Perihelion Day 2023: ಇಂದು ಸೂರ್ಯ-ಭೂಮಿ ನಡುವಿನ ಅಂತರ ತುಂಬಾ ಕಡಿಮೆ ಇರುವ ದಿನ
ಪೆರಿಹೆಲಿಯನ್ ಎಂದರೆ ಭೂಮಿ ಮತ್ತು ಸೂರ್ಯ ಕಕ್ಷೆಯೂ ಹತ್ತಿರಕ್ಕೆ ಸಮೀಪಿಸುವ ವಿಶೇಷ ದಿನವಾಗಿದೆ. ಈ ಸಮಯದಲ್ಲಿ, ಭೂಮಿಯು ಸೂರ್ಯನಿಂದ ಕೇವಲ 91 ಮಿಲಿಯನ್ ಮೈಲುಗಳಷ್ಟು ದೂರದಲ್ಲಿರುತ್ತದೆ.
ಇಂದು (ಜನವರಿ 4, 2023)ರಂದು ಭೂಮಿ ಮತ್ತು ಸೂರ್ಯ ಸಾಕಷ್ಟು ಹತ್ತಿರ ತಲುಪುತ್ತದೆ. ಭೂಮಿ ಮತ್ತು ಸೂರ್ಯ ಕಕ್ಷೆಯಲ್ಲಿ ತಮ್ಮ ಹತ್ತಿರದ ಬಿಂದುವಿನಲ್ಲಿದ್ದಾಗ ಈ ವಿದ್ಯಮಾನವನ್ನು ಪೆರಿಹೆಲಿಯನ್(Perihelion) ಎಂದು ಕರೆಯಲಾಗುತ್ತದೆ. ಪೆರಿಹೆಲಿಯನ್ ಎಂಬ ಪದವು ಗ್ರೀಕ್ ಭಾಷೆಯಿಂದ ಬಂದಿದೆ. “ಪೆರಿ” ಎಂದರೆ “ಸುತ್ತಲೂ ಅಥವಾ ಹತ್ತಿರ” ಮತ್ತು “ಹೆಲಿಯೊಸ್” ಎಂದರೆ ಸೂರ್ಯ ಎಂಬ ಅರ್ಥವನ್ನು ನೀಡುತ್ತದೆ. ಭೂಮಿಯೂ ಸೂರ್ಯನಿಗೆ ಸುತ್ತುವರಿಯುತ್ತಿದಂತ ಈ ರೀತಿಯ ಬದಲಾವಣೆಗಳು ಸಂಭವಿಸುತ್ತದೆ. ಈ ಸಮಯದಲ್ಲಿ ಸೂರ್ಯ ಮತ್ತು ಭೂಮಿಯು ಸಾಕಷ್ಟು ಸಮೀಪದಲ್ಲಿರುತ್ತದೆ. ಪೆರಿಹೆಲಿಯನ್ ಎಂದರೆ ಭೂಮಿ ಮತ್ತು ಸೂರ್ಯ ಕಕ್ಷೆಯೂ ಹತ್ತಿರಕ್ಕೆ ಸಮೀಪಿಸುವ ವಿಶೇಷ ದಿನವಾಗಿದೆ. ಈ ಸಮಯದಲ್ಲಿ, ಭೂಮಿಯು ಸೂರ್ಯನಿಂದ ಕೇವಲ 91 ಮಿಲಿಯನ್ ಮೈಲುಗಳಷ್ಟು ದೂರದಲ್ಲಿರುತ್ತದೆ.
ನಿಮಗೆ ತಿಳಿದಿರುವಂತೆ, ಗ್ರಹದ ಕಕ್ಷೆಯು ದೀರ್ಘವೃತ್ತವಾಗಿದೆ. ಇದು ಒಂದು ವರ್ಷದ ಅವಧಿಯಲ್ಲಿ ಸೂರ್ಯನಿಗೆ ಸಮೀಪವಿರುತ್ತದೆ ಮತ್ತು ಸುತ್ತುವರಿಯುತ್ತಿದ್ದ ಹಾಗೇ ಸಾಕಷ್ಟು ದೂರಕ್ಕೆ ಚಲಿಸುತ್ತದೆ.ಈ ಸಂಕ್ರಮಣ ಸಮಯ ಅಂದರೆ ಅಯನ ಸಂಕ್ರಾಂತಿಯ ಎರಡು ವಾರಗಳ ನಂತರ ಈ ದಿನ ಸಂಭವಿಸುತ್ತದೆ. ಈ ದಿನದಲ್ಲಿ, ಅದರ ಕಕ್ಷೆಯು ವರ್ಷದ ಯಾವುದೇ ಸಮಯದಲ್ಲಿ ಸೂರ್ಯನಿಗೆ ಸುಮಾರು 3 ಮಿಲಿಯನ್ ಮೈಲುಗಳಷ್ಟು ಹತ್ತಿರಕ್ಕೆ ತರುತ್ತದೆ.
ಸೂರ್ಯನಿಂದ ಭೂಮಿಗೆ ಸರಾಸರಿ ದೂರವು 93 ಮಿಲಿಯನ್ ಮೈಲುಗಳು, ಆದರೆ ಪೆರಿಹೆಲಿಯನ್ ಸಮಯದಲ್ಲಿ, ಭೂಮಿಯು ಸೂರ್ಯನಿಂದ ಕೇವಲ 91 ಮಿಲಿಯನ್ ಮೈಲುಗಳಷ್ಟು ದೂರದಲ್ಲಿದೆ.ಈ ಸಮಯದಲ್ಲಿ ಭೂಮಿಯು ಸಾಮಾನ್ಯಕ್ಕಿಂತ ಹೆಚ್ಚು ಸೂರ್ಯನ ಬೆಳಕನ್ನು ಪಡೆಯುತ್ತದೆ. ಇದರ ಪರಿಣಾಮವಾಗಿ, ಚಳಿಗಾಲದ ತಿಂಗಳುಗಳಲ್ಲಿ (ಉತ್ತರ ಗೋಳಾರ್ಧದಲ್ಲಿ ಡಿಸೆಂಬರ್ನಿಂದ ಫೆಬ್ರವರಿವರೆಗೆ), ಭೂಮಿಯು ಸೂರ್ಯನಿಗೆ ಹತ್ತಿರವಾದಾಗ, ಸ್ವಲ್ಪ ಬೆಚ್ಚಗಿನ ತಾಪಮಾನವನ್ನು ಕಾಣಬಹುದು.
ಇದನ್ನು ಓದಿ: Shortest Day, Longest Night: ಡಿಸೆಂಬರ್ 22 ಕಡಿಮೆ ಹಗಲು, ದೀರ್ಘ ರಾತ್ರಿ ;ಈ ದಿನದ ವಿಶೇಷತೆ ಇಲ್ಲಿದೆ
ಡಿಸೆಂಬರ್ನಲ್ಲಿ ಸೂರ್ಯನು ಭೂಮಿಯಿಂದ ಅಂದರೆ ವಿಶೇಷವಾಗಿ ಭೂಮಿಯ ಉತ್ತರಭಾಗದಿಂದ ಸಾಕಷ್ಟು ದೂರದಲ್ಲಿ ಇರುವುದರಿಂದ ಸೂರ್ಯನ ಪ್ರಕಾಶವು ಭೂಮಿಯನ್ನು ಮೇಲೆ ಕಡಿಮೆ ಮಟ್ಟದಲ್ಲಿ ಸ್ಪರ್ಶಿಸುತ್ತದೆ. ಇದು ತಂಪಾದ ತಾಪಮಾನವನ್ನು ಉಂಟುಮಾಡುತ್ತದೆ ಎಂದು ನಾಸಾ ವಿವರಿಸುತ್ತದೆ. ಡಿಸೆಂಬರ್ 22 ರ ನಂತರ, ಭಾರತವು ಸೇರಿದಂತೆ ಉತ್ತರ ಗೋಳಾರ್ಧದಲ್ಲಿ ಹಗಲು ಹೆಚ್ಚಾಗಲು ಪ್ರಾರಂಭವಾಗುತ್ತದೆ ಮತ್ತು ಇದರಿಂದ ಹಗಲಿನ ಸಮಯ ದೀರ್ಘವಾಗಿರುತ್ತದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ, ಹಗಲುಗಳು ಕಡಿಮೆ ಮತ್ತು ರಾತ್ರಿಗಳು ಹೆಚ್ಚು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 1:30 pm, Wed, 4 January 23