International Men’s Day 2022: ನ. 19 ವಿಶ್ವ ಪುರುಷರ ದಿನ; ಇತಿಹಾಸ, ಮಹತ್ವ ಮತ್ತು ಥೀಮ್ ಇಲ್ಲಿದೆ
ವಿಶ್ವ ಪುರುಷರ ದಿನ: ಈ ದಿನವು ನಿಮ್ಮ ಬದುಕಿನಲ್ಲಿ ಅಪ್ಪನಾಗಿ, ಸಹೋದರನಾಗಿ, ಸಂಗಾಂತಿಯಾಗಿ, ಮಗನಾಗಿ ವಿವಿಧ ರೀತಿಯಲ್ಲಿ ವಿಶೇಷ ಕಾಳಜಿ ವಹಿಸುವ ನಿಮ್ಮವರಿಗೆ ಕೃತಜ್ಞತೆಯನ್ನು ತೋರುವ ವಿಶೇಷ ದಿನವಾಗಿದೆ.
ಪ್ರತಿ ವರ್ಷ ನವೆಂಬರ್ 19 ರಂದು ಅಂತರರಾಷ್ಟ್ರೀಯ ಪುರುಷರ ದಿನವನ್ನು (International Men’s Day 2022) ವಿಶ್ವಾದ್ಯಂತ ಆಚರಿಸಲಾಗುತ್ತದೆ. ವಿಶೇಷವಾಗಿ ಪುರುಷರ ಜೀವನ, ಸಾಧನೆಗಳು ಮತ್ತು ಕುಟುಂಬದ ಜವಾಬ್ದಾರಿ ಹಾಗೂ ಪುರುಷರ ಸಮಸ್ಯೆಗಳ ಬಗ್ಗೆ ಮೂಲಭೂತ ವಿಚಾರಗಳ ಬಗ್ಗೆ ಅರಿವು ಮೂಡಿಸುವ ದೃಷ್ಟಿಯಿಂದ ಈ ದಿನವನ್ನು ಆಚರಿಸಲಾಗುತ್ತದೆ. ನಿಮ್ಮ ಬದುಕಿನಲ್ಲಿ ಅಪ್ಪನಾಗಿ, ಸಹೋದರನಾಗಿ, ಸಂಗಾಂತಿಯಾಗಿ, ಮಗನಾಗಿ ವಿವಿಧ ರೀತಿಯಲ್ಲಿ ವಿಶೇಷ ಕಾಳಜಿ ವಹಿಸುವ ನಿಮ್ಮವರಿಗೆ ಕೃತಜ್ಞತೆಯನ್ನು ತೋರುವ ವಿಶೇಷ ದಿನವಾಗಿದೆ.
ವಿಶ್ವ ಪುರುಷರ ದಿನದ ಇತಿಹಾಸ:
ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿನ ವೆಸ್ಟ್ ಇಂಡೀಸ್ ವಿಶ್ವವಿದ್ಯಾಲಯದ ಇತಿಹಾಸದ ಪ್ರಾಧ್ಯಾಪಕ ಡಾ ಜೆರೋಮ್ ಟೀಲುಕ್‌ಸಿಂಗ್ ಅವರು ತಮ್ಮ ತಂದೆಯ ಜನ್ಮ ವಾರ್ಷಿಕೋತ್ಸವದ ನೆನಪಿಗಾಗಿ 1999 ರಲ್ಲಿ ಅಂತರರಾಷ್ಟ್ರೀಯ ಪುರುಷರ ದಿನವನ್ನು ಮೊದಲ ಬಾರಿಗೆ ಆಚರಿಸಿದರು. ಈ ದಿನದಂದು ಪುರುಷರು ಮತ್ತು ಹುಡುಗರಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಅರಿವು ಮೂಡಿಸಲಾಗುತ್ತದೆ.
ವಿಶ್ವ ಪುರುಷರ ದಿನದ ಮಹತ್ವ ಮತ್ತು ಆಚರಣೆ:
ಈ ದಿನವು ಪುರುಷರ ಯೋಗಕ್ಷೇಮ ಮತ್ತು ಮಾನಸಿಕ, ದೈಹಿಕ ಆರೋಗ್ಯ, ಲೈಂಗಿಕ ಸಮಸ್ಯೆ ಬಗ್ಗೆ ಅರಿವು ಮೂಡಿಸುವುದು ಮತ್ತು ಲಿಂಗ ಅಸಮಾನತೆಯನ್ನು ಹೋಗಲಾಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಒಂದು ಕುಟುಂಬದ ಮುಖ್ಯಸ್ಥನಾಗಿ ಆತನಿಗೆ ಕುಟುಂಬದ ಮೇಲಿರುವ ಪ್ರೀತಿ, ಜವಾಬ್ದಾರಿಗಳು, ಎದುರಿಸುವ ಸಮಸ್ಯೆಗಳು ಇವೆಲ್ಲವುಗಳ ಬಗ್ಗೆ ಪ್ರತಿಯೊಬ್ಬರಿಗೂ ತಿಳುವಳಿಕೆ ನೀಡುವ ವಿಶೇಷ ದಿನವಾಗಿದೆ.
ಇದನ್ನು ಓದಿ: ಕೃತಜ್ಞತಾ ಭಾವ ಸಂಗಾತಿ ಹಾಗೂ ನಿಮ್ಮ ನಡುವಿನ ಸಂಬಂಧವನ್ನು ಸುಧಾರಿಸುತ್ತದೆ
ವಿಶ್ವ ಪುರುಷರ ದಿನದ ಈ ವರ್ಷದ ಉದ್ದೇಶ:
ಅಂತರಾಷ್ಟ್ರೀಯ ಪುರುಷರ ದಿನದ ಈ ವರ್ಷದ ಮಹತ್ವ ‘ಪುರುಷರಿಗೆ’ ಸಹಾಯ ಮಾಡುವುದು’. ‘ಪುರುಷರಿಗೆ’ ಸಂಬಂಧಿಸಿದ ಸಮಸ್ಯೆಗಳನ್ನು ಮಾತನಾಡುವ, ಸಮಸ್ಯೆಗಳನ್ನು ಚರ್ಚಿಸುವ ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಆಯೋಜಿಸುವ ಮೂಲಕ ಈ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: