AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಟೋ ಚಾಲಕಿಯರ ಬ್ಯಾಂಕ್ ಸಾಲ ತೀರಿಸಿದ ನಟ ರಾಘವ್ ಲಾರೆನ್ಸ್

ನಟ, ನಿರ್ದೇಶಕ, ನೃತ್ಯ ನಿರ್ದೇಶಕ ರಾಘವ್ ಲಾರೆನ್ಸ್ ತಮಿಳುನಾಡಿನ 10 ಮಂದಿ ಆಟೋ ಚಾಲಕಿಯರ ಬ್ಯಾಂಕ್ ಸಾಲ ತೀರಿಸಿದ್ದಾರೆ.

ಆಟೋ ಚಾಲಕಿಯರ ಬ್ಯಾಂಕ್ ಸಾಲ ತೀರಿಸಿದ ನಟ ರಾಘವ್ ಲಾರೆನ್ಸ್
ರಾಘವ ಲಾರೆನ್ಸ್
ಮಂಜುನಾಥ ಸಿ.
|

Updated on:May 07, 2024 | 12:52 PM

Share

ಬಡತನದ ಬೇಗೆಯಲ್ಲಿ ಬೆಂದು ಸ್ವ ಪರಿಶ್ರಮದಿಂದ ನೃತ್ಯ ನಿರ್ದೇಶಕ, ನಟ, ನಿರ್ದೇಶಕನಾಗಿ ಬೆಳೆದಿರುವ ರಾಘವ್ ಲಾರೆನ್ಸ್ (Raghava lawrence) ತಾವು ದುಡಿದ ಹಣದಲ್ಲಿ ಸಮಾಜ ಸೇವೆ ಮಾಡುತ್ತಾ ಸಮಾಜದಿಂದ ಗಳಿಸಿದ್ದನ್ನು ಸಮಾಜಕ್ಕೆ ಮರಳಿ ನೀಡುವ ಕಾಯಕ ಮಾಡುತ್ತಲೇ ಬರುತ್ತಿದ್ದಾರೆ. ವರ್ಷಗಳಿಂದಲೂ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ರಾಘವ್ ಲಾರೆನ್ಸ್ ಇತ್ತೀಚೆಗಷ್ಟೆ ತಮಿಳುನಾಡಿನ ಕೆಲವು ಆಟೋ ಚಾಲಕಿಯರ ಸಾಲವನ್ನು ತೀರಿಸಿ ಅವರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.

ರಾಘವ್ ಲಾರೆನ್ಸ್ ಕೆಲವು ದಿನಗಳ ಹಿಂದಷ್ಟೆ ರೈತರಿಗೆ ಹತ್ತು ಟ್ರ್ಯಾಕ್ಟರ್​ಗಳನ್ನು ಉಡುಗೊರೆಯಾಗಿ ನೀಡಿದ್ದರು. ರಾಘವ್​ರ ಈ ಮಹತ್​ಕಾರ್ಯಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗಿತ್ತು. ಇದೀಗ ರಾಘವ್ ಲಾರೆನ್ಸ್ ಕೆಲವು ಆಟೋ ಚಾಲಕಿಯರ ಸಾಲ ಮರುಪಾವತಿ ಮಾಡಿ ಮತ್ತೊಮ್ಮೆ ಪ್ರಶಂಸೆಗೆ ಪಾತ್ರರಾಗಿದ್ದಾರೆ. ರಾಘವ್ ಲಾರೆನ್ಸ್ ಹಾಗೂ ಯೂಟ್ಯೂಬರ್ ಬಾಲಾ ಎಂಬುವರು ಸೇರಿ ಈ ಕಾರ್ಯವನ್ನು ಮಾಡಿದ್ದಾರೆ.

ಇದನ್ನೂ ಓದಿ:ನನ್ನ ಟ್ರಸ್ಟ್​ಗೆ ಹಣ ಕಳಿಸಬೇಡಿ: ಮನವಿ ಮಾಡಿದ ರಾಘವ್ ಲಾರೆನ್ಸ್

ಕೆಲವು ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ನಟಿಸಿರುವ ಬಾಲ, ರಾಘವ್ ಲಾರೆನ್ಸ್ ಅನ್ನು ಆದರ್ಶವನ್ನಾಗಿಟ್ಟುಕೊಂಡು ತಮ್ಮ ಕೈಲಾದ ಸಮಾಜ ಸೇವೆ ಮಾಡುತ್ತಿದ್ದರು. ಅವರಿಗೆ ರಾಘವ್ ಲಾರೆನ್ಸ್ ಬೆಂಬಲ ಸೂಚಿಸಿದ್ದರು. ಇಬ್ಬರೂ ಸೇರಿ ಮೊದಲಿಗೆ ಮಹಿಳೆಯೊಬ್ಬರಿಗೆ ಹೊಸ ಆಟೊ ಉಡುಗೊರೆಯಾಗಿ ನೀಡಿದ್ದರು. ಅದೇ ದಿನ ಹಲವು ಆಟೋ ಚಾಲಕಿಯರನ್ನು ಸಹ ರಾಘವ್ ಲಾರೆನ್ಸ್ ಭೇಟಿ ಮಾಡಿದ್ದರು. ಆಗ ಆ ಆಟೋ ಚಾಲಕಿಯರು ತಮ್ಮ ದುಡಿಮೆಯ ಬಹುಪಾಲು ಹಣ ಆಟೋ ಕೊಳ್ಳಲು ತೆಗೆದುಕೊಂಡಿದ್ದ ಸಾಲ ಮರುಪಾವತಿಗೆ ಖರ್ಚಾಗುತ್ತಿರುವುದಾಗಿ ಹೇಳಿಕೊಂಡಿದ್ದರು. ಹಾಗಾಗಿ ಇದೀಗ ರಾಘವ್ ಹಾಗೂ ಬಾಲ ಸೇರಿಕೊಂಡು ಆಟೋ ಚಾಲಕಿಯರ ಬ್ಯಾಂಕ್ ಸಾಲವನ್ನು ತೀರಿಸಿದ್ದಾರೆ. ಆ ಮೂಲಕ ದುಡಿದ ಹಣ ಅವರ ಬಳಿಯೇ ಉಳಿಯುವಂತೆ ಮಾಡಿದ್ದಾರೆ.

ಹತ್ತು ಮಂದಿ ಮಹಿಳೆಯರ ಸಾಲ ತೀರಿಸಿ, ಸಾಲ ತೀರಿಸಿದ ದಾಖಲೆಯನ್ನು ಅವರಿಗೆ ಉಡುಗೊರೆಯಾಗಿ ರಾಘವ್ ಲಾರೆನ್ಸ್ ಹಾಗೂ ಬಾಲ ನೀಡಿದ್ದಾರೆ. ರಾಘವ್ ತಮಗೆ ಮಾಡಿದ ಸಹಾಯಕ್ಕೆ ಶ್ರಮಿಕ ಮಹಿಳೆಯರು ಖುಷಿಯಿಂದ ಕಣ್ಣೀರು ಹಾಕಿದ್ದಾರೆ. ಈ ಸನ್ನಿವೇಶದ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ಇದೀಗ ವೈರಲ್ ಆಗಿದೆ.

ಕೆಲವು ದಿನಗಳ ಹಿಂದಷ್ಟೆ ನಟ ರಾಘವ್ ಲಾರೆನ್ಸ್ ಹತ್ತು ಟ್ರ್ಯಾಕ್ಟರಿಗಳನ್ನು ಹತ್ತು ಮಂದಿ ರೈತರಿಗೆ ಉಡುಗೊರೆಯಾಗಿ ನೀಡಿದ್ದರು. ಹತ್ತು ಲಾರಿಗಳಲ್ಲಿ ಹತ್ತು ಟ್ರ್ಯಾಕ್ಟರ್ ತುಂಬಿಸಿಕೊಂಡು ತಾವೇ ಖುದ್ದಾಗಿ ತಮ್ಮ ತಂಡದೊಂದಿಗೆ ಹಳ್ಳಿಗಳಿಗೆ ತೆರಳಿ ಬಡ ರೈತರನ್ನು ಪತ್ತೆ ಮಾಡಿ ಅವರಿಗೆ ಖುದ್ದಾಗಿ ಟ್ರ್ಯಾಕ್ಟರ್ ಅನ್ನು ಉಡುಗೊರೆ ನೀಡಿದ್ದರು. ಆ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು.

ರಾಘವ್ ಬಡ ಕುಟುಂಬದಿಂದ ಬಂದವರು. ಎಳವೆಯಲ್ಲೇ ಮನೆ ನಡೆಸಲು ಕಾರು ತೊಳೆಯುವ ಉದ್ಯೋಗಕ್ಕೆ ಸೇರಿದ್ದರು. ಅದ್ಭುತ ಡ್ಯಾನ್ಸರ್ ಆಗಿದ್ದ ರಾಘವ್, ಡ್ಯಾನ್ಸರ್ ಆಗಿ ಚಿತ್ರರಂಗ ಸೇರಿಕೊಂಡು ನಂತರ ಸ್ವಂತ ಪ್ರತಿಭೆಯಿಂದ ಡ್ಯಾನ್ಸ್ ಮಾಸ್ಟರ್ ಆದರು. ಆ ಬಳಿಕ ನಟರಾದರು. ಬಳಿಕ ನಿರ್ದೇಶಕರಾದರು. ಈಗ ತಮಿಳು ಚಿತ್ರರಂಗದ ಸ್ಟಾರ್ ನಟರಲ್ಲಿ ರಾಘವ್ ಲಾರೆನ್ಸ್ ಸಹ ಒಬ್ಬರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:52 pm, Tue, 7 May 24