International Coffee Day: ಒಂದು ಗುಟುಕಿನಲ್ಲೇ ಅಮೃತ ಅಡಗಿಟ್ಟಿಸಿಕೊಂಡಿರುವ ಕಾಫಿ ಭಾರತಕ್ಕೆ ಬಂದದ್ದು ಹೇಗೆ ಗೊತ್ತಾ?

| Updated By: ಆಯೇಷಾ ಬಾನು

Updated on: Oct 01, 2022 | 8:59 AM

ಇಡೀ ಜಗತ್ತಿನಲ್ಲಿ ಹೆಚ್ಚು ಸೇವನೆ ಆಗುವ ಈ ಪಾನಿಯ ಜನರ ಮನಸಲ್ಲಿ ವಿಶೇಷ ಸ್ಥಾನ ಪಡೆದಿದೆ. ಅದೆಷ್ಟೂ ಮಂದಿ ಒಂದು ಕಪ್ ಕಾಫಿ ಕುಡಿಯಲು ಕಿಲೋ ಮೀಟರ್ ಗಟ್ಟಲೆ ಸಾಗಿ ಕಾಫಿಯ ಪರಿಮಳ, ಸ್ವಾದವನ್ನು ಸವಿಯುತ್ತಾರೆ.

International Coffee Day: ಒಂದು ಗುಟುಕಿನಲ್ಲೇ ಅಮೃತ ಅಡಗಿಟ್ಟಿಸಿಕೊಂಡಿರುವ ಕಾಫಿ ಭಾರತಕ್ಕೆ ಬಂದದ್ದು ಹೇಗೆ ಗೊತ್ತಾ?
ಕಾಫಿ
Follow us on

ಬೆಳಗ್ಗೆ ಎದ್ದು ದಿನ ಆರಂಭವಾಗುವುದರಿಂದ ಹಿಡಿದು ತಲೆ ನೋವು, ಬೇಜಾರು, ಮೈಂಡ್​ ಫ್ರೆಶ್ ಮಾಡಿಕೊಳ್ಳಲು, ಒಂಟಿಯಾಗಿದ್ದಾಗಲೆಲ್ಲ ಜೊತೆ ಗೂಡುವ ಕಾಫಿಗೆ(Coffee)  ಇಂದು ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ(International Coffee Day). ಕಾಫಿ ಬಗ್ಗೆ ಹೇಳೋದೆ ಬೇಡ. ಕಾಫಿ ಕುಡಿಯುವ ಪ್ರತಿಯೊಬ್ಬರೂ ಕಾಫಿಯನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷನೆ ನೀಡುತ್ತಾರೆ. ಇಡೀ ಜಗತ್ತಿನಲ್ಲಿ ಹೆಚ್ಚು ಸೇವನೆ ಆಗುವ ಈ ಪಾನಿಯ ಜನರ ಮನಸಲ್ಲಿ ವಿಶೇಷ ಸ್ಥಾನ ಪಡೆದಿದೆ. ಅದೆಷ್ಟೂ ಮಂದಿ ಒಂದು ಕಪ್ ಕಾಫಿ ಕುಡಿಯಲು ಕಿಲೋ ಮೀಟರ್ ಗಟ್ಟಲೆ ಸಾಗಿ ಕಾಫಿಯ ಪರಿಮಳ, ಸ್ವಾದವನ್ನು ಸವಿಯುತ್ತಾರೆ. ಅದು ಅವರ ಪಾಲಿಗೆ ಅಮೃತವೇ ಆಗಿದೆ. ಬನ್ನಿ ಈ ದಿನ ಕಾಫಿ ನಮ್ಮ ದೇಶಕ್ಕೆ ಬಂದದ್ದು ಹೇಗೆ? ಕಾಫಿಯ ಮಹತ್ವ, ಈ ದಿನವನ್ನು ಆಚರಿಸುವ ಉದ್ದೇಶವನ್ನು ತಿಳಿಯೋಣ.

ಅಂತರರಾಷ್ಟ್ರೀಯ ಕಾಫಿ ಸಂಸ್ಥೆಯ 77 ಸದಸ್ಯ ರಾಷ್ಟ್ರಗಳು ಮತ್ತು ಪ್ರಪಂಚದಾದ್ಯಂತದ ಕಾಫಿ ಸಂಘಗಳು ಅಕ್ಟೋಬರ್ 1ರಂದು ಕಾಫಿ ದಿನವನ್ನು ಆಚರಿಸುತ್ತವೆ. 2014 ರಲ್ಲಿ, ಕಾಫಿ ವಲಯದ ವೈವಿಧ್ಯತೆ, ಗುಣಮಟ್ಟ ಮತ್ತು ಕಾಫಿ ಬೇಳೆಯುವವರ ಉತ್ಸಾಹವನ್ನು ಆಚರಿಸಲು ಮತ್ತು ಎಲ್ಲಾ ಕಾಫಿ ಪ್ರಿಯರಿಗೆ ದಿನವನ್ನು ಮೀಸಲಿಡಲು ಅಂತರರಾಷ್ಟ್ರೀಯ ಕಾಫಿ ಸಂಸ್ಥೆ(ಐಸಿಒ) ನಿರ್ಧರಿಸಿತು. ಅದರಂತೆ 2015 ರಲ್ಲಿ ICO ಮಿಲನ್‌ನಲ್ಲಿ ಮೊದಲ ಅಂತರರಾಷ್ಟ್ರೀಯ ಕಾಫಿ ದಿನವನ್ನು ಪ್ರಾರಂಭಿಸಿತು. ಆದ್ರೆ ಇದಕ್ಕೂ ಮುನ್ನ 1997 ರಲ್ಲಿ ICO ಚೀನಾದಲ್ಲಿ ಆಚರಿಸಿತ್ತು. ಮತ್ತು ತೈವಾನ್ 2009 ರಲ್ಲಿ ಮೊದಲ ಬಾರಿಗೆ ಕಾಫಿ ದಿನವನ್ನು ಆಚರಿಸಿತು. ನೇಪಾಳದಲ್ಲಿ, ಮೊದಲ ಅಂತರರಾಷ್ಟ್ರೀಯ ಕಾಫಿ ದಿನವನ್ನು 2005 ರಲ್ಲಿ ನವೆಂಬರ್ 15 ರಂದು ಆಚರಿಸಲಾಯಿತು. ಇದನ್ನೂ ಓದಿ: Coffee Benefits: ದಿನಕ್ಕೊಂದು ಕಪ್ ಕಾಫಿ ಕುಡಿದರೆ ಏನಾಗುತ್ತೆ?; ಸಂಶೋಧನೆಯಲ್ಲಿ ಬಯಲಾಯ್ತು ಅಚ್ಚರಿಯ ಸಂಗತಿ

ಭಾರತಕ್ಕೆ ಕಾಫಿ ತಂದವರು ಯಾರು?

ಬಾಳ ಸಂಗಾತಿಯಂತೆ ನಮ್ಮ ದಿನದ ಆರಂಭದಿಂದ ಹಿಡಿದು ದಿನದ ಅಂತ್ಯದ ವರೆಗೂ ನಮ್ಮ ಮನಸ್ಸಿಗೆ ಹತ್ತಿರವಿರುವ ಕಾಫಿಯನ್ನು ಭಾರತಕ್ಕೆ ತಂದವರು ನಮ್ಮದೇ ಚಿಕ್ಕಮಗಳೂರಿನ ಬಾಬಾಬುಡನ್ ಗಿರಿ ಖ್ಯಾತಿಯ ಬಾಬಾಬುಡನ್. ಇವರು ಮೆಕ್ಕಾಯಾತ್ರೆಗೆಂದು ಹೋದಾಗ ಯೆಮೆನ್‌ನಿಂದ ತಮ್ಮೊಂದಿಗೆ ಏಳು ಕಾಫಿಬೀಜಗಳನ್ನು ಚಿಕ್ಕಮಗಳೂರಿಗೆ ತಂದರು. ಅಲ್ಲಿಂದ ಆ ಏಳು ಬೀಜಗಳಿಂದ ಚಿಕ್ಕಮಗಳೂರು ಕಾಫಿ ಬೆಳೆಗೆಂದೇ ಖ್ಯಾತಿ ಪಡೆಯುವಂತಾಗಿದೆ. 1840ರ ಸುಮಾರಿನಲ್ಲಿ ಕಾಫಿ ಒಂದು ಆರ್ಥಿಕ ಬೆಳೆಯಾಗಿ ಶುರುವಾಯಿತು. ಬ್ರಿಟಿಷರು ದಕ್ಷಿಣ ಭಾರತದ ಬೆಟ್ಟಗಳಲ್ಲಿ ಅರೇಬಿಕಾ ಕಾಫಿ ಪ್ಲಾಂಟೇಶನ್‌ಗಳನ್ನು ಪ್ರಾರಂಭಿಸಿದರು. ಎತ್ತರ ಮತ್ತು ಇಳಿಜಾರು, ಹವಾಮಾನ, ನೆರಳು ಬಿಸಿಲಿನ ವಾತಾವರಣ, ಒಳ್ಳೆಯ ಮಳೆ, ಮಣ್ಣಿನ ಗುಣ ಇವೆಲ್ಲವೂ ಪೂರಕವಾಗಿ ಇದ್ದದ್ದರಿಂದ ಕಾಫಿಬೆಳೆ ಇಲ್ಲಿ ಮುಖ್ಯ ಆರ್ಥಿಕ ಬೆಳೆಯಾಗಿ ಬೆಳೆದು ಇಂದು ಜಗತ್ತಿನಲ್ಲಿ ಭಾರತ ಆರನೆಯ ಅತಿದೊಡ್ಡ ಕಾಫಿ ಉತ್ಪಾದನೆ ಮಾಡುವ ದೇಶವಾಗಿ ಬೆಳೆದಿದೆ.

ಭಾರತ ಪ್ರತಿವರ್ಷ ಸುಮಾರು 3,20,000 ಮೆಗಾಟನ್ ಕಾಫಿಯನ್ನು ಉತ್ಪಾದಿಸುತ್ತಿದ್ದು ಕರ್ನಾಟಕ, ಕೇರಳ ಮತ್ತು ತಮಿಳುನಾಡು ಪ್ರಮುಖ ಕಾಫಿ ಉತ್ಪಾದನಾ ರಾಜ್ಯಗಳಾಗಿವೆ. ಹಾಗೆ ಬೆಳೆದದ್ದರಲ್ಲಿ ಸುಮಾರು 70% ಕಾಫಿಯನ್ನು ಭಾರತ ರಫ್ತು ಮಾಡುತ್ತದೆ. ಭಾರತದಲ್ಲಿ ಕಾಫಿಯನ್ನು ನೆರಳಿನಲ್ಲಿ ಬೆಳೆಸಲಾಗುತ್ತಿದ್ದು ಸಿಲ್ವರ್ ಓಕ್ ಮೊದಲಾಗಿ ಅನೇಕ ಎತ್ತರದ ಮರಗಳು ಈ ನೆರಳನ್ನು ಒದಗಿಸುತ್ತದೆ.

Published On - 8:56 am, Sat, 1 October 22