ಮತ ಚಲಾಯಿಸಿ ಪೋಸ್ ಕೊಟ್ಟ ರಿತೇಶ್-ಜೆನಿಲಿಯಾ; ಇಲ್ಲಿದೆ ವಿವರ
ಇಂದು (ಮೇ 7) ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನ ನಡೆದಿದೆ. ಮಹಾರಾಷ್ಟ್ರದ ಲಾತೂರ್ ಮತದಾನ ಕೇಂದ್ರದಲ್ಲಿ ಸಾಲಿನಲ್ಲಿ ನಿಂತು ನಗು ನಗುತ್ತಾ ಈ ದಂಪತಿ ವೋಟ್ ಮಾಡಿದ್ದಾರೆ. ಈ ಸಂದರ್ಭದ ವಿಡಿಯೋ ಇಲ್ಲಿದೆ.
ನಟ ರಿತೇಶ್ ದೇಶ್ಮುಖ್ (Ritesh Deshmukh) ಹಾಗೂ ಜೆನಿಲಿಯಾ ದೇಶ್ಮುಖ್ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಅಲ್ಲೊಂದು, ಇಲ್ಲೊಂದು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಈಗ ರಿತೇಶ್ ಹಾಗೂ ಜೆನಿಲಿಯಾ ಒಟ್ಟಾಗಿ ವೋಟ್ ಮಾಡಿದ್ದಾರೆ. ಇಂದು (ಮೇ 7) ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನ ನಡೆದಿದೆ. ಮಹಾರಾಷ್ಟ್ರದ ಲಾತೂರ್ ಮತದಾನ ಕೇಂದ್ರದಲ್ಲಿ ಸಾಲಿನಲ್ಲಿ ನಿಂತು ನಗು ನಗುತ್ತಾ ಈ ದಂಪತಿ ವೋಟ್ ಮಾಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಲಾತೂರ್ನಲ್ಲಿ ಎನ್ಡಿಎ ಮೈತ್ರಿಕೂಟದಿಂದ ಹಾಲಿ ಎಂಪಿ ಸುಧಾಕರ್ ತುಕಾರಾಮ್ ಸ್ಪರ್ಧೆ ಮಾಡಿದರೆ, ‘ಇಂಡಿಯಾ’ ಮೈತ್ರಿಕೂಟದಿಂದ ಕಲ್ಗೆ ಶಿವಾಜಿ ಬಂಡ್ಡಪ್ಪ ಸ್ಪರ್ಧೆ ಮಾಡಿದ್ದಾರೆ. ಸಿನಿಮಾ ವಿಚಾರಕ್ಕೆ ಬರೋದಾದರೆ ರಿತೇಶ್ ಅವರು ‘ಹೌಸ್ಫುಲ್ 5’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜೆನಿಲಿಯಾ ಅವರು ಆಮಿರ್ ಖಾನ್ ನಟನೆಯ ‘ಸಿತಾರೇ ಜಮೀನ್ಪರ್’ ಹಾಗೂ ಕನ್ನಡದ ‘ಜೂನಿಯರ್’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬ್ಯಾಟ್ ಬೀಸಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಸೌಜನ್ಯ ಕೇಸ್ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್ ಸೈಡ್ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ

