ಇಂದಿನ ಜನರ ಜೀವನ ಶೈಲಿ ಯು ಸಂಪೂರ್ಣವಾಗಿ ಬದಲಾಗಿದೆ. ಒತ್ತಡದ ಜೀವನದ ಶೈಲಿಯಿಂದಾಗಿ ಆರೋಗ್ಯ ಸಮಸ್ಯೆಗಳು ಕಾಡುತ್ತಿದೆ. ಹೆಚ್ಚಿನವರು ಅನಾರೋಗ್ಯಕ್ಕೆ ಚಿಕಿತ್ಸೆಯಾಗಿ ನೃತ್ಯವು ರೂಪುಗೊಂಡಿದ್ದು, ಹೀಗಾಗಿ ಹೆಚ್ಚಿನವರು ನೃತ್ಯ ಕಲಿಕೆಯಲ್ಲಿ ಆಸಕ್ತಿ ತೋರುತ್ತಿದ್ದಾರೆ. ಹೀಗಾಗಿ ಏಪ್ರಿಲ್ 29 ರಂದು ಅಂತಾರಾಷ್ಟ್ರೀಯ ನೃತ್ಯ ದಿನವನ್ನು ಆಚರಿಸಲಾಗುತ್ತಿದೆ.
ಇಂಟರ್ನ್ಯಾಷನಲ್ ಥಿಯೇಟರ್ ಇನ್ಸಿಟ್ಯೂಟ್ ನೃತ್ಯ ಸಮಿತಿಯು ಏಪ್ರಿಲ್ 29 ಅನ್ನು ಅಂತಾರಾಷ್ಟ್ರೀಯ ನೃತ್ಯ ದಿನವನ್ನಾಗಿ ಆಚರಿಸಲು ಪ್ರಾರಂಭಿಸಿತು. ಈ ದಿನವು ಆಧುನಿಕ ಬ್ಯಾಲೆ ನೃತ್ಯ ಪ್ರಕಾರದ ಸೃಷ್ಟಿಕರ್ತ ಜೀನ್-ಜಾರ್ಜಸ್ ನೊವೆರ್ ಅವರ ಜನ್ಮದಿನವಾಗಿದ್ದು, ಪ್ರತಿ ವರ್ಷ ಅಂತಾರಾಷ್ಟ್ರೀಯ ನೃತ್ಯ ದಿನವನ್ನು ಆಚರಿಸಲಾಗುತ್ತಾ ಬರಲಾಗುತ್ತಿದೆ.
ಇದನ್ನೂ ಓದಿ: ಮದುವೆ ಸಮಯದಲ್ಲಿ ವಧು ವರರಿಗೆ ಅರಶಿನ ಹಚ್ಚುವುದರ ಹಿಂದಿನ ಕಾರಣಗಳು
ಅಂತಾರಾಷ್ಟ್ರೀಯ ನೃತ್ಯ ದಿನವು ಕಲಾಪ್ರಕಾರಗಳಲ್ಲಿ ಒಂದಾಗಿರುವ ನೃತ್ಯದ ಮೌಲ್ಯ, ನೃತ್ಯ ಸಮುದಾಯ ಮತ್ತು ವ್ಯಕ್ತಿಗೆ ಅದರ ಮಹತ್ವದ ಕುರಿತು ಅರಿವು ಮೂಡಿಸುವುದು ಈ ದಿನದ ಉದ್ದೇಶವಾಗಿದೆ. ಮನಸ್ಸನ್ನು ತಣಿಸುವ ಆರೋಗ್ಯಕ್ಕೆ ಚಿಕಿತ್ಸೆಯಾಗಿರುವ ಈ ನಿತ್ಯ ದಿನದಂದು ವಿವಿಧ ನೃತ್ಯ ಕಾರ್ಯಕ್ರಮಗಳು ಮತ್ತು ಉತ್ಸವಗಳು ನಡೆಯುತ್ತವೆ. ಕಲಾಪ್ರಕಾರವಾದ ನೃತ್ಯದಲ್ಲಿ ಸಾಧನೆ ಮಾಡಿಗೈದ ವ್ಯಕ್ತಿಗಳನ್ನು ಗುರುತಿಸುವ ಕೆಲಸಗಳನ್ನು ಮಾಡಲಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ