Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾತ್ರಿ ಚೆನ್ನಾಗಿ ನಿದ್ದೆ ಬರಲಿಲ್ಲವಾ? ಹಗಲು ವೇಳೆ ಆಕಳಿಕೆ, ನಿದ್ರಾಲಸ್ಯವಾ? ಹಾಗಾದರೆ ಈ ಸಲಹೆಗಳು ನಿಮಗಾಗಿ

day sleep: ಸಾಧ್ಯವಾದಷ್ಟು ಬೇಗನೇ ವೈದ್ಯರನ್ನು ಸಂಪರ್ಕಿಸಬೇಕು. ಹಗಲಿನಲ್ಲಿ.. ಕೆಲಸ ಮಾಡುಬೇಕಾದ ಪರಿಸ್ಥಿತಿಯಲ್ಲಿ ನಿದ್ದೆ ಮಾಡಿದರೆ ಅದು ಕ್ಷೇಮವಲ್ಲ. ಆವಾಗ ನೀವು ಆ್ಯಕ್ಟೀವ್ ಆಗಿರಲು ನಿಮ್ಮ ದಿನನಿತ್ಯದ ಜೀವನಶೈಲಿಯನ್ನು ಬದಲಾವಣೆ ಮಾಡಿಕೊಳ್ಳಬೇಕು ಎನ್ನುತ್ತಾರೆ ತಜ್ಞರು.

ರಾತ್ರಿ ಚೆನ್ನಾಗಿ ನಿದ್ದೆ ಬರಲಿಲ್ಲವಾ? ಹಗಲು ವೇಳೆ ಆಕಳಿಕೆ, ನಿದ್ರಾಲಸ್ಯವಾ? ಹಾಗಾದರೆ ಈ ಸಲಹೆಗಳು ನಿಮಗಾಗಿ
ರಾತ್ರಿಯಿಡೀ ಚೆನ್ನಾಗಿ ನಿದ್ರಿಸಿದರೂ.. ಹಗಲು ವೇಳೆ ಆಕಳಿಕೆಯಾ? ಹಾಗಾದರೆ ಈ ಸಲಹೆಗಳು ನಿಮಗಾಗಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Aug 27, 2022 | 6:06 AM

ಆರೋಗ್ಯವಾಗಿರಲು ನಿದ್ರೆ ಅತ್ಯಗತ್ಯ. ದೇಹ ಮತ್ತು ಮೆದುಳಿಗೆ ಸರಿಯಾದ ವಿಶ್ರಾಂತಿ ನೀಡಿದರೆ ಮಾರನೆಯ ದಿನ ಕ್ರಿಯಾಶೀಲರಾಗಿ ಕೆಲಸ ಮಾಡುತ್ತೇವೆ. ಆದರೆ ಬದಲಾಗುತ್ತಿರುವ ಆಧುನಿಕ ಇಂಟರ್ನೆಟ್​ ಜೀವನಶೈಲಿಯಿಂದ ನಿದ್ರೆ ಸರಿಯಾಗಿ ಆಗುತ್ತಿಲ್ಲ. ಆದರೆ ಸ್ವಲ್ಪ ಶಾಂತಚಿತ್ತರಾಗಿ ಈ ಸಲಹೆಗಳತ್ತ ಗಮನಹರಿಸಿ.

ಆರೋಗ್ಯವಾಗಿರಲು ನಿದ್ರೆ ಅತ್ಯಗತ್ಯ. ದೇಹ ಮತ್ತು ಮೆದುಳಿಗೆ ಸರಿಯಾದ ವಿಶ್ರಾಂತಿ ನೀಡಿದರೆ ಮಾರನೆಯ ದಿನ ಕ್ರಿಯಾಶೀಲರಾಗಿ ಕೆಲಸ ಮಾಡುತ್ತೇವೆ. ಆದರೆ ಬದಲಾಗುತ್ತಿರುವ ಆಧುನಿಕ ಇಂಟರ್ನೆಟ್​ ಜೀವನಶೈಲಿಯಿಂದ ನಿದ್ರೆ ಸರಿಯಾಗಿ ಆಗುತ್ತಿಲ್ಲ. ಆದರೆ ಕೆಲವರಿಗೆ ನೆಮ್ಮದಿಯಿಂದ ಮಲಗಿದರೂ ಬೆಳಗ್ಗೆ ಬೇಗ ಏಳಲು ಆಗುವುದಿಲ್ಲ. ಅವರು ಸೋಮಾರಿತನ ಮತ್ತು ಆಯಾಸವನ್ನು ಅನುಭವಿಸುತ್ತಾರೆ. ರಾತ್ರಿಯೆಲ್ಲಾ ನಿದ್ದೆ ಮಾಡಿದರೂ ಬೆಳಗಿನ ಜಾವ ತೂರಾಡುವ ಹ್ಯಾಂಗ್ ಓವರ್ ಅನುಭವ ಅವರದ್ದಾಗಿರುತ್ತದೆ. ಇದರೊಂದಿಗೆ ಯಾವುದೇ ಕೆಲಸದಲ್ಲಿ ಅವರಿಗೆ ಆಸಕ್ತಿ ಇರುವುದಿಲ್ಲ. ಆಕಳಿಸುವುದು ಮತ್ತು ತೂಕಡಿಸುವುದು ಇಷ್ಟೇ ಅವರ ಕೆಲಸ. ಸ್ವಲ್ಪ ಹೊತ್ತು ಮಲಗಿದರೆ ಒಳ್ಳೆಯದಾ ಎಂದು ಅವರಿಗೆ ಅನಿಸುತ್ತದೆ.

ಅಂತಹ ಪರಿಸ್ಥಿತಿಯಲ್ಲಿ ವೈದ್ಯೆರ ಭೇಟಿಗಾಗಿ ವಿಳಂಬ ಮಾಡಬಾರದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಸಾಧ್ಯವಾದಷ್ಟು ಬೇಗನೇ ವೈದ್ಯರನ್ನು ಸಂಪರ್ಕಿಸಬೇಕು. ಹಗಲಿನಲ್ಲಿ.. ಕೆಲಸ ಮಾಡುಬೇಕಾದ ಪರಿಸ್ಥಿತಿಯಲ್ಲಿ ನಿದ್ದೆ ಮಾಡಿದರೆ ಅದು ಕ್ಷೇಮವಲ್ಲ. ಆವಾಗ ನೀವು ಆ್ಯಕ್ಟೀವ್ ಆಗಿರಲು ನಿಮ್ಮ ದಿನನಿತ್ಯದ ಜೀವನಶೈಲಿಯನ್ನು ಬದಲಾವಣೆ ಮಾಡಿಕೊಳ್ಳಬೇಕು ಎನ್ನುತ್ತಾರೆ ತಜ್ಞರು.

ದಿನವಿಡೀ ಚೈತನ್ಯದಿಂದ ಇರಲು ಬೇಗನೇ ಎದ್ದೇಳಿ. ಪ್ರತಿನಿತ್ಯ ಬೆಳಗ್ಗೆ 6 ಗಂಟೆಗೆ ಎದ್ದರೆ ನೀವು ಆರೋಗ್ಯವಾಗಿರುತ್ತೀರಿ ಮತ್ತು ನಿಮ್ಮ ಮನಸ್ಸು ಶಾಂತವಾಗಿರುತ್ತದೆ ಮತ್ತು ನಿಮ್ಮ ಮೆದುಳು ಸಕ್ರಿಯವಾಗಿರುತ್ತದೆ. ಪ್ರತಿದಿನ 20-25 ನಿಮಿಷಗಳ ಕಾಲ ಎಣ್ಣೆಯಿಂದ ದೇಹದ ಮಸಾಜ್ ಮಾಡಬೇಕು. ಹೀಗೆ ಮಾಡುವುದರಿಂದ ನರಮಂಡಲವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಯೋಗ, ಪ್ರಾಣಾಯಾಮ ಮತ್ತು ಧ್ಯಾನ ದೇಹವನ್ನು ಆರೋಗ್ಯವಾಗಿರಿಸುತ್ತದೆ. ಈ ಕೆಲಸಗಳನ್ನು ಮಾಡುವುದರಿಂದ ನೀವು ದಿನವಿಡೀ ಚಟುವಟಿಕೆಯಿಂದ ಇರುತ್ತೀರಿ.

ಧ್ಯಾನವು ಆತಂಕ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಜ್ಞಾಪಕಶಕ್ತಿ, ಸ್ಪಷ್ಟತೆ ಮತ್ತು ಏಕಾಗ್ರತೆ ವೃದ್ಧಿಸುತ್ತದೆ. ಇದಲ್ಲದೆ, ಬಿಸಿ ಮತ್ತು ತಾಜಾ ಆಹಾರವನ್ನು ಪ್ರತಿದಿನ ತೆಗೆದುಕೊಳ್ಳಬೇಕು. ಆಯುರ್ವೇದದಲ್ಲಿ, ಪ್ರತಿ ದಿನವೂ ನಿಯಮಿತ ಸಮಯದಲ್ಲಿ ಬಿಸಿ ಆಹಾರವನ್ನು ಸೇವಿಸುವುದು ಔಷಧಿಯಂತೆ ಹೇಳಲಾಗುತ್ತದೆ. ಬಿಸಿ ಆಹಾರವು ದೇಹವು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ದೇಹ ಕ್ರಿಯಾಶೀಲವಾಗುತ್ತದೆ. ಇದರಿಂದ ನಿದ್ರೆ ಸಮಸ್ಯೆಗಳು ದೂರವಾಗುತ್ತವೆ.

To read more in Telugu click here

‘ವಾಮನ’ ಸಿನಿಮಾನಲ್ಲಿ ದರ್ಶನ್​ಗೆ ಇಷ್ಟವಾದ ಅಂಶಗಳೇನು?
‘ವಾಮನ’ ಸಿನಿಮಾನಲ್ಲಿ ದರ್ಶನ್​ಗೆ ಇಷ್ಟವಾದ ಅಂಶಗಳೇನು?
ಭಯೋತ್ಪಾದನೆ ವಿರುದ್ಧ ದೊಡ್ಡ ಹೆಜ್ಜೆ; ರಾಣಾ ಹಸ್ತಾಂತರಕ್ಕೆ ಪ್ರಲ್ಹಾದ್ ಜೋಶಿ
ಭಯೋತ್ಪಾದನೆ ವಿರುದ್ಧ ದೊಡ್ಡ ಹೆಜ್ಜೆ; ರಾಣಾ ಹಸ್ತಾಂತರಕ್ಕೆ ಪ್ರಲ್ಹಾದ್ ಜೋಶಿ
ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ವಜೀರಾಬಾದ್ ಬ್ಯಾರೇಜ್‌ನಲ್ಲಿ ಯಮುನಾ ದಂಡೆ ಪರಿಶೀಲಿಸಿದ ಸಿಎಂ ರೇಖಾ ಗುಪ್ತಾ
ವಜೀರಾಬಾದ್ ಬ್ಯಾರೇಜ್‌ನಲ್ಲಿ ಯಮುನಾ ದಂಡೆ ಪರಿಶೀಲಿಸಿದ ಸಿಎಂ ರೇಖಾ ಗುಪ್ತಾ
ರಂಗಾಯಣ ರಘು ಮಾತು ಕೇಳಿ ತಬ್ಬಿಕೊಂಡ ಡಾಲಿ ಧನಂಜಯ್
ರಂಗಾಯಣ ರಘು ಮಾತು ಕೇಳಿ ತಬ್ಬಿಕೊಂಡ ಡಾಲಿ ಧನಂಜಯ್
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ಸಿಎಂ ಯೋಗಿ ಆದಿತ್ಯನಾಥ್ ಧನ್ಯವಾದ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ಸಿಎಂ ಯೋಗಿ ಆದಿತ್ಯನಾಥ್ ಧನ್ಯವಾದ
ರಾಷ್ಟ್ರೀಯ ಭೂಮಾಪನ ದಿನಾಚರಣೆಯನ್ನು ಪ್ರತಿವರ್ಷ ಆಚರಿಸಬೇಕು: ಸಿದ್ದರಾಮಯ್ಯ
ರಾಷ್ಟ್ರೀಯ ಭೂಮಾಪನ ದಿನಾಚರಣೆಯನ್ನು ಪ್ರತಿವರ್ಷ ಆಚರಿಸಬೇಕು: ಸಿದ್ದರಾಮಯ್ಯ
ಭೂಮಾಪನ ಇಲಾಖೆಯಲ್ಲಾದ ಬದಲಾವಣೆಗಳ ಕ್ರೆಡಿಟ್ ಮುಖ್ಯಮಂತ್ರಿಗೆ
ಭೂಮಾಪನ ಇಲಾಖೆಯಲ್ಲಾದ ಬದಲಾವಣೆಗಳ ಕ್ರೆಡಿಟ್ ಮುಖ್ಯಮಂತ್ರಿಗೆ
ಚುನಾವಣೆ ಹತ್ತಿರದಲ್ಲಿಲ್ಲ, ದಗಿಮಿಕ್ ಮಾಡ್ತಿಲ್ಲ; ಉಡುಪಿಯಲ್ಲಿ ವಿಜಯೇಂದ್ರ
ಚುನಾವಣೆ ಹತ್ತಿರದಲ್ಲಿಲ್ಲ, ದಗಿಮಿಕ್ ಮಾಡ್ತಿಲ್ಲ; ಉಡುಪಿಯಲ್ಲಿ ವಿಜಯೇಂದ್ರ
ನಗರಸಭೆ ಮತ್ತು ಜಿಲ್ಲಾಡಳಿತ ವಿರುದ್ಧ ಬೆಂಕಿಯುಗುಳಿದ ಯಾದಗಿರಿ ನಿವಾಸಿಗಳು
ನಗರಸಭೆ ಮತ್ತು ಜಿಲ್ಲಾಡಳಿತ ವಿರುದ್ಧ ಬೆಂಕಿಯುಗುಳಿದ ಯಾದಗಿರಿ ನಿವಾಸಿಗಳು