ಆಫ್ರಿಕನ್ ಜೇನುನೊಣಗಳಿಂದ 20,000 ಬಾರಿ ಕಚ್ಚಿಸಿಕೊಂಡರೂ ಅಮೇರಿಕನ್ ಯುವಕನೊಬ್ಬ ಬದುಕುಳಿದಿದ್ದಾನೆ!

ಬೆಲ್ಲಾಮಿ ಈಗ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಮೇಲಿದ್ದಾನೆ ಎಂದು ಅವನ ತಾಯಿ ಶಾವ್ನಾ ಕಾರ್ಟರ್ ಹೇಳಿದ್ದಾರೆ. ಅವನ ವೈದ್ಯಕೀಯ ವೆಚ್ಚವನ್ನು ಭರಿಸಲು ಶಾವ್ನಾ ಅನ್ಲೈನ್ ನಲ್ಲಿ ಒಂದು ಸಹಾಯ ನಿಧಿ ಪೇಜ್ ಆರಂಭಿಸಿದ್ದಾರೆ.

ಆಫ್ರಿಕನ್ ಜೇನುನೊಣಗಳಿಂದ 20,000 ಬಾರಿ ಕಚ್ಚಿಸಿಕೊಂಡರೂ ಅಮೇರಿಕನ್ ಯುವಕನೊಬ್ಬ ಬದುಕುಳಿದಿದ್ದಾನೆ!
ತಾಯಿಯೊಂದಿಗೆ ಆಸ್ಟಿನ್ ಬೆಲ್ಲಾಮಿ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Sep 02, 2022 | 10:18 AM

ಜೇನುನೊಣಗಳಿಂದ (bees) ಏಕಕಾಲಕ್ಕೆ ಸಾವಿರಾರು ಬಾರಿ ಕಚ್ಚಿಸಿಕೊಂಡ ಅಮೆರಿಕದ ಒಹಿಯೋ ರಾಜ್ಯದ ಯುವಕನೊಬ್ಬ ಲೈಫ್ ಸಪೋರ್ಟ್ ಮೇಲಿದ್ದು ಜೀವನ್ಮರಣದ ಜೊತೆ ಹೋರಾಡುತ್ತಿದ್ದಾನೆ ಎಂದು ಅವನ ಕುಟುಂಬ ಮತ್ತು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. 20-ವರ್ಷ ವಯಸ್ಸಿನ ಆಸ್ಟಿನ್ ಬೆಲ್ಲಾಮಿಗೆ (Austin Bellamy) ಮಂಗಳವಾರ ರಾತ್ರಿ ವೈದ್ಯಕೀಯ ಕೋಮಾಗೆ (medically induced coma) ಜಾರಿಸಿ ಚಿಕಿತ್ಸೆ ಮುಂದುವರಿಸಲಾಗಿತ್ತು. ತನ್ನ ಗೆಳೆಯನೊಬ್ಬನ ಮನೆಯಲ್ಲಿ ಮರ ಕತ್ತರಿಸುವಾಗ ಬೆಲ್ಲಾಮಿ ಆಕಸ್ಮಿಕವಾಗಿ ಜೇನುಗೂಡಿಗೆ ಕೊಡಲಿ ಹಾಕಿಬಿಟ್ಟಿದ್ದ, ಎಂದು ಫಾಕ್ಸ್ 19 ಹೆಸರಿನ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಬೆಲ್ಲಾಮಿ ಈಗ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಮೇಲಿದ್ದಾನೆ ಎಂದು ಅವನ ತಾಯಿ ಶಾವ್ನಾ ಕಾರ್ಟರ್ ಹೇಳಿದ್ದಾರೆ. ಅವನ ವೈದ್ಯಕೀಯ ವೆಚ್ಚವನ್ನು ಭರಿಸಲು ಶಾವ್ನಾ ಅನ್ಲೈನ್ ನಲ್ಲಿ ಒಂದು ಸಹಾಯ ನಿಧಿ ಪೇಜ್ ಆರಂಭಿಸಿದ್ದಾರೆ.

ಕಳೆದ ಶುಕ್ರವಾರ ಬೆಲ್ಲಾಮಿ ಒಬ್ಬ ಗೆಳೆಯನ ಮನೆಯಲ್ಲಿ ನಿಂಬೆಹಣ್ಣು ಗಿಡದ ರೆಂಬೆಗಳನ್ನು ಕತ್ತರಿಸುವಾಗ ಆಕಸ್ಮಿಕವಾಗಿ ಮಾರಣಾಂತಿಕ ಆಫ್ರಿಕನ್ ಜೇನುನೊಣಗಳ ಗೂಡನ್ನು ಕತ್ತರಿಸಿಬಿಟ್ಟಿದ್ದಾನೆ. ಶಾವ್ನಾ ಕಾರ್ಟರ್ ಫಂಡ್ ರೇಸರ್ ಹೇಳಿಕೆಯೊಂದರ ಪ್ರಕಾರ ಜೇನುನೊಣಗಳು ಬೆಲ್ಲಾಮಿಯನ್ನು ಕನಿಷ್ಟ 20 ಸಾವಿರ ಬಾರಿ ಕಚ್ಚಿವೆ!

‘ಬೆಲ್ಲಾಮಿ ರೆಂಬೆಗಳನ್ನು ಕಟ್ ಮಾಡಲು ಆರಂಭಿಸಿದಾಗ ಜೇನುನೊಣಗಳು ಗೂಡಿನಿಂದ ಹೊರಬರಲಾರಂಭಿಸಿವೆ. ಅವನು ಕೂಡಲೇ ಮರದಿಂದ ಕೆಳಗಿಳಿಯುವ ಪ್ರಯತ್ನ ಮಾಡಿದನಾದರೂ ಅದು ಸಾಧ್ಯವಾಗದೆ ಹೋಗಿದೆ,’ ಎಂದು ಬೆಲ್ಲಾಮಿಯ ಅಜ್ಜಿ ಫಿಲಿಸ್ ಎಡ್ವರ್ಡ್ ಫಾಕ್ಸ್ 19 ಗೆ ತಿಳಿಸಿದ್ದಾರೆ. ‘ಸಹಾಯ ಮಾಡಿ, ಸಹಾಯ ಮಾಡಿ, ಎಂದು ಅವನು ಜೋರಾಗಿ ಕಿರುಚುತ್ತಿದ್ದ, ಆದರೆ ಯಾರೊಬ್ಬರೂ ಅವನ ಸಹಾಯಕ್ಕೆ ಹೋಗಲಿಲ್ಲ,’ ಎಂದು ಅವರು ಹೇಳಿದ್ದಾರೆ.

ಬೆಲ್ಲಾಮಿ ಕುಟುಂಬದ ಸದಸ್ಯರ ಕಣ್ಣುಗಳ ಮುಂದೆಯೇ ಈ ಘಟನೆ ನಡೆದಿದೆ. ಅದರೆ ಅವರಲ್ಲಿ ಯಾರಿಗೂ ಅವನನ್ನು ದಾಳಿಯಿಂದ ಕಾಪಾಡುವುದು ಸಾಧ್ಯವಾಗಿಲ್ಲ, ಯಾಕೆಂದರೆ ಅವರು ಮರದ ಹತ್ತಿರ ಹೋದಾಗ ಜೇನುನೊಣಗಳು ಅವರ ಮೇಲೆ ಕೂಡ ದಾಳಿ ಮಾಡಿವೆ.

‘ಏಣಿಯನ್ನು ತೆಗೆದುಕೊಂಡು ಹೋಗಿ ಬೆಲ್ಲಾಮಿಯನ್ನು ಕೆಳಗಳಿಸುವ ಪ್ರಯತ್ನ ಮಾಡಿದೆ, ಆದರೆ ನೊಣಗಳು ನನ್ನನ್ನೂ ಮುಕ್ಕುರಿದ್ದರಿಂದ ಅವನ ಸಮೀಪಕ್ಕೆ ಹೋಗುವುದು ಸಾಧ್ಯವಾಗಲಿಲ್ಲ,’ ಎಂದು ಎಡ್ವರ್ಡ್ ಹೇಳಿರುವುದನ್ನು ಫಾಕ್ಸ್ 19 ವರದಿ ಮಾಡಿದೆ.

ಫಾಕ್ಸ್ 19 ವರದಿಯ ಪ್ರಕಾರ ಬೆಲ್ಲಾಮಿ ತಾಯಿ ಶಾವ್ನಾ ಕಾರ್ಟರ್ ಘಟನೆ ನಡೆದಾಗ ಮನೆಯಲ್ಲಿರಲಿಲ್ಲ. ಆದರೆ ಅವರಿಗೆ ವಿಷಯವನ್ನು ಫೋನಲ್ಲಿ ತಿಳಿಸಿದಾಗ ಅವರು ಮೂರ್ಛೆ ಹೋದರಂತೆ. ಬೆಲ್ಲಾಮಿಯ ಬಾಯಿಯ ಮೂಲಕ ಕನಿಷ್ಟ 30 ನೊಣಗಳು ಅವನ ಹೊಟ್ಟೆ ಸೇರಿದ್ದವಂತೆ. ಅವುಗಳನ್ನು ಹೊರತೆಗೆಯಲು ಡಾಕ್ಟರ್ ಗಳಿಗೆ ಒಂದು ದಿನಕ್ಕೂ ಹೆಚ್ಚು ಸಮಯ ಬೇಕಾಗಿದೆ.

‘ಜೇನುನೊಣಗಳು ಅವನ ಹೊಟ್ಟೆಯನ್ನೂ ಸೇರಿಕೊಂಡಿದ್ದವು. ರವಿವಾರ ಬೆಳಗ್ಗೆಯಷ್ಟೇ ದೇಹದಿಂದ ಅವುಗಳನ್ನು ಹೊರಹಾಕಲು ಡಾಕ್ಟರ್ ಗಳಿಗೆ ಸಾಧ್ಯವಾಗಿದ್ದು,’ ಎಂದು ಶಾವ್ನಾ ಹೇಳಿದ್ದಾರೆ.

ಅದೃಷ್ಟವಶಾತ್ ಅವನು ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಬಗ್ಗೆ ವೈದ್ಯರು ನಿರೀಕ್ಷೆ ಇಟ್ಟುಕೊಂಡಿದ್ದಾರೆ, ಎಂದ ಆಕೆ ಹೇಳಿದ್ದಾರೆ.

Published On - 8:07 am, Fri, 2 September 22

ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು