ದೇಹದಲ್ಲಿ ಕೊಬ್ಬು ಹೆಚ್ಚಾಗಿದೆ ಎಂದು ಸೂಚಿಸುವ ಚಿಹ್ನೆಗಳಿವು
Cholesterol: ದೇಹದಲ್ಲಿ ಕೊಬ್ಬು( Cholesterol)ಹೆಚ್ಚಾಗಲು ನಮ್ಮ ಜೀವನಶೈಲಿಯೇ ಪ್ರಮುಖ ಕಾರಣವಾಗಿದೆ. ದೇಹದಲ್ಲಿ ಇರುವ ಕೆಲವೊಂದು ಅಂಶಗಳು ನಮ್ಮ ಆರೋಗ್ಯಕ್ಕೆ ಅಗತ್ಯವಾಗಿರುವುದು. ಆದರೆ ಇದರಿಂದ ಅನಾರೋಗ್ಯಗಳು ಕೂಡ ಬರಬಹುದು.
ದೇಹದಲ್ಲಿ ಕೊಬ್ಬು( Cholesterol)ಹೆಚ್ಚಾಗಲು ನಮ್ಮ ಜೀವನಶೈಲಿಯೇ ಪ್ರಮುಖ ಕಾರಣವಾಗಿದೆ. ದೇಹದಲ್ಲಿ ಇರುವ ಕೆಲವೊಂದು ಅಂಶಗಳು ನಮ್ಮ ಆರೋಗ್ಯಕ್ಕೆ ಅಗತ್ಯವಾಗಿರುವುದು. ಆದರೆ ಇದರಿಂದ ಅನಾರೋಗ್ಯಗಳು ಕೂಡ ಬರಬಹುದು. ಕೊಲೆಸ್ಟ್ರಾಲ್ಗಳಲ್ಲಿ ಕೊಲೆಸ್ಟ್ರಾಲ್ ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ಎನ್ನುವ ಎರಡು ವಿಧಗಳು ಕೂಡ ಇವೆ. ಕೊಲೆಸ್ಟ್ರಾಲ್ ದೇಹದಲ್ಲಿ ಹೆಚ್ಚಾಗಲು ನಮ್ಮ ಜೀವನಶೈಲಿ, ಆಹಾರ ಕ್ರಮ ಇತ್ಯಾದಿಗಳು ಪ್ರಮುಖ ಕಾರಣವಾಗಿರುವುದು.
ಕೊಲೆಸ್ಟ್ರಾಲ್ ಎನ್ನುವುದು ದೇಹದಲ್ಲಿ ಒಂದು ರೀತಿಯ ಮೇದಸ್ಸು ಆಗಿದ್ದು ಮತ್ತು ಇದನ್ನು ದೇಹವು ಬೇಕಿರುವಾಗ ಬಳಕೆ ಮಾಡಲು ಹಾಗೆ ಸಂಗ್ರಹಿಸಿಟ್ಟುಕೊಳ್ಳುವುದು. ದೇಹವು ಕ್ಯಾಲರಿಯನ್ನು ಮೇದಸ್ಸಾಗಿ ಪರಿವರ್ತನೆ ಮಾಡಿಕೊಂಡು ಅದನ್ನು ಮತ್ತೆ ಬಳಕೆಗೆ ಸಂಗ್ರಹಿಸುವುದು.
ದೇಹದಲ್ಲಿ ಕೊಬ್ಬು ಹೆಚ್ಚಾಗಿದೆ ಎಂದು ತಿಳಿಯುವುದು ಹೇಗೆ?
-ಕಾಲಿನಲ್ಲಿ ಊತ ಕಾಣಿಸಿಕೊಳ್ಳಬಹುದು, ಕಾಲು ನೋವು ಕೂಡ ಬರಬಹುದು -ನಿಮ್ಮ ಉಗುರಿನ ಬಣ್ಣ ಬದಲಾಗಬಹುದು -ಪಾರ್ಶ್ವವಾಯು ಹಾಗೂ ಹಾರ್ಟ್ ಅಟ್ಯಾಕ್
ಇಂದಿನ ದಿನಗಳಲ್ಲಿ ವಯಸ್ಸಿನ ಭೇದವಿಲ್ಲದೆ ಹೆಚ್ಚಿನ ಜನರಲ್ಲಿ ಕೊಲೆಸ್ಟ್ರಾಲ್ ಸಮಸ್ಯೆಯು ಕಂಡುಬರುವುದು. ಹಿಂದೆ 40ರ ಹರೆಯ ದಾಟಿದವರಲ್ಲಿ ಇಂತಹ ಸಮಸ್ಯೆಯು ಕಂಡುಬರುತ್ತಲಿತ್ತು. ಆದರೆ ಜೀವನಶೈಲಿ ಬದಲಾವಣೆ ಹಾಗೂ ಆಹಾರ ಕ್ರಮದಿಂದಾಗಿ ಇಂದಿನ ದಿನಗಳಲ್ಲಿ ಇದು ಹದಿಹರೆಯದವರಲ್ಲೂ ಕಂಡುಬರುವುದು. ಇಂತಹ ಸಮಯದಲ್ಲಿ ಜನರು ಕೆಲವೊಂದು ವಿಚಾರಗಳನ್ನು ತುಂಬಾ ಗಂಭೀರವಾಗಿ ಪರಿಗಣಿಸಬೇಕು. ಹೀಗಾಗಿ ಕೊಲೆಸ್ಟ್ರಾಲ್ ಮಟ್ಟದ ಪರೀಕ್ಷೆ ಮಾಡಿಸಿಕೊಂಡರೆ ತುಂಬಾ ಒಳ್ಳೆಯದು.
ಕೊಬ್ಬಿನ ಬಗ್ಗೆ ಎಚ್ಚರವಿರಲಿ ಕೊಲೆಸ್ಟ್ರಾಲ್ಗಳು ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗಬಹುದು, ಇದು ಹೃದಯಾಘಾತ ಮತ್ತು ಪಾರ್ಶ್ವವಾಯುವಿನ ಅಪಾಯವನ್ನು ಹೆಚ್ಚಿಸುವುದು. ಅಧಿಕ ಕೊಲೆಸ್ಟ್ರಾಲ್ ಮತ್ತು ಅಪಧಮನಿ ಸಮಸ್ಯೆಯ ಅಪಾಯವು ಒಂದಕ್ಕೊಂದು ಸಂಬಂಧಿಸಿದ್ದಾಗಿದೆ.
ಕೊಲೆಸ್ಟ್ರಾಲ್ ಮಟ್ಟ ತಗ್ಗಿಸಲು ಏನು ಮಾಡಬಹುದು? ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆ ಮಾಡುವುದು ಅತೀ ಅಗತ್ಯವಾಗಿರುವುದು. ಅದರಲ್ಲೂ ಕೆಲವು ದೈಹಿಕ ಚಟುವಟಿಕೆಗಳು ಅಥವಾ ವ್ಯಾಯಾಮ, ತೂಕ ಕಡಿಮೆ ಮಾಡುವುದು, ಕಡಿಮೆ ಕೊಬ್ಬು ಇರುವ ಆಹಾರ ಇತ್ಯಾದಿಗಳನ್ನು ಪಾಲಿಸಬೇಕು. ಕೊಲೆಸ್ಟ್ರಾಲ್ ತಗ್ಗಿಸುವ ಔಷಧಿಯು ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ, ಇದು ಹೃದಯಾಘಾತದ ಅಪಾಯವನ್ನು ತಗ್ಗಿಸುತ್ತದೆ..
ಕೆಟ್ಟ ಹಾಗೂ ಒಳ್ಳೆಯ ಕೊಲೆಸ್ಟ್ರಾಲ್ ಎಂದರೇನು? ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾಗಿದ್ದರೆ ಅದು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಎಚ್ ಡಿಎಲ್ನ್ನು ಹೆಚ್ಚು ಮಾಡಲು ನಾವು ಪ್ರಯತ್ನಿಸಬೇಕು. ಹೃದಯದ ರಕ್ತನಾಳಗಳಲ್ಲಿ ಪದರಗಳು ನಿರ್ಮಾಣವಾಗುವಂತೆ ಮಾಡಲು ಕೆಟ್ಟ ಕೊಲೆಸ್ಟ್ರಾಲ್(ಎಲ್ ಡಿಎಲ್) ಪ್ರಮುಖ ಕಾರಣವಾಗಿರುವುದು.
ಕೊಲೆಸ್ಟ್ರಾಲ್ ಮಟ್ಟ ಎಷ್ಟಿರಬೇಕು ಕೊಲೆಸ್ಟ್ರಾಲ್ ಮಟ್ಟವು ಒಟ್ಟು 250ಕ್ಕಿಂತ ಹೆಚ್ಚಿನದ್ದು ಸರಾಸರಿಯಾಗಿರುವ, ಯಾವುದೇ ಹೃದಯಾಘಾತ ಅಥವಾ ಹೃದಯದ ಸಮಸ್ಯೆಗಳು ಇಲ್ಲದೆ ಇರುವವರಿಗೆ ಹೆಚ್ಚು ಎಂದು ಪರಿಗಣಿಸಲಾಗುತ್ತದೆ. ಅಪಧಮನಿ ಅಪಾಯವಾಗಿರುವಂತಹ ಅಧಿಕ ರಕ್ತದೊತ್ತಡ, ಮಧುಮೇಹ, ಧೂಮಪಾನ ಇತ್ಯಾದಿಗಳು ಇದ್ದರೆ ಆಗ ಇಂತಹವರು 120ರಷ್ಟು ಕೊಲೆಸ್ಟ್ರಾಲನ್ನು ಮಾತ್ರ ಹೊಂದಿರಬೇಕಾಗುತ್ತದೆ.
ಈ ಸುದ್ದಿಗಳು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಮನೆಮದ್ದು ಹಾಗೂ ಇತರೆ ಸಾಮಾನ್ಯ ಮಾಹಿತಿಗಳನ್ನೊಳಗೊಂಡ ಲೇಖನವಾಗಿರುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ