AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಯಚೂರು: ಪತ್ನಿಯ ಶೀಲ‌ ಶಂಕಿಸಿ ಕೊಲೆ ಮಾಡಿದ ಪತಿ

ಪತ್ನಿಯ ಶೀಲ‌ ಶಂಕಿಸಿ ಪತಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಮಾನ್ವಿ ತಾಲೂಕಿನ ಸಾದಪುರ ಗ್ರಾಮದಲ್ಲಿ ನಡೆದಿದೆ.

ರಾಯಚೂರು: ಪತ್ನಿಯ ಶೀಲ‌ ಶಂಕಿಸಿ ಕೊಲೆ ಮಾಡಿದ ಪತಿ
ಪತ್ನಿಶೀಲ ಶಂಕಿಸಿ ಕೊಲೆ ಮಾಡಿದ ಪತಿ ನಾಗರಾಜ್​
TV9 Web
| Updated By: Digi Tech Desk|

Updated on:Feb 24, 2023 | 12:54 PM

Share

ರಾಯಚೂರು:  ಶೀಲ‌ ಶಂಕಿಸಿ ಪತಿ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಮಾನ್ವಿ ತಾಲೂಕಿನ ಸಾದಪುರ ಗ್ರಾಮದಲ್ಲಿ ನಡೆದಿದೆ. ಪವಿತ್ರಾ (22)ಕೊಲೆಯಾದ ಮಹಿಳೆ, ಮಾನ್ವಿ ಬಳಿಯ ಇಟ್ಟಿಗೆ ತಯಾರಿಕಾ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ದಂಪತಿ ಪತ್ನಿ ಪವಿತ್ರಾ ಹಾಗೂ ಆರೋಪಿ ಪತಿ ನಾಗರಾಜ್, ಕಳೆದೊಂದು ವರ್ಷದ ಹಿಂದಷ್ಟೆ ಪವಿತ್ರಾಳನ್ನ ಮದುವೆಯಾಗಿದ್ದ. ಇತ್ತೀಚೆಗೆ ನಿತ್ಯ ಪತ್ನಿ ಶೀಲ ಶಂಕಿಸಿ ಕಿರುಕುಳ ಕೊಡುತ್ತಿದ್ದು, ನಿನ್ನೆ(ಫೆ.23) ರಾತ್ರಿ ಮತ್ತೆ ಪತ್ನಿ ಪವಿತ್ರಾ ಜೊತೆ ಕಿರಿಕ್ ಮಾಡಿದ್ದಾನೆ. ಈ ವೇಳೆ ಪತಿ ನಾಗರಾಜ್ ಆಕೆಯನ್ನು ಹೊಡೆದು ಗೋಡೆಗೆ ತಳ್ಳಿದ್ದಾನೆ. ಇದರಿಂದ ತಲೆಗೆ ಪೆಟ್ಟು ಬಿದ್ದು ಪವಿತ್ರಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಸದ್ಯ ಆರೋಪಿ ನಾಗರಾಜ್​ನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಾರಕಾಸ್ತ್ರದಿಂದ ಹೊಡೆದು ಪತಿಯಿಂದಲೇ ಪತ್ನಿಯ ಕೊಲೆ

ಕಲಬುರಗಿ: ಜಿಲ್ಲೆಯ ಕಾಳಗಿ ತಾಲೂಕಿನ ಟೆಂಗಳಿ ಗ್ರಾಮದಲ್ಲಿ ಮಾರಕಾಸ್ತ್ರದಿಂದ ಹೊಡೆದು ಪತಿಯಿಂದಲೇ ಪತ್ನಿಯನ್ನ ಕೊಲೆ ಮಾಡಿರುವ ಘಟನೆ ನಡೆದಿದೆ. ಪ್ರತಿನಿತ್ಯ ಕುಡಿದು ಬಂದು ಪತ್ನಿ ಜತೆ ಗಲಾಟೆ ಮಾಡುತ್ತಿದ್ದ ಪತಿ ಶಿವಯ್ಯ ನಿನ್ನೆ(ಫೆ.23) ಮಧ್ಯಾಹ್ನ ಮನೆ ಕೆಲಸ ಮಾಡುತ್ತಿದ್ದಾಗ ಪತ್ನಿ ಈರಮ್ಮ(40)ನನ್ನ ಕೊಲೆ ಮಾಡಿದ್ದಾನೆ. ಈ ಕುರಿತು ಕಾಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಶಿವಯ್ಯನನ್ನು ಬಂಧಿಸಲಾಗಿದೆ.

ಇದನ್ನೂ ಓದಿ:ಲಕ್ಷಾಂತರ ರೂ ಸಾಲದ ಹೊರೆ, ಕೈಕೊಟ್ಟ ಸರಕಾರಿ ಪಿಂಚಣಿ ಯೋಜನೆ! ಮನ ನೊಂದ ಶಿಕ್ಷಕ ಆತ್ಮಹತ್ಯೆ

ಚಳ್ಳಕೆರೆ ಬಳಿ ಯುವಕನ ಶವ ಪತ್ತೆ, ಕೊಲೆ ಮಾಡಿರುವ ಶಂಕೆ

ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆಯ ಕಾಟಪ್ಪನಹಟ್ಟಿಯ ಮಧು(23) ಎಂಬಾತ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ದುಗ್ಗಾವರದಲ್ಲಿ ನಾಟಕ ನೋಡಿ, ಮುಂಜಾನೆ ಬೈಕ್​ನಲ್ಲಿ ಬರುವಾಗ ಘಟನೆ ನಡೆದಿದೆ. ರಸ್ತೆ ಬದಿ ಆತನ ಬೈಕ್ ಬಿದ್ದಿದ್ದು, ಸಮಾರು 20 ಅಡಿ ದೂರದಲ್ಲಿ ಆತನ ಶವ ಪತ್ತೆಯಾಗಿದೆ. ಯಾರೋ ದುಷ್ಕರ್ಮಿಗಳು ಕೊಲೆಗೈದಿದ್ದಾರೆ ಎಂದು ಕುಟುಂಬಸ್ಥರು ಆರೋಪ ವ್ಯಕ್ತಪಡಿಸಿದ್ದಾರೆ. ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತವೋ ಅಥವಾ ಹತ್ಯೆಯೋ‌ ಎಂದು ತನಿಖೆ ನಡೆಸಿದ್ದಾರೆ.

ಬೆಳ್ಳಿಪುರ ಕ್ರಾಸ್​ನಲ್ಲಿ ಅಪರಿಚಿತ ಯುವಕನ ಬರ್ಬರ ಹತ್ಯೆ

ರಾಮನಗರ: ಅಪರಿಚಿತ ಯುವಕನನ್ನ ಕತ್ತು ಕೊಯ್ದು, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಡರಾತ್ರಿ ಹಾರೋಹಳ್ಳಿ ತಾಲೂಕಿನ ಬೆಳ್ಳಿಪುರ ಕ್ರಾಸ್ ಬಳಿ ನಡೆದಿದೆ. ಸ್ಥಳಕ್ಕೆ ಹಾರೋಹಳ್ಳಿ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ತನಿಖೆ ಬಳಿಕವೇ ಯುವಕ ಯಾರೆಂದು ತಿಳಿದು ಬರಬೇಕಾಗಿದ್ದು, ಗ್ರಾಮಸ್ಥರು ಕಂಗಾಲಾಗಿದ್ದಾರೆ.

ಇದನ್ನೂ ಓದಿ:ಐತಿಹಾಸಿಕ ಸಿದ್ದಾರೂಢ ರಥೋತ್ಸವ ಜಾತ್ರೆ ದಿನವೇ ಮನಬಂದಂತೆ ಕೊಚ್ಚಿ ಯುವಕನ ಕೊಲೆ

ಮಹಾ ನಗರದಲ್ಲಿ ಮುಂದುವರಿದ ಪುಂಡರ ಹಾವಳಿ; ಟೀ ಅಂಗಡಿಯವನ ಮೇಲೆ ಹಲ್ಲೆ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ‌ ಪುಂಡರ ಹಾವಳಿ ಹೆಚ್ಚಾಗುತ್ತಿದೆ. ನಿನ್ನೆ(ಫೆ.23) ಸಂಜೆ ಕಲ್ಯಾಣ ನಗರದ ಚಟ್ ಪಟಾ ಟೀ‌ ಅಂಗಡಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಇದ್ದಕ್ಕಿದ್ದಂತೆ ವ್ಯಕ್ತಿಯೊಬ್ಬ ಮುಖಕ್ಕೆ‌ ಪಂಚ್ ಕೊಟ್ಟಿದ್ದಾನೆ. ಆತ ಹಲ್ಲೆ ಮಾಡಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ‌ ಈ ಘಟನೆ ನಡೆದಿದೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:35 am, Fri, 24 February 23