Dark Underarms: ನಿಮ್ಮ ಡಾರ್ಕ್ ಅಂಡರ್ಆರ್ಮ್ಸ್ ಹೋಗಲಾಡಿಸಲು ಇಲ್ಲಿವೆ ಮನೆಮದ್ದು
Dark Underarms: ನಿಮ್ಮ ಡಾರ್ಕ್ ಅಂಡರ್ ಆರ್ಮ್( Dark Underarms) ಮರೆ ಮಾಚಲು ನೀವು ತೋಳಿಲ್ಲದ ಬಟ್ಟೆಗಳನ್ನು ಧರಿಸುವುದಕ್ಕೆ ಹಿಂಜರಿಯುತ್ತಿದ್ದೀರಾ?. ನಿಮ್ಮ ಡಾರ್ಕ್ ಅಂಡರ್ ಆರ್ಮ್ ಅನ್ನು ಲೈಟನ್ ಗೊಳಿಸಲು ಸಾಕಷ್ಟು ಪರಿಹಾರಗಳಿವೆ, ಅದೂ ನಿಮ್ಮ ಮನೆಯಲ್ಲಿ ಸಾಮಾನ್ಯವಾಗಿ ಇರುವ ಪದಾರ್ಥಗಳಿಂದ, ಅಂತಹ ವಿಶ್ವಾಸಾರ್ಹ ಅಂಡರ್ ಆರ್ಮ್ ಸ್ಕಿನ್ ಲೈಟನಿಂಗ್ ಪರಿಹಾರಗಳ ಬಗ್ಗೆ ಮಾಹಿತಿ ಇಲ್ಲಿದೆ.
ನಿಮ್ಮ ಡಾರ್ಕ್ ಅಂಡರ್ ಆರ್ಮ್( Dark Underarms) ಮರೆ ಮಾಚಲು ನೀವು ತೋಳಿಲ್ಲದ ಬಟ್ಟೆಗಳನ್ನು ಧರಿಸುವುದಕ್ಕೆ ಹಿಂಜರಿಯುತ್ತಿದ್ದೀರಾ?. ನಿಮ್ಮ ಡಾರ್ಕ್ ಅಂಡರ್ ಆರ್ಮ್ ಅನ್ನು ಲೈಟನ್ ಗೊಳಿಸಲು ಸಾಕಷ್ಟು ಪರಿಹಾರಗಳಿವೆ, ಅದೂ ನಿಮ್ಮ ಮನೆಯಲ್ಲಿ ಸಾಮಾನ್ಯವಾಗಿ ಇರುವ ಪದಾರ್ಥಗಳಿಂದ, ಅಂತಹ ವಿಶ್ವಾಸಾರ್ಹ ಅಂಡರ್ ಆರ್ಮ್ ಸ್ಕಿನ್ ಲೈಟನಿಂಗ್ ಪರಿಹಾರಗಳ ಬಗ್ಗೆ ಮಾಹಿತಿ ಇಲ್ಲಿದೆ. ಎಲ್ಲರಿಗೂ ತಮ್ಮ ಉಡುಗೆತೊಡುಗೆಗಳ ಬಗ್ಗೆ ತಮ್ಮದೇ ಆದ ಅಭಿರುಚಿ ಇರುವುದು ಸಾಮಾನ್ಯ, ಹಾಗೆಯೇ ಸ್ಲೀವ್ಲೆಸ್ ಬಟ್ಟೆಗಳನ್ನು ಧರಿಸುವುದೆಂದರೆ ಸಾಮಾನ್ಯವಾಗಿ ಎಲ್ಲಾ ಹೆಣ್ಣುಮಕ್ಕಳಿಗೂ ಇಷ್ಟ ಆದರೆ ಈ ಡಾರ್ಕ್ ಅಂಡರ್ಆರ್ಮ್ಸ್ನಿಂದಾಗಿ ಸ್ಲೀವ್ಲೆಸ್ ಬಟ್ಟೆ ತೊಡುವುದಕ್ಕೆ ಹಿಂಜರಿಯುವ ಪರಿಸ್ಥಿತಿ ಎದುರಾಗಿದೆ.
ಪಾಲರ್ರ್ಗಳಿಗೆ ತೆರಳಿ ಸಾವಿರಾರು ರೂಪಾಯಿ ಹಣವನ್ನು ಖರ್ಚು ಮಾಡಿ ಕಪ್ಪು ಅಂಡರ್ಆರ್ಮ್ಸ್ ಕಡಿಮೆ ಮಾಡಿಕೊಳ್ಳುವ ಬದಲು ನೀವು ಕೆಲವು ನೈಸರ್ಗಿಕ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಇದರಿಂದ ಪರಿಹಾರ ಪಡೆಯಬಹುದು.
ಬೇಸಿಗೆಯಲ್ಲಿ ಬೆವರುವುದರಿಂದ ಕಂಕುಳಲ್ಲಿ ಧೂಳು ಸಂಗ್ರಹವಾಗುವುದರಿಂದ ಕಂಕುಳಲ್ಲಿ ಕಪ್ಪಾಗಲು ಕಾರಣವಾಗುತ್ತದೆ, ಈ ಸಮಸ್ಯೆಯನ್ನು ಹೋಗಲಾಡಿಸಲು ನೀವು ಕೆಲವು ಮನೆಮದ್ದುಗಳನ್ನು ಅನುಸರಿಸಬಹುದು.
- ಆಪಲ್ ಸೈಡರ್ ವಿನೆಗರ್: ಆಪಲ್ ಸೈಡರ್ ವಿನೆಗರ್ ಅನ್ನು ಅಡಿಗೆ ಸೋಡಾದೊಂದಿಗೆ ಬೆರೆಸಿ ಮತ್ತು ಅದನ್ನು ನಿಮ್ಮ ಕಂಕುಳಿಗೆ ಹಚ್ಚಿ. ಅದು ಒಣಗಿದ ನಂತರ ನೀರಿನಿಂದ ತೊಳೆಯಿರಿ. ಆಪಲ್ ಸೈಡರ್ ವಿನೆಗರ್ ಅಂಡರ್ ಆರ್ಮ್ಸ್ ಸತ್ತ ಜೀವಕೋಶಗಳನ್ನು ತೆಗೆದುಹಾಕುವ ಕೆಲಸ ಮಾಡುತ್ತದೆ. ಏಕೆಂದರೆ ಇದು ನೈಸರ್ಗಿಕ ಕ್ಲೀನರ್ ಆಗಿ ಕಾರ್ಯನಿರ್ವಹಿಸುವ ಸೌಮ್ಯ ಆಮ್ಲಗಳನ್ನು ಹೊಂದಿರುತ್ತದೆ.
- ನಿಂಬೆ ರಸ: ನಿಂಬೆಯನ್ನು ಬಳಸುವುದರಿಂದ ಕಂಕುಳಿನ ಕಪ್ಪುತನವನ್ನು ಹೋಗಲಾಡಿಸಬಹುದು ಎಂಬುದು ಕೆಲವೇ ಕೆಲವು ಮಂದಿಗೆ ತಿಳಿದಿದೆ. ಕೆಲವು ದಿನಗಳವರೆಗೆ ಸ್ನಾನ ಮಾಡುವ ಮೊದಲು, ನಿಂಬೆಹಣ್ಣನ್ನು ಅರ್ಧದಷ್ಟು ಕತ್ತರಿಸಿ ಮತ್ತು ಪೀಡಿತ ಪ್ರದೇಶದಲ್ಲಿ ಉಜ್ಜಿದರೆ, ಇದು ನೈಸರ್ಗಿಕವಾಗಿ ಅಂಡರ್ಆರ್ಮ್ ಅನ್ನು ಬ್ಲೀಚ್ ಮಾಡುತ್ತದೆ.
- ಆಲಿವ್ ಎಣ್ಣೆ: ಮೊದಲನೆಯದಾಗಿ, ಒಂದು ಚಮಚ ಆಲಿವ್ ಎಣ್ಣೆ ಮತ್ತು ಒಂದು ಚಮಚ ಕಂದು ಸಕ್ಕರೆ ಮಿಶ್ರಣ ಮಾಡಿ ಮತ್ತು ಪೇಸ್ಟ್ ತಯಾರಿಸಿ. ಆಲಿವ್ ಎಣ್ಣೆಯನ್ನು ಚರ್ಮಕ್ಕೆ ಅತ್ಯುತ್ತಮ ಔಷಧವೆಂದು ಪರಿಗಣಿಸಲಾಗಿದೆ. ಈಗ ಈ ಪೇಸ್ಟ್ ಅನ್ನು ಕಪ್ಪು ಜಾಗಕ್ಕೆ ಹಚ್ಚಿ ಸ್ವಲ್ಪ ಸಮಯ ಬಿಡಿ, ನಂತರ ಶುದ್ಧ ನೀರಿನಿಂದ ಶುದ್ಧವಾಗಿ ತೊಳೆಯಿರಿ.
- ತೆಂಗಿನ ಎಣ್ಣೆ: ಇದು ವಿಟಮಿನ್ ಇ ನಲ್ಲಿ ಸಮೃದ್ಧವಾಗಿದೆ. ಈ ಎಣ್ಣೆಯನ್ನು ಪ್ರತಿನಿತ್ಯ ನಿಮ್ಮ ಕಂಕುಳಿಗೆ ಹಚ್ಚಿ ಸ್ವಲ್ಪ ಸಮಯ ಬಿಟ್ಟು ನಂತರ ನೀರಿನಿಂದ ಸ್ವಚ್ಛಗೊಳಿಸಿ, ಕೆಲವೇ ದಿನಗಳಲ್ಲಿ ಇದರ ಪರಿಣಾಮ ಗೋಚರಿಸುತ್ತದೆ. ತೆಂಗಿನ ಎಣ್ಣೆಯು ಅನೇಕ ಪ್ರಯೋಜನಗಳನ್ನು ಹೊಂದಿದೆ,
- ಸೌತೆಕಾಯಿ ಬಳಸಿ ಸೌತೆಕಾಯಿಯಲ್ಲಿರುವ ಅಂಶ ಚರ್ಮದ ಡಾರ್ಕ್‌ನೆಸ್ ದೂರಮಾಡುತ್ತದೆ. ಜೊತೆಗೆ ಸಾಫ್ಟ್ ಕೂಡ ಮಾಡುತ್ತದೆ. ಅಲ್ಲದೇ ಸ್ಕಿನ್‌ಗೆ ಸಂಬಂಧಿಸಿದ ಇತರೆ ಸಮಸ್ಯೆಗಳನ್ನೂ ದೂರ ಮಾಡುತ್ತದೆ. ಸೌತೆಕಾಯಿ ರಸ ಮತ್ತು ನಿಂಬೆ ರಸ ಜೊತೆಯಾಗಿ ಬೆರೆಸಿ ಅಂಡರ್ ಆರ್ಮ್‌ಗೆ ಹಚ್ಚಿ.
- ಆಲೂಗಡ್ಡೆಯಲ್ಲಿ ಬ್ಲೀಚ್ ಗುಣವಿರುತ್ತದೆ ಸೆನ್ಸಿಟಿವ್ ಸ್ಕಿನ್ ಮೇಲೆ ನಿಂಬೆ ರಸ ಹಚ್ಚಿದರೆ ತುರಿಕೆ ಉಂಟಾಗಬಹುದು. ಅದರ ಬದಲಾಗಿ ಆಲೂ ಬಳಸಬಹುದು. ಆಲೂಗಡ್ಡೆಯಲ್ಲಿ ಬ್ಲೀಚ್ ಗುಣ ಇರುತ್ತದೆ, ಇದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಅದಕ್ಕಾಗಿ ಆಲೂಗಡ್ಡೆಯನ್ನು ತೆಳುವಾಗಿ ಕತ್ತರಿಸಿ ಅಂಡರ್ ಆರ್ಮ್‌ಗೆ ಚೆನ್ನಾಗಿ ರಬ್ ಮಾಡಿ. ಹತ್ತು ನಿಮಿಷ ಅದನ್ನೇ ಮಾಡಿ. ನಂತರ ಉಗುರು ಬಿಸಿ ನೀರಿನಿಂದ ತೊಳೆಯಿರಿ
ಜೀವನಶೈಲಿಗೆ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ