AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಹವನ್ನು ಕೂಲ್​ ಆಗಿರಿಸುವ ಎಸಿಯಿಂದಾಗುವ ಆರೋಗ್ಯ ಸಮಸ್ಯೆಗಳು

AC Side Effects: ಹೆಚ್ಚು ಸೆಕೆಯೆಂದು ದಿನಪೂರ್ತಿ ಏರ್ ಕಂಡೀಷನರ್( Air Conditioner) ಬಳಸಿದರೆ ಹಲವು ರೀತಿಯ ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಮುಖ್ಯವಾಗಿ ತಲೆನೋವು ಕಾಡಬಹುದು. ದೇಹಕ್ಕೆ ಹಿತವೆನಿಸಿದರೂ ತಲೆಭಾರವಾಗಿ ಹಿಂಸೆಯಾಗಬಹುದು.

ದೇಹವನ್ನು ಕೂಲ್​ ಆಗಿರಿಸುವ ಎಸಿಯಿಂದಾಗುವ ಆರೋಗ್ಯ ಸಮಸ್ಯೆಗಳು
Air Conditioner
Follow us
TV9 Web
| Updated By: ನಯನಾ ರಾಜೀವ್

Updated on: May 13, 2022 | 1:32 PM

ಹೆಚ್ಚು ಸೆಕೆಯೆಂದು ದಿನಪೂರ್ತಿ ಏರ್ ಕಂಡೀಷನರ್( Air Conditioner) ಬಳಸಿದರೆ ಹಲವು ರೀತಿಯ ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಮುಖ್ಯವಾಗಿ ತಲೆನೋವು ಕಾಡಬಹುದು. ದೇಹಕ್ಕೆ ಹಿತವೆನಿಸಿದರೂ ತಲೆಭಾರವಾಗಿ ಹಿಂಸೆಯಾಗಬಹುದು. ಅನೇಕ ಬಾರಿ ಇದು ನಮ್ಮೆಲ್ಲರ ಅನುಭವಕ್ಕೂ ಬಂದಿರುತ್ತದೆ. ಎಲ್ಲರಿಗೂ ಸಮಸ್ಯೆ ಆಗುವುದಿಲ್ಲ ಆದರೆ, ಬಹಳಷ್ಟು ಜನರಿಗೆ ಏರ್‌ ಕಂಡೀಷನರ್​ನಿಂದ ಹಲವು ಸಮಸ್ಯೆಗಳು ಕಂಡುಬರುತ್ತವೆ. ಅವುಗಳನ್ನು ನಿರ್ಲಕ್ಷಿಸಬೇಡಿ.

  1. ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆ ಹೆಚ್ಚು ಸಮಯ ಎಸಿಗೆ ಮೈಯೊಡ್ಡುವುದರಿಂದ ರೆಸ್ಪಿರೇಟರಿ ವ್ಯವಸ್ಥೆ ಅಂದರೆ ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು. ಗಂಟಲು ಒಣಗುವುದು, ರೈನೈಟಿಸ್‌ ಅಥವಾ ಮೂಗು ಕಟ್ಟುವ ಸಮಸ್ಯೆ ಕಾಡಬಹುದು. ರೈನೈಟಿಸ್‌ ಎಂದರೆ, ಮೂಗಿನಲ್ಲಿರುವ ಮ್ಯೂಕಸ್‌ ಮೆಂಬ್ರೇನ್​ನಲ್ಲಿ ಸೋಂಕು ಉಂಟಾಗಬಹುದು. ಅಥವಾ ಅಲ್ಲಿ ಮೊದಲೇ ಸೋಂಕಿದ್ದರೆ ಅದನ್ನು ಹೆಚ್ಚಿಸಬಲ್ಲದು. ಇದು ವೈರಲ್‌ ಸೋಂಕು ಅಥವಾ ಅಲರ್ಜಿಗೂ ಕಾರಣವಾಗಬಲ್ಲದು.
  2. ಅಸ್ತಮಾ ಹಾಗೂ ಅಲರ್ಜಿ ಇನ್ನು ಕಚೇರಿಗಳಲ್ಲಿನ ಎಸಿಯಿಂದಲೂ ಅನೇಕರು ಆರೋಗ್ಯ ಹಾಳುಮಾಡಿಕೊಳ್ಳುತ್ತಾರೆ. ಎಸಿ ಸ್ವಚ್ಛವಾಗಿಲ್ಲದಿದ್ದರೆ ಒಬ್ಬರಿಗೆ ಬಂದಿರುವ ವೈರಲ್‌ ರೋಗ ಇನ್ನೊಬ್ಬರಿಗೆ ಹರಡುವುದು ಅಧಿಕ. ಅಸ್ತಮಾ ಹಾಗೂ ಅಲರ್ಜಿ ಸಮಸ್ಯೆ ಉಳ್ಳವರು ಎಸಿಯಿಂದ ದೂರವೇ ಇರಬೇಕು. ಅಸ್ತಮಾ ಅಥವಾ ಅಲರ್ಜಿಯ ಸಮಸ್ಯೆ ಪದೇ ಪದೆ ನಿಮಗೆ ಬಾಧಿಸುತ್ತಿದ್ದರೆ ಎಸಿ ಬಳಕೆ ಉತ್ತಮವಲ್ಲ, ಅಂಥವರಿಗೆ ಎಸಿಯಿಂದ ಇನ್ನಷ್ಟು ಸಮಸ್ಯೆಯಾಗುತ್ತದೆ. ಸೂಕ್ಷ್ಮ ಜನರು ಮಾಲಿನ್ಯದಿಂದ ಬಚಾವಾಗಲು ಮನೆಯಲ್ಲೇ ಇರಲು ಯತ್ನಿಸುತ್ತಾರೆ. ಆದರೆ, ಮನೆಯಲ್ಲಿ ಸೆಖೆ ಎಂದು ಎಸಿ ಬಳಸುವುದು ಅವರ ಆರೋಗ್ಯಕ್ಕೆ ಹಾನಿಕರವಾಗುತ್ತದೆ.
  3. ದೇಹದ ನೋವನ್ನು ಉತ್ತೇಜಿಸುತ್ತದೆ ರಾತ್ರಿಯಿಡೀ ಎಸಿಯಲ್ಲಿ ಮಲಗುವುದರಿಂದ ಬೆನ್ನು ನೋವು, ತಲೆನೋವು ಇತ್ಯಾದಿ ಸಮಸ್ಯೆಗಳ ಸಾಧ್ಯತೆ ಹೆಚ್ಚುತ್ತದೆ. ದೇಹದ ನೋವನ್ನು ತಪ್ಪಿಸಿ ಮತ್ತು ಸ್ವಲ್ಪ ಸಮಯ ಎಸಿಯಲ್ಲಿರಿ. ಗಾಳಿಯ ಕೊರತೆ ಮತ್ತು ತಾಜಾ ಗಾಳಿಯ ಕೊರತೆಯಿಂದಾಗಿ ದೇಹವು ದಣಿದ ಭಾವನೆ ಅನುಭವಿಸಲು ಪ್ರಾರಂಭಿಸುತ್ತದೆ.
  4. ಚರ್ಮವು ಒಣಗಲು ಪ್ರಾರಂಭಿಸುತ್ತದೆ ನೀವು ದೀರ್ಘಕಾಲ ಎಸಿಯಲ್ಲಿ ಮಲಗಿದಾಗ ಅದು ನಿಮ್ಮ ಚರ್ಮದ ತೇವಾಂಶವನ್ನು ನಿಧಾನವಾಗಿ ಹೀರಿಕೊಳ್ಳುತ್ತದೆ. ಮತ್ತು ಅದು ನಿಮ್ಮ ಚರ್ಮವನ್ನು ಒಣಗಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ತ್ವಚೆಯಲ್ಲಿ ಗ್ಲೋ ಬೇಕೆಂದರೆ ಹೆಚ್ಚು ಹೊತ್ತು ಎಸಿಯಲ್ಲಿ ಮಲಗಬೇಡಿ. ಇದು ನಿಮ್ಮ ಚರ್ಮವನ್ನು ಶುಷ್ಕ ಮತ್ತು ನಿರ್ಜೀವಗೊಳಿಸುತ್ತದೆ.
  5. ಶೀತ ಕೋಣೆಯ ಉಷ್ಣತೆಯು ತುಂಬಾ ಕಡಿಮೆಯಿದ್ದರೆ ನೀವು ಶೀತವನ್ನು ಅನುಭವಿಸಬಹುದು. ಅನೇಕ ಜನರು ಎಸಿಯನ್ನು 16 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಹೊಂದಿಸುತ್ತಾರೆ. ಅಂತಹ ಕಡಿಮೆ ತಾಪಮಾನದಲ್ಲಿ ಮಲಗುವುದರಿಂದ ನೀವು ಬೆಳಿಗ್ಗೆ ಎದ್ದ ತಕ್ಷಣ ಶೀತವನ್ನು ಉಂಟುಮಾಡಬಹುದು.

ಜೀವನಶೈಲಿಗೆ ಸಂಬಂಧಿಸಿದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್