Nail Trends 2023: ನೀವು ನೈಸರ್ಗಿಕ ಪ್ರೀಯರೇ, ಇಲ್ಲಿದೆ ಉಗುರುಗಳ ಮೆರುಗು ಹೆಚ್ಚಿಸುವ ಟ್ರೆಂಡಿ ನೈಲ್ ಆರ್ಟ್
ಕಾರ್ಟೂನಿಂದ ಗ್ಲಿಟರ್ ವರೆಗೆ ನೀವು 2023ರಲ್ಲಿ ಪ್ರಯತ್ನಿಸಬೇಕಾದ ನೈಲ್ ಆರ್ಟ್ ವಿನ್ಯಾಸಗಳನ್ನು ಇಲ್ಲಿವೆ. ಇತ್ತೀಚಿಗೆ ನೈಲ್ ಆರ್ಟ್ ಮಾಡಿಸಿಕೊಳ್ಳುವುದು ಬಹಳ ಟ್ರೆಂಡಿಂಗ್‍ನಲ್ಲಿದೆ.
ಕಾರ್ಟೂನಿಂದ ಗ್ಲಿಟರ್ ವರೆಗೆ ನೀವು 2023ರಲ್ಲಿ ಪ್ರಯತ್ನಿಸಬೇಕಾದ ನೈಲ್ ಆರ್ಟ್ ವಿನ್ಯಾಸಗಳನ್ನು ಇಲ್ಲಿವೆ. ಇತ್ತೀಚಿಗೆ ನೈಲ್ ಆರ್ಟ್ ಮಾಡಿಸಿಕೊಳ್ಳುವುದು ಬಹಳ ಟ್ರೆಂಡಿಂಗ್‍ನಲ್ಲಿದೆ. ಗ್ಲಿಟರ್, ಕಾರ್ಟೂನ್, ಮ್ಯಾಟ್ ಹೀಗೆ ಅನೇಕ ವಿಧದ ನೈಲ್ ಆರ್ಟ್‍ಗಳು ಹೆಂಗಳೆಯರ ಫೇವರೆಟ್ ಆಗಿದೆ. ವೇಷ ಭೂಷಣಕ್ಕೆ ತಕ್ಕ ನೈಲ್ ಆರ್ಟ್‍ನ್ನು ಮಾಡಿಕೊಳ್ಳುವುದು ಈಗಿನ ಟ್ರೆಂಡ್ ಆಗಿದೆ. ನೈಲ್ ಟ್ರೈನರ್ ಮತ್ತು ನೈಲ್ ಆರ್ಟಿಸ್ಟ್ ತೋಶಿಮಾ ಮಿರೆಕರ್ ಅವರು 2023ರಲ್ಲಿ ನೀವು ಪ್ರಯತ್ನಿಸಬೇಕಾದ ಕೆಲವು ಟ್ರೆಂಡಿ ಮತ್ತು ಸುಲಭವಾದ ನೈಲ್ ಆರ್ಟ್‍ಗಳ ಬಗ್ಗೆ ಹೇಳಿಕೊಟ್ಟಿದ್ದಾರೆ.
ಕಲರ್‍ಫುಲ್ ಪೇಸ್ಟಲ್
ಪೇಸ್ಟಲ್ ಕಲರ್ ಎಲ್ಲರಿಗೂ ಇಷ್ಟವಾಗುತ್ತದೆ. ಇದು ನಿಮಗೆ ಸಿಂಪಲ್ ಲುಕ್ ನೀಡುತ್ತೆ. ಪರಸ್ಪರ ಪೂರಕವಾದ ವಿವಿಧ ನೀಲಿ ಪೇಸ್ಟಲ್ ಬಣ್ಣಗಳ ನೈಲ್ ಪೋಲಿಶ್‍ಗಳನ್ನು ಆರಿಸಿ. ಡಸ್ಕಿ ನೀಲಿ, ಡಸ್ಕಿ ಹಸಿರು, ಸೌಮ್ಯವಾದ ಲ್ಯಾವೆಂಡರ್, ಸೌಮ್ಯವಾದ ಹಳದಿ ಬಣ್ಣ ಇವೆಲ್ಲ ಒಳ್ಳೆಯ ಕಾಂಬಿನೇಷನ್. ಈ ಎಲ್ಲಾ ಬಣ್ಣಗಳ ಒಂದೊಂದು ನೈಲ್ ಪೈಂಟ್‍ನ್ನು ಬೇರೆ ಬೇರೆ ಉಗುರುಗಳಿಗೆ ಹಚ್ಚಬೇಕು. ಇದು ಸಿಂಪಲ್ ಆಗಿದ್ದರೂ, ನಿಮ್ಮ ಉಗುರುಗಳಿಗೆ ಸಕತ್ ಲುಕ್ ಕೊಡುತ್ತದೆ.
ಇದನ್ನು ಓದಿ:Nail Polish Remover: ನೇಲ್ ಪಾಲಿಶ್ ತೆಗೆಯಲು ಇಲ್ಲಿದೆ ಸುಲಭ ವಿಧಾನ
ಮೆಟಾಲಿಕ್ ಒಂಬ್ರೆ
ಒಂಬ್ರೆ ಉಗುರುಗಳು ಗ್ರೇಡಿಯಂಟ್ ವರ್ಣಗಳ ಸೌಂದರ್ಯವನ್ನು ಹೊರಸೂಸುತ್ತದೆ. ಈ ಉಗುರು ಕಲೆಯು ಕಾಮನಬಿಲ್ಲು ಮತ್ತು ಪೇಸ್ಟಲ್ ಕಲರ್ಗಳ ಬದಲಾವಣೆಯನ್ನು ತೋರಿಸುತ್ತದೆ. ಮೆಟಾಲಿಕ್ ಒಂಬ್ರೆಯನ್ನು ಉಗುರಿಗೆ ಹಚ್ಚಿದಾಗ ಉಗುರಿನ ಮೇಲ್ಭಾಗದಲ್ಲಿ ಹಗುರವಾದ ಛಾಯೆಯು ತುದಿಗೆ ಹತ್ತಿರವಾಗುತ್ತಿದ್ದಂತೆ ಕ್ರಮೇಣ ಗಾಢವಾದ ನರಳಿಗೆ ಪರಿವರ್ತನೆಗೊಳ್ಳುವಂತೆ ಕಾಣುತ್ತದೆ. ಇದು ಡಬಲ್ ಶೇಡ್ ಕಲರ್ ತರ ಕಾಣಿಸುತ್ತದೆ.
ಪ್ರಾಣಿ ಅಥವಾ ಕಾರ್ಟುನ್ ನೈಲ್ ಆರ್ಟ್
ನವೀನ ಹೊಸ ಶೈಲಿಗಳು ಮತ್ತು ಪಾಪ್ ವಿನ್ಯಾಸಗಳು ತಮ್ಮದೇ ಆದ ಸ್ಥಾನವನ್ನು ಹೊಂದಿದೆ. ಫ್ಲೇಮ್ ನೈಲ್ ಮತ್ತು ಕೌಪ್ರಿಂಟ್ ನೈಲ್ ಆರ್ಟ್‍ಗಳು ತುಂಬಾ ಮುದ್ದಾಗಿರುತ್ತವೆ. ಇದರಲ್ಲಿ ಹುಲಿ, ಚಿರತೆ ಮತ್ತು ಜೀಬ್ರಾಗಳಂತಹ ಪ್ರಾಣಿಗಳ ಮೈಬಣ್ಣದ ಕ್ಲಸಿಕ್ ನೈಲ್ ಆರ್ಟ್ ಮಾಡಿಸಿಕೊಳ್ಳಬಹುದು. ಹಾಗೂ ಯುನಿಕಾರ್ನ್, ಪಾಂಡಾ, ಮಿನಿಯನ್ಸ್, ಹೀಗೆ ಇನ್ನಿತರ ಕಾರ್ಟೂನ್ ಪ್ರಿಂಟ್ ನೈಲ್ ಆಟ್ ಕೂಡಾ ಮಾಡಿಸಿಕೊಳ್ಳಬಹುದು. ಫ್ರೀಹ್ಯಾಮಡ್ ನೈಲ್ ಆರ್ಟ್‍ನ್ನು ಇಷ್ಟ ಪಡುವವರು ಈ ಕಾರ್ಟೂನ್ ನೈಲ್ ಆರ್ಟ್‍ನ್ನು ಪ್ರಯತ್ನಿಸಬಹುದು.
ಗ್ಲಿಟರ್ ನೈಲ್ ಆರ್ಟ್
ಈ ಗ್ಲಿಟರ್ ನೈಲ್ ಆರ್ಟ್‍ಗಳನ್ನು ತ್ವರಿತವಾಗಿ ಮತ್ತು ಸುಲಭವಾಗಿ ನಿಮ್ಮ ಉಗುರುಗಳಿಗೆ ಪಾರ್ಟಿ ಲುಕ್‍ನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ನೀವು ಗ್ಲಿಟರ್ ಉಗುರುಗಳನ್ನು ಎದ್ದು ಕಾಣುವಂತೆ ಮಾಡಲು, ಅದಕ್ಕೆ ಒಂಬ್ರೆ ಗ್ಲಿಟರ್‍ನ್ನು ಬಳಸಿ ಇತರ ಉಗುರುಗಳನ್ನು ಸರಳವಾಗಿ ಬಿಡಿ.
ಮ್ಯಾಟ್ ಒಂಬ್ರೆ
ಎರಡು ಬಣ್ಣದ ನೈಲ್ ಪೈಂಟ್‍ಗಳನ್ನು ಸಂಯೋಜಿಸುವ ಮೂಲಕ ನಿಮ್ಮ ಉಗುರುಗಳಿಗೆ ಹೊಸ ಲುಕ್ ನೀಡಬಹುದು. ಇದಕ್ಕೆ ನೀವು ಮ್ಯಾಟ್ ನೈಲ್ ಪೈಂಟ್ ಬಳಸಬೇಕಾಗುತ್ತದೆ. ನಿಮ್ಮ ಉಗುರುಗಳಿಗೆ ಒಂದು ಬಣ್ಣವನ್ನು ಬಳಿಯುವ ಬದಲು ಮನೆಯಲ್ಲಿ ಕೆಲವು ವಿಶಿಷ್ಟವಾದ ನೈಲ್ ಆರ್ಟ್ ಮಾದರಿಗಳನ್ನು ರಚಿಸುವ ಮೂಲಕ ನಿಮ್ಮದೇ ವಿಶಿಷ್ಟ ರೀರಿಯ ನೈಲ್ ಆರ್ಟ್ ಮಾಡಿಕೊಳ್ಳಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:35 pm, Tue, 3 January 23