International Widows Day 2023: ಅಂತರಾಷ್ಟ್ರೀಯ ವಿಧವೆಯರ ದಿನದ ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ

ಯಾವುದೇ ಸಂದರ್ಭದಲ್ಲೂ ಸಂಗಾತಿಯನ್ನು ಕಳೆದುಕೊಂಡು ಬದುಕುವುದು ಕಷ್ಟ ಮತ್ತು ಆಘಾತಕಾರಿ. ಹಾಗಾಗಿ ಈ ದಿನದಂದು ಪ್ರಪಂಚದಾದ್ಯಂತದ ವಿಧವೆಯರಿಗೆ ಅಗತ್ಯವಾದ ಬೆಂಬಲವನ್ನು ನೀಡಲಾಗುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

International Widows Day 2023: ಅಂತರಾಷ್ಟ್ರೀಯ ವಿಧವೆಯರ ದಿನದ ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 23, 2023 | 6:15 AM

ತಮ್ಮ ಸಂಗಾತಿಯ ಮರಣದ ನಂತರ ಹಲವಾರು ದೇಶಗಳಲ್ಲಿ ವಿಧವೆಯರು ಅನುಭವಿಸುವ ಮತ್ತು ಎದುರಿಸುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಜಾಗತಿಕವಾಗಿ ಜಾಗೃತಿ ಮೂಡಿಸಲು ಪ್ರತೀ ವರ್ಷ ಜೂನ್ 23ರಂದು ಅಂತರಾಷ್ಟ್ರೀಯ ವಿಧವೆಯರ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಲಕ್ಷಾಂತರ ವಿಧವೆಯರು ಮತ್ತು ಅವರ ಅವಲಂಬಿತರು ಎದುರಿಸುತ್ತಿರುವ ಬಡತನ ಮತ್ತು ಅನ್ಯಾಯ ಪರಿಹರಿಸಲು ಮೀಸಲಾಗಿರುವ ವಿಶ್ವಸಂಸ್ಥೆ ಸ್ಥಾಪಿಸಿದ ವಿಶೇಷ ದಿನವಾಗಿದೆ. ಯುಎಸ್ ಸೆನ್ಸಸ್ ಬ್ಯೂರೋ ಪ್ರಕಾರ, ಯುಎಸ್​​ನಲ್ಲಿ 13 ದಶಲಕ್ಷಕ್ಕೂ ಹೆಚ್ಚು ಜನರು ಸಂಗಾತಿಯನ್ನು ಕಳೆದುಕೊಂಡಿದ್ದಾರೆ, ಅವರಲ್ಲಿ 11 ದಶಲಕ್ಷಕ್ಕೂ ಹೆಚ್ಚು ಮಹಿಳೆಯರಿದ್ದಾರೆ. ಸಂಗಾತಿಯನ್ನು ಕಳೆದುಕೊಂಡು ಮುಂದಿನ ಜೀವನ ನಡೆಸುವುದು ಸುಲಭದ ವಿಷಯವಲ್ಲ ಹಾಗಾಗಿ ಅಂತರಾಷ್ಟ್ರೀಯ ವಿಧವೆಯರ ದಿನದಂದು, ಪ್ರಪಂಚದಾದ್ಯಂತದ ವಿಧವೆಯರ ಪರಿಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸಲು ಒಂದು ನಿಲುವನ್ನು ತೆಗೆದುಕೊಳ್ಳಲು ಈ ದಿನವನ್ನು ಆಚರಿಸಲಾಗುತ್ತದೆ.

ಅಂತರಾಷ್ಟ್ರೀಯ ವಿಧವೆಯರ ದಿನದ ಇತಿಹಾಸ:

ವಿಶ್ವಸಂಸ್ಥೆಯ ಮಹಾಧಿವೇಶನವು 2010ರ ಡಿಸೆಂಬರ್ 21ರಂದು ಜೂನ್ 23ನ್ನು ಅಧಿಕೃತ ಅಂತರಾಷ್ಟ್ರೀಯ ವಿಧವೆಯರ ದಿನವನ್ನಾಗಿ ಆಚರಿಸಿತು. ಅದಕ್ಕೂ ಮೊದಲು ಅಂದರೆ ಯುಎನ್ ಗುರುತಿಸುವ ಮೊದಲು, ಈ ದಿನವನ್ನು ಲೂಂಬಾ ಫೌಂಡೇಶನ್ 2005 ರಿಂದ ಅಂತರಾಷ್ಟ್ರೀಯ ವಿಧವೆಯರ ದಿನವನ್ನು ಆಚರಿಸುತ್ತಿದೆ. ಯುಕೆಯ ಹೌಸ್ ಆಫ್ ಲಾರ್ಡ್ಸ್ನ ಸದಸ್ಯರಾಗಿರುವ ರಾಜಿಂದರ್ ಲೂಂಬಾ, ಅಭಿವೃದ್ಧಿಶೀಲ ದೇಶಗಳಲ್ಲಿ ವೈಧವ್ಯದ ಸಮಯದಲ್ಲಿ ಮಹಿಳೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕೆಲಸ ಮಾಡಲು ಲೂಂಬಾ ಫೌಂಡೇಶನ್ ಅನ್ನು ಸ್ಥಾಪಿಸಿದ್ದರು. 1954 ರಲ್ಲಿ 37 ನೇ ವಯಸ್ಸಿನಲ್ಲಿ ಅವರ ತಾಯಿ ವಿಧವೆಯಾದಾಗ ಎದುರಿಸಿದ ಹೋರಾಟಗಳನ್ನು ನೋಡಿದ ನಂತರ ರಾಜೀಂದರ್ ಈ ಪ್ರತಿಷ್ಠಾನವನ್ನು ಪ್ರಾರಂಭಿಸಲು ಸ್ಫೂರ್ತಿ ಪಡೆದಿದ್ದರು. 2005 ರಲ್ಲಿ ಪ್ರಾರಂಭವಾದ ಈ ಸಂಸ್ಥೆ ನಂತರ ಲೂಂಬಾ ಫೌಂಡೇಶನ್, ಯುಎನ್ ಮಾನ್ಯತೆಗಾಗಿ ಐದು ವರ್ಷಗಳ ಜಾಗತಿಕ ಅಭಿಯಾನವನ್ನು ನಡೆಸಿತು. ಇದರ ಪರಿಣಾಮವಾಗಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಂತರಾಷ್ಟ್ರೀಯ ವಿಧವೆಯರ ದಿನವನ್ನು ವಾರ್ಷಿಕ ದಿನವಾಗಿ ಅಳವಡಿಸಿಕೊಳ್ಳಲು ಸರ್ವಾನುಮತದ ನಿರ್ಧಾರವನ್ನು ತೆಗೆದುಕೊಂಡಿತು.

ಇದನ್ನೂ ಓದಿ:International Day of Peace 2022: ವಿಶ್ವ ಶಾಂತಿ ದಿನ 2022: ಥೀಮ್, ಇದನ್ನು ಯಾವಾಗ ಮತ್ತು ಹೇಗೆ ಆಚರಿಸಲಾಗುತ್ತದೆ?

ಅಂತರಾಷ್ಟ್ರೀಯ ವಿಧವೆಯರ ದಿನದ ಮಹತ್ವ:

ಯಾವುದೇ ಸಂಧರ್ಭದಲ್ಲೂ ಪ್ರೀತಿ ಪಾತ್ರರನ್ನು ಕಳೆದುಕೊಳ್ಳುವುದು ಕಷ್ಟ ಮತ್ತು ಆಘಾತಕಾರಿ. ಹಾಗಾಗಿ ಈ ದಿನದಂದು ಪ್ರಪಂಚದಾದ್ಯಂತದ ವಿಧವೆಯರಿಗೆ ಅಗತ್ಯವಾದ ಬೆಂಬಲವನ್ನು ನೀಡಲಾಗುತ್ತದೆ. ಪ್ರಪಂಚದ ವಿವಿಧ ಭಾಗಗಳಲ್ಲಿನ ಬೇರೆ ಬೇರೆ ರೀತಿಯ ಸಂಸ್ಕೃತಿಗಳಿದ್ದು, ವಿಧವೆಯರನ್ನು ಶಾಪಗ್ರಸ್ತರು ಅಥವಾ ಅನಿಷ್ಠ ಎಂದೆಲ್ಲ ಬಿಂಬಿಸಲಾಗುತ್ತದೆ. ಈ ತಪ್ಪು ಮನಸ್ಥಿತಿ ಅವರನ್ನು ಅವರ ಸಮುದಾಯದಿಂದ ಮತ್ತು ಅವರ ಮಕ್ಕಳಿಂದ ಬೇರ್ಪಡಿಸುತ್ತದೆ. ಇವೆಲ್ಲ ಕಾರಣಗಳಿಂದ ವಿಧವೆಯರನ್ನು ಗೌರವಿಸಬೇಕಾಗಿದೆ. ಅವರ ಮನಸ್ಥಿಯನ್ನು ಅರಿತುಕೊಂಡು, ಅವರಿಗೂ ಒಂದು ಬದುಕಿದೆ ಎಂಬುದನ್ನು ಜನರಿಗೆ ತಿಳಿ ಹೇಳಬೇಕಾಗಿದೆ.

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!