World Bee Day 2024: ಮಾನವ ಕುಲದ ಉಳಿವಿಗಾಗಿ, ಜೇನು ನೊಣಗಳನ್ನು ರಕ್ಷಿಸೋಣ!

ಜೇನಿನ ಸವಿಯನ್ನು ಸವಿದವನೇ ಬಲ್ಲ, ಅದರ ರುಚಿ ಹಾಗೂ ಸಿಹಿ ಎಷ್ಟಿದೆಂದು. ಜೇನು ಎಷ್ಟು ಸಿಹಿಯೋ ಜೇನುನೊಣಗಳ ಕಡಿತವು ಅಷ್ಟೇ ಅಪಾಯಕಾರಿ. ಆದರೆ ಈ ಜೇನುನೊಣಗಳ ಪ್ರಾಮುಖ್ಯತೆ, ಸುಸ್ಥಿರ ಅಭಿವೃದ್ಧಿಗೆ ಜೇನುನೊಣಗಳ ಕೊಡುಗೆಗಳು ಈ ಪರಿಸರ ಸ್ನೇಹಿ ಜೀವಿಗಳು ಎದುರಿಸುತ್ತಿರುವ ಜಾಗೃತಿ ಮೂಡಿಸಲು ಮೇ 20ರಂದು ವಿಶ್ವ ಜೇನುನೊಣ ದಿನವನ್ನಾಗಿ ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನವು ಆರಂಭವಾದದ್ದು ಹೇಗೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

World Bee Day 2024: ಮಾನವ ಕುಲದ ಉಳಿವಿಗಾಗಿ, ಜೇನು ನೊಣಗಳನ್ನು ರಕ್ಷಿಸೋಣ!
World Bee Day 2024
Follow us
ಸಾಯಿನಂದಾ
| Updated By: ಅಕ್ಷತಾ ವರ್ಕಾಡಿ

Updated on: May 19, 2024 | 4:49 PM

ಜೇನು ನೊಣಗಳು ನೋಡಲು ಚಿಕ್ಕದಾಗಿರಬಹುದು. ಮನುಷ್ಯನ ಜೀವನದಲ್ಲಿ ಜೇನುಗಳ ಪಾತ್ರವು ಅಗಾಧವಾದದ್ದು. ಜೇನುನೊಣಗಳು ಜೇನನ್ನು ಮಾತ್ರ ಸವಿಯಲು ನೀಡುವುದಿಲ್ಲ. ಬದಲಾಗಿ ನಾವು ಸೇವಿಸುವ ಹಣ್ಣುಗಳು, ತರಕಾರಿಗಳು ಪರಾಗ ಸ್ಪರ್ಶದಿಂದ ಮಾತ್ರ ಸಾಧ್ಯವಾಗಿದೆ. ಆದರೆ ಇತ್ತೀಚೆಗಿನ ಕೆಲವು ವರ್ಷಗಳಲ್ಲಿ ಜೇನುನೊಣಗಳ ಸಂತತಿಯು ನಾಶವಾಗುತ್ತಿದೆ.

ವಿಶ್ವ ಜೇನುನೊಣ ದಿನದ ಇತಿಹಾಸ:

ಜೇನುಸಾಕಣೆಯ ಪ್ರವರ್ತಕ ಆಂಟನ್ ಜಾನ್ಸಾ 1734 ರಲ್ಲಿ ಸ್ಲೊವೇನಿಯಾದಲ್ಲಿ ಜನಿಸಿದರು. ಅವರ ಜನ್ಮದಿನದ ನೆನಪಿಗಾಗಿ ಪ್ರತಿ ವರ್ಷವು ವಿಶ್ವ ಜೇನುನೊಣ ದಿನವೆಂದು ಆಚರಿಸಲಾಗುತ್ತದೆ. ಆದರೆ ವಿಶ್ವ ಜೇನುನೊಣ ದಿನದ ಉದ್ದೇಶ, ಪರಿಸರ ವ್ಯವಸ್ಥೆಯಲ್ಲಿ ಜೇನುನೊಣಗಳ ಪಾತ್ರವನ್ನು ಅಂಗೀಕರಿಸುವುದು. ಹೀಗಾಗಿ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು 2017 ರ ಡಿಸೆಂಬರ್‌ನಲ್ಲಿ ವಿಶ್ವ ಜೇನುನೊಣ ದಿನಾಚರಣೆಯ ಪ್ರಸ್ತಾಪವನ್ನು ಅಂಗೀಕರಿಸಿದವು. 2018 ರ ಮೇ 20 ರಂದು ವಿಶ್ವ ಜೇನುನೊಣ ದಿನವನ್ನು ಮೊದಲ ಬಾರಿಗೆ ಆಚರಿಸಲಾಯಿತು.

ಇದನ್ನೂ ಓದಿ: ಅಡುಗೆ ಮನೆಯಲ್ಲಿ ನೊಣಗಳ ಕಾಟಕ್ಕೆ ಇದುವೇ ಪರಿಹಾರ

ವಿಶ್ವ ಜೇನುನೊಣ ದಿನದ ಮಹತ್ವ ಹಾಗೂ ಆಚರಣೆ ಹೇಗೆ?

ಪರಿಸರ ವ್ಯವಸ್ಥೆಯಲ್ಲಿ ಜೇನು ನೊಣಗಳು ಮತ್ತು ಇತರೆ ಪರಾಗಸ್ಪರ್ಶಗಳ ಪ್ರಾಮುಖ್ಯತೆಯನ್ನು ಜನರಿಗೆ ತಿಳಿಸುವುದು. ಈ ಪರಿಸರದ ಸಮತೋಲನವನ್ನು ಕಾಪಾಡುವಲ್ಲಿ ಈ ಜೇನು ನೊಣಗಳ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ. ಈ ದಿನದಂದು ಸಮಾವೇಶಗಳು, ಸೆಮಿನಾರ್​ಗಳು, ಜೇನು ಉತ್ಸವಗಳು, ಪ್ರದರ್ಶನಗಳು ಹೀಗೆ ಮುಂತಾದ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ.

ಮತ್ತಷ್ಟು ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ