AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Online Fraud: ನಕಲಿ ಕೆಲಸದ ಆಫರ್ ಅನ್ನು ಗುರುತಿಸುವುದು ಹೇಗೆ?

ಮನೆಯಿಂದಲೇ ಸಾವಿರಾರು ರೂ. ಹಣವನ್ನು ದುಡಿಯಬಹುದು ಎಂಬ ಆಸೆ ತೋರಿಸಿದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ? ನೀವು ಕೂಡ ಆನ್​ಲೈನ್​ನಲ್ಲಿ ಕೆಲಸದ ಆಫರ್ ಪಡೆದಿದ್ದರೆ ಅದು ನಕಲಿಯೋ ಅಥವಾ ಅಸಲಿಯೋ ಎಂದು ಗುರುತಿಸುವುದು ಹೇಗೆ?

Online Fraud: ನಕಲಿ ಕೆಲಸದ ಆಫರ್ ಅನ್ನು ಗುರುತಿಸುವುದು ಹೇಗೆ?
ಸಾಂದರ್ಭಿಕ ಚಿತ್ರ
ಸುಷ್ಮಾ ಚಕ್ರೆ
|

Updated on: May 18, 2024 | 4:50 PM

Share

ನಕಲಿ ವರ್ಕ್ ಫ್ರಂ ಹೋಂ (Work From Home) ಹಗರಣವು ಸಾಮಾನ್ಯವಾಗಿ ಪ್ರಸಿದ್ಧ ಕಂಪನಿಗಳ ಮಾನವ ಸಂಪನ್ಮೂಲ (ಎಚ್‌ಆರ್) ಪ್ರತಿನಿಧಿಗಳಂತೆ ತೋರುತ್ತಿರುವ ಸ್ಕ್ಯಾಮರ್‌ಗಳ ಸಂದೇಶದೊಂದಿಗೆ ಪ್ರಾರಂಭವಾಗುತ್ತದೆ. ಅವರು ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ಯೂಟ್ಯೂಬ್ (YouTube) ವೀಡಿಯೊಗಳನ್ನು ಲೈಕ್ ಮಾಡಲು ಮತ್ತು ಫಾಲೋ ಮಾಡಿದರೆ ದುಡ್ಡು ಕೊಡುವುದಾಗಿ ನಿಮಗೆ ಮೆಸೇಜ್ ಕಳುಹಿಸಬಹುದು ಅಥವಾ ಫೋನ್ ಮಾಡಬಹುದು. ಮೊದಲು ನಿಮ್ಮ ವಿಶ್ವಾಸವನ್ನು ಗಳಿಸುವ ಸಲುವಾಗಿ ನಿಮಗೆ ಹಣವನ್ನು ಕಳುಹಿಸುತ್ತಾರೆ.

ಸ್ಕ್ಯಾಮರ್‌ಗಳು ತಮ್ಮ ಖಾತೆಗಳಿಗೆ ದಿನವೂ ಆಯಾ ಅಕೌಂಟ್​ಗೆ ಪಾವತಿಗಳನ್ನು ಮಾಡುವುದರಿಂದ ಜನರು ಇದು ಕಾನೂನುಬದ್ಧ ವ್ಯವಹಾರವೆಂದು ಸುಲಭವಾಗಿ ನಂಬುತ್ತಾರೆ. ಆದರೆ, ಇದು ಕೇವಲ ನಾಟಕವಾಗಿರುತ್ತದೆ. ಈ ಮೂಲಕ ಅವರು ನಿಮಗೆ ಗಾಳ ಹಾಕುತ್ತಾರೆ. ಸ್ಕ್ಯಾಮರ್‌ಗಳು ಬಲಿಪಶುಗಳನ್ನು ಟೆಲಿಗ್ರಾಮ್ ಗುಂಪಿಗೆ ಸೇರಿಸಿದಾಗ ಹಗರಣವು ಬೇರೆ ತಿರುವನ್ನು ತೆಗೆದುಕೊಳ್ಳುತ್ತದೆ. ಅಲ್ಲಿ ಅವರು ನಕಲಿ, ಅತ್ಯಾಧುನಿಕವಾಗಿ ಕಾಣುವ ಕ್ರಿಪ್ಟೋ ವ್ಯಾಪಾರ ವೇದಿಕೆಗಳನ್ನು ರಚಿಸುತ್ತಾರೆ. ಅವರು ಸಂತ್ರಸ್ತರಿಗೆ ಹಣವನ್ನು ಕಳುಹಿಸಲು ಮತ್ತು ಅವರ ಹೂಡಿಕೆಯನ್ನು ಹೆಚ್ಚು ಮಾಡಲು ಕೆಲವು ಕಾರ್ಯಗಳನ್ನು ಪೂರ್ಣಗೊಳಿಸಲು ಕೇಳುತ್ತಾರೆ.

ಇದನ್ನೂ ಓದಿ: ಆಟೋ ಚಾಲಕಿಯರ ಬ್ಯಾಂಕ್ ಸಾಲ ತೀರಿಸಿದ ನಟ ರಾಘವ್ ಲಾರೆನ್ಸ್

ಅದನ್ನು ನಂಬುವ ಜನರಿಗೆ ತಮ್ಮ ಹಣ ಸುರಕ್ಷಿತ ಎಂಬ ಅಭಿಪ್ರಾಯವನ್ನು ನೀಡಲು ವಂಚಕರು ನಕಲಿ ವರ್ಚುವಲ್ ವ್ಯಾಲೆಟ್‌ಗಳನ್ನು ರಚಿಸುತ್ತಾರೆ. ಇದನ್ನು ನಂಬಿ ಸಂತ್ರಸ್ತರು ಪ್ರತಿನಿತ್ಯ ಹಣವನ್ನು ಕಳುಹಿಸುತ್ತಾರೆ ಮತ್ತು ಕೆಲವೊಮ್ಮೆ ತಮ್ಮ ಇಡೀ ಜೀವನದ ಉಳಿತಾಯವನ್ನು ಕಳೆದುಕೊಳ್ಳುತ್ತಾರೆ.

ಡೇಟಾ-ಎಂಟ್ರಿ ಹಗರಣದಲ್ಲಿ ಜನರಿಗೆ ಹೆಚ್ಚಿನ ಪಾವತಿಯ ಡೇಟಾ ಎಂಟ್ರಿ ಉದ್ಯೋಗಗಳ ಭರವಸೆ ನೀಡಲಾಗುತ್ತದೆ. ಆದರೆ ನೋಂದಣಿ ಶುಲ್ಕವನ್ನು ಪಾವತಿಸಿದ ನಂತರ ಅಥವಾ ಸಾಫ್ಟ್‌ವೇರ್‌ನಲ್ಲಿ ಹೂಡಿಕೆ ಮಾಡಿದ ನಂತರ, ಆ ಉದ್ಯೋಗಗಳು ಅಸ್ತಿತ್ವದಲ್ಲಿಲ್ಲ ಎಂದು ಗೊತ್ತಾಗುತ್ತದೆ. ಇನ್ನು ಕೆಲವೊಮ್ಮೆ ಸಂತ್ರಸ್ತರಿಗೆ ಅವರ ಕೆಲಸಕ್ಕೆ ಪಾವತಿಸಲಾಗುವುದಿಲ್ಲ ಅಥವಾ ನಕಲಿ ಚೆಕ್‌ಗಳನ್ನು ನೀಡಲಾಗುತ್ತದೆ. ಅವರು ತಿಳಿಯದೆ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುತ್ತಾರೆ, ಚೆಕ್‌ಗಳು ಬೌನ್ಸ್ ಆಗುವಾಗ ಮಾತ್ರ ಹೊಣೆಗಾರರಾಗಿರಬೇಕಾಗುತ್ತದೆ.

ಇದನ್ನೂ ಓದಿ: ವರ್ಕ್ ಫ್ರಮ್ ಹೋಂ ಆಸೆಯಿಂದ 54 ಲಕ್ಷ ರೂ. ಕಳೆದುಕೊಂಡ ಮಹಿಳೆ

ವಂಚಕರು ಉದ್ಯೋಗದ ಪೋರ್ಟಲ್‌ಗಳು ಅಥವಾ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಮೋಸದ ಉದ್ಯೋಗ ಪಟ್ಟಿಗಳನ್ನು ಪೋಸ್ಟ್ ಮಾಡುತ್ತಾರೆ. ವರ್ಕ್ ಫ್ರಮ್ ಹೋಂ ಅವಕಾಶಗಳನ್ನು ಹುಡುಕುವ ಜನರನ್ನು ಗುರಿಯಾಗಿಸುತ್ತಾರೆ. ನಂತರ ಅವರು ವೈಯಕ್ತಿಕ ಮಾಹಿತಿ, ಸಂಸ್ಕರಣಾ ಶುಲ್ಕ ಅಥವಾ ತರಬೇತಿಗಾಗಿ ಪಾವತಿ ಮಾಡಬೇಕೆಂದು ಹೇಳುತ್ತಾರೆ. ಇಂತಹ ವಂಚಕರ ಬಗ್ಗೆ ಎಚ್ಚರಿಕೆಯಿಂದ ಇರುವುದು ಉತ್ತಮ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ದೊಡ್ಡಬಳ್ಳಾಪುರ ಬೆನ್ನಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಲಘು ಭೂಕಂಪನ
ದೊಡ್ಡಬಳ್ಳಾಪುರ ಬೆನ್ನಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಲಘು ಭೂಕಂಪನ
ಸುದೀಪ್ ಮಾತಿಗೆ ಕಣ್ಣೀರಿಟ್ಟ ತಾಂಡವ್, ಕುಣಿದಾಡಿದ ಸೌಂದರ್ಯಾ: ವಿಡಿಯೋ
ಸುದೀಪ್ ಮಾತಿಗೆ ಕಣ್ಣೀರಿಟ್ಟ ತಾಂಡವ್, ಕುಣಿದಾಡಿದ ಸೌಂದರ್ಯಾ: ವಿಡಿಯೋ
ದೊಡ್ಡಬಳ್ಳಾಪುರ ತಾಲೂಕಿನ ಹಲವೆಡೆ ಮತ್ತೆ ಭೂಕಂಪನ; ಸ್ಥಳೀಯರಲ್ಲಿ ಆತಂಕ
ದೊಡ್ಡಬಳ್ಳಾಪುರ ತಾಲೂಕಿನ ಹಲವೆಡೆ ಮತ್ತೆ ಭೂಕಂಪನ; ಸ್ಥಳೀಯರಲ್ಲಿ ಆತಂಕ
ಭೀಕರ ಬರದಿಂದ ಬತ್ತಿದ ಭತ್ತದ ನಾಡು: ಇಡೀ ರಾಜ್ಯಕ್ಕೆ ಅಕ್ಕಿ ದರ ಏರಿಕೆಯ ಬಿಸಿ
ಭೀಕರ ಬರದಿಂದ ಬತ್ತಿದ ಭತ್ತದ ನಾಡು: ಇಡೀ ರಾಜ್ಯಕ್ಕೆ ಅಕ್ಕಿ ದರ ಏರಿಕೆಯ ಬಿಸಿ
ರೆಸ್ಯೂಮ್​​ನಲ್ಲಿ ಕನ್ನಡ ಇದ್ರೆ ರಿಜೆಕ್ಟ್​: ಅಳಲು ತೋಡಿಕೊಂಡ ಯುವತಿ
ರೆಸ್ಯೂಮ್​​ನಲ್ಲಿ ಕನ್ನಡ ಇದ್ರೆ ರಿಜೆಕ್ಟ್​: ಅಳಲು ತೋಡಿಕೊಂಡ ಯುವತಿ
ಹಿಂಗಾರು ಮಳೆ ಅಬ್ಬರಕ್ಕೆ ಹಚ್ಚ ಹಸಿರಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟ
ಹಿಂಗಾರು ಮಳೆ ಅಬ್ಬರಕ್ಕೆ ಹಚ್ಚ ಹಸಿರಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟ
2 ವರ್ಷ 10 ತಿಂಗಳ ಕಂದನಿಂದ ತಬಲಾ ವಾದನ
2 ವರ್ಷ 10 ತಿಂಗಳ ಕಂದನಿಂದ ತಬಲಾ ವಾದನ
40 ದಿನ ನಂತರ ಪತ್ತೆಯಾದ ಕೆಆರ್‌ಐಡಿಎಲ್ ಎಇಇ ಪರ್ವೀಜ್​ಗೆ ಈಗ ಪೊಲೀಸರ ಗ್ರಿಲ್
40 ದಿನ ನಂತರ ಪತ್ತೆಯಾದ ಕೆಆರ್‌ಐಡಿಎಲ್ ಎಇಇ ಪರ್ವೀಜ್​ಗೆ ಈಗ ಪೊಲೀಸರ ಗ್ರಿಲ್
ಡೈಮಂಡ್ ಟಾಸ್ಕ್​ ವಿಷಯದಲ್ಲಿ ಪಂಚಾಯ್ತಿ ಮಾಡಲು ಬಂದ ಸುದೀಪ್
ಡೈಮಂಡ್ ಟಾಸ್ಕ್​ ವಿಷಯದಲ್ಲಿ ಪಂಚಾಯ್ತಿ ಮಾಡಲು ಬಂದ ಸುದೀಪ್
ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್