
ಕಪ್ಪು ಬಿಳುಪಿನ ಪಟ್ಟೆಗಳನ್ನು ಹೊಂದಿರುವ ಜೀಬ್ರಾಗಳನ್ನು (Zebra) ಪ್ರಾಣಿ ಸಾಮ್ರಾಜ್ಯದ ಅತ್ಯಂತ ಆಕರ್ಷಕ ಮತ್ತು ಬುದ್ಧಿವಂತ ಪ್ರಾಣಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇವು ಈಕ್ವಿಡೇ ಕುದುರೆ ಕುಟುಂಬಕ್ಕೆ ಸೇರಿದ ಪ್ರಾಣಿಗಳಾಗಿದ್ದು, ಇವು ಹೆಚ್ಚಾಗಿ ಆಫ್ರಿಕನ್ ಖಂಡದಾದ್ಯಂತ, ಕೀನ್ಯಾ ಮತ್ತು ಇಥಿಯೋಪಿಯಾದ ಅರೆ-ಮರುಭೂಮಿ ಪ್ರದೇಶಗಳಲ್ಲಿ ಮತ್ತು ನಮೀಬಿಯಾ, ಅಂಗೋಲಾ ಮತ್ತು ದಕ್ಷಿಣ ಆಫ್ರಿಕಾದ ಪರ್ವತ ಪ್ರದೇಶಗಳಲ್ಲಿ ಕಂಡುಬರುತ್ತವೆ. ಗ್ರೆವಿಸ್ ಜೀಬ್ರಾ, ಪ್ಲೈನ್ಸ್ ಜೀಬ್ರಾ ಮತ್ತು ಮೌಂಟೇನ್ ಜೀಬ್ರಾ ಹೀಗೆ ಒಟ್ಟು ಮೂರು ವಿಧದ ಜೀಬ್ರಾಗಳಿದ್ದು, ಇಂದು ಇವು ಕಾಡಿನ ನಾಶ, ಆವಾಸಸ್ಥಾನದ ನಷ್ಟ, ಅಕ್ರಮ ಬೇಟೆಯ ಕಾರಣದಿಂದ ಅಳಿವಿನಂಚಿಗೆ ತಲುಪಿವೆ. ಹಾಗಾಗಿ ಈ ಸಾದು ಪ್ರಾಣಿಗಳ ರಕ್ಷಣೆಯ ಉದ್ದೇಶದಿಂದ ಅಂತಾರಾಷ್ಟ್ರೀಯ ಜೀಬ್ರಾ ದಿನವನ್ನು ಪ್ರತಿವರ್ಷ ಜನವರಿ 31 ರಂದು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.
ಸ್ಮಿತ್ಸೋನಿಯನ್ ರಾಷ್ಟ್ರೀಯ ಮೃಗಾಲಯ ಹಾಗೂ ಕನ್ಸರ್ವೇಶನ್ ಬಯಾಲಜಿ ಇನ್‌ಸ್ಟಿಟ್ಯೂಟ್ ನಂತಹ ಸಂರಕ್ಷಣಾ ಸಂಸ್ಥೆಗಳ ಒಕ್ಕೂಟವು ಈ ಅಂತಾರಾಷ್ಟ್ರೀಯ ಜೀಬ್ರಾ ದಿನವನ್ನು ಆಚರಿಸಲು ಆರಂಭಿಸಿತು. ಆವಾಸಸ್ಥಾನ ಸ್ಥಾನದ ನಷ್ಟ ಬೇಟೆ ಇವೆಲ್ಲದರ ಕಾರಣದಿಂದ ಕಳೆದ ಮೂರು ದಶಕಗಳಲ್ಲಿ ಜೀಬ್ರಾ ಸಂತತಿಗಳು ದೊಡ್ಡ ಪ್ರಮಾಣದಲ್ಲಿ ಅವನತಿಯತ್ತ ತಲುಪಿದ್ದು, ಹಾಗಾಗಿ ಜೀಬ್ರಾ ಸಂತತಿಯನ್ನು ರಕ್ಷಣೆ ಮಾಡಬೇಕು ಎಂಬ ಉದ್ದೇಶದಿಂದ ಈ ಸಂಸ್ಥೆಗಳು ಒಟ್ಟುಗೂಡಿ ಅಂತಾರಾಷ್ಟ್ರೀಯ ಜೀಬ್ರಾ ದಿನವನ್ನು ಆಚರಿಸುವ ಪರಿಕಲ್ಪನೆಯನ್ನು ಜಾರಿಗೆ ತಂದಿತು. ಇಂದು ಪ್ರತಿವರ್ಷ ಜನವರಿ 31 ರಂದು ಈ ವಿಶೇಷ ಜಾಗೃತಿ ದಿನವನ್ನು ಆಚರಿಸಲಾಗುತ್ತಿದೆ.
ಇದನ್ನೂ ಓದಿ: ಜನವರಿ 30 ರಂದು ಹುತಾತ್ಮರ ದಿನವನ್ನು ಆಚರಿಸುವುದೇಕೆ? ಇಲ್ಲಿದೆ ಮಾಹಿತಿ
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ