International Museum Day 2024: ಗತಕಾಲದ ವಸ್ತುಗಳ ಪ್ರದರ್ಶನಗಳ ತಾಣವೇ ‘ಈ ವಸ್ತು ಸಂಗ್ರಹಾಲಯ’

| Updated By: ಅಕ್ಷಯ್​ ಪಲ್ಲಮಜಲು​​

Updated on: May 17, 2024 | 5:50 PM

ಬೇಸಿಗೆಯ ರಜೆಯ ಸಮಯದಲ್ಲಿ ಬೇರೆ ಊರಿಗೆ ಪ್ರವಾಸ ಕೈಗೊಂಡರೆ ಅಲ್ಲೇನಾದರೂ ವಸ್ತು ಸಂಗ್ರಹಾಲಯ ಇದ್ದರೆ ಒಮ್ಮೆ ಹೋಗಿ ಬರೋಣಎಂದು ಹೊರಟೆ ಬಿಡುತ್ತೇವೆ. ನಮ್ಮ ಪರಂಪರೆ ಹಾಗೂ ಗತಕಾಲದ ವಸ್ತುಗಳನ್ನು ಜೋಪಾನವಾಗಿ ಕಾಪಿಟ್ಟುಕೊಳ್ಳುವ ತಾಣವೇ ಈ ಮ್ಯೂಸಿಯಂ. ಇದರ ಮಹತ್ವವನ್ನು ಸಾರುವುದಕ್ಕಾಗಿ ಪ್ರತಿ ವರ್ಷ ಮೇ 18ರಂದು ಅಂತರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನವನ್ನು ಆಚರಿಸಲಾಗುತ್ತದೆ.

International Museum Day 2024: ಗತಕಾಲದ ವಸ್ತುಗಳ ಪ್ರದರ್ಶನಗಳ ತಾಣವೇ ಈ ವಸ್ತು ಸಂಗ್ರಹಾಲಯ
Follow us on

ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡುವುದೆಂದರೆ ಯಾರಿಗೆ ತಾನೇ ಇಷ್ಟ ಹೇಳಿ. ನಮ್ಮ ಪೂರ್ವಜರು ಬಳಕೆ ಮಾಡುತ್ತಿದ್ದ ವಸ್ತುಗಳು, ವಿಭಿನ್ನ ವಸ್ತುಗಳು ಹಾಗೂ ಗತಕಾಲದ ಉಲ್ಲೇಖಗಳು, ಪುರಾತನ ಕಾಲದ ಅಪರೂಪದ ವಸ್ತುಗಳನ್ನು ನಾವಿಲ್ಲಿ ನೋಡುತ್ತೇವೆ. ಆದರೆ ಇಂದಿನ ಬದಲಾಗುತ್ತಿರುವ ಕಾಲ ಘಟ್ಟದಲ್ಲಿ ಆಧುನಿಕತೆಯ ಅಡಂಬರಕ್ಕೆ ಹಲವಾರು ಅಮೂಲ್ಯ ಪ್ರಾಚೀನ ವಸ್ತುಗಳು ಕಣ್ಮರೆಯಾಗುತ್ತಿದೆ. ಈ ವಸ್ತು ಸಂಗ್ರಹಾಲಯಗಳು ನಮ್ಮ ಮುಂದಿನ ಪೀಳಿಗೆಯವರಿಗೂ ಪುರಾತನ ಕಾಲದ ವಸ್ತುಗಳನ್ನು ಪರಿಚಯಿಸುವ ಕೆಲಸವನ್ನು ಮಾಡುತ್ತದೆ. ಈಗಾಗಲೇ ಪ್ರಪಂಚದಲ್ಲಿ ಬೇರೆ ಬೇರೆ ರೀತಿಯ ವಸ್ತು ಸಂಗ್ರಹಾಲಯಗಳಿವೆ. ಈ ವಸ್ತು ಸಂಗ್ರಹಾಲಯವು ಆಯಾಯ ದೇಶದ ಸಂಸ್ಕೃತಿ, ಪರಂಪರೆಗೆ ಸಂಬಂಧಪಟ್ಟ ವಸ್ತುಗಳನ್ನು ಕಾಣಬಹುದು.

ಅಂತರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನದ ಇತಿಹಾಸ

ಅಂತರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನದ ವಾರ್ಷಿಕ ಆಚರಣೆಯನ್ನು 1977 ರಲ್ಲಿ ಇಂಟರ್ನ್ಯಾಷನಲ್ ಕೌನ್ಸಿಲ್ ಆಫ್ ಮ್ಯೂಸಿಯಂ (ICOM) ಘೋಷಿಸಿತು. ಅಂದು ರಷ್ಯಾದ ಮಾಸ್ಕೋದಲ್ಲಿ ನಡೆದ ICOM ಜನರಲ್ ಅಸೆಂಬ್ಲಿಯಲ್ಲಿ ನಿರ್ಣಯವನ್ನು ಅಂಗೀಕರಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಮೇ 18 ರಂದು ಅಂತರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಇದನ್ನೂ ಓದಿ: ಅಡುಗೆ ಮನೆಯಲ್ಲಿ ನೊಣಗಳ ಕಾಟಕ್ಕೆ ಇದುವೇ ಪರಿಹಾರ

ಅಂತರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನ ಮಹತ್ವ

ಅಂತರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನದ ಆಚರಣೆಯ ಮುಖ್ಯ ಉದ್ದೇಶವೇ ಸಮುದಾಯದಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಹಕಾರ ಹಾಗೂ ಸಾಂಸ್ಕೃತಿಕ ವಿನಿಮಯದಲ್ಲಿ ವಸ್ತುಸಂಗ್ರಹಾಲಯಗಳು ವಹಿಸುವ ಪ್ರಮುಖ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ. ಪ್ರತಿವರ್ಷ ವಿಶ್ವದಾದ್ಯಂತದ ವಿವಿಧ ವಸ್ತುಸಂಗ್ರಹಾಲಯಗಳನ್ನು ಅಂತರ್ರಾಷ್ಟ್ರೀಯ ವಸ್ತುಸಂಗ್ರಹಾಲಯದ ದಿನಾಚರಣೆಯಲ್ಲಿ ಭಾಗವಹಿಸಲು ಆಹ್ವಾನಿಸಲಾಗುತ್ತದೆ. ಈ ದಿನದಂದು ವಸ್ತು ಪ್ರದರ್ಶನ ಸೇರಿದಂತೆ ಇನ್ನಿತ್ತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಮತ್ತಷ್ಟು ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ