AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತೀಯರಲ್ಲಿ ಹೆಚ್ಚಾಗಿ ಬಳಕೆಯಾಗುವ ಅಡ್ಡ ಹೆಸರು ಯಾವುದು ಗೊತ್ತಾ?; ಸ್ನ್ಯಾಪ್‌ ಚಾಟ್​​​ ವರದಿ ಇಲ್ಲಿದೆ

ಸ್ನ್ಯಾಪ್‌ ಚಾಟ್​​​​ನಲ್ಲಿ(Snapchat) ಬಳಕೆದಾರರು ತಮ್ಮ ಸ್ನ್ಯಾಪ್‌ಗಳನ್ನು ಕಸ್ಟಮೈಸ್ ಮಾಡಲು ಅಡ್ಡಹೆಸರು ಬಳಸಲಾಗುತ್ತದೆ. ಆದರೆ ಇದೀಗಾ ಭಾರತದಲ್ಲಿ ಹೆಚ್ಚು ಬಳಕೆಯಲ್ಲಿರುವ ಅಡ್ಡಹೆಸರುಗಳ ಪಟ್ಟಿಯನ್ನು ಸ್ನ್ಯಾಪ್‌ ಚಾಟ್ ಬಹಿರಂಗಪಡಿಸಿದೆ.

ಭಾರತೀಯರಲ್ಲಿ ಹೆಚ್ಚಾಗಿ ಬಳಕೆಯಾಗುವ ಅಡ್ಡ ಹೆಸರು ಯಾವುದು ಗೊತ್ತಾ?; ಸ್ನ್ಯಾಪ್‌ ಚಾಟ್​​​ ವರದಿ ಇಲ್ಲಿದೆ
ಭಾರತೀಯರಲ್ಲಿ ಹೆಚ್ಚಾಗಿ ಬಳಕೆಯಾಗುವ ಅಡ್ಡ ಹೆಸರುಗಳು
ಅಕ್ಷತಾ ವರ್ಕಾಡಿ
|

Updated on: Jun 22, 2023 | 4:53 PM

Share

ಸ್ನ್ಯಾಪ್‌ ಚಾಟ್(Snapchat) ಬಳಕೆದಾರರು ತಮ್ಮ ಸ್ನ್ಯಾಪ್‌ಗಳನ್ನು ಕಸ್ಟಮೈಸ್ ಮಾಡಲು ಅಡ್ಡಹೆಸರು ಬಳಸಲಾಗುತ್ತದೆ. ಆದರೆ ಇದೀಗಾ ಭಾರತದಲ್ಲಿ ಹೆಚ್ಚು ಬಳಕೆಯಲ್ಲಿರುವ ಅಡ್ಡಹೆಸರುಗಳ ಪಟ್ಟಿಯನ್ನು ಸ್ನ್ಯಾಪ್‌ ಚಾಟ್ ಬಹಿರಂಗಪಡಿಸಿದೆ. ಪ್ರತಿಯೊಬ್ಬರಿಗೂ ಮನೆಯಲ್ಲಿ ಅಥವಾ ಸ್ನೇಹಿತರು ಪ್ರೀತಿಯಿಂದ ಅಡ್ಡ ಹೆಸರು ಇಡುವುದು ಸರ್ವೇ ಸಾಮಾನ್ಯವಾಗಿದೆ. ಕೆಲವು ಸಂದರ್ಭಗಳಲ್ಲಿ, ಅಡ್ಡಹೆಸರು ವ್ಯಕ್ತಿಯ ಅಧಿಕೃತ ಹೆಸರಿಗಿಂತ ಹೆಚ್ಚು ಜನಪ್ರಿಯವಾಗಿರುತ್ತದೆ. ಅಡ್ಡಹೆಸರುಗಳನ್ನು ನೀಡುವ ಕಲ್ಪನೆಯು ದೇಶದಲ್ಲಿ ಎಷ್ಟು ಸಾಮಾನ್ಯವಾಗಿದೆ ಎಂದರೆ ಅಡ್ಡಹೆಸರುಗಳ ಭಾರತೀಯ ಸಂಸ್ಕೃತಿಯ ಕುರಿತು Snapchat ಮತ್ತು YouGov ಇತ್ತೀಚಿನ ಸಂಶೋಧನೆಯೊಂದನ್ನು ನಡೆಸಿದೆ.

ಈ ಅಧ್ಯಯನದ ಪ್ರಕಾರ ಶೇಕಡಾ 96 ರಷ್ಟು ಭಾರತೀಯರು ತಮ್ಮ ಜೀವನದ ಒಂದು ಹಂತದಲ್ಲಿ ಅಡ್ಡಹೆಸರನ್ನು ಬಳಸಿದ್ದಾರೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.ಭಾರತದಲ್ಲಿನ ಐದು ಸಾಮಾನ್ಯ ಅಡ್ಡ ಹೆಸರುಗಳೆಂದರೆ ಸೋನು, ಬಾಬು, ಚೋಟು, ಅಣ್ಣು ಮತ್ತು ಚಿಂಟು ಎಂದು ಅಧ್ಯಯನವು ತಿಳಿಸಿದೆ.

ಇದನ್ನೂ ಓದಿ: ಈ ದೇಶದಲ್ಲಿ ನಗುವುದು ಹೇಗೆಂದು ಕಲಿಯಲು ತರಬೇತಿ ನೀಡಲಾಗುತ್ತದೆಯಂತೆ!

ಇದರ ಹೊರತಾಗಿ ಪ್ರಾದೇಶಿಕ ಹೆಸರುಗಳೊಂದಿಗೆ ವಿವರಿಸುವುದಾದರೆ, ಉತ್ತರ ಭಾರತದಲ್ಲಿ, ಗೋಲು ಮತ್ತು ಸನ್ನಿ ಮತ್ತು ದಕ್ಷಿಣದಲ್ಲಿ ಅಮ್ಮು ಮತ್ತು ಮಚ್ಚಾ ವ್ಯಾಪಕವಾಗಿ ಜನಪ್ರಿಯವಾಗಿವೆ. ಪೂರ್ವ ಪ್ರದೇಶಗಳಲ್ಲಿ, ಶೋನಾ ಮತ್ತು ಮಿಶ್ತಿ, ಆದರೆ ಪಶ್ಚಿಮದವರು ಪಿಂಕಿ ಮತ್ತು ದಾದಾ ಹೆಸರುಗಳನ್ನು ಇಷ್ಟಪಡುತ್ತಾರೆ ಎಂದು ತಿಳಿದುಬಂದಿದೆ. ಗಮನಾರ್ಹವಾಗಿ, ಸಮೀಕ್ಷೆಗೆ ಒಳಗಾದವರಲ್ಲಿ ಶೇಕಡಾ 60 ರಷ್ಟು ಜನರು ತಮ್ಮ ಅಡ್ಡಹೆಸರುಗಳನ್ನು ಬಾಲ್ಯದಲ್ಲಿ ಅಥವಾ ಶಾಲೆಯ ಸಮಯದಿಂದಲೂ ಬಳಸುತ್ತಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್