
ಲೈಂಗಿಕ ಕಾರ್ಯಕರ್ತೆಯರು (Sex Workers)ಈ ಸಮಾಜದಲ್ಲಿ ತುಂಬಾ ಕಠಿಣ ಪರಿಸ್ಥಿಯಲ್ಲಿ ಬದುಕುತ್ತಿದ್ದಾರೆ. ಹೌದು ಶೋಷಣೆ, ಸಮಾಜದ ಚುಚ್ಚು ಮಾತುಗಳನ್ನು ಕೇಳಿಸುತ್ತಾ ಜೀವನವನ್ನು ನಡೆಸುತ್ತಿದ್ದಾರೆ. ಹೀಗಾಗಿ ಲೈಂಗಿಕ ಕಾರ್ಯಕರ್ತೆಯರನ್ನು ಘನತೆಯಿಂದ ನಡೆಸಿಕೊಳ್ಳಬೇಕು, ಅವರಿಗೂ ಈ ಸಮಾಜದಲ್ಲಿ ಗೌರವದಿಂದ ಬದುಕುವ ಹಕ್ಕಿದೆ ಎಂದು ತಿಳಿ ಹೇಳಲು ಹಾಗೂ ಅವರ ಹಕ್ಕುಗಳ ಬಗ್ಗೆ ತಿಳಿಸಲು, ಅವರ ಆರೋಗ್ಯದ ಮತ್ತು ಸುರಕ್ಷತೆಯ ಬಗ್ಗೆ, ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಜೂನ್ 2 ರಂದು ಅಂತಾರಾಷ್ಟ್ರೀಯ ಲೈಂಗಿಕ ಕಾರ್ಯಕರ್ತೆಯರ (International Sex Workers Day) ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವನ್ನು ತಿಳಿಯಿರಿ.
ಅಂತಾರಾಷ್ಟ್ರೀಯ ಲೈಂಗಿಕ ಕಾರ್ಯಕರ್ತೆಯರ ದಿನ 1970 ರ ದಶಕದಲ್ಲಿ ಫ್ರಾನ್ಸ್‌ನಲ್ಲಿ ಪ್ರಾರಂಭವಾಯಿತು. ಆಗ ಫ್ರಾನ್ಸ್‌ನಲ್ಲಿ ವೇಶ್ಯಾವಾಟಿಕೆ ಕಾನೂನುಬದ್ಧವಾಗಿತ್ತು. ಆದರೆ ಲೈಂಗಿಕ ಕಾರ್ಯಕರ್ತೆಯರಿಗೆ ರಕ್ಷಣೆ ಇರಲಿಲ್ಲ, ಅವರ ವಿರುದ್ಧ ದಬ್ಬಾಳಿಕೆ ನಡೆಸಲಾಗುತ್ತಿತ್ತು. ಹಾಗಾಗಿ 100 ಕ್ಕೂ ಹೆಚ್ಚು ಲೈಂಗಿಕ ಕಾರ್ಯಕರ್ತೆಯರು ಫ್ರಾನ್ಸ್‌ನ ಲಿಯಾನ್‌ನಲ್ಲಿರುವ ಸೇಂಟ್-ನಿಜಿಯರ್ ಚರ್ಚ್ ದೊಡ್ಡ ಪ್ರತಿಭಟನೆ ನಡೆಸಿದರು.ನಂತರ 1975 ರಲ್ಲಿ ಮತ್ತೊಂದು ಪ್ರತಿಭಟನೆ ನಡೆಯಿತು. 8 ದಿನಗಳ ಕಾಲ ನಡೆದ ಈ ಪ್ರತಿಭಟನೆ ಲೈಂಗಿಕ ಕಾರ್ಯಕರ್ತೆಯರ ಹಕ್ಕುಗಳ ಮೊದಲ ಹೆಜ್ಜೆಯಾಗಿತ್ತು. ಈ ಪ್ರತಿಭಟನೆಯ ಮೊದಲ ವಾರ್ಷಿಕೋತ್ಸವದ ಸ್ಮರಣಾರ್ಥ ಜೂನ್ 2, 1976 ರಲ್ಲಿ ಮೊದಲ ಅಂತಾರಾಷ್ಟ್ರೀಯ ಲೈಂಗಿಕ ಕಾರ್ಯಕರ್ತೆಯರ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಈ ದಿನವನ್ನು ಆಚರಿಸಲಾಗುತ್ತಿದೆ.
ಇದನ್ನೂ ಓದಿ: ಪೋಷಕರ ಪ್ರೀತಿ, ತ್ಯಾಗಕ್ಕೆ ಬೆಲೆ ಕಟ್ಟಲಾಗದು; ಜಾಗತಿಕ ಪೋಷಕರ ದಿನದ ಇತಿಹಾಸ, ಮಹತ್ವ ತಿಳಿಯಿರಿ
ಇದು ಲೈಂಗಿಕ ದೌರ್ಜನ್ಯವನ್ನು ಕಡಿಮೆ ಮಾಡಲು, ಕೆಲಸದ ಪರಿಸ್ಥಿತಿಗಳನ್ನು ಸುಧಾರಿಸಲು ಮತ್ತು ಲೈಂಗಿಕ ಕಾರ್ಯಕರ್ತರಿಗೆ ಆರೋಗ್ಯ ರಕ್ಷಣೆ, ಕಾನೂನು ರಕ್ಷಣೆ ಮತ್ತು ಇತರ ಬೆಂಬಲ ಸೇವೆಗಳನ್ನು ಪಡೆಯಲು ಒಂದು ಅವಕಾಶ ನೀಡುತ್ತದೆ. ಲೈಂಗಿಕ ಕೆಲಸವು ಒಂದು ರೀತಿಯ ದುಡಿಮೆಯಾಗಿದ್ದು, ಲೈಂಗಿಕ ಕಾರ್ಯಕರ್ತರಿಗೂ ಇತರ ಕಾರ್ಮಿಕರಂತೆಯೇ ಹಕ್ಕುಗಳು ಮತ್ತು ರಕ್ಷಣೆಗಳನ್ನು ಒದಗಿಸಬೇಕು ಎಂದು ಈ ದಿನ ಅಭಿಯಾನಗಳನ್ನು ನಡೆಸಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ