ಮಾರ್ಥಾ ಗ್ರಹಾಂ- “ನೃತ್ಯವು ಆತ್ಮದ ಗುಪ್ತ ಭಾಷೆ” ಎಂಬ ಮಾತಿದೆ. ಅದೆಷ್ಟೋ ಕಲಾ ಪ್ರೇಮಿಗಳಿಗೆ ನೃತ್ಯವೇ ಜೀವಾಳ. ಬಣ್ಣ ಬಳಿದುಕೊಂಡು ಸಂಗೀತದ ಮೃದುವಾದ ಧ್ವನಿ ಹೊರಹೊಮ್ಮುತ್ತಿದ್ದಂತೆ ನಿಂತಲ್ಲಿಯೇ ಕಾಲು ಹೆಜ್ಜೆ ಹಾಕಲು ಪ್ರಾಂಭಿಸುತ್ತದೆ. ನೃತ್ಯ ಎನ್ನುವುದು ಪ್ರತಿಯೊಂದು ರಾಜ್ಯಕ್ಕೂ ಭಿನ್ನವಾಗಿರಬಹುದು. ಆದರೆ ಅದರಿಂದ ಹೊಮ್ಮುವ ಭಾವನೆ ಒಂದೆ. ಅದೆಷ್ಟೋ ಮಂದಿಗೆ ಇದು ಅನ್ನ ಹಾಕುವ ದೇವರರಾದರೆ ಇನ್ನು ಕೆಲವರಿಗೆ ಮನಸ್ಸನ್ನು ನಿರಾಳಗೊಳಿಸುವ ಶಕ್ತಿ. ಹೀಗೆ ಇದು ಪ್ರತಿಯೊಬ್ಬರಿಗೂ ಭಿನ್ನ. ನೃತ್ಯವು ಕೇವಲ ಒಂದು ಕಲಾ ಪ್ರಕಾರವಾಗಿರದೆ ದೇಹದ ಆರೋಗ್ಯಕ್ಕೂ ಅತ್ಯಂತ ಪ್ರಯೋಜನಕಾರಿಯಾಗಿದೆ. ಅಲ್ಲದೆ ಇದು ಫಿಟ್ನೆಸ್ಗೆ ಹೇಳಿ ಮಾಡಿಸಿದ ವ್ಯಾಯಾಮಗಳಲ್ಲಿ ಒಂದಾಗಿದೆ. ಇದರಲ್ಲಿ ನೀವು ಭಾರವಾದ ತೂಕವನ್ನು ಎತ್ತುವ ಅಗತ್ಯವಿರುವುದಿಲ್ಲ. ಅದಕ್ಕೂ ಮಿಗಿಲಾಗಿ ನೃತ್ಯವು ಮಾನಸಿಕ ಆರೋಗ್ಯಕ್ಕೂ ಪೂರಕವಾಗಿದ್ದು, ವಿಶ್ರಾಂತಿ ಪಡೆಯಲು ಉತ್ತಮ ಮಾರ್ಗವಾಗಿದೆ. ಈ ಸುಂದರ ಕಲಾ ಪ್ರಕಾರವನ್ನು ಆಚರಿಸಲು ಮತ್ತು ಜಾಗತಿಕವಾಗಿ ಇತರ ನೃತ್ಯ ಪ್ರಕಾರಗಳನ್ನು ಪೋಷಿಸಲು ಪ್ರತಿವರ್ಷ ಏಪ್ರಿಲ್ 29ರಂದು ಅಂತರರಾಷ್ಟ್ರೀಯ ನೃತ್ಯ ದಿನವನ್ನು ಆಚರಿಸಲಾಗುತ್ತದೆ.
ಅಂತರಾಷ್ಟ್ರೀಯ ನೃತ್ಯ ದಿನವನ್ನು ವಿಶ್ವ ನೃತ್ಯ ದಿನ ಎಂದೂ ಕರೆಯಲಾಗುತ್ತದೆ. ಈ ದಿನವು ಕಲೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುತ್ತದೆ ಮತ್ತು “ನೃತ್ಯ ಕಲೆ” ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತದೆ. ಇದಲ್ಲದೆ ನೃತ್ಯದ ಹಲವಾರು ಪ್ರಕಾರಗಳ ಬಗ್ಗೆ ಅವುಗಳ ಮೌಲ್ಯದ ಬಗ್ಗೆ ಪ್ರೇಕ್ಷಕನಿಗೆ ತಿಳಿಸುತ್ತದೆ. ಮೂಲತಃ, ಈ ದಿನವು ಪ್ರಪಂಚದಾದ್ಯಂತ ನಡೆಯುವ ವಿವಿಧ ಕಾರ್ಯಕ್ರಮಗಳು ಮತ್ತು ಉತ್ಸವಗಳ ಮೂಲಕ ನೃತ್ಯದಲ್ಲಿ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುತ್ತದೆ. ನೃತ್ಯವು ಪ್ರಪಂಚದಾದ್ಯಂತದ ಒಂದು ಕಲಾ ಪ್ರಕಾರ ಮತ್ತು ಸಂವಹನದ ವಿಧಾನವಾಗಿದೆ ಹಾಗೂ ಇದನ್ನು ಲಕ್ಷಾಂತರ ಜನರು ಅಭ್ಯಾಸ ಮಾಡುತ್ತಾರೆ ಎಂಬುದು ಖುಷಿಯ ವಿಷಯ.
ಈ ದಿನವನ್ನು ಜಾಗತಿಕವಾಗಿ ಆಚರಿಸಲಾಗುತ್ತದೆ. ನೃತ್ಯ ಮತ್ತು ನೃತ್ಯ ಶಿಕ್ಷಣವನ್ನು ಉತ್ತೇಜಿಸಲು ಅಂತರಾಷ್ಟ್ರೀಯ ನೃತ್ಯ ದಿನವನ್ನು ಆಚರಿಸಲಾಗುತ್ತದೆ. ಈ ದಿನಾಂಕದಂದು ಪ್ರಪಂಚದಾದ್ಯಂತ ವಿವಿಧ ನೃತ್ಯ ಕಾರ್ಯಕ್ರಮಗಳು ಮತ್ತು ಉತ್ಸವಗಳು ನಡೆಯುತ್ತವೆ. 1982 ರಲ್ಲಿ ಇಂಟರ್‌ನ್ಯಾಶನಲ್ ಥಿಯೇಟರ್ ಇನ್‌ಸ್ಟಿಟ್ಯೂಟ್ ITI ಯ ಡ್ಯಾನ್ಸ್ ಕಮಿಟಿ, ಯುನೆಸ್ಕೋದ ಪ್ರದರ್ಶನ ಕಲೆಗಳ ಪ್ರಮುಖ ಪಾಲುದಾರ ಅಂತಾರಾಷ್ಟ್ರೀಯ ನೃತ್ಯ ದಿನವನ್ನು ಸ್ಥಾಪಿಸಿತು. ಏಪ್ರಿಲ್ 29ನ್ನು ಆಯ್ಕೆ ಮಾಡಲು ಕಾರಣವೆನೆಂದರೆ ಇದು ಪ್ರಸಿದ್ಧ ಫ್ರೆಂಚ್ ನೃತ್ಯ ಕಲಾವಿದ ಜೀನ್-ಜಾರ್ಜಸ್ ನೊವೆರ್ರೆ ಅವರ ಜನ್ಮದಿನ. ಅವರು 1727 ರಲ್ಲಿ ಜನಿಸಿದರು, ಬ್ಯಾಲೆ ಮಾಸ್ಟರ್ ಮತ್ತು ನೃತ್ಯದ ಮಹಾನ್ ಸಾಧಕ.
1982ರಿಂದ ಅಂತರಾಷ್ಟ್ರೀಯ ನೃತ್ಯ ದಿನಾಚರಣೆಗೆ ಸಂದೇಶವನ್ನು ಬರೆಯಲು ಅತ್ಯುತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಲಾಗುತ್ತದೆ. ಆಯ್ದ ಆತಿಥೇಯ ನಗರದಲ್ಲಿ ಐಟಿಐ ಕೂಡ ಹಲವಾರು ನೃತ್ಯ ಪ್ರದರ್ಶನಗಳು, ಶೈಕ್ಷಣಿಕ ಕಾರ್ಯಾಗಾರಗಳು, ಗಣ್ಯರ ಭಾಷಣ ಇತ್ಯಾದಿ, ಪ್ರಮುಖ ಕಾರ್ಯಕ್ರಮವನ್ನು ನಡೆಸುತ್ತದೆ.
ಓಪನ್ ಡೋರ್ ಕೋರ್ಸ್ ಗಳು, ಪ್ರದರ್ಶನಗಳು, ಲೇಖನಗಳು, ಬೀದಿ ಪ್ರದರ್ಶನಗಳು, ವಿಶೇಷ ಪ್ರದರ್ಶನಗಳು ಮುಂತಾದ ಕಾರ್ಯಕ್ರಮಗಳನ್ನು ಪ್ರಪಂಚದಾದ್ಯಂತ ಆಯೋಜಿಸಲಾಗುತ್ತದೆ. ಈ ದಿನ ನೃತ್ಯ ಮತ್ತು ಅದರ ಕಲಾ ಪ್ರಕಾರಗಳನ್ನು ಗೌರವಿಸುವವರಿಗೆ ಹಬ್ಬವಾಗಿದೆ ಮತ್ತು ಇತರ ಸಂಸ್ಥೆಗಳಿಗೆ ಎಚ್ಚರದ ಕರೆಯಾಗಿದೆ.
ಇದು ನೃತ್ಯದ ಶುದ್ಧ ಶಾಸ್ತ್ರೀಯ ಶೈಲಿಯಾಗಿದ್ದು, ಮನಮೋಹಕ ಮುದ್ರೆಗಳಿಂದ ಕೂಡಿದೆ. ಈ ನೃತ್ಯ ಪ್ರಕಾರದಲ್ಲಿ ಕಥೆ ಹೇಳುವ ಅಂಶವಿದೆ, ಅದು ಒಡಿಶಾದ ದೇವಾಲಯಗಳ ಹಿಂದಿನ ಹಿನ್ನಲೆಯನ್ನು ಬಿಂಬಿಸುತ್ತದೆ.
ಇದು ಇಡೀ ಜಗತ್ತಿನಲ್ಲಿ ಪ್ರದರ್ಶಿಸಲಾಗುವ ಅತ್ಯಂತ ಹಳೆಯ ಶಾಸ್ತ್ರೀಯ ಪ್ರದರ್ಶನದ ಕಲಾ ಪ್ರಕಾರಗಳಲ್ಲಿ ಒಂದಾಗಿದೆ. ಈ ರೀತಿಯ ನೃತ್ಯವು ತಮಿಳುನಾಡಿನಲ್ಲಿ ಹುಟ್ಟಿಕೊಂಡಿತು ಎಂದು ಇತಿಹಾಸ ಹೇಳುತ್ತದೆ.
ಈ ರೀತಿಯ ನೃತ್ಯವು ಇಂದು ಟ್ರೆಂಡ್ ನಲ್ಲಿದೆ ಮತ್ತು ಇದು ಥೀಮ್ ಶೈಲಿಯ ನೃತ್ಯದೊಂದಿಗೆ ಸಂಬಂಧಿಸಿರುತ್ತದೆ.
ಇದು ಪ್ರದರ್ಶನ ಕಲೆಗಳ ಇತ್ತೀಚಿನ ರೂಪವಾಗಿದೆ. ಇದನ್ನು 2019 ರ ಪ್ರಸ್ತುತ ಜೆನ್-ಎಕ್ಸ್ ಗೆ ಹೊಂದಿಕೆಯಾಗುವ ಆಧುನಿಕ ಶೈಲಿ ಎಂದೂ ಕರೆಯಲಾಗುತ್ತದೆ.
ಶಿವ ತಾಂಡವ ನೃತ್ಯ ಪ್ರಕಾರವು ಪೌರಾಣಿಕವಾದ ಹಿನ್ನಲೆಯನ್ನು ಹೊಂದಿದೆ, ಇದು ಶಿವನಿಗೆ ಸಂಬಂಧಿಸಿದ್ದಾಗಿದ್ದು, ಅವನ ಶಾಂತ, ಮತ್ತು ಉಗ್ರ ಸ್ವಭಾವವನ್ನು ಬಿಂಬಿಸಲಾಗುತ್ತದೆ. ಮತ್ತು ಇದನ್ನು ವಿವಿಧ ರೂಪಗಳಲ್ಲಿಯೂ ಚಿತ್ರಿಸಲಾಗಿದೆ.
ಇದು ಶಾಸ್ತ್ರೀಯ ನೃತ್ಯದ ಮತ್ತೊಂದು ರೂಪವಾಗಿದೆ. ಇದು ಆಂಧ್ರ ಪ್ರದೇಶದಿಂದ ಹುಟ್ಟಿಕೊಂಡಿತು.
ನಿಸ್ಸಂದೇಹವಾಗಿ, ಇದು ಇಲ್ಲಿಯವರೆಗೆ ಭಾರತದ ಅತ್ಯಂತ ಮನಮೋಹಕ ಶಾಸ್ತ್ರೀಯ ನೃತ್ಯ ಪ್ರಕಾರಗಳಲ್ಲಿ ಒಂದಾಗಿದೆ ಎನ್ನಬಹುದು. ಕಥಕ್ ನ ಮೂಲ ಉತ್ತರ ಭಾರತ.
ಇದು ರಂಗ ನೃತ್ಯದ ಅರೆ-ಶಾಸ್ತ್ರೀಯ ರೂಪವಾಗಿದೆ ಮತ್ತು ಇದು ಭಾರತೀಯ ಉಪಖಂಡದ ಪೂರ್ವ ಭಾಗದಲ್ಲಿ ಹುಟ್ಟಿಕೊಂಡಿತು.
ಇದು ನೃತ್ಯದ ಅದ್ಭುತ ರಂಗ ಕಲಾ ಪ್ರಕಾರವಾಗಿದೆ. ಅಲ್ಲದೆ ಇದು ಕೇರಳದ ಕಲಾ ಪ್ರಕಾರವಾಗಿದ್ದು. ಭಾರತದ ಅತ್ಯಂತ ಕಷ್ಟಕರ ನೃತ್ಯ ಪ್ರಕಾರಗಳಲ್ಲಿ ಒಂದು ಎಂದು ಹೇಳಲಾಗುತ್ತದೆ.
ಹೆಸರೇ ಸೂಚಿಸುವಂತೆ, ಈ ರೀತಿಯ ನೃತ್ಯವು ದೇಶದ ಈಶಾನ್ಯ ಭಾಗವಾದ ಮಣಿಪುರದಲ್ಲಿ ಹುಟ್ಟಿಕೊಂಡಿತು. ಇದು ಭಾರತೀಯ ದೇವರು ಮತ್ತು ದೇವತೆಗಳ ಶುದ್ಧ ಭಾರತೀಯ ಪೌರಾಣಿಕ ಕಥೆಗಳ ಸುತ್ತ ಸುತ್ತುವ ರೋಮಾಂಚಕ ಶಾಸ್ತ್ರೀಯ ನೃತ್ಯವಾಗಿದೆ.
ಸಾರ್ವಜನಿಕರಲ್ಲಿ ನೃತ್ಯದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಅಂತರಾಷ್ಟ್ರೀಯ ನೃತ್ಯ ದಿನ ಅಥವಾ ವಿಶ್ವ ನೃತ್ಯ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಇದು ಎಲ್ಲಾ ಶಿಕ್ಷಣ ವ್ಯವಸ್ಥೆಗಳಲ್ಲಿ ನೃತ್ಯಕ್ಕೆ ಸರಿಯಾದ ಸ್ಥಳವನ್ನು ಒದಗಿಸಲು ಮತ್ತು ಪ್ರಪಂಚದಾದ್ಯಂತದ ಸರ್ಕಾರಗಳನ್ನು ಮನವೊಲಿಸುವ ಗುರಿಯನ್ನೂ ಹೊಂದಿದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:20 am, Tue, 25 April 23