Artificial sweeteners: ಕೃತಕ ಸಿಹಿಕಾರಕ ನಿಯೋಟೇಮ್ ಕರುಳಿನ ಆರೋಗ್ಯಕ್ಕೆ ಹಾನಿಕಾರಕ!
ಸಿಹಿತಿಂಡಿಗಳಲ್ಲಿ ಸಕ್ಕರೆಗೆ ಪರ್ಯಾಯವಾಗಿ ಕೃತಕ ಸಿಹಿಕಾರಕ ಉತ್ಪನ್ನಗಳ ಬಳಕೆ ಹೆಚ್ಚಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಸಿಹಿ ತಿಂಡಿಗಳು, ಐಸ್ ಕ್ರೀಮ್ ಹಾಗೂ ಕೇಕ್ ಗಳಲ್ಲೂ ಕೃತಕ ಸಿಹಿಕಾರಕ ಉತ್ಪನ್ನಗಳು ಗ್ರಾಹಕರನ್ನು ಆಕರ್ಷಸುತ್ತಿದೆ ಆದರೆ, ಕೃತಕ ಸಿಹಿಕಾರಕವಾಗಿರುವ ನಿಯೋಟೇಮ್ ಕರುಳಿನ ಆರೋಗ್ಯಕ್ಕೆ ಹಾನಿಕಾರಕವಾಗಿದೆ ಎಂದು ಆಘಾತಕಾರಿ ಸುದ್ದಿಯೊಂದು ಸಂಶೋಧನೆಯಿಂದ ಹೊರ ಬಿದ್ದಿದೆ.
ಬೇಕರಿಯ ಸಿಹಿ ತಿಂಡಿಗಳಲ್ಲೂ ಹೆಚ್ಚಾಗಿ ಕೃತಕ ಸಿಹಿಕಾರಕಗಳನ್ನು ಬಳಸಲಾಗುತ್ತದೆ. ಈ ಸಿಹಿಕಾರಕಗಳು ತಿನಿಸುಗಳ ರುಚಿಯನ್ನು ಹೆಚ್ಚಿಸುತ್ತದೆಯಾದರೂ ಆರೋಗ್ಯಕ್ಕೆ ಅಪಾಯಕಾರಿ ಎನ್ನುವುದು ಅನೇಕರಿಗೆ ತಿಳಿದಿಲ್ಲ. ಆದರೆ ಇದೀಗ ಹೊಸ ಸಂಶೋಧನೆಯ ಪ್ರಕಾರ, ಕೃತಕ ಸಿಹಿಕಾರಕವಾದ ನಿಯೋಟೇಮ್ ಕರುಳಿಗೆ ಹಾನಿ ಮಾಡುತ್ತದೆ ಹಾಗೂ ಕರುಳಿನ ಕಾಯಿಲೆಗಳನ್ನು ದಾರಿ ಮಾಡಿಕೊಡುತ್ತವೆ ಎನ್ನುವುದು ತಿಳಿದು ಬಂದಿದೆ.
ಸಹಜವಾಗಿ ಸಿಹಿಕಾರಕವಾಗಿ ಈ ನಿಯೋಟೇಮನ್ನು ಕೇಕ್, ತಂಪು ಪಾನೀಯಗಳು ಮತ್ತು ಚೂಯಿಂಗ್ ಗಮ್ ಗಳಲ್ಲಿ ಬಳಸಲಾಗುತ್ತದೆ. ಆದರೆ ಫ್ರಾಂಟಿಯರ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಮತ್ತು ಆಂಗ್ಲಿಯಾ ರಸ್ಕಿನ್ ವಿಶ್ವವಿದ್ಯಾನಿಲಯದಲ್ಲಿ (ARU) ನಡೆಸಿದ ಅಧ್ಯಯನವು ನಿಯೋಟೇಮ್ ಮಾನವ ಕರುಳಿಗೆ ಹಾನಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
ಇದನ್ನೂ ಓದಿ: ನೀವು ಸ್ಲಿಮ್ ಆಗಿ ಕಾಣಬೇಕೆ? ಈ ಪಾನೀಯ ಕುಡಿದರೆ ಬೊಜ್ಜು ಮಂಜಿನಂತೆ ಕರಗುತ್ತೆ
ನಿಯೋಟೇಮ್ ಆರೋಗ್ಯಕರ ಕರುಳಿನ ಬ್ಯಾಕ್ಟೀರಿಯಾದ ಸಮತೋಲನವನ್ನು ಅಲ್ಲೋಲಾ ಕಲ್ಲೋಲ್ಲ ಮಾಡುತ್ತದೆ. ಅದಲ್ಲದೇ ಕರುಳಿನ ಗೋಡೆಯನ್ನು ದುರ್ಬಲಗೊಳಿಸುತ್ತದೆ. ಜೀವಕೋಶಗಳ ಹಾನಿಗೂ ಕಾರಣವಾಗುತ್ತದೆ. ಕರುಳಿಗೆ ಆರೋಗ್ಯವನ್ನು ಕಾಪಾಡಲು ಪ್ರಯೋಜನಕಾರಿ ಕರುಳಿನ ಬ್ಯಾಕ್ಟೀರಿಯಾವನ್ನು ಹಾನಿಗೊಳಿಸುತ್ತದೆ ಎನ್ನುವುದು ಬಹಿರಂಗವಾಗಿದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ