Relationship Tips: ಪತಿ ಮನೆಗೆಲಸದಲ್ಲಿ ಸಹಾಯ ಮಾಡುತ್ತಿಲ್ಲ ಎಂಬ ಚಿಂತೆಯೇ, ಇಲ್ಲಿದೆ ತಜ್ಞರ ಸಲಹೆ
ಪತಿ ಯಾವುದೇ ಮನೆಗೆಲಸ ಮಾಡುವುದಿಲ್ಲ, ಊಟ ಮಾಡಿದ ನಂತರ ತಟ್ಟೆಯನ್ನು ಸಹ ತೆಗೆದುಕೊಳ್ಳುವುದಿಲ್ಲ ಎಂಬ ಸಮಸ್ಯೆಯನ್ನು ನೀವೂ ಎದುರಿಸುತ್ತಿದ್ದರೆ ತಜ್ಞರ ಸಲಹೆಗಳು ಇಲ್ಲಿವೆ.
ಪ್ರತಿಯೊಂದು ಹೆಣ್ಣು ಇಡೀ ಮನೆಯ ಜವಾಬ್ದಾರಿಯನ್ನು ತೆಗೆದುಕೊಂಡಿರುತ್ತಾಳೆ. ಮನೆ, ಅತ್ತೆ, ಮಾವ, ಗಂಡ ಹಾಗೂ ಮಕ್ಕಳ ಲಾಲನೆ ಪಾಲನೆ ಹೀಗೆ ಪ್ರತಿಯೊಂದು ಆಕೆಯ ಮೇಲಿರುತ್ತದೆ. ಇಂತಹ ಸಂದರ್ಭದಲ್ಲಿ ಕುಟುಂಬದ ಪ್ರತಿಯೊಬ್ಬರ ಸಹಕಾರ ಆಕೆಗೆ ಅಗತ್ಯವಿರುತ್ತದೆ. ತನ್ನವರಿಂದ ಯಾವುದೇ ಸಹಕಾರ ಬರದೇ ಇರುವಂತಹ ಸಂದರ್ಭದಲ್ಲಿ ಆಕೆ ಕುಗ್ಗುವುದು ಅಥವಾ ಮನೆಕೆಲಸದವಳು ಎಂಬ ಭಾವನೆ ಮೂಡುವುದು ಸಹಜವಾಗಿದೆ.
ಪತಿ ಯಾವುದೇ ಮನೆಗೆಲಸ ಮಾಡುವುದಿಲ್ಲ, ಊಟ ಮಾಡಿದ ನಂತರ ತಟ್ಟೆಯನ್ನು ಸಹ ತೆಗೆದುಕೊಳ್ಳುವುದಿಲ್ಲ ಎಂಬ ಸಮಸ್ಯೆಯನ್ನು ನೀವೂ ಎದುರಿಸುತ್ತಿದ್ದರೆ ತಜ್ಞರ ಸಲಹೆಗಳು ಇಲ್ಲಿವೆ. ನೀವು ಇಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ ನಿಮ್ಮ ಸಂಗಾತಿಗೆ ಮನವರಿಕೆ ಮಾಡುವಂತ ವಿಷಯಗಳ ಕುರಿತು ಆಪ್ತ ಸಮಾಲೋಚಕರಾದ ನಿಧಿ ಬೆಹ್ಲ್ ವ್ಯಾಟ್ಸ್ ರವರು ಕೆಲವೊಂದಿಷ್ಟು ಸಲಹೆ ಸೂಚನೆಗಳನ್ನು ಇ- ಟೈಮ್ಸ್ ನೊಂದಿಗೆ ಹಂಚಿಕೊಂಡಿದ್ದಾರೆ. ಅವು ಈ ಕೆಳಗಿನಂತಿವೆ:
ನಿಮ್ಮ ಸಂಬಂಧದಲ್ಲಿ ಗಂಡ ಮತ್ತು ಹೆಂಡತಿ ಸಮಾನರು ಎಂಬುದನ್ನು ಇಬ್ಬರೂ ಅರ್ಥಮಾಡಿಕೊಂಡಿರುವುದು ಅಗತ್ಯವಾಗಿದೆ. ನಿಮ್ಮ ಹೆಂಡತಿಯ ಮೇಲೆ ಪ್ರಾಬಲ್ಯ ಸಾಧಿಸುವ ಹಾಗೂ ಅವರ ಮೇಲೆ ಒತ್ತಡವನ್ನು ಹೇರದಿರಿ. ಪರಸ್ಪರ ಒಟ್ಟಿಗೆ ಬೇಗ ಎಳುವುದು, ಅಡಿಗೆ ತಯಾರಿಕೆಯಲ್ಲಿ ಸಹಾಯ ಮಾಡುವುದು ಇದು ನಿಮ್ಮಿಬ್ಬರ ನಡುವೆ ಪ್ರೀತಿ , ಗೌರವ ಹೆಚ್ಚಾಗಲು ಕಾರಣವಾಗುತ್ತದೆ.
ಇದನ್ನು ಓದಿ: ನಿಮ್ಮ ಪ್ರೀತಿಪಾತ್ರರಿಗೆ ಗರ್ಭಧಾರಣೆಯ ಸುದ್ದಿಯನ್ನು ತಿಳಿಸುವ ಮುನ್ನ ನೆನಪಿನಲ್ಲಿಡಬೇಕಾದ ಅಂಶಗಳು
ನಿಮ್ಮ ಕೆಲಸದ ನಂತರ ಮನೆಗೆ ತೆರಳುವಾಗ ನಿಮ್ಮ ಪತ್ನಿಗೆ ಇಷ್ಟವಾಗುವಂತಹ ನೆಚ್ಚಿನ ತಿಂಡಿಗಳನ್ನು ಖರೀದಿಸಿ ತೆಗೆದುಕೊಂಡು ಹೋಗುವುದು, ದಿನಸಿ/ತರಕಾರಿ ಇದೆಯೇ ಕೇಳುವುದು ಇಂತಹ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ ಎಂದು ಸಲಹೆ ನೀಡುತ್ತಾರೆ. ಪರಸ್ಪರ ಉತ್ತಮ ಸಂಬಂಧಕ್ಕಾಗಿ ಉತ್ತಮ ಗೆಳೆಯರಾಗಿರಿ. ಇದು ನಿಮ್ಮಿಬ್ಬರ ನಡುವಿನ ಒತ್ತಡವನ್ನು ನಿವಾರಿಸಲು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಉತ್ತಮ ಬಂಧವನ್ನು ಅಭಿವೃದ್ಧಿಪಡಿಸಲು ಮತ್ತು ನಿಮ್ಮ ಸಂಬಂಧವನ್ನು ದೀರ್ಘಕಾಲದ ವರೆಗೆ ಉಳಿಯುವಂತೆ ಮಾಡುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: