AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಾರ್ಕ್ ಅಂಡರ್ ಆರ್ಮ್ಸ್​ನಿಂದ ನೀವು ಮುಜುಗರಕ್ಕೆ ಒಳಗಾಗಬಹುದು? ಇಲ್ಲಿದೆ ಮನೆಮದ್ದು

ನಿಮ್ಮ ಕಂಕುಳಿನ ಕಪ್ಪುಬಣ್ಣದಿಂದಾಗಿ ನೀವು ಸ್ಲೀವ್ ಲೆಸ್ ಬಟ್ಟೆಗಳನ್ನು ಧರಿಸಲು ಸಾಧ್ಯವಾಗುತ್ತಿಲ್ಲವೆ? ಹೆಚ್ಚಿನ ಮಹಿಳೆಯರು ಕಪ್ಪು ಕಂಕುಳ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಕಾರಣದಿಂದ ಹೆಚ್ಚಿನವರು ಸ್ಲೀವ್ ಲೆಸ್ ಬಟ್ಟೆಗಳನ್ನು ಧರಿಸಲು ಹಿಂಜರಿಯುತ್ತಾರೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಕೆಲವು ಸುಲಭ ಮನೆಮದ್ದುಗಳು ಇಲ್ಲಿವೆ.

ಡಾರ್ಕ್ ಅಂಡರ್ ಆರ್ಮ್ಸ್​ನಿಂದ ನೀವು ಮುಜುಗರಕ್ಕೆ ಒಳಗಾಗಬಹುದು? ಇಲ್ಲಿದೆ ಮನೆಮದ್ದು
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Edited By: |

Updated on:Aug 05, 2023 | 3:50 PM

Share

ಅನೇಕ ಜನರನ್ನು ಈ ಡಾರ್ಕ್ ಅಂಡರ್ ಆರ್ಮ್ ಸಮಸ್ಯೆ ಕಾಡುತ್ತಿದೆ. ಅದರಲ್ಲೂ ವಿಶೇಷವಾಗಿ ಮಹಿಳೆಯರಲ್ಲಿ. ಇದು ಸಹಜವಾಗಿಯೇ ಅವರನ್ನು ಮುಜುಗರಕ್ಕೆ ಒಳಪಡಿಸುತ್ತದೆ. ಅಲ್ಲದೆ ಕಪ್ಪು ಕಂಕುಳ ಸಮಸ್ಯೆಯಿಂದಾಗಿ ಹೆಚ್ಚಿನವರು ಸ್ಲೀವ್ ಲೆಸ್ ಬಟ್ಟೆಗಳನ್ನು ಧರಿಸಲು ಹಿಂಜರಿಯುತ್ತಾರೆ. ಕಂಕುಳ ಕಪ್ಪು ಬಣ್ಣಕ್ಕೆ ತಿರುಗಲು ಕಾರಣವೇನು? ಈ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುವ ಮನೆಮದ್ದುಗಳು ಯಾವುವು ಎಂಬುದನ್ನು ನೋಡೋಣ.

ಡಾರ್ಕ್ ಅಂಡರ್ ಆರ್ಮ್ ಸಮಸ್ಯೆ ಉಂಟಾಗಲು ಕಾರಣವೇನು:

ಸತ್ತ ಜೀವಕೋಶಗಳು ಕಂಕುಳಿನಲ್ಲಿ ಸಂಗ್ರಹಗೊಳ್ಳುತ್ತವೆ, ಇದು ಕಪ್ಪು ಕಲೆಗಳ ರೂಪವನ್ನು ಪಡೆದು ಅದು ಡಾರ್ಕ್ ಅಂಡರ್ ಆರ್ಮ್ಸ್ ಉಂಟಾಗಲು ಕಾರಣವಾಗುತ್ತದೆ. ಅಲ್ಲದೆ ಬಿಗಿಯಾದ ಬಟ್ಟೆಗಳನ್ನು ಧರಿಸುವುದು, ಕಂಕುಳ ಕೂದಲು ತೆಗೆಯಲು ಕ್ರೀಮ್ ಮತ್ತು ರೇಜರ್ ಬ್ಲೇಡ್​​​ಗಳ ಅತಿಯಾದ ಬಳಕೆ, ಹಾರ್ಮೋನು ಅಸಮತೋಲನ, ಡಿಯೋಡರೆಂಟ್​​​ನ ಅತಿಯಾದ ಬಳಕೆ ಇವೆಲ್ಲವು ಕಪ್ಪು ಕಂಕುಳ ಸಮಸ್ಯೆ ಉಂಟಾಗಲು ಕಾರಣ. ಕಂಕುಳ ತ್ವಚೆ ತುಂಬಾ ಸೂಕ್ಷ್ಮವಾಗಿದ್ದು, ಅದರಲ್ಲಿ ಬೆವರು ಗ್ರಂಥಿಗಳು ಹೆಚ್ಚು ಇರುವುದರಿಂದ ಇದರ ಆರೈಕೆಯಲ್ಲಿ ಕೆಲವೊಂದು ವಿಶೇಷ ಅಂಶಗಳನ್ನು ಗಮನಿಸಬೇಕು. ಕಂಕುಳ ಆರೈಕೆಗೆ ರಾಸಾಯನಿಕ ಉತ್ಪನ್ನಗಳನ್ನು ಬಳಸುವ ಬದಲು ನೀವು ಮನೆಮದ್ದುಗಳನ್ನು ಬಳಸಬಹುದು.

ಡಾರ್ಕ್ ಅಂಡರ್ ಆರ್ಮ್ ಸಮಸ್ಯೆಯನ್ನು ಹೋಗಲಾಡಿಸಲು ಸಹಕಾರಿ ಈ ಕೆಲವು ಮನೆಮದ್ದುಗಳು:

ತೆಂಗಿನ ಎಣ್ಣೆ:

ತೆಂಗಿನೆಣ್ಣೆಯು ನೈಸರ್ಗಿಕವಾಗಿ ಚರ್ಮದ ಹೊಳಪನ್ನು ಹೆಚ್ಚಿಸುವ ಗುಣವನ್ನು ಹೊಂದಿದೆ. ಅಲ್ಲದೆ ಕಪ್ಪು ಕಂಕುಳ ಸಮಸ್ಯೆಯನ್ನು ಹೋಗಲಾಡಿಸಲು ಮತ್ತು ಕಂಕುಳವನ್ನು ಹೊಳೆಯುವಂತೆ ಮಾಡಲು ಇದು ನಿಮಗೆ ಸಹಾಯ ಮಾಡುತ್ತದೆ. ತೆಂಗಿನ ಎಣ್ಣೆಯಿಂದ ನಿಮ್ಮ ಕಂಕುಳ ಭಾಗವನ್ನು ಪ್ರತಿದಿನ ಮಸಾಜ್ ಮಾಡಿ. 15 ನಿಮಿಷಗಳ ಬಳಿಕ ಹತ್ತಿಯ ಬಟ್ಟೆಯ ಸಹಾಯದಿಂದ ಅದನ್ನು ಸ್ವಚ್ಛಗೊಳಿಸಿ. ನಿಯಮಿತವಾಗಿ ಹೀಗೆ ಮಾಡುವುದರಿಂದ ಕೆಲವೇ ದಿನಗಳಲ್ಲಿ ಅದ್ಭುತ ವ್ಯತ್ಯಾಸವನ್ನು ಕಾಣುತ್ತೀರಿ.

ಮೊಸರು ಮತ್ತು ಕಡಲೆ ಹಿಟ್ಟು:

ಕಡಲೆ ಹಿಟ್ಟನ್ನು ಹಿಂದಿನಿಂದಲೂ ತ್ವಚೆಯ ಆರೈಕೆಗಾಗಿ ಬಳಸಲಾಗುತ್ತಿದೆ. ಕಡ್ಲೆ ಹಿಟ್ಟು ಚರ್ಮವನ್ನು ಅದರ ನೈಸರ್ಗಿಕ ಬಣ್ಣಕ್ಕೆ ಹಿಂತಿರುಗಲು ಸಹಾಯ ಮಾಡುತ್ತದೆ. ಮತ್ತು ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲವು ಚರ್ಮವನ್ನು ಮೃದುಗೊಳಿಸುತ್ತದೆ. ಸ್ವಲ್ಪ ಕಡ್ಲೆ ಹಿಟ್ಟಿನೊಂದಿಗೆ ಮೊಸರು ಮತ್ತು ನಿಂಬೆ ರಸವನ್ನು ಬೆರೆಸಿ ಒಂದು ಪೇಸ್ಟ್ ತಯಾರಿಸಿಕೊಳ್ಳಿ. ಈಗ ಆ ಪೇಸ್ಟ್​ನ್ನು ಕಂಕುಳ ಭಾಗಕ್ಕೆ ಹಚ್ಚಿಕೊಳ್ಳಿ. 10 ರಿಂದ 15 ನಿಮಿಷಗಳ ನಂತರ ಸಂಪೂರ್ಣವಾಗಿ ಒಣಗಿದ ಬಳಿಕ ಅದನ್ನು ನೀರಿನಿಂದ ತೊಳೆಯಿರಿ.

ಸೌತೆಕಾಯಿ ಮತ್ತು ಆಲೂಗಡ್ಡೆ ರಸ:

ಸೌತೆಕಾಯಿ ಮತ್ತು ಆಲೂಗಡ್ಡೆ ರಸವು ಸಹ ಡಾರ್ಕ್ ಅಂಡರ್ ಆರ್ಮ್ಸ್ ಸಮಸ್ಯೆಯನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ. ಆಲೂಗಡ್ಡೆ ವಿಟಮಿನ್ ಎ, ಬಿ ಮತ್ತು ಸಿ ಯಲ್ಲಿ ಸಮೃದ್ಧವಾಗಿದೆ. ಮತ್ತು ಇದು ನೈಸರ್ಗಿಕ ಬ್ಲೀಚ್ ಆಗಿಯೂ ಕಾರ್ಯನಿರ್ವಹಿಸುತ್ತದೆ. ಅದಕ್ಕಾಗಿ ನೀವು ಆಲೂಗಡ್ಡೆಯನ್ನು ಕತ್ತರಿಸಿ ಅದರಿಂದ ಕಂಕುಳ ಭಾಗಕ್ಕೆ ಮಸಾಜ್ ಮಾಡಿ. ಇಲ್ಲವೆ ಅರ್ಧ ಆಲೂಗಡ್ಡೆ ಮತ್ತು ಅರ್ಧ ಸೌತೆಕಾಯಿಯ ರಸವನ್ನು ಒಟ್ಟಿಗೆ ಸೇರಿಸಿ ಕಂಕುಳ ಭಾಗಕ್ಕೆ ಹಚ್ಚಿಕೊಳ್ಳಿ. ಇದರ ಫಲಿತಾಂಶವನ್ನು ನೀವು ಶೀಘ್ರದಲ್ಲೇ ನೋಡುತ್ತೀರಾ.

ಇದನ್ನೂ ಓದಿ: ನಿಮ್ಮ ಡಾರ್ಕ್​ ಅಂಡರ್​ಆರ್ಮ್ಸ್​​ ಹೋಗಲಾಡಿಸಲು ಇಲ್ಲಿವೆ ಮನೆಮದ್ದು

ರೋಸ್ ವಾಟರ್ ಮತ್ತು ಶ್ರೀಗಂಧ:

ಶ್ರೀಗಂಧದ ಪೇಸ್ಟ್ ನ್ನು ರೋಸ್ ವಾಟರ್​​ನೊಂದಿಗೆ ಮಿಶ್ರಣ ಮಾಡಿ ಅದನ್ನು ಕಂಕುಳ ಭಾಗಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯದ ನಂತರ ಅದನ್ನು ತೊಳೆಯಿರಿ. ರೋಸ್ ವಾಟರ್ ಚರ್ಮವನ್ನು ತಂಪುಗೊಳಿಸುತ್ತದೆ ಮತ್ತು ಶ್ರೀಗಂಧ ಚರ್ಮದ ಕಳೆಯನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ.

ಕಿತ್ತಳೆ ಹಣ್ಣಿನ ಸಿಪ್ಪೆ:

ಕಿತ್ತಳೆ ಹಣ್ಣಿನ ಸಿಪ್ಪೆಯು ಚರ್ಮವನ್ನು ಹಗುರಗೊಳಿಸುವ ಗುಣವನ್ನು ಹೊಂದಿದ್ದು, ಅದು ಕಪ್ಪು ಕಂಕುಳಿನ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಇದು ಬೆವರಿನಿಂದ ಉಂಟಾಗುವ ತುರಿಕೆ ಮತ್ತು ಕಿರಿಕಿರಿಯಿಂದ ಪರಿಹಾರ ನೀಡುತ್ತದೆ.

ಜೀವನಶೈಲಿಗೆ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:49 pm, Sat, 5 August 23

ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ