ಇತ್ತೀಚೆಗಿನ ದಿನಗಳಲ್ಲಿ ಒತ್ತಡ ತುಂಬಿದ ಜೀವನದಲ್ಲಿ ತಮ್ಮ ಪ್ರೀತಿ ಪಾತ್ರರೊಂದಿಗೆ ಕಳೆಯಲು ಸಮಯವಿಲ್ಲ. ಹೀಗಾಗಿ ಅಪರೂಪಕ್ಕೊಮ್ಮೆ ಬಿಡುವು ಮಾಡಿಕೊಂಡು ಹೆಚ್ಚಿನವರು ಪಿಕ್ನಿಕ್ ಗೆ ತೆರಳುತ್ತಾರೆ. ಈ ಸಮಯದಲ್ಲಿ ದೈಹಿಕ ಹಾಗೂ ಮಾನಸಿಕ ವಿಶ್ರಾಂತಿಯ ಜೊತೆಗೆ ಕುಟುಂಬದವರ ಜೊತೆಗೆ ಸಮಯ ಕಳೆಯಲು ಒಂದೊಳ್ಳೆ ಅವಕಾಶವಾಗಿದೆ. ದೈನಂದಿನ ಬದುಕಿನ ಚಟುವಟಿಕೆಯಿಂದ ವಿರಾಮ ಪಡೆದುಕೊಳ್ಳಬಹುದಾದ ಹೊರಾಂಗಣ ಚಟುವಟಿಕೆಯಾಗಿರುವ ಕಾರಣ ಎಲ್ಲರೂ ಪಿಕ್ನಿಕನ್ನು ಇಷ್ಟ ಪಡುತ್ತಾರೆ. ಅದಲ್ಲದೇ ಪ್ರತಿ ವರ್ಷ ಜೂನ್ 18 ರಂದು ಅಂತಾರಾಷ್ಟ್ರೀಯ ಪಿಕ್ನಿಕ್ ದಿನವನ್ನು ಆಚರಿಸಲಾಗುತ್ತದೆ.
ಅಂತಾರಾಷ್ಟ್ರೀಯ ಪಿಕ್ನಿಕ್ ದಿನವು ಫ್ರೆಂಚ್ ಕ್ರಾಂತಿ ಮತ್ತು ವಿಕ್ಟೋರಿಯನ್ ಯುಗದ ಅಂಚಿಗೆ ಆರಂಭವಾಯಿತು. ಈ ಪಿಕ್ನಿಕ್ ಎಂಬ ಶಬ್ದ ಫ್ರಾನ್ಸ್ ಮೂಲದ್ದು ಎನ್ನಲಾಗಿದೆ. ಫ್ರಾನ್ಸ್ ಕ್ರಾಂತಿಯ ನಂತರ ಅಲ್ಲಿನ ಜನರು ಎಲ್ಲಾ ನಿರ್ಬಂಧಗಳನ್ನು ಮೀರಿ ಹೊರಗಡೆ ಹೋಗಿ ಸಂತೋಷವಾಗಿ ಸುತ್ತಾಡಿಕೊಂಡು ಬರುವುದು ಶುರುವಾಯಿತು. ಅಂದಿನಿಂದ ಪ್ರತಿ ವರ್ಷ ಜೂನ್ 18 ರಂದು ಅಂತಾರಾಷ್ಟ್ರೀಯ ಪಿಕ್ನಿಕ್ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಅದಲ್ಲದೇ ತಮ್ಮ ಪ್ರೀತಿ ಪಾತ್ರರಿಗೆ ಸಮಯಕೊಡುವ ಮೂಲಕ ಈ ದಿನವು ಮಹತ್ವವನ್ನು ಪಡೆದುಕೊಂಡಿದೆ.
ಇದನ್ನೂ ಓದಿ: ಬರಡಾಗುತ್ತಿದೆ ಭೂಮಿಯ ಒಡಲು, ಜಾಗೃತಿ ಅತ್ಯಗತ್ಯ
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: