Parle-G biscuits: ಹೊಸ ಪ್ಯಾಕೆಟ್‌ನೊಂದಿಗೆ ಭಾರೀ ಸದ್ದು ಮಾಡುತ್ತಿದೆ ಪಾರ್ಲೆ-ಜಿ ಬಿಸ್ಕೆಟ್

ಪಾರ್ಲೆ-ಜಿ ಹೊಸ ರುಚಿಯೊಂದಿಗೆ ಹಣ್ಣು ಮತ್ತು ಓಟ್ಸ್​​ಗಳೊಂದಿಗೆ ತುಂಬಿಕೊಂಡಿದೆ ಎಂದು ಟ್ವಿಟರ್ ಬಳಕೆದಾರರೊಬ್ಬರು ಪಾರ್ಲೆ-ಜಿ ಪ್ಯಾಕೆಟ್‌ನ ಚಿತ್ರವನ್ನು ಹಂಚಿಕೊಂಡಿದ್ದಾರೆ.

Parle-G biscuits: ಹೊಸ ಪ್ಯಾಕೆಟ್‌ನೊಂದಿಗೆ ಭಾರೀ ಸದ್ದು ಮಾಡುತ್ತಿದೆ ಪಾರ್ಲೆ-ಜಿ ಬಿಸ್ಕೆಟ್
ಸಾಂದರ್ಭಿಕ ಚಿತ್ರImage Credit source: Twitter
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on:Jan 04, 2023 | 11:55 AM

ಪಾರ್ಲೆ-ಜಿ ಬಿಸ್ಕತ್ತು(Parle-G biscuits) ಎಂದರೆ ಬಾಲ್ಯದ ಅದೆಷ್ಟೋ ನೆನಪುಗಳು ಮತ್ತೆ ಮರುಕಳಿಸುತ್ತದೆ. ಒಂದು ಕಪ್ ಟೀ ಜೊತೆಗೆ ಪಾರ್ಲೆ-ಜಿ ಬಿಸ್ಕತ್ತು ಇದ್ದರಂತೂ ಸಾಕು. ಪಾರ್ಲೆ-ಜಿ ಬಿಸ್ಕತ್ತು ಅಂದ ಕೂಡಲೇ ಹಳದಿ ಬಣ್ಣದ ಪ್ಯಾಕೆಟ್‌ ಮತ್ತು ಪುಟ್ಟ ಹುಡುಗಿಯ ಪೋಟೋ ನೆನಪಾಗುವುದಂತೂ ಸಾಮಾನ್ಯ.  ಆದರೆ ಇದೀಗಾ ವಿಭಿನ್ನ ರುಚಿಗಳಲ್ಲಿ ಲಭ್ಯವಿರುವ ಬಿಸ್ಕತ್‌ನ ಪ್ಯಾಕೆಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಟ್ಟಿಗೆ ವೈರಲ್ ಆಗ್ತಾ ಇದೆ.  ಇದೀಗಾ ಪಾರ್ಲೆ-ಜಿ ಹೊಸ ರುಚಿಯೊಂದಿಗೆ ಹಣ್ಣು ಮತ್ತು ಓಟ್ಸ್​​ಗಳೊಂದಿಗೆ ತುಂಬಿಕೊಂಡಿದೆ ಎಂದು ಟ್ವಿಟರ್ ಬಳಕೆದಾರರಾದ @hojevlo ಪಾರ್ಲೆ-ಜಿ ಪ್ಯಾಕೆಟ್‌ನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಆದರೆ ಇದು ನೀವು ಸಾಮಾನ್ಯವಾಗಿ ತಿನ್ನುತ್ತಿದ್ದ ಪಾರ್ಲೆ-ಜಿ ಅಲ್ಲ. ಬದಲಾಗಿ ಹಣ್ಣುಗಳು ಮತ್ತು ಓಟ್ಸ್ ನಿಂದ ತುಂಬಿದೆ ಎಂದು ಪ್ಯಾಕೆಟ್‌ನಲ್ಲಿ ಬರೆಯಲಾಗಿದೆ. ಇದು ಈಗಾಗಲೇ ದೇಶಾದ್ಯಂತ ಮಾರುಕಟ್ಟೆಗೆ ತರಲಾಗಿದೆ. ಅವರು ಹಂಚಿಕೊಂಡಿರುವ ಪೋಸ್ಟ್ ಇಲ್ಲಿದೆ.

ಇದನ್ನೂ ಓದಿ: Wheat Price In 1987: 1987ರಲ್ಲಿ ಒಂದು ಕೆಜಿ ಗೋಧಿ ಬೆಲೆ ಎಷ್ಟಿತ್ತು ಗೊತ್ತಾ?

ಈ ಪೋಸ್ಟ್ 18.7  ಸಾವಿರ ಜನರು ವೀಕ್ಷಿಸಿದ್ದಾರೆ. ಜೊತೆಗೆ ಅನೇಕರು ತಮ್ಮ ಬಾಲ್ಯದ ನೆನಪುಗಳ ಬಗ್ಗೆ ಕಾಮೆಂಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.  ಈ ಪೋಸ್ಟ್ ಸಾಕಷ್ಟು ಶೇರ್ ಕೂಡ ಆಗಿದೆ.  ಪೋಸ್ಟ್‌ಗೆ ಸಂಬಂಧಿಸಿದ ಕಾಮೆಂಟ್‌ಗಳು ಭಾರಿ ವೈವಿಧ್ಯಮಯವಾಗಿವೆ. ಕೆಲವರು ಪಾರ್ಲೆ-ಜಿಯ ಮೂಲ ರುಚಿಯನ್ನು ಹೇಗೆ ಆದ್ಯತೆ ನೀಡಿದರು ಎಂಬುದರ ಕುರಿತು ಬರೆದರೆ, ಕೆಲವರು ಹೊಸ ಪರಿಮಳ ಹಾಗೂ ರುಚಿಯನ್ನು ಪ್ರಯತ್ನಿಸಲು ಉತ್ಸುಕರಾಗಿದ್ದಾರೆ. ಕೆಲವು ಸಾಮಾಜಿಕ ಜಾಲತಾಣ ಬಳಕೆದಾರರು ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಪಾರ್ಲೆ-ಜಿ ಬಿಸ್ಕತ್ತುಗಳ ರುಚಿ ಮತ್ತು ಪ್ಯಾಕೇಜಿಂಗ್ ಅವರ ಬಾಲ್ಯದ ಸಂಕೇತವಾಗಿದೆ. ಯಾಕೆಂದರೆ  ಪುಟ್ಟ ಹುಡುಗಿಯ ಭಾವ ಚಿತ್ರವಿರುವ ಪ್ಯಾಕೇಟ್ ಸಾಕಷ್ಟು ವರ್ಷಗಳಿಂದ ಬರುತ್ತಿದ್ದು, ಆ ಪ್ಯಾಕೇಟ್ ನೋಡುತ್ತಿದ್ದಂತೆ ಬಾಲ್ಯದ ನೆನಪು ಮರುಕಳಿಸುತ್ತಿತ್ತು ಎಂದು ಕಾಮೆಂಟ್ ಮಾಡಿದ್ದಾರೆ.   ಈಗ ಹೊಸ ವಿನ್ಯಾಸ ಹಾಗೂ ರುಚಿಯೊಂದಿಗೆ ಜನರನ್ನು ತಲುಪುತ್ತಿರುವುದು ಖುಷಿಯ ವಿಚಾರ ಎಂದು ಇನ್ನು ಕೆಲವರು ಪ್ರತಿಕ್ರಿಯಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Published On - 11:50 am, Wed, 4 January 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ