International Zebra Day 2024: ಪರಿಸರ ಸಮತೋಲನಕ್ಕೆ ಸಾಧುಜೀವಿ ಜೀಬ್ರಾಗಳ ಸಂರಕ್ಷಣೆ ಅಗತ್ಯ

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 30, 2024 | 10:40 AM

ಮನುಷ್ಯನು ತನ್ನ ಸ್ವಾರ್ಥಕ್ಕಾಗಿ ಇಡೀ ಭೂಮಿಯನ್ನು ಬಳಸಿಕೊಂಡಿದ್ದು, ಮೂಕ ಜೀವಿಗಳಿಗೆ ಬದುಕಲು ಬಿಡುತ್ತಿಲ್ಲ. ಹೀಗಾಗಿ ಜೀವ ಸಂಕುಲದಲ್ಲಿರುವ ಪ್ರಾಣಿ ಪಕ್ಷಿಗಳ ಸಂತತಿಗಳು ನಶಿಸಿ ಹೋಗುತ್ತಿವೆ. ವನ್ಯ ಜೀವಿಗಳಲ್ಲಿ ಸಾಲಿಗೆ ಸೇರಿರುವ ಜೀಬ್ರಾ ಸಂತತಿಗಳು ಅಳಿವಿನಂಚಿಗೆ ತಲುಪಿದ್ದು, ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಜನವರಿ 31 ರಂದು ಅಂತಾರಾಷ್ಟ್ರೀಯ ಜೀಬ್ರಾ ದಿನವನ್ನು ಆಚರಿಸಲಾಗುತ್ತಿದೆ.

International Zebra Day 2024: ಪರಿಸರ ಸಮತೋಲನಕ್ಕೆ ಸಾಧುಜೀವಿ ಜೀಬ್ರಾಗಳ ಸಂರಕ್ಷಣೆ ಅಗತ್ಯ
Follow us on

ಮನುಷ್ಯನು ತನ್ನ ದುರಾಸೆಗೆ ಸೃಷ್ಟಿಯ ಸಮತೋಲನವನ್ನು ಅಲ್ಲೋಲ ಕಲ್ಲೋಲ ಮಾಡಿದ್ದಾನೆ. ಹೀಗಾಗಿ ಅರಣ್ಯಗಳಲ್ಲಿರುವ ವನ್ಯ ಜೀವಿಗಳು ನಾಡಿಗೆ ಬರುತ್ತಿವೆ. ಇನ್ನೊಂದೆಡೆ ಕೆಲ ಪ್ರಾಣಿಗಳ ಸಂತತಿಗಳು ಕ್ಷಿಣಿಸುತ್ತಿದ್ದು, ಹೀಗೆ ಆದರೆ ಇಂತಹ ಸಾಕಷ್ಟು ಪ್ರಾಣಿಗಳನ್ನು ಫೋಟೋಗಳಲ್ಲಿ ಮಾತ್ರ ನೋಡುವ ಕಾಲವೇನು ದೂರವಿಲ್ಲ. ಪ್ರತಿ ವರ್ಷ ಜನವರಿ 31 ರಂದು ಆಚರಿಸಲಾಗುವ ಅಂತಾರಾಷ್ಟ್ರೀಯ ಜೀಬ್ರಾ ದಿನವು ಈ ಪ್ರಾಣಿಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ.

ಅಂತಾರಾಷ್ಟ್ರೀಯ ಜೀಬ್ರಾ ದಿನದ ಇತಿಹಾಸ

ಸ್ಮಿತ್ಸೋನಿಯನ್ ರಾಷ್ಟ್ರೀಯ ಮೃಗಾಲಯ ಹಾಗೂ ಕನ್ಸರ್ವೇಶನ್ ಬಯಾಲಜಿ ಇನ್‌ಸ್ಟಿಟ್ಯೂಟ್‌ ನಂತಹ ಸಂರಕ್ಷಣಾ ಸಂಸ್ಥೆಗಳ ಒಕ್ಕೂಟವು ಈ ಅಂತಾರಾಷ್ಟ್ರೀಯ ಜೀಬ್ರಾ ದಿನವನ್ನು ಆಚರಿಸಲು ಆರಂಭಿಸಿತು. ಅಳಿವಿನಂಚಿನಲ್ಲಿರುವ ಈ ಜೀಬ್ರಾಗಳು ಹೆಚ್ಚಾಗಿ ಆಫ್ರಿಕನ್ ಖಂಡದಲ್ಲಿ, ಕೀನ್ಯಾ ಮತ್ತು ಇಥಿಯೋಪಿಯಾದ ಅರೆ ಮರುಭೂಮಿ ಪ್ರದೇಶಗಳಲ್ಲಿ, ನಮೀಬಿಯಾ, ಅಂಗೋಲಾ ಮತ್ತು ದಕ್ಷಿಣ ಆಫ್ರಿಕಾದ ಗುಡ್ಡಗಾಡು ಪ್ರದೇಶಗಳಲ್ಲಿ ಕಂಡುಬರುತ್ತವೆ. ಮಾಂಸಕ್ಕಾಗಿ ಬೇಟೆಯಾಡುವ ಮೂಲಕ ಜೀಬ್ರಾಗಳ ಸಂತತಿಯನ್ನು ಅಳಿವಿನಂಚಿಗೆ ದೂಡಲಾಗುತ್ತಿದೆ. ಕಳೆದ ಮೂರು ದಶಕಗಳಲ್ಲಿ ಜೀಬ್ರಾಗಳನ್ನು ಚರ್ಮಕ್ಕಾಗಿ ಬೇಟೆಯಾಡಿದ ಕಾರಣ ಜೀಬ್ರಾ ಸಂತತಿಗಳು ದೊಡ್ಡ ಪ್ರಮಾಣದಲ್ಲಿ ನಶಿಸಿ ಹೋಗಿವೆ.

ಇದನ್ನೂ ಓದಿ: ಮಕ್ಕಳ ಲಾಲನೆ ಪಾಲನೆಯಲ್ಲಿ ಭಾರತೀಯ ತಂದೆ ತಾಯಂದಿರು ಬೆಸ್ಟ್

ಅಂತಾರಾಷ್ಟ್ರೀಯ ಜೀಬ್ರಾ ದಿನದ ಮಹತ್ವ

ಅಂತಾರಾಷ್ಟ್ರೀಯ ಜೀಬ್ರಾ ದಿನವು ಜೀಬ್ರಾಗಳ ಸಂತತಿಯ ಅವನತಿಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ. ಸಾಧುಜೀವಿಗಳಾಗಿರುವ ಜೀಬ್ರಾಗಳ ಸಂರಕ್ಷಣೆಯನ್ನು ಉತ್ತೇಜಿಸುವುದಾಗಿದೆ. ಈ ದಿನದಂದು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ, ಈ ಪ್ರಾಣಿಗಳನ್ನು ರಕ್ಷಣೆ ಮಾಡುವುದರಿಂದ ಪರಿಸರ ಸಮತೋಲನಕ್ಕೆ ಹೇಗೆ ಸಹಕಾರಿಯಾಗಲಿದೆ ಎನ್ನುವುದರ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಹಾಗೆಯೇ ಅನೇಕ ಕಡೆಗಳಲ್ಲಿ ಜಾಗೃತಿ ಅಭಿಯಾನಗಳು ಮತ್ತು ದೇಣಿಗೆ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ