AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cosmic Dance ಮಿಸ್ ಮಾಡಬೇಡಿ! ಅನಂತ ಆಗಸದಲ್ಲಿ ಅಂದು ಸಂಭವಿಸಲಿದೆ ಕಾಸ್ಮಿಕ್ ನೃತ್ಯ! ಗುರು ಮತ್ತು ಶುಕ್ರ ಅತ್ಯಂತ ಹತ್ತಿರ ಬರಲಿವೆ! ಎಲ್ಲಿ, ಯಾವಾಗ, ಹೇಗೆ ವೀಕ್ಷಿಸಬೇಕು?

Jupiter, Venus and Moon Planetary Conjunction: ಇದು ಗುರು ಮತ್ತು ಶುಕ್ರ ನಡುವಿನ ಕಾಸ್ಮಿಕ್ ನೃತ್ಯವಾಗಲಿದೆ ಮತ್ತು ಚಂದ್ರ ಸಹ ಸ್ವಲ್ಪ ಸಮಯದವರೆಗೆ ಆ ನೃತ್ಯದಲ್ಲಿ ಸೇರಿಕೊಳ್ಳುತ್ತಾನೆ! ಗೊಂದಲ ಸೃಷ್ಟಿಯಾಯಿತೇ? ಇನ್ನಷ್ಟು ತಿಳಿಯಲು ಮುಂದೆ ಓದಿ.

Cosmic Dance ಮಿಸ್ ಮಾಡಬೇಡಿ! ಅನಂತ ಆಗಸದಲ್ಲಿ ಅಂದು ಸಂಭವಿಸಲಿದೆ ಕಾಸ್ಮಿಕ್ ನೃತ್ಯ! ಗುರು ಮತ್ತು ಶುಕ್ರ ಅತ್ಯಂತ ಹತ್ತಿರ ಬರಲಿವೆ! ಎಲ್ಲಿ, ಯಾವಾಗ, ಹೇಗೆ ವೀಕ್ಷಿಸಬೇಕು?
ಗುರು ಮತ್ತು ಶುಕ್ರ ಗ್ರಹಗಳ ಸಂಯೋಗ ಎಲ್ಲಿ, ಹೇಗೆ ವೀಕ್ಷಿಸಬೇಕು?
Follow us
ಸಾಧು ಶ್ರೀನಾಥ್​
| Updated By: ಆಯೇಷಾ ಬಾನು

Updated on:Feb 24, 2023 | 9:47 AM

ಅನಂತ ಆಗಸದಲ್ಲಿ ತುಂಬಾ ತುಂಬಾ ಎತ್ತರದಲ್ಲಿ ನಮ್ಮ ತಲೆಯ ಮೇಲೆ ನಕ್ಷತ್ರಗಳು, ಗ್ರಹಗಳು ಮತ್ತು ಇತರೆ ಎಲ್ಲಾ ಕಾಸ್ಮಿಕ್ ಅಂಶಗಳು ವಿಜ್ಞಾನ ಪ್ರೇಮಿಗಳನ್ನು ನಿರಂತರವಾಗಿ ಸೆಳೆಯುತ್ತಲೇ ಇರುತ್ತವೆ. ಬ್ರಹ್ಮಾಂಡವು ಅಚ್ಚರಿಯ ಸಂಗತಿಗಳು ಮತ್ತು ಫಳಫಳನೆ ಹೊಳೆಯುವ ವಸ್ತುಗಳನ್ನು ಹೊಂದಿರುವ ದೊಡ್ಡ ನಿಗೂಢ ಚೆಂಡು. ಗ್ರಹಗಳ ಚಲನೆಗಳು, ಚಕ್ರಗಳು ಖಗೋಳಶಾಸ್ತ್ರದ ಉತ್ಸಾಹಿಗಳಿಗೆ ಭವ್ಯ ದಿನಗಳನ್ನು ಸೃಷ್ಟಿಸುತ್ತಲೇ ಇರುತ್ತವೆ. ಈ ಬಾರಿ ಫೆಬ್ರವರಿ 21 ರಿಂದ ಎರಡು ಅತ್ಯಂತ ಪ್ರಕಾಶಮಾನವಾದ ಗ್ರಹಗಳಾದ ಶುಕ್ರ ( Jupiter) ಮತ್ತು ಗುರುಗಳ (Venus ) ನಡುವೆ ಕಾಸ್ಮಿಕ್ ನೃತ್ಯ (Cosmic Dance) ಪ್ರಾರಂಭವಾಗುತ್ತದೆ (Planetary Conjunction ). ಅವೆರಡೂ ಮಾರ್ಚ್ 1 ರಂದು ಪರಸ್ಪರ ಹತ್ತಿರ ಬರುತ್ತವೆ. ಅಪರೂಪದ ಹಸಿರು ಧೂಮಕೇತು (Green Comet) ಕೊನೆಯ ಬಾರಿಗೆ ವಿದಾಯ ಹೇಳಿದ 50,000 ವರ್ಷಗಳ ನಂತರ ಈ ವಿಸ್ಮಯ ಹಿಂತಿರುಗಿದೆ. ಹೌದು ಇದೇ ಫೆಬ್ರವರಿ 1, 2 ಹಾಗೂ 3 ರಂದು ಬೆಳಗ್ಗೆ 3 ಗಂಟೆಗೆ ಭೂಮಿಯ ಅತ್ಯಂತ ಸಮೀಪಕ್ಕೆ ಹಸಿರು ಧೂಮಕೇತು ಬಂದಿತ್ತು. ಅಂತಹುದೇ ಚಮತ್ಕಾರ ಇದೇ ಫೆಬ್ರವರಿ ತಿಂಗಳಲ್ಲಿ ಇನ್ನೂ ಮುಂದುವರಿದಿದ್ದು, ಮತ್ತೊಂದು ಘಟನೆ ಇದೇ ಮಾರ್ಚ್‌ನಲ್ಲಿ ಅನಂತ ಆಗಸದಲ್ಲಿ (Sky) ಸಂಭವಿಸಲಿದೆ.

ಈ ನೃತ್ಯದ ಬಗ್ಗೆ ಬೆಳಕು ಚೆಲ್ಲುವ ಕೆಲವು ಕುತೂಹಲಕಾರಿ ಕಾಸ್ಮಿಕ್ ಸಂಗತಿಗಳು ನಿಮಗಾಗಿ ಇಲ್ಲಿವೆ: ಕಾಸ್ಮಿಕ್ ಡ್ಯಾನ್ಸ್ ಹಾಗೆಂದರೇನು? ಈ ತಿಂಗಳ ಆರಂಭದ ವೇಳೆಗೆ ಎರಡು ಪ್ರಕಾಶಮಾನವಾದ ಗ್ರಹಗಳು ಸುಮಾರು 29 ಡಿಗ್ರಿಗಳಷ್ಟು ದೂರದಲ್ಲಿದ್ದವು. ನಿಧಾನವಾಗಿ ಅವು ನೃತ್ಯ ಲಾಸ್ಯದಲ್ಲಿ ತೊಡಗಿ (ಅದೇನು ನಾವು ನೀವು ನೋಡಿರುವ ಡ್ಯಾನ್ಸಾ ಎಂದು ಅದನ್ನು ಅಕ್ಷರಶಃ ಪರಿಗಣಿಸಬೇಡಿ!) ಅವು ಹತ್ತಿರತ್ತಿರ ಬರಲು ಪ್ರಾರಂಭಿಸಿದವು. ಮತ್ತು ಮಾರ್ಚ್ 1 ರ ವೇಳೆಗೆ ಇನ್ನೂ ಮುಂದುವರಿದು ಒಟ್ಟಿಗೇ ಸೇರಿಕೊಳ್ಳುತ್ತವೆ! ಫೆಬ್ರವರಿ 20 ರಂದು ದೂರವು ಸರಿಸುಮಾರು ಒಂಬತ್ತು ಡಿಗ್ರಿಗಳಿಗೆ ಕುಗ್ಗಿದೆ. ಫೆಬ್ರವರಿ 27 ರ ಹೊತ್ತಿಗೆ, ದೂರವು 2.3 ಡಿಗ್ರಿಗಳಷ್ಟು ಕಡಿಮೆಯಾಗುತ್ತದೆ ಮತ್ತು ಅಂತಿಮವಾಗಿ ಮಾರ್ಚ್ 1 ರಂದು, ಗುರು ಮತ್ತು ಶುಕ್ರ ಎರಡೂ 0.5 ಡಿಗ್ರಿಗಳ ಅಂತರದಲ್ಲಿ ಮಾತ್ರ ಹತ್ತಿರವಾಗುತ್ತವೆ… ಈ ವಿಸ್ಮಯವನ್ನು ತಪ್ಪದೇ ನೋಡಿ ಆನಂದಿಸಿ.

ಹೀಗೆ ಅವರೆಡೂ ಹತ್ತಿರ ಬಂದಂತೆ ಶುಕ್ರ ಗ್ರಹ -4 ಪ್ರಮಾಣದಲ್ಲಿ ಮತ್ತು ಗುರು -2.1 ನಲ್ಲಿ ಹೊಳೆಯುವುದರೊಂದಿಗೆ ಪ್ರಕಾಶಮಾನವಾಗಿ ಕಂಗೊಳಿಸುತ್ತವೆ. ಅದು ಸೀರಿಯಸ್ಸಾಗಿ ಸಿರಿಯಸ್‌ಗಿಂತ (Sirius) ಎರಡು ಪಟ್ಟು ಪ್ರಕಾಶಮಾನವಾಗಿರುತ್ತದೆ. ಅದು ಅಂದು ಅತ್ಯಂತ ಪ್ರಕಾಶಮಾನವಾದ ನಕ್ಷತ್ರವಾಗಲಿದೆ.

Also Read:

Green Comet: ಬುಧವಾರ-ಗುರುವಾರ ರಾತ್ರಿ ತಪ್ಪದೆ ಹಸಿರು ಧೂಮಕೇತು ನೋಡಿ, 50 ಸಾವಿರ ವರ್ಷಗಳಿಗೊಮ್ಮೆ ಆಗಸದಲ್ಲಿ ಈ ಕೌತುಕ ಕಾಣಿಸುತ್ತದೆ!

Space.com ಪ್ರಕಾರ. ಮಂಗಳವಾರ ಸಂಜೆ (ಫೆ. 21) ಸೂರ್ಯಾಸ್ತದ ನಂತರ ಸರಿಸುಮಾರು ಒಂದು ಗಂಟೆಯ ನಂತರ ಪಶ್ಚಿಮ-ನೈಋತ್ಯ ದಿಗಂತದ ಕಡೆಗೆ ನೋಡಿದಾಗ ಅರ್ಧಚಂದ್ರ ಆಕರ್ಷಕವಾಗಿ ವೃದ್ಧಿಸುತ್ತಿರುವುದನ್ನು ನೋಡಿರುತ್ತೀರಿ- ಅಂದು ಚಂದ್ರ (Moon) ಕೇವಲ 4 % ಪ್ರಕಾಶಿಸಲ್ಪಟ್ಟಿದೆ – ಆಗ ಚಂದ್ರ ಸುಮಾರು 7 ಡಿಗ್ರಿಗಳಷ್ಟು ಶುಕ್ರನ ಕೆಳಗೆ ತೂಗಾಡುತ್ತಿತ್ತು ಎಂಬುವುದು ಗಮನಾರ್ಹ. ಅದೇ ವೇಳೆ ಗುರುವು ಶುಕ್ರನಿಂದ ಸುಮಾರು 8 ಡಿಗ್ರಿಗಳ ಮೇಲೆ ಎಡಭಾಗದಲ್ಲಿ ಕಾಣಿಸಿಕೊಂಡಿದೆ. ಆದ್ದರಿಂದ, ಅವು ದೀರ್ಘವಾಗಿ ಭೂಮಿಯತ್ತ ಬಾಗಿದ ರೇಖೆಯ ಉದ್ದಕ್ಕೂ ಕಾಣಿಸಿಕೊಂಡಿವೆ. ಪರಸ್ಪರ ಸಮಾನವಾದ ಅಂತರದಲ್ಲಿ ಇದ್ದುದನ್ನು ನೀವು ಗಮನಿಸಿರುತ್ತೀರಿ.

ಗುರು ಮತ್ತು ಶುಕ್ರ ಗ್ರಹಗಳ ಸಂಯೋಗ (Planetary Conjunction) ಎಂದರೇನು?

ಗ್ರಹಗಳು ಹೀಗೆ ಪರಸ್ಪರ ಭೇಟಿಯಾಗುವುದನ್ನು ಸಂಯೋಗ ಎಂದೂ ಕರೆಯಲ್ಪಡುತ್ತದೆ. ಎರಡು ಗ್ರಹಗಳು ಒಟ್ಟಿಗೆ ಕಾಣಿಸಿಕೊಂಡು ಇನ್ನೇನು ಭೂಮಿಯನ್ನು ಸ್ಪರ್ಶಿಸಿಬಿಡುತ್ತದೆ ಎನ್ನುವಂತೆ ಭಾಸವಾಗುತ್ತದೆ. ಆದರೆ ಗಮನಿಸಿ ಅದು ಲಕ್ಷಾಂತರ ಕಿಲೋ ಮೀಟರ್ ಅಂತರದಲ್ಲಿವೆ. ಗ್ರಹಗಳು ತಮ್ಮ ಜೋಡಣೆಯಿಂದಾಗಿ ರಾತ್ರಿ ಆಕಾಶದಲ್ಲಿ ಹಾಗೆ ಕಾಣಿಸಿಕೊಳ್ಳುತ್ತದೆ.

ಗುರು ಮತ್ತು ಶುಕ್ರ ಗ್ರಹಗಳ ಸಂಯೋಗ ಎಲ್ಲಿ ಮತ್ತು ಹೇಗೆ ವೀಕ್ಷಿಸಬೇಕು?

ಸರಿಯಾಗಿ ಮಾರ್ಚ್​​ 1ರ ದಿನ ಸಮೀಪಿಸುತ್ತಿದ್ದು ಎರಡು ಗ್ರಹಗಳು ತಮ್ಮ ನೃತ್ಯದಿಂದ ಆಕಾಶವನ್ನು ಎಲ್ಲಿ ಬೆರಗುಗೊಳಿಸುತ್ತವೆ ಎಂಬುದನ್ನು ವಿಜ್ಞಾನಿಗಳು ಉತ್ತಮವಾಗಿ ತಿಳಿಯಲು ಸಾಧ್ಯವಾಗಿಸಿದ್ದಾರೆ. ಅಂದರೆ, ಮಾರ್ಚ್ 1 ರಂದು ನೀವು ಒಂದು ಬೈನಾಕ್ಯುಲರ್ ಕ್ಷೇತ್ರ ವೀಕ್ಷಣೆಯಲ್ಲಿದ್ದರೆ ಸಾಕು. For better vision ಆಕಾಶವು ಸ್ವಲ್ಪ ಸ್ಪಷ್ಟವಾಗಿ ಗೋಷರಿಸುವುದನ್ನು ಕಾಣಲು ನಗರ ಪ್ರದೇಶ ಬಿಟ್ಟು, ದೂರದ ಹೊರವಲಯಕ್ಕೆ ಹೋಗಬೇಕು. ಅಲ್ಲಿ ನಿಮಗೆ ಬರಿಗಣ್ಣಿಗೇ ಕಾಣುತ್ತದೆ ಈ ಚಮತ್ಕಾರ. ಅಂತಹುದರಲ್ಲಿ ಟೆಲಿಸ್ಕೋಪ್ ಅಥವಾ ಬೈನಾಕ್ಯುಲರ್‌ ಇದ್ದರಂತೂ ಆಕಾಶದಲ್ಲಿ ನಮ್ಮ ಕಣ್ಣೆದುರೇ ಹೊಳೆಯುವ ಈ ಚಮತ್ಕಾರಿ ವಿದ್ಯಮಾನವನ್ನು ನೋಡಿ ಆನಂದಿಸಬಹುದು. ಮಿಸ್ ಮಾಡಬೇಡಿ.

Published On - 5:50 am, Fri, 24 February 23

ಇರಾನ್​ ನಿಂದ ಇದೇ ಮೊದಲ ಬಾರಿಗೆ ಸೆಜ್ಜಿಲ್ ಮಿಸೈಲ್ ಬಳಕೆ, ಇಸ್ರೇಲ್ ತತ್ತರ!
ಇರಾನ್​ ನಿಂದ ಇದೇ ಮೊದಲ ಬಾರಿಗೆ ಸೆಜ್ಜಿಲ್ ಮಿಸೈಲ್ ಬಳಕೆ, ಇಸ್ರೇಲ್ ತತ್ತರ!
ಅಸಿಮ್ ಮುನೀರ್​​ಗೆ ಔತಣ ನೀಡಿದ ಟ್ರಂಪ್ ವಿರುದ್ಧ ಶಶಿ ತರೂರ್ ಲೇವಡಿ
ಅಸಿಮ್ ಮುನೀರ್​​ಗೆ ಔತಣ ನೀಡಿದ ಟ್ರಂಪ್ ವಿರುದ್ಧ ಶಶಿ ತರೂರ್ ಲೇವಡಿ
ಒನ್​ ವೇನಲ್ಲಿ ಬಂದು ಡಿಸಿಗೆ ಅವಾಜ್ ಹಾಕಿದ ಬೈಕ್ ಸವಾರ: ಮುಂದೇನಾಯ್ತು?
ಒನ್​ ವೇನಲ್ಲಿ ಬಂದು ಡಿಸಿಗೆ ಅವಾಜ್ ಹಾಕಿದ ಬೈಕ್ ಸವಾರ: ಮುಂದೇನಾಯ್ತು?
ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಸಾಮೂಹಿಕ ನಾಯಕತ್ವ ಬೇಕಾಗುತ್ತದೆ: ರಾಜಣ್ಣ
ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಸಾಮೂಹಿಕ ನಾಯಕತ್ವ ಬೇಕಾಗುತ್ತದೆ: ರಾಜಣ್ಣ
ಜನಪ್ರಿಯ ಗೆಟ್ಟೋ ಕಿಡ್ಸ್​ಗೆ ಪ್ರೀತಿಯ ವಿದಾಯ ಹೇಳಿದ ಅರ್ಜುನ್ ಜನ್ಯ
ಜನಪ್ರಿಯ ಗೆಟ್ಟೋ ಕಿಡ್ಸ್​ಗೆ ಪ್ರೀತಿಯ ವಿದಾಯ ಹೇಳಿದ ಅರ್ಜುನ್ ಜನ್ಯ
ಕಚೇರಿಗೆ ಗೈರುಹಾಜರಾದರೂ ಸಿಬ್ಬಂದಿಯಿಂದ ಸಿಎಲ್ ಅರ್ಜಿ ಇಲ್ಲ!
ಕಚೇರಿಗೆ ಗೈರುಹಾಜರಾದರೂ ಸಿಬ್ಬಂದಿಯಿಂದ ಸಿಎಲ್ ಅರ್ಜಿ ಇಲ್ಲ!
‘ಎಕ್ಕ’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಅಶ್ವಿನಿ ಪುನೀತ್​ ರಾಜ್​​ಕುಮಾರ್
‘ಎಕ್ಕ’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಅಶ್ವಿನಿ ಪುನೀತ್​ ರಾಜ್​​ಕುಮಾರ್
ತಾಲೂಕು ಕಚೇರಿಯ ಗ್ರೇಡ್ 2 ತಹಸೀಲ್ದಾರ್​ಗೆ ನೀರಿಳಿಸಿದ ಸಚಿವ ಭೈರೇಗೌಡ
ತಾಲೂಕು ಕಚೇರಿಯ ಗ್ರೇಡ್ 2 ತಹಸೀಲ್ದಾರ್​ಗೆ ನೀರಿಳಿಸಿದ ಸಚಿವ ಭೈರೇಗೌಡ
ಯಾವ್ಯಾವುದಕ್ಕೆ ಎಷ್ಟೆಷ್ಟು ಲಂಚ ಅಂತ ಕಚೇರಿಯಲ್ಲಿ ದರಪಟ್ಟಿ ಲಗತ್ತಿಸಿ! ಸಚಿವ
ಯಾವ್ಯಾವುದಕ್ಕೆ ಎಷ್ಟೆಷ್ಟು ಲಂಚ ಅಂತ ಕಚೇರಿಯಲ್ಲಿ ದರಪಟ್ಟಿ ಲಗತ್ತಿಸಿ! ಸಚಿವ
ಕಚೇರಿಗೆ ದಿಢೀರ್ ಭೇಟಿ: ಅಧಿಕಾರಿಗಳು, ನೌಕರರಿಗೆ ಕೃಷ್ಣಭೈರೇಗೌಡ ಕ್ಲಾಸ್
ಕಚೇರಿಗೆ ದಿಢೀರ್ ಭೇಟಿ: ಅಧಿಕಾರಿಗಳು, ನೌಕರರಿಗೆ ಕೃಷ್ಣಭೈರೇಗೌಡ ಕ್ಲಾಸ್