಯ ಧ್ಯೇಯವಾಗಿತ್ತು. ಅಂದಿನಿಂದ ಇದು ಪಾರ್ಲೆ-ಜಿ ಎಂಬ ಹೆಸರಿನಿಂದ ಪ್ರಸಿದ್ಧವಾಯಿತು.

ಇದನ್ನೂ ಓದಿ: ಸಂಜೆಯ ತಿಂಡಿಗೆ ಸೋಯಾ ಕಬಾಬ್ ಸೂಪರ್, ಇದು ಆರೋಗ್ಯಕ್ಕೂ ಉತ್ತಮ

ಪಾರ್ಲೆ ಜಿ ಬಿಸ್ಕೆಟ್ ಪೊಟ್ಟಣದಲ್ಲಿರುವ ಹುಡುಗಿ ಯಾರು?

ಪಾರ್ಲೆ ಜಿ ಬಿಸ್ಕೆಟ್ ಪೊಟ್ಟಣದಲ್ಲಿರುವ ಪುಟ್ಟ ಹುಡುಗಿಯ ಚಿತ್ರ ಯಾರಾದ್ದಾಗಿರಬಹುದು ಎಂದು ದಶಕಗಳಿಂದ ಜನರ ಮನಸ್ಸಿನಲ್ಲಿ ಓಡಾಡುತ್ತಿರುವ ಒಂದು ಪ್ರಶ್ನೆಯಾಗಿದೆ. ಇದು ಇನ್ಫೋಸಿಸ್ ಅಧ್ಯಕ್ಷೆ ಸುಧಾ ಮೂರ್ತಿ ಅವರ ಬಾಲ್ಯದ ಚಿತ್ರ ಎಂದು ಹಲವರು ನಂಬಿದ್ದರು. ಕೆಲವರು ಇದನ್ನು ನೀರು ದೇಶಪಾಂಡೆ ಹಾಗೂ ಇನ್ನೂ ಕೆಲವರು ಆ ಚಿತ್ರದಲ್ಲಿರುವ ಬಾಲಕಿ ಗುಂಜನ್ ದುಂಡಾನಿಯಾ ಎಂದು ನಂಬಿದ್ದರು. ಆದರೆ ಇದೀಗ ಈ ನಿಗೂಢ ಹುಡುಗಿಯ ರಹಸ್ಯಕ್ಕೆ ತೆರೆ ಬಿದ್ದಿದೆ.

ಪಾರ್ಲೆ ಜಿ ಗ್ರೂಪ್ ಪ್ರೋಡಕ್ಟ್ ಮ್ಯಾನೇಜರ್ ಮಯಾಂಕ್ ಷಾ ಅವರು ಪಾರ್ಲೆ-ಜಿ ಬಿಸ್ಕೆಟ್ ಪೊಟ್ಟದಲ್ಲಿರುವ ಹುಡುಗಿಯ ಚಿತ್ರ ಯಾರ ನೈಜ ಚಿತ್ರವೂ ಅಲ್ಲ. ಇದೊಂದು ಕಾಲ್ಪನಿಕ ಚಿತ್ರವಾಗಿದ್ದು, ಇದನ್ನು 1960 ರಲ್ಲಿ ಎವರೆಸ್ಟ್ ಕ್ರಿಯೇಟಿವ್ ಕಲಾವಿದ ಮಗನ್ ಲಾಲ್ ದಹಿಯಾ ರಚಿಸಿದ್ದು ಎಂದು ಹೇಳಿದ್ದಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

Published On - 6:50 pm, Fri, 4 August 23