International Coffee Day 2021: ಬಿಸಿ ಬಿಸಿ ಕಾಫಿ ಸವಿಯುವುದು ಇಷ್ಟಾನಾ? ಕಾಫಿ ಕುಡಿಯುತ್ತ ಸಂಭ್ರಮಿಸುವ ದಿನವಿಂದು

| Updated By: shruti hegde

Updated on: Oct 01, 2021 | 9:08 AM

ಕಾಫಿ ದಿನ 2021: ಸುರ್.. ಎಂದು ಒಂದು ಕಪ್ ಸವಿಯುತ್ತಿದ್ದರೆ, ಈ ಲೋಕದಲ್ಲೇ ಇಲ್ಲ ಎಂಬಷ್ಟು ಖುಷಿ ಕೆಲವರಿಗೆ. ಅಂಥವರಿಗೆ ಇಂದು ಸಂಭ್ರಮಿಸುವ ದಿನ. ಈ ದಿನ ನೀವೂ ಕಾಫಿ ಕುಡಿಯದಿದ್ರೆ ಹೇಗೆ? ಅಂತಾರಾಷ್ಟ್ರೀಯ ಕಾಫಿ ದಿನವನ್ನು ಪ್ರತೀ ವರ್ಷ ಅಕ್ಟೋಬರ್ 1 ರಂದು ಆಚರಿಸಲಾಗುತ್ತದೆ.

International Coffee Day 2021: ಬಿಸಿ ಬಿಸಿ ಕಾಫಿ ಸವಿಯುವುದು ಇಷ್ಟಾನಾ? ಕಾಫಿ ಕುಡಿಯುತ್ತ ಸಂಭ್ರಮಿಸುವ ದಿನವಿಂದು
ಸಂಗ್ರಹ ಚಿತ್ರ
Follow us on

ಬೆಳಿಗ್ಗೆ ಎದ್ದು ಒಂದು ಕಪ್ ಬಿಸಿ ಬಿಸಿ ಕಾಫಿ ಕುಡಿಯದಿದ್ರೇ ಸಮಾಧಾನವೇ ಇಲ್ಲಾ ಅಂತಾರೆ ಕಾಫಿ ಪ್ರಿಯರು. ನಮ್ಮ ಭಾವನೆ ಬದಲಾದಂತೆ ಅಂದರೆ ಅಳು, ನಗು ಹೀಗೆ ಎಲ್ಲದಕ್ಕೂ ಕಾಫಿ ಬೇಕು. ಸುರ್.. ಎಂದು ಒಂದು ಕಪ್ ಸವಿಯುತ್ತಿದ್ದರೆ, ಈ ಲೋಕದಲ್ಲೇ ಇಲ್ಲ ಎಂಬಷ್ಟು ಖುಷಿ ಕೆಲವರಿಗೆ. ಅಂಥವರಿಗೆ ಇಂದು ಸಂಭ್ರಮಿಸುವ ದಿನ. ಈ ದಿನ ನೀವೂ ಕಾಫಿ ಕುಡಿಯದಿದ್ರೆ ಹೇಗೆ? ಅಂತಾರಾಷ್ಟ್ರೀಯ ಕಾಫಿ ದಿನವನ್ನು ಪ್ರತೀ ವರ್ಷ ಅಕ್ಟೋಬರ್ 1 ರಂದು ಆಚರಿಸಲಾಗುತ್ತದೆ. ಕಾಫಿ ಅಂದ್ರೆ ಇಷ್ಟ ಎನ್ನುವವರು ಸಂಭ್ರಮಿಸುವ ದಿನವಿಂದು. ತಡವೇಕೆ? ನಿಮಗಿಷ್ಟದ ಬಗೆಯ ಒಂದು ಕಪ್ ಕಾಫಿ ಮಾಡಿ ಸವಿದೇಬಿಡಿ.

ಇಷ್ಟೇ ಅಲ್ಲ, ವಿಶ್ವದಾದ್ಯಂತ ಕಾಫಿಯನ್ನೇ ಜೀವನದ ಬದುಕು ಎಂದು ನಂಬಿಕೊಂಡು ಕಾಫಿ ತೋಟವನ್ನು ಜೀವನೋಪಾಯವನ್ನಾಗಿ ಅವಲಂಬಿಸಿಕೊಂಡಿರುವ ಎಲ್ಲ ರೈತರನ್ನು ಬೆಂಬಲಿಸುವ ಗುರಿಯನ್ನು ಈ ದಿನ ಹೊಂದಿದೆ. ಇಂದು ಒಂದು ಕಪ್ ಕಾಫಿ ಕುಡಿಯುತ್ತಾ ಇದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿಯಿರಿ.

ಒಂದು ಕಪ್ ಕಾಫಿ ವೈದ್ಯರಿಂದ ದೂರವಿರಿಸುತ್ತದೆ
ಅನೇಕ ಅಧ್ಯಯನಗಳು ಕಾಫಿ ಹೃದಯಾಘಾತ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸಿವೆ. ಜತೆಗೆ ನಿಮ್ಮ ಯಕೃತ್ತಿಗೆ ಒಳ್ಳೆಯದು ಎಂದು ಸಾಬೀತಾಗಿದೆ. 2016ರಲ್ಲಿ ನಡೆದ ಅಧಯಯನದ ಪ್ರಕಾರ, ಕಾಫಿ ಸೇವನೆಯು ಮಲ್ಟಿಪಲ್ ಸ್ಕ್ಲೆರೋಸಿಸ್ (ಎಂಎಸ್) ಅಪಾಯವನ್ನು ಕಡಿಮೆ ಮಾಡುತ್ತದೆ ಎಂಬುದು ತಿಳಿದು ಬಂದಿದೆ.

ಕಾಫಿ ದೈಹಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ
ಕೆಫೀನ್ ತಕ್ಷಣವೇ ನಿಮ್ಮ ದೇಹವನ್ನು ಶಕ್ತಿಯುತ ಮತ್ತು ಸಕ್ರಿಯಗೊಳಿಸುತ್ತದೆ. ಜತೆಗೆ ತಕ್ಷಣವೇ ನಿಮ್ಮ ಮನಸ್ಸು ಸಕ್ರಿಯೆಗೊಳ್ಳಲು ಸಹಾಯಕವಾಗಿದೆ. ಜತೆಗೆ ಕಾಫಿ ಉತ್ಕರ್ಷಣ ನಿರೋಧಕಗಳ ಸಮೃದ್ಧ ಮೂಲವಾಗಿದೆ. ಉತ್ಕರ್ಷಣ ನಿರೋಧಕಗಳು ಕ್ಯಾನ್ಸರ್​ನಂತಹ ಅನೇಕ ಮಾರಣಾಂತಿಕ ರೋಗಗಳ ವಿರುದ್ಧ ಹೋರಾಡಲು ಸಹಾಯಕವಾಗಿದೆ.

ಕೊಬ್ಬನ್ನು ಸುಡಲು ಸಹಾಯಕವಾಗಿದೆ
ಕೆಫೀನ್ ದೇಹದಲ್ಲಿನ ಹೆಚ್ಚುವರಿ ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ. ಕೊಬ್ಬು ಸುಡುವ ಪ್ರಕ್ರಿಯೆಗೆ ಸಹಾಯ ಮಾಡುವ ನೈಸರ್ಗಿಕ ವಸ್ತುಗಳಲ್ಲಿ ಕಾಫಿ ಕೂಡಾ ಒಂದು. ಜತೆಗೆ ನಿಮ್ಮ ಮನಸ್ಸನ್ನು ಚುರುಕುಗೊಳಿಸಲು ಇದು ಸಹಾಯ ಮಾಡುತ್ತದೆ. ಜತೆಗೆ ಇದರಲ್ಲಿ ವಿಟಮಿನ್ 2, ವಿಟಮಿನ್ ಬಿ5, ಮ್ಯಾಂಗನೀಸ್, ಪೊಟ್ಯಾಷಿಯಂ , ಮೆಗ್ನೀಶಿಯಂ, ನಿಯಾಸಿಸ್ ಹೀಗೆ ಅನೇಕ ಅಗತ್ಯ ಪೋಷಕಾಂಶಗಳಿರುತ್ತವೆ.

ಖಿನ್ನತೆಯನ್ನು ದೂರವಾಗಿಸುತ್ತದೆ
ಖಿನ್ನತೆಯು ಮಾನಸಿಕ ಅಸ್ವಸ್ಥತೆಯಾಗಿದ್ದು ಅದು ಜೀವನದ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ. ಅಧ್ಯಯನದ ಪ್ರಕಾರ, ಕಾಫಿಯು ನಿಮ್ಮಲ್ಲಿನ ಖಿನ್ನತೆಯನ್ನು ಕಡಿಮೆ ಮಾಡುತ್ತದೆ. ಮನಸ್ಸಿಗೆ ಹಿತ ಅನಿಸುವ, ನಿಮಗಿಷ್ಟದ ಕಾಫಿಯನ್ನು ಸವಿಯುತ್ತ ಅನಗತ್ಯ ಯೋಚನೆಗಳನ್ನು ದೂರ ಮಾಡಿಕೊಳ್ಳಿ. ಜತೆಗೆ ಇಂದು ಮನೆಯವರೊಡನೆ ಕುಳಿತು ಸಂತೋಷದಿಂದ ಒಂದ್ ಕಪ್ ಕಾಫಿ ಸವಿಯಿರಿ.

ಇದನ್ನೂ ಓದಿ:

Coffee Benefits: ದಿನಕ್ಕೊಂದು ಕಪ್ ಕಾಫಿ ಕುಡಿದರೆ ಏನಾಗುತ್ತೆ?; ಸಂಶೋಧನೆಯಲ್ಲಿ ಬಯಲಾಯ್ತು ಅಚ್ಚರಿಯ ಸಂಗತಿ

Coffee: ಕಾಫಿ ಸೇವನೆಯ ಆರೋಗ್ಯ ಪ್ರಯೋಜನಗಳು

Published On - 8:54 am, Fri, 1 October 21