AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shortest Day, Longest Night: ಡಿಸೆಂಬರ್ 22 ಕಡಿಮೆ ಹಗಲು, ದೀರ್ಘ ರಾತ್ರಿ ;ಈ ದಿನದ ವಿಶೇಷತೆ ಇಲ್ಲಿದೆ

ನಾಸಾದ ಪ್ರಕಾರ, ಈ ಸಂಕ್ರಮಣ ಕಾಲದ ಸಮಯದಲ್ಲಿ, ಭೂಮಿಯ ಪಥವು ಸೂರ್ಯನಿಂದ ಸಾಕಷ್ಟು ದೂರದಲ್ಲಿರುತ್ತದೆ. ಈ ಸಮಯದಲ್ಲಿ ಭೂಮಿಯ ದಕ್ಷಿಣ ಭಾಗವು ಬೇಸಿಗೆಯಿಂದ, ಹಾಗೂ ಉತ್ತರವು ಚಳಿಯಿಂದ ಕೂಡಿರುತ್ತದೆ.

Shortest Day, Longest Night: ಡಿಸೆಂಬರ್ 22 ಕಡಿಮೆ ಹಗಲು, ದೀರ್ಘ ರಾತ್ರಿ ;ಈ ದಿನದ ವಿಶೇಷತೆ ಇಲ್ಲಿದೆ
ಸಾಂದರ್ಭಿಕ ಚಿತ್ರ
TV9 Web
| Updated By: ಅಕ್ಷತಾ ವರ್ಕಾಡಿ|

Updated on:Dec 22, 2022 | 12:24 PM

Share

ಸೂರ್ಯನಿಂದ ಭೂಮಿಯು ಸಾಕಷ್ಟು ದೂರದಲ್ಲಿರುವ ದಿನ (ಡಿಸೆಂಬರ್ 22) ಇದಾಗಿದ್ದು, ವಿಶೇಷವಾಗಿ ಉತ್ತರ ಗೋಳಾರ್ಧದ ಪ್ರದೇಶಗಳಲ್ಲಿ ಕಡಿಮೆ ಹಗಲು ಮತ್ತು ದೀರ್ಘ ರಾತ್ರಿ ಸಂಭವಿಸುತ್ತದೆ. ಪ್ರತಿ ವರ್ಷವು ಡಿಸೆಂಬರ್ 20 ರಿಂದ 26 ಒಳಗೆ ಈ ವಿಶೇಷ ದಿನವನ್ನು ಕಾಣಬಹುದು. ಈ ವರ್ಷ ಡಿಸೆಂಬರ್ 22ರಂದು ಬಂದಿದೆ.  ಭೂಮಿಯೂ ಸೂರ್ಯನಿಗೆ ಸುತ್ತುವರಿಯುತ್ತಿದಂತ ಈ ರೀತಿಯ ಬದಲಾವಣೆಗಳು ಸಂಭವಿಸುತ್ತದೆ. ಈ ಸಮಯದಲ್ಲಿ ಸೂರ್ಯನಿಂದ ಭೂಮಿಯು ಸಾಕಷ್ಟು ದೂರದಲ್ಲಿ ಇರುತ್ತದೆ.  ಉತ್ತರ ಗೋಳಾರ್ಧವು ಕೇವಲ 8 ಗಂಟೆ 46 ನಿಮಿಷಗಳ ಹಗಲನ್ನು ಹೊಂದಿರುತ್ತದೆ.

ನಾಸಾದ ಪ್ರಕಾರ, ಈ ಸಂಕ್ರಮಣ ಕಾಲದ ಸಮಯದಲ್ಲಿ, ಭೂಮಿಯ ಪಥವು ಸೂರ್ಯನಿಂದ ಸಾಕಷ್ಟು ದೂರದಲ್ಲಿರುತ್ತದೆ. ಈ ಸಮಯದಲ್ಲಿ ಭೂಮಿಯ ದಕ್ಷಿಣ ಭಾಗವು ಬೇಸಿಗೆಯಿಂದ, ಹಾಗೂ ಉತ್ತರವು ಚಳಿಯಿಂದ ಕೂಡಿರುತ್ತದೆ. ಇದು ಉತ್ತರ ಗೋಳಾರ್ಧದಲ್ಲಿ ಡಿಸೆಂಬರ್​ನಲ್ಲಿ ಹಾಗೂ ದಕ್ಷಿಣದಲ್ಲಿ ಜೂನ್ 20 ಅಥವಾ 21 ರಂದು ಘಟಿಸುತ್ತದೆ. ದಕ್ಷಿಣ ಗೋಳಾರ್ಧದಲ್ಲಿ ಸಂಪೂರ್ಣವಾಗಿ ಇರುವ ಎರಡು ಖಂಡಗಳು ಆಸ್ಟ್ರೇಲಿಯಾ ಮತ್ತು ಅಂಟಾರ್ಟಿಕಾ. ದಕ್ಷಿಣ ಗೋಳಾರ್ಧದಲ್ಲಿರುವ ಇತರ ದೇಶಗಳು ದಕ್ಷಿಣ ಅಮೆರಿಕಾದಲ್ಲಿ ಉರುಗ್ವೆ ಮತ್ತು ಪರಾಗ್ವೆ, ಆಫ್ರಿಕಾದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಜಾಂಬಿಯಾ, ಏಷ್ಯಾದ ಪೂರ್ವ ಟಿಮೋರ್ ಇತ್ಯಾದಿ.

ಇದನ್ನೂ ಓದಿ: ಭಾರತೀಯ ಕರೆನ್ಸಿಯ ಮೂಲಕ ಕಡಿಮೆ ಖರ್ಚಿನಲ್ಲಿ ಹೋಗಬಹುದಾದ ವಿದೇಶಿ ತಾಣಗಳು ಇಲ್ಲಿವೆ

ಡಿಸೆಂಬರ್​ನಲ್ಲಿ ಸೂರ್ಯನು ಭೂಮಿಯಿಂದ ಅಂದರೆ ವಿಶೇಷವಾಗಿ ಭೂಮಿಯ ಉತ್ತರಭಾಗದಿಂದ ಸಾಕಷ್ಟು ದೂರದಲ್ಲಿ ಇರುವುದರಿಂದ ಸೂರ್ಯನ ಪ್ರಕಾಶವು ಭೂಮಿಯನ್ನು ಮೇಲೆ ಕಡಿಮೆ ಮಟ್ಟದಲ್ಲಿ ಸ್ಪರ್ಶಿಸುತ್ತದೆ. ಇದು ತಂಪಾದ ತಾಪಮಾನವನ್ನು ಉಂಟುಮಾಡುತ್ತದೆ ಎಂದು ನಾಸಾ ವಿವರಿಸುತ್ತದೆ. ಡಿಸೆಂಬರ್ 22 ರ ನಂತರ, ಭಾರತವು ಸೇರಿದಂತೆ ಉತ್ತರ ಗೋಳಾರ್ಧದಲ್ಲಿ ಹಗಲು ಹೆಚ್ಚಾಗಲು ಪ್ರಾರಂಭವಾಗುತ್ತದೆ ಮತ್ತು ಇದರಿಂದ ಹಗಲಿನ ಸಮಯ ದೀರ್ಘವಾಗಿರುತ್ತದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ, ಹಗಲುಗಳು ಕಡಿಮೆ ಮತ್ತು ರಾತ್ರಿಗಳು ಹೆಚ್ಚು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 12:21 pm, Thu, 22 December 22