Health Care Tips in Kannada : ಮೊಸರಿಗೆ ಬೆಲ್ಲ ಹಾಕಿ ಸೇವಿಸುವುದರಿಂದಾಗುವ ಆರೋಗ್ಯ ಪ್ರಯೋಜನಗಳೇನು?
ನಿತ್ಯ ಸೇವಿಸುವ ಆಹಾರ ಪದಾರ್ಥಗಳು ಆರೋಗ್ಯವನ್ನು ಕಾಪಾಡುವುದಲ್ಲದೆ ಕೆಲವೊಮ್ಮೆ ಅಡ್ಡಪರಿಣಾಮಗಳನ್ನು ಬೀರುವ ಸಾಧ್ಯತೆಯೇ ಅಧಿಕ. ಆದರೆ ಕೆಲವು ಆಹಾರಗಳ ಸೇವನೆಯು ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಂದ ನಮ್ಮನ್ನು ರಕ್ಷಿಸುತ್ತದೆ. ಅದರಲ್ಲಿಯು ಮೊಸರಿಗೆ ಬೆಲ್ಲ ಸೇರಿಸಿ ಸೇವಿಸುವುದು ಪರಿಣಾಮಕಾರಿಯಾಗಿದೆ. ಮೊಸರಿಗೆ ಬೆಲ್ಲ ಬೆರೆಸಿ ಸೇವಿಸುವುದರಿಂದ ಏನೆಲ್ಲಾ ಆರೋಗ್ಯ ಲಾಭಗಳಿವೆ ಎನ್ನುವುದರ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಕೆಲವರಿಗೆ ಮೊಸರಿಲ್ಲದೆ ಊಟವು ಪರಿಪೂರ್ಣವಾಗುವುದೇ ಇಲ್ಲ. ಮಧ್ಯಾಹ್ನವಾಗಲಿ, ಸಂಜೆಯಾಗಲಿ ಊಟಕ್ಕೆ ಮೊಸರು ಇರಲೇಬೇಕು. ಅದಲ್ಲದೇ ಕೆಲವರಿಗೆ ಮೊಸರಿಗೆ ಸಕ್ಕರೆ ಹಾಕಿ ಸೇವಿಸುವ ಅಭ್ಯಾಸವಿರುತ್ತದೆ. ಆದರೆ ನೀವೇನಾದರೂ ಮೊಸರಿಗೆ ಬೆಲ್ಲವನ್ನು ಬೆರೆಸಿ ಅದರ ರುಚಿಯನ್ನು ಸವಿದಿದ್ದೀರಾ. ಈ ಮೊಸರು ಮತ್ತು ಬೆಲ್ಲ ಎರಡೂ ಪೋಷಕಾಂಶಗಳಲ್ಲಿ ಸಮೃದ್ಧವಾಗಿದ್ದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
ಮೊಸರಿಗೆ ಬೆಲ್ಲ ಹಾಕಿ ಸೇವಿಸುವುದರಿಂದಾಗುವ ಪ್ರಯೋಜನಗಳಿವು:
- ಬೆಲ್ಲ ಮತ್ತು ಮೊಸರಿನಲ್ಲಿ ಆರೋಗ್ಯಕ್ಕೆ ಅಗತ್ಯವಾದ ಕ್ಯಾಲ್ಸಿಯಂ ಮತ್ತು ರಂಜಕವನ್ನು ಹೊಂದಿರುತ್ತದೆ. ಹೀಗಾಗಿ ದೇಹದಲ್ಲಿ ರಕ್ತ ಕಡಿಮೆಯಾಗಿದ್ದರೆ ಇದನ್ನು ಸೇವಿಸಿದರೆ ರಕ್ತಹೀನತೆ ದೂರವಾಗುತ್ತದೆ.
- ಬೆಲ್ಲವು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದ್ದು, ಮೊಸರಿಗೆ ಬೆಲ್ಲ ಹಾಕಿ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗಿ, ದೇಹವನ್ನು ಕಾಯಿಲೆಗಳಿಂದ ರಕ್ಷಿಸುತ್ತದೆ.
- ಮೊಸರಿಗೆ ಬೆಲ್ಲವನ್ನು ಬೆರೆಸಿ ಸೇವಿಸುವುದರಿಂದ ಜೀರ್ಣಕ್ರಿಯೆಯನ್ನೂ ಸುಧಾರಿಸುತ್ತದೆ. ಮಲಬದ್ಧತೆ, ಅತಿಸಾರ ಮತ್ತು ವಾಂತಿಯಂತಹ ಸಮಸ್ಯೆಯು ಶಮನವಾಗುತ್ತದೆ.
- ಮೊಸರು ಬೆಲ್ಲವು ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ. ತೂಕ ಹೆಚ್ಚಾಗುವ ಆತಂಕವಿದ್ದರೆ ದೈನಂದಿನ ಆಹಾರದಲ್ಲಿ ಮೊಸರಿನ ಜೊತೆಗೆ ಬೆಲ್ಲವನ್ನು ತಿನ್ನುವುದನ್ನು ರೂಢಿಸಿಕೊಂಡರೆ ತೂಕ ನಿಯಂತ್ರಿಸಬಹುದು.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ