AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮನಗರ: ಪ್ರೀತಿಸಿದ ಹುಡುಗಿಗೆ ಮದುವೆಯಾಗುವುದಾಗಿ ನಂಬಿಸಿ ಮೋಸ, ಕೇಳಲು ಹೋದ ಯುವತಿ ತಂದೆ, ಚಿಕ್ಕಪ್ಪನಿಗೆ ಹಲ್ಲೆ ಮಾಡಿದ ಪ್ರಿಯಕರ

ವೃತ್ತಿಯಲ್ಲಿ ವೈದ್ಯೆಯಾಗಿರುವ ಯುವತಿಯನ್ನ ಪ್ರೀತಿಸಿ, ಮದುವೆಯಾಗುತ್ತೇನೆ ಎಂದು ನಂಬಿಸಿ, ಆಕೆಯನ್ನ ಲೈಂಗಿಕವಾಗಿ ಬಳಸಿಕೊಂಡು ಇದೀಗ ಯುವತಿಗೆ ಕೈಕೊಟ್ಟಿದ್ದಾನೆ. ಇದನ್ನ ಕೇಳಲು ಹೋಗಿದ್ದ ಯುವತಿಯ ಕುಟುಂಬಸ್ಥರ ಮೇಲೆ ಯುವಕ ಹಾಗೂ ಆತನ ಕುಟುಂಬಸ್ಥರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ರಾಮನಗರ: ಪ್ರೀತಿಸಿದ ಹುಡುಗಿಗೆ ಮದುವೆಯಾಗುವುದಾಗಿ ನಂಬಿಸಿ ಮೋಸ, ಕೇಳಲು ಹೋದ ಯುವತಿ ತಂದೆ, ಚಿಕ್ಕಪ್ಪನಿಗೆ ಹಲ್ಲೆ ಮಾಡಿದ ಪ್ರಿಯಕರ
ರಾಮನಗರ ಪ್ರೀತಿಸಿದ ಯುವತಿಗೆ ಕೈಕೊಟ್ಟ ಯುವಕ, ಕೇಳಲು ಹೋದ ಯುವತಿಯ ತಂದೆಯ ಮೇಲೆ ಹಲ್ಲೆ
ಕಿರಣ್ ಹನುಮಂತ್​ ಮಾದಾರ್
|

Updated on: Feb 24, 2023 | 3:04 PM

Share

ರಾಮನಗರ: ಬೆಂಗಳೂರು ದಕ್ಷಿಣ ತಾಲೂಕಿನ ಕಗ್ಗಲಿಪುರ ನಿವಾಸಿ ಡಾ. ನಿಸಾ ಎಂಬಾಕೆಯ ಹಿಂದೆ ಅದೇ ಗ್ರಾಮದ ಪಂಚಾಯತಿ ಅಧ್ಯಕ್ಷ ಪರ್ವೇಜ್ ಮಗ ಶೋಹೆಬ್ ಎಂಬಾತ ಬೆನ್ನು ಬಿದ್ದಿದ್ದ. ನಿಸಾ ಬಿಎಎಮ್​ಎಸ್ ಮಾಡುತ್ತಿದ್ದ ವೇಳೆ ಪ್ರೀತಿ ಮಾಡುವಂತೆ ಪೀಡಿಸುತ್ತಿದ್ದ. ಈತನ ಬಣ್ಣದ ಮಾತುಗಳಿಗೆ ಬಿದ್ದ ನಿಸಾ, ಶೋಹೆಬ್​ನನ್ನ ಪ್ರೀತಿ ಮಾಡಲು ಮುಂದಾಗಿದ್ದಳು. ಆನಂತರ ಆಕೆಯನ್ನ ಲೈಂಗಿಕವಾಗಿ ಬಳಸಿಕೊಂಡಿದ್ದ. ಈ ವಿಚಾರ ನಿಸಾ ಪೋಷಕರಿಗೂ ಗೊತ್ತಾಗಿತ್ತು. ಹೀಗಾಗಿ ಶೋಹೆಬ್ ತಂದೆ ಪರ್ವೆಜ್ ಬಳಿ ತಿಳಿಸಿದ್ದರು. ಬಳಿಕ ಇಬ್ಬರಿಗೂ ಮದುವೆ ಮಾಡೋಣಾ ಎಂದಿದ್ದಾರೆ. ಆದರೆ ಕಳೆದ ಎರಡು ವರ್ಷಗಳಿಂದ ಈ ಬಗ್ಗೆ ಏನು ಮಾತಾಡದೇ ಸುಮ್ಮನೆ ಇದ್ದಾರೆ. ಹೀಗಾಗಿ ನಿನ್ನೆ(ಫೆ.22) ನಿಸಾ ತಂದೆ ಮುಮ್ತಾಜ್ ಹಾಗೂ ಚಿಕ್ಕಪ್ಪ ಅಬ್ದುಲ್ ಮರ್ದಾನ್ ಕೇಳಲು ಪರ್ವೇಜ್ ಮನೆಗೆ ಹೋಗಿದ್ದಾರೆ. ಈ ವೇಳೆ ಆತನ ಮನೆಯವರು ಮಾರಣಾಂತೀಕವಾಗಿ ಹಲ್ಲೆ ನಡೆಸಿದ್ದಾರೆ.

ಅಂದಹಾಗೆ ಇತ ಐದು ವರ್ಷಗಳಿಂದ ಪ್ರೀತಿಸಿ ಹಲವು ಬಾರಿ ನಿಸಾ ಜೊತೆ ಲೈಂಗಿಕ ಸಂಕರ್ಪ ಬೆಳೆಸಿದ್ದಾನೆ. ನಿಸಾ ಹುಟ್ಟುಹಬ್ಬವನ್ನು ರೆಸಾರ್ಟ್ ಒಂದರಲ್ಲಿ ಅದ್ದೂರಿಯಾಗಿ ಆಚರಣೆ ಕೂಡ ಮಾಡಿದ್ದಾನೆ. ಅಲ್ಲದೆ ಸಾಕಷ್ಟು ಕಡೆ ಸುತ್ತಿಸಿದ್ದಾನೆ. ಯಾವುದೇ ಕಾರಣಕ್ಕೂ ಮೋಸ ಮಾಡಲ್ಲ ಎಂಬ ಮಾತಿಗೆ ಮರುಳಾಗಿ ನಿಸಾ ದೇಹ, ಮನಸ್ಸನ್ನು ಅರ್ಪಿಸಿದ್ದಾಳೆ. ಆದರೆ ಇದೀಗ ನಿಸಾ ಬೇಡವಾಗಿದ್ದಾಳೆ. ಕೇಳಲು ಹೋದ ನಿಸಾ ಪೋಷಕರ ಮೇಲೂ ಹಲ್ಲೆ ಮಾಡಿದ್ದಾರೆ‌. ಈ ಸಂಬಂಧ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಗ್ರಾಪಂ ಅಧ್ಯಕ್ಷ ಪರ್ವೆಜ್, ಶೋಹೆಬ್ ಸೇರಿದಂತೆ ಹನ್ನೊಂದು ಜನರ ವಿರುದ್ದ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಕೈಕೊಟ್ಟ ಅಪ್ರಾಪ್ತ ವಯಸಿನ ಪ್ರಿಯಕರ: ಇತ್ತ ಕಟ್ಕೊಂಡವನೂ ಇಲ್ಲ-ಅತ್ತ ಪ್ರೀತಿಸಿದವನು ಇಲ್ಲದೆ, ನಡುರಸ್ತೆಯಲ್ಲಿ ನಿಂತಿದ್ದಾಳೆ ಈ ಯುವತಿ!

ಒಟ್ಟಿನಲ್ಲಿ ತನ್ನ ಪಾಡಿಗೆ ತಾನು ಇದ್ದ ಯುವತಿಯನ್ನ ಬಣ್ಣ ಬಣ್ಣದ ಮಾತುಗಳನ್ನ ಆಡಿ ಪ್ರೀತಿಯ ಬಲೆಗೆ ಬೀಳಿಸಿಕೊಂಡು ಇದೀಗ ಕೈಕೊಟ್ಟಿದ್ದಾನೆ. ಈ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದು, ಸಂತ್ರಸ್ಥ ಯುವತಿಗೆ ನ್ಯಾಯ ದೊರಕಿಸುವ ಕೆಲಸ ಆಗಬೇಕಾಗಿದೆ.

ವರದಿ: ಪ್ರಶಾಂತ್ ಹುಲಿಕೆರೆ ಟಿವಿ9 ರಾಮನಗರ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ