ನನ್ನ ಟ್ರಸ್ಟ್​ಗೆ ಹಣ ಕಳಿಸಬೇಡಿ: ಮನವಿ ಮಾಡಿದ ರಾಘವ್ ಲಾರೆನ್ಸ್

Raghava lawrence: ಕಾರು ತೊಳಿಯುವ ಕೂಲಿಯಾಗಿ ವೃತ್ತಿ ಆರಂಭಿಸಿ, ಸಹ ಡ್ಯಾನ್ಸರ್, ಲೀಡ್ ಡ್ಯಾನ್ಸರ್, ಡ್ಯಾನ್ಸ್ ಮಾಸ್ಟರ್, ಸಿನಿಮಾ ನಿರ್ದೇಶಕನಾಗಿ ಈಗ ನಾಯಕನಾಗಿಯೂ ಮಿಂಚುತ್ತಿರುವ ರಾಘವ್ ಲಾರೆನ್ಸ್ ಇನ್ನು ಮುಂದೆ ತಮ್ಮ ಟ್ರಸ್ಟ್​ಗೆ ಯಾರು ಹಣ ಕಳಿಸಬೇಡಿ ಎಂದಿದ್ದಾರೆ. ಏಕೆ?

ನನ್ನ ಟ್ರಸ್ಟ್​ಗೆ ಹಣ ಕಳಿಸಬೇಡಿ: ಮನವಿ ಮಾಡಿದ ರಾಘವ್ ಲಾರೆನ್ಸ್
ರಾಘವ್ ಲಾರೆನ್ಸ್
Follow us
ಮಂಜುನಾಥ ಸಿ.
|

Updated on: Aug 30, 2023 | 7:04 PM

ಕಾರು ತೊಳಿಯುವ ಕೂಲಿಯಾಗಿ ವೃತ್ತಿ ಆರಂಭಿಸಿ, ಸಹ ಡ್ಯಾನ್ಸರ್, ಲೀಡ್ ಡ್ಯಾನ್ಸರ್, ಡ್ಯಾನ್ಸ್ ಮಾಸ್ಟರ್, ಸಿನಿಮಾ ನಿರ್ದೇಶಕನಾಗಿ ಈಗ ನಾಯಕನಾಗಿಯೂ ಮಿಂಚುತ್ತಿರುವ ರಾಘವ್ ಲಾರೆನ್ಸ್ (Raghava Lawrence) ತಮ್ಮ ಸಿನಿಮಾಗಳ ಜೊತೆಗೆ ಬಹು ವರ್ಷಗಳಿಂದಲೂ ನಡೆಸಿಕೊಂಡು ಬರುತ್ತಿರುವ ಸಮಾಜ ಸೇವೆಯಿಂದಲೂ ಖ್ಯಾತರು. ನೂರಾರು ಬಡ ಮಕ್ಕಳಿಗೆ ನಾನಾ ರೀತಿಯಲ್ಲಿ ಸಹಾಯ ಮಾಡುತ್ತಿರುವ ರಾಘವ್ ಲಾರೆನ್ಸ್ ಇತ್ತೀಚೆಗೆ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ತಮ್ಮ ಟ್ರಸ್ಟ್​ಗೆ ಇನ್ನು ಮುಂದೆ ಯಾರೂ ಹಣ ಕಳಿಸಬೇಡಿ ಎಂದಿದ್ದಾರೆ. ಅದಕ್ಕೆ ಕಾರಣವೂ ಇದೆ.

ರಾಘವ್ ಲಾರೆನ್ಸ್ ಡ್ಯಾನ್ಸರ್ ಆಗಿದ್ದಾಗಲೇ ಚಾರಿಟೆಬಲ್ ಟ್ರಸ್ಟ್ ಒಂದನ್ನು ತೆರೆದಿದ್ದರು. ಹಲವು ಬಡ, ಅನಾಥ ಮಕ್ಕಳನ್ನು ದತ್ತು ತೆಗೆದುಕೊಂಡು ಅವರಿಗೆ ಶಿಕ್ಷಣ, ಆರೋಗ್ಯ ಇನ್ನಿತರೆ ನೆರವುಗಳನ್ನು ನೀಡುತ್ತಿದ್ದರು. ವಿಕಲಾಂಗರಿಗೆ ವಸತಿ ಒದಗಿಸಿ ಡ್ಯಾನ್ಸ್ ಕಲಿಸುತ್ತಿದ್ದರು. ಆಗ ಅವರ ಚಾರಿಟೇಬಲ್ ಟ್ರಸ್ಟ್​ಗೆ ಇತರರಿಂದ ಧನ ಸಹಾಯ ಪಡೆಯುತ್ತಿದ್ದರು. ಈಗಲೂ ಅದೇ ಟ್ರಸ್ಟ್ ಮೂಲಕ ಸಮಾಜ ಸೇವೆಯನ್ನು ರಾಘವ್ ಲಾರೆನ್ಸ್ ಮಾಡುತ್ತಿದ್ದಾರೆ ಆದರೆ ಈಗ ತಮ್ಮ ಟ್ರಸ್ಟ್​ಗೆ ಯಾರೂ ಹಣ ಕಳಿಸುವುದು ಬೇಡವೆಂದಿದ್ದಾರೆ.

ಅವರೇ ಹೇಳಿರುವಂತೆ, ”ನಾನು ಡ್ಯಾನ್ಸರ್ ಆಗಿದ್ದಾಗ ನನ್ನೊಬ್ಬನ ಸಂಪಾದನೆಯಿಂದ ಮಕ್ಕಳಿಗೆ ಸಹಾಯ ಮಾಡುವುದು ಕಷ್ಟವಾಗುತ್ತಿತ್ತು ಹಾಗಾಗಿ ಬೇರೆಯವರಿಂದ ನೆರವು ಪಡೆಯುತ್ತಿದ್ದೆ. ಆ ನಂತರ ನಾನು ನಾಯಕ ನಟನಾದೆ, ಎರಡು ವರ್ಷಗಳಿಗೆ ಒಂದು ಸಿನಿಮಾ ಮಾಡುತ್ತಿದ್ದೆ. ಈಗ ವರ್ಷಕ್ಕೆ ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ಸಾಕಷ್ಟು ಹಣ ಬರುತ್ತಿದೆ. ಈಗಲೂ ನಾನು ಇತರರಿಂದ ಹಣ ಪಡೆದು ಸಹಾಯ ಮಾಡುವುದು ಸರಿಯಲ್ಲ ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿದ್ದೇನೆ” ಎಂದಿದ್ದಾರೆ.

ಇದನ್ನೂ ಓದಿ:‘ಚಂದ್ರಮುಖಿ 2’ ಫಸ್ಟ್​ ಲುಕ್ ಬಿಡುಗಡೆ ಮಾಡಿದ ರಜನಿಕಾಂತ್​; ಗಣೇಶ ಚತುರ್ಥಿಗೆ ಬರಲಿದೆ ಬಹುನಿರೀಕ್ಷಿತ ಸಿನಿಮಾ

ಆದರೂ ಕೆಲವರು, ಹಣ ಕಳಿಸುತ್ತಿದ್ದಾರೆ. ನಾವು ನಿಮ್ಮೊಟ್ಟಿಗೆ ಕೆಲಸ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ನಾನು ಅಹಂಕಾರದಿಂದ ಹಣ ಬೇಡ ಎಂದು ಹೇಳುತ್ತಿಲ್ಲ, ಹಾಗೆ ಯಾರೂ ಭಾವಿಸಬೇಡಿ. ನನ್ನ ಟ್ರಸ್ಟ್​ಗೆ ಹಣ ಕಳಿಸುವ ಬದಲಿಗೆ ನೀವು ನಿಮ್ಮ ಮನೆಗಳ ಸಮೀಪದಲ್ಲಿ ಕೆಲಸ ಮಾಡುತ್ತಿರುವ ಟ್ರಸ್ಟ್​ಗಳಿಗೆ ಹಣ ಸಹಾಯ ಮಾಡಿ, ಇಲ್ಲವೇ ಯಾರಿಗೆ ಸಹಾಯದ ಅವಶ್ಯಕತೆ ಇದೆಯೋ ಅವರನ್ನು ನೀವೇ ಗುರುತಿಸಿ ನೇರವಾಗಿ ಅವರಿಗೆ ನಿಮ್ಮ ಹಣದಿಂದ ಸಹಾಯ ಮಾಡಿ ಅದರಿಂದ ಇನ್ನೂ ಹೆಚ್ಚಿನ ಆನಂದ ಸಿಗುತ್ತದೆ” ಎಂದಿದ್ದಾರೆ ರಾಘವ್ ಲಾರೆನ್ಸ್.

ರಾಘವ್ ಲಾರೆನ್ಸ್ ಪ್ರಸ್ತುತ ‘ಚಂದ್ರಮುಖಿ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ‘ಜಿಗರ್​ದಾಂಡ ಡಬಲ್ ಎಕ್ಸ್’, ‘ಅಧಿಕಾರಂ’, ‘ದುರ್ಗಾ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹೊಸ ಸಿನಿಮಾ ನಿರ್ದೇಶನದ ಬಗ್ಗೆಯೂ ಯೋಜಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮನೆಯಲ್ಲಿ ಸಲಗೆನಾ, ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆಶಿ ಉತ್ತರ
ಮನೆಯಲ್ಲಿ ಸಲಗೆನಾ, ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆಶಿ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಕೊವಿಡ್ ಹಗರಣದ ತನಿಖೆಗೆ SIT ರಚನೆ: ಡಾ ಸಿಎನ್ ಮಂಜುನಾಥ್​ಗೂ ಸಂಕಷ್ಟ?
ಕೊವಿಡ್ ಹಗರಣದ ತನಿಖೆಗೆ SIT ರಚನೆ: ಡಾ ಸಿಎನ್ ಮಂಜುನಾಥ್​ಗೂ ಸಂಕಷ್ಟ?