AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Coffee: ಕಾಫಿ ಸೇವನೆಯ ಆರೋಗ್ಯ ಪ್ರಯೋಜನಗಳು

ಕಾಫಿ ಸೇವನೆ ಸಕಾರಾತ್ಮಕ ಪರಿಣಾಮವನ್ನು ಬೀರುವ ಉತ್ಕರ್ಷಣ ನಿರೋಧಕಗಳು ನಮ್ಮ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತವೆ. ಕ್ಯಾನ್ಸರ್​ ಕೋಶಗಳ ಬೆಳವಣಿಗೆಯನ್ನು ತಡೆಯುತ್ತವೆ ಮತ್ತು ಟೈಪ್​ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತವೆ.

Coffee: ಕಾಫಿ ಸೇವನೆಯ ಆರೋಗ್ಯ ಪ್ರಯೋಜನಗಳು
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jun 24, 2021 | 11:43 AM

Share

ಆರ್ಭಟಿಸುತ್ತಿರುವ ಮಳೆಗಾಲದ ಸಮಯದಲ್ಲಿ ಒಂದು ಕಪ್​ ಬಿಸಿಬಿಸಿ ಕಾಫಿಯನ್ನು ಸವಿಯುವುದೆಂದರೆ ಜನರಿಗೆ ಬಹಳ ಇಷ್ಟ. ಅದರಲ್ಲಿಯೂ ಈ ಸಾಂಕ್ರಾಮಿಕ ಸಮಯದಲ್ಲಿ ಮನೆಯಲ್ಲಿ ಇದ್ದು ಅದೆಷ್ಟು ಬಾರಿ ಕಾಫಿ ಮಾಡಿ ಸವಿದಿದ್ದೇವೋ ಏನೋ.. ಹಾಗಿರುವಾಗ ಕಾಫಿ ಸೇವಿಸುವುದರಿಂದ ಆರೋಗ್ಯಕ್ಕೆ ಅನುಕೂಲಗಳು ಎಷ್ಟಿವೆ ಎಂಬುದರ ಕುರಿತಾಗಿ ತಿಳಿದುಯೋಣ. 

ಕಾಫಿ ನಮ್ಮ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹೃದ್ರೋಗ, ಟೈಪ್​ 2 ಡಯಾಬಿಟಿಸ್​, ಖಿನ್ನತೆ, ಸಿರೋಸಿಸ್,​ ಆತ್ಮಹತ್ಯೆ ಮನೋಭಾವ, ಪಿತ್ತಜನಕಾಂಗದ ಕ್ಯಾನ್ಸರ್​ ನಂತಹ ಸಮಸ್ಯೆಗಳಿಂದ ದೂರವಿರಬಹುದು. ಇವುಗಳ ವಿರುದ್ಧ ಹೋರಾಡಬಲ್ಲ ಪೌಷ್ಟಿಕ ಅಂಶಗಳು ಕಾಫಿಯಲ್ಲಿ ಸಿಗುತ್ತವೆ. ಕಾಫಿಯಿಂದ ಸಿಗುವ ಆರೋಗ್ಯಕರ ಪೌಷ್ಟಿಕಾಂಶಗಳು ನಿಜವಾಗಿಯೂ ನಮ್ಮಲ್ಲಿ ನಮಗೆ ಧೈರ್ಯ ತುಂಬುತ್ತದೆ.

ಮೊದಲೆಲ್ಲಾ ಕಾಫಿ ಸೇವನೆಯಿಂದ ಆರೋಗ್ಯಕರ ಹಾನಿಯೇ ಹೆಚ್ಚು ಎಂಬುದನ್ನು ಕೇಳಿದ್ದೆ. ಒಟ್ಟಾರೆಯಾಗಿ, ವರ್ಷಗಳಲ್ಲಿ ಬೆಳೆದ ವಿವಿಧ ಕಾಫಿ ಬೆಳೆ ಸುರಕ್ಷಿತವಾಗಿವೆ ಮತ್ತು ಆರೋಗ್ಯಕ್ಕೆ ಪ್ರಯೋಜನಗಳನ್ನು ನೀಡುತ್ತವೆ ಎಂದು ಹಾರ್ಡ್​ವೇರ್​​ ಟಿಎಚ್​ ಚಾನ್​ ಸ್ಕೂಲ್​ ಆಫ್​ ಪಬ್ಲಿಕ್​ ಹೆಲ್ತ್​ನಲ್ಲಿ ಪೌಷ್ಟಿಕಾಂಶ ಮತ್ತು ಸಾಂಕ್ರಾಮಿನ ರೋಗ ಶಾಸ್ತ್ರದ ಪ್ರಾಧ್ಯಾಪಕ ಡಾ. ವಾಲ್ಟರ್​ ಸಿ.ವಿಲೆಟ್​ ಹೇಳಿದ್ದಾರೆ.

ವಾಸ್ತವಿಕವಾಗಿ ಜಗತ್ತಿನಾದ್ಯಂತ ನಡೆದ ಅಧ್ಯಯನದಲ್ಲಿ, ದಿನಕ್ಕೆ ನಾಲ್ಕು ಅಥವಾ ಐದು ಕಪ್​ ಕಾಫಿ (ಸುಮಾರು 400 ಮಿಲಿಗ್ರಾಂ ಕೆಫೀನ್​) ಸೇವಿಸುವುದರಿಂದ ಸಾವಿನ ಪ್ರಮಾಣ ಕಡಿಮೆಯಾಗಿದೆ. ಅಧ್ಯಯನದ ಪ್ರಕಾರ, ದಿನಕ್ಕೆ ಮೂರರಿಂದ ಐದು ಕಪ್​ ಕಾಫಿ ಕುಡಿಯುವವರು ಕಾಫಿಯನ್ನು ತ್ಯಜಿಸಿದ ಜನರಿಗಿಂದ ಬೇಗನೆ ಸಾಯುವ ಪ್ರಮಾಣ ಶೇ. 15ರಷ್ಟು ಕಡಿಮೆ ಇದೆ. ಹೆಚ್ಚಿನ ಜನರು ಮಿತವಾಗಿ ಕಾಫಿ ಸೇವಿಸುವುದರಿಂದ ಆರೋಗ್ಯಕರ ಜೀವನ ಶೈಲಿಯಲ್ಲಿ ತೊಡಗಿಕೊಳ್ಳುತ್ತಾರೆ ಎಂದು ಕಳೆದ ಬೇಸಿಗೆಯಲ್ಲಿ ಹಾರ್ಡ್​ವೇರ್​ ಸ್ಕೂಲ್​ ಆಫ್​ ಹೆಲ್ತ್​ನ ಸಂಶೋಧನಾ ತಂಡವು ವರದಿ ಪ್ರಕಟಿಸಿದೆ.

ಕೆಫೀನ್​ ಮಾಡಿದ ಕಾಫಿ ಸೇವನೆಯ ಒಂದು ಕೆಟ್ಟ ಪರಿಣಾಮವೆಂದರೆ ಅದು ನಿದ್ರೆಯ ತೊಂದರೆ. ಕಾಫಿಯನ್ನು ಪ್ರೀತಿಸಬೇಕು. ಆದರೆ ನಿಯಮಿತವಾಗಿ ಅದರ ಬಳಕೆ ಮಾಡುವುದು ಮುಖ್ಯವಾಗಿದೆ. ಅತಿಯಾದ ಸೇವನೆಯಿಂದ ನಿದ್ರೆಯ ಸಮಸ್ಯೆ ಕಾಡ ತೊಡಗುವುದರಿಂದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಕಾಫಿಯಲ್ಲಿರುವ ಸಾವಿರಕ್ಕೂ ಹೆಚ್ಚು ರಾಸಾಯನಿಕಗಳಲ್ಲಿ ಕೆಫೀನ್​ ಕೂಡಾ ಒಂದು. ಇವೆಲ್ಲವೂ ಅರೋಗ್ಯಕ್ಕೆ ಪ್ರಯೋಜನಕಾರಿಯಾಗಿಲ್ಲ. ಸಕಾರಾತ್ಮಕ ಪರಿಣಾಮವನ್ನು ಬೀರುವ ಉತ್ಕರ್ಷಣ ನಿರೋಧಕಗಳು ನಮ್ಮ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತವೆ. ಕ್ಯಾನ್ಸರ್​ ಕೋಶಗಳ ಬೆಳವಣಿಗೆಯನ್ನು ತಡೆಯುತ್ತವೆ ಮತ್ತು ಟೈಪ್​ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತವೆ ಎಂದು ಡಾ. ವಿಲೆಟ್​ ಹೇಳಿದ್ದಾರೆ.

ಇದನ್ನೂ ಓದಿ:

Chocolate Coffee: ಮನೆಯಲ್ಲಿ ಸುಲಭವಾಗಿ ಮಾಡಿ ಚಾಕಲೇಟ್ ಕಾಫಿ; ಮಾಡುವ ವಿಧಾನ ಇಲ್ಲಿದೆ

Health Tips: ಒಂದು ಕಪ್​ ಕಾಫಿ ಕುಡಿಯುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ