ಇಂದು ವಿಶ್ವ ಪುರುಷರ ದಿನ, ಪುರುಷರ ಬಗ್ಗೆ ಅನೇಕ ರೀತಿಯಲ್ಲಿ ತಿಳಿಸಲಾಗಿದೆ, ಪುರುಷರ ದಿನ ಮಹತ್ವ, ಇತಿಹಾಸ ಹೀಗೆ ಹಲವು ವಿಚಾರಗಳ ಬಗ್ಗೆ ಲೇಖನಗಳ ಮೂಲಕ ನೀವು ತಿಳಿದುಕೊಂಡಿರಬಹದು, ಆದರೆ ಈ #MenToo ಎಂಬುದು ಈಗ ಟ್ವಿಟರ್ನಲ್ಲಿ ಭಾರೀ ಟ್ರೆಂಡ್ ಆಗುತ್ತಿದೆ. ಜಗತ್ತಿನಲ್ಲಿ ಪುರುಷ ಸಮಾಜ ಎನ್ನುವ ನಾವು, ಈ ಪುರುಷರಿಗೆ ಯಾವೆಲ್ಲ ಕಿರುಕುಳ ಇದೆ, ಅವರ ಮಾನಸಿಕ ಯೋಚನೆ, ಕಷ್ಟಗಳು ಏನು? ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು, ಇದೀಗ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ (ಟ್ವಿಟರ್) ಭಾರಿ ಸದ್ದು ಮಾಡುತ್ತಿದೆ #MenToo. ಏನಿದು #MenToo? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು, ಇದು ಯಾವ ಕಾರಣಕ್ಕಾಗಿ ಪ್ರಾರಂಭಿಸಲಾಯಿತು? ಎನ್ನುವುದು ಇಲ್ಲಿದೆ ನೋಡಿ .
ಕಳೆದ ಎರಡು ವರ್ಷಗಳಿಂದ ಮಹಿಳೆಯ ಮೇಲೆ ಮಾಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳಗಳನ್ನು ನೀಡುತ್ತಿದ್ದಾರೆ ಎಂದು #MeToo ಎಂಬುದು ಟ್ರೆಂಡ್ ಆಗಿತ್ತು. ಜತೆಗೆ #MeToo ಭಾರೀ ಚರ್ಚೆಗೆ ಕಾರಣವಾಗಿತ್ತು. ಇದರಿಂದ ಎಷ್ಟು ನೊಂದ ಮಹಿಳೆಯರು, ವಿಶೇಷವಾಗಿ ನಟಿಯರಿಗೆ ಆದ ನೋವಿಗೆ ಪರಿಹಾರ ಸಿಕ್ಕಿದೆ. ಆದರೆ ಆದೆಷ್ಟೋ ಸುಳ್ಳು ಲೈಂಗಿಕ ಕಿರುಕುಳ ಆರೋಪಗಳು ಪುರುಷರ ಮೇಲೆ ಬಂದಿದೆ, ಈ ಬಗ್ಗೆ ಸಮಾಜದ ಯಾವುದೇ ವ್ಯಕ್ತಿ ಒಂದು ಧ್ವನಿಯನ್ನು ಎತ್ತಿಲ್ಲ.
ಈ ಎಲ್ಲಾ ಕಾರಣಗಳಿಂದಾಗಿ ಪುರುಷರ ಮೇಲಿನ ಸುಳ್ಳು ಆರೋಪಗಳು ಪುರುಷರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಿದೆ. ಪುರುಷರಿಗೆ ಆಗುತ್ತಿರುವ ಅನ್ಯಾಯಕ್ಕೆ ಮತ್ತು ಅವರಿಗೆ ಬೆಂಬಲವಾಗಿ ನಿಲ್ಲುವ ಸಲುವಾಗಿ #MenToo ಅನ್ನು ಬೆಂಗಳೂರು ಮೂಲದ NGO ಅಕ್ಟೋಬರ್ 2018 ರಲ್ಲಿ ಪ್ರಾರಂಭಿಸಿತು. ಪ್ರತಿಯೊಂದು ಹೆಣ್ಣಿನ ಜೀವನದಲ್ಲಿ ಒಬ್ಬ ಪುರುಷ ಪ್ರಮುಖ ಪಾತ್ರ ವಹಿಸುತ್ತಾನೆ. ಒಬ್ಬ ತಂದೆಯಾಗಿ, ಅಣ್ಣನಾಗಿ, ಸಂಗಾತಿಯಾಗಿ ಪ್ರತಿ ಹಂತದಲ್ಲೂ ಹೆಣ್ಣಿನ ರಕ್ಷ ಕವಚವಾಗಿ ನಿಲ್ಲುತ್ತಾನೆ. ಆದ್ದರಿಂದ ನಿಮ್ಮ ಬಾಳಿನಲ್ಲಿ ಬಂದ ಪುರುಷರಿಗೆ ಕೃತಜ್ಞತೆಯನ್ನು ಸೂಚಿಸುವ ವಿಶೇಷ ದಿನವೇ ವಿಶ್ವ ಪುರುಷರ ದಿನ. ಆದರೆ ಇಂದೂ ಪರುಷ ಸಮಾಜ… ಪುರುಷ ಸಮಾಜ ಎಂದು ಹೆಣ್ಣು ನೀಡುವ ಹೇಳಿಕೆಗೆ ಹೆಚ್ಚಿನ ಆದ್ಯತೆ ನೀಡಿ, ನಿಜಾಂಶಗಳನ್ನು ಪರಿಶೀಲಿಸದೆ ಪುರುಷ ಮೇಲೆ ನಡೆದ ಅನ್ಯಾಯಗಳು ಬೆಳಕಿಗೆ ಬರುತ್ತಿರುವುದು ವಿಪರ್ಯಾಸದ ಸಂಗತಿ.
2019ರಲ್ಲಿ ಕರಣ್ ಒಬೆರಾಯ್ ವಿರುದ್ಧ ಅವರ ಮಾಜಿ ಗೆಳತಿ ನೀಡಿದ ಲೈಂಗಿಕ ಕಿರುಕುಳದ ದೂರಿನ ಕಾರಣದಿಂದ 5 ಮೇ 2019 ರಂದು ಬಂಧಿಸಲಾಗಿತ್ತು. ಆದರೆ ದೀರ್ಘವಧಿಯ ವಿಚಾರಣೆಯ ನಂತರ ಕರಣ್‌ಗೆ ಬಾಂಬೆ ಹೈಕೋರ್ಟ್ ಜೂನ್ 7 ರಂದು ಜಾಮೀನು ನೀಡಿತು. ದೂರು ದಾಖಲಿಸಿದ ಮಹಿಳೆಯನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಇಂತಹ ಅದೆಷ್ಟೋ ಘಟನೆಗಳು ಸಮಾಜದಲ್ಲಿ ನಡೆಯುತ್ತಿದೆ. ಪುರುಷರನ್ನು ಗುರಿಯಾಗಿಸುವ ಅನ್ಯಾಯದ ಕಾನೂನುಗಳ ವಿರುದ್ಧ ಪ್ರತಿಭಟಿಸಲು ಟ್ವಿಟರ್ ಬಳಕೆದಾರರು #MenToo ಹ್ಯಾಶ್‌ಟ್ಯಾಗ್ ಅಡಿಯಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಬೆಂಗಳೂರಿನ ರ‍್ಯಾಪಿಡೋ ಚಾಲಕನಿಂದ ಲೈಂಗಿಕ ದೌರ್ಜನ್ಯ ಆಗಿದೆ ಎಂದು ಯುವತಿ ದೂರು ನೀಡಿದ್ದರು. ದೇಹದ ಅಂಗಾಂಗಗಳನ್ನು ಮುಟ್ಟಿ, ಅಸಭ್ಯವಾಗಿ ನಡೆದುಕೊಂಡ ಎಂದು ಅವರು ಆರೋಪಿಸಿದ್ದರು. ಆದರೆ ಪೊಲೀಸರ ತನಿಖೆಯಿಂದ ಬೈಕ್ ಚಾಲಕನ ಮೇಲೆ ಸುಳ್ಳು ಲೈಂಗಿಕ ದೌರ್ಜನ್ಯದ ಕೇಸ್ ದಾಖಲಿಸಿರುವುದು ತಿಳಿದುಬಂದಿದೆ. ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಯುವತಿ ಸುಳ್ಳು ದೂರು ನೀಡಿರುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ.
ಇದನ್ನು ಓದಿ: ಚಿತ್ರದುರ್ಗದಲ್ಲಿ ಪುರುಷರ ದಿನಾಚರಣೆ: ಪುರುಷರ ರಕ್ಷಣೆಗೆ ಪ್ರತ್ಯೇಕ ಕಾನೂನು ಜಾರಿಗೆ ಮನವಿ
ಆದ್ದರಿಂದ ಪುರುಷರ ಮೇಲಿನ ಶೋಷಣೆಗಳಿಗೆ ಬೆಂಬಲವಾಗಿ ನಿಲ್ಲುವ ಸಲುವಾಗಿ #MenToo ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯಗೊಳಿಸಲಾಯಿತು. ಕೇವಲ ಹೆಣ್ಣಿನ ಸಮಸ್ಯೆ, ಹಾಗೂ ಆಕೆ ನೀಡುವ ಹೇಳಿಕೆಗಳಿಗೆ ಮಾತ್ರ ನ್ಯಾಯ ಒದಗಿಸುವ ಬದಲಾಗಿ , ಪುರುಷರಿಗೆ ಈ ಸಮಾಜದಲ್ಲಿ ಸಮಾನವಾಗಿ ಬದುಕುವ ಹಕ್ಕಿದೆ ಎಂಬುದನ್ನು #MenToo ವಿವರಿಸುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: