AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳ ಲಾಲನೆ ಪಾಲನೆಯಲ್ಲಿ ಭಾರತೀಯ ತಂದೆ ತಾಯಂದಿರು ಬೆಸ್ಟ್

ಭಾರತೀಯರು ಸಂಬಂಧಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾರೆ. ಹೀಗಾಗಿ ಭಾರತದಲ್ಲಿ ಇವತ್ತಿಗೂ ಕೆಲವು ಕಡೆಗಳಲ್ಲಿ ಕೂಡು ಕುಟುಂಬ ವ್ಯವಸ್ಥೆಗಳಿವೆ. ಭಾರತೀಯ ಕೌಟುಂಬಿಕ ವ್ಯವಸ್ಥೆಯಲ್ಲಿ ಮಕ್ಕಳನ್ನು ಬೆಳೆಸುವಾಗ ಭಾರತೀಯ ತಂದೆ ತಾಯಂದಿರು ಬಹಳ ಕಟ್ಟುನಿಟ್ಟಾಗಿರುತ್ತಾರೆ. ಮಕ್ಕಳಿಗೆ ಪ್ರೀತಿಯ ಜೊತೆಗೆ ಸಂಬಂಧಕ್ಕೆ ಎಷ್ಟು ಪ್ರಾಮುಖ್ಯತೆ ನೀಡಬೇಕು ಎನ್ನುವುದನ್ನು ಹೇಳಿಕೊಡುವ ಭಾರತೀಯ ತಂದೆ ತಾಯಿಯರು ಕೆಲವು ಅಂಶಗಳಿಂದ ಉತ್ತಮ ಪೋಷಕರು ಎನಿಸಿಕೊಂಡಿದ್ದಾರೆ.

ಮಕ್ಕಳ ಲಾಲನೆ ಪಾಲನೆಯಲ್ಲಿ ಭಾರತೀಯ ತಂದೆ ತಾಯಂದಿರು ಬೆಸ್ಟ್
ಸಾಯಿನಂದಾ
| Edited By: |

Updated on: Jan 29, 2024 | 6:33 PM

Share

ಮನೆಯೇ ಮೊದಲ ಪಾಠ ಶಾಲೆ, ಜನನಿಯೇ ಮೊದಲ ಗುರು ಎನ್ನುವ ಮಾತಿದೆ. ಈ ಮಾತಿನಂತೆ ತಮ್ಮ ಮಕ್ಕಳನ್ನು ಸರಿಯಾದ ದಾರಿಯಲ್ಲಿ ಬೆಳೆಸಬೇಕು ಎನ್ನುವುದು ಎಲ್ಲಾ ತಂದೆ ತಾಯಂದಿರ ಕನಸು. ಹೀಗಾಗಿ ಮಗುವಿರುವಾಗಲೇ ಮಕ್ಕಳ ಆರೈಕೆ ಯೊಂದಿಗೆ ಮಕ್ಕಳ ಬೇಕು ಬೇಡಗಳ ಬಗ್ಗೆ ಗಮನ ಕೊಡುತ್ತಾರೆ. ತಮ್ಮ ಮಕ್ಕಳನ್ನು ಚೆನ್ನಾಗಿ ಓದಿ ಉದ್ಯೋಗ ಪಡೆದು ತಮ್ಮ ಕಾಲ ಮೇಲೆ ನಿಲ್ಲಲ್ಲಿ ಎನ್ನುವ ಕಾರಣ ತಮ್ಮ ಜೀವನವನ್ನು ಸವೆಸುತ್ತಾರೆ. ಭಾರತಕ್ಕೆ ಹೋಲಿಕೆ ಮಾಡಿದರೆ ವಿದೇಶಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಬೆಳೆಸುವ ರೀತಿಯಲ್ಲಿ ಬಹಳಷ್ಟು ಭಿನ್ನತೆಗಳಿವೆ. ಆದರೆ ಭಾರತೀಯರು ಮಕ್ಕಳನ್ನು ರೀತಿಯಲ್ಲಿ ಕೆಲವು ಬೆಸ್ಟ್ ಸಂಗತಿಗಳನ್ನು ಒಳಗೊಂಡಿದ್ದು, ಮಕ್ಕಳಿಗೆ ಬದ್ಧತೆಯಿಂದ ಕೂಡಿದ ಜೀವನ ಕಟ್ಟಿಕೊಡುವತ್ತ ಗಮನ ಕೊಡುತ್ತಾರೆ.

ಭಾರತೀಯ ಪೋಷಕರು ಉತ್ತಮ ಎನ್ನಲು ಕಾರಣಗಳು ಇವು

* ಮಕ್ಕಳಿಗೆ ತಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ತಿಳಿಸುವುದು : ಭಾರತೀಯ ಪೋಷಕರು ತಮ್ಮ ಮಕ್ಕಳಿಗೆ ಸಾಂಸ್ಕೃತಿಕ ಸಂಪ್ರದಾಯಗಳು, ಆಚರಣೆಗಳು ಮತ್ತು ಪದ್ಧತಿಗಳ ಬಗ್ಗೆ ವಿವರವಾಗಿ ಕಲಿಸಿಕೊಡುತ್ತಾರೆ. ತಂದೆ ತಾಯಂದಿರು ತಮ್ಮ ಸಂಸ್ಕೃತಿಯನ್ನು ಹೇಳಿಕೊಡುವ ಮೂಲಕ ಹಬ್ಬ ಹರಿದಿನಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವಂತೆ ಮಾಡುತ್ತಾರೆ. ಹೀಗಾಗಿ ಮಕ್ಕಳು ಕೂಡ ತಮ್ಮ ಆಚಾರ ವಿಚಾರ, ಸಂಸ್ಕೃತಿಯನ್ನು ಮುಂದುವರೆಸಿಕೊಂಡು ಹೋಗಲು ಸುಲಭವಾಗುತ್ತದೆ.

* ಮಕ್ಕಳ ಸಾಧನೆಯಲ್ಲಿ ತಮ್ಮ ಖುಷಿ ಕಾಣುತ್ತಾರೆ : ಭಾರತೀಯ ಪೋಷಕರು ತಮ್ಮ ಮಕ್ಕಳ ಸಾಧನೆಗಳಲ್ಲಿ ಖುಷಿಯನ್ನು ಕಾಣುತ್ತಾರೆ. ಅವರು ಶೈಕ್ಷಣಿಕ ಸಾಧನೆಗಳು, ವೃತ್ತಿಜೀವನದ ಮೈಲಿಗಲ್ಲುಗಳಿರಲಿ, ವೈಯಕ್ತಿಕ ಯಶಸ್ಸುಗಳಿರಲಿ ಈ ಎಲ್ಲಾ ಸಾಧನೆಗಳನ್ನು ತಮ್ಮ ಸಾಧನೆಯಂತೆ ಸಂಭ್ರಮಿಸುತ್ತಾರೆ

* ಅಪಾರವಾದ ಪ್ರೀತಿ ನೀಡುವುದು: ಮಕ್ಕಳನ್ನು ಯಾವುದೇ ನಿರೀಕ್ಷೆಗಳಿಲ್ಲದೇ ಷರತ್ತುಗಳನ್ನು ಹಾಕದೇನೇ ಪ್ರೀತಿಸುವುದು. ಭಾರತೀಯರು ತಮ್ಮ ಮಕ್ಕಳನ್ನು ಭಾವನಾತ್ಮಕ ಸಂಬಂಧಗಳ ಸುಳಿಯಲ್ಲಿ ಹಾಗೂ ಅಪಾರವಾದ ಪ್ರೀತಿಯನ್ನು ನೀಡುತ್ತಾರೆ.

*ಕುಟುಂಬದ ನಿರ್ವಹಣೆಯ ಬಗ್ಗೆ ತಿಳಿಸುವುದು : ಭಾರತದಲ್ಲಿ ಕೂಡು ಕುಟುಂಬದ ವ್ಯವಸ್ಥೆಯೂ ಕೆಲವೆಡೆಯಿದೆ. ಇನ್ನು ಕೆಲವೆಡೆ ತಂದೆ ತಾಯಿ ಮಕ್ಕಳು ಸಣ್ಣ ಕುಟುಂಬವಾಗಿದ್ದರೂ ಕೂಡ ಒಗ್ಗಟ್ಟು, ಒಬ್ಬರು ಇನ್ನೊಬ್ಬರಿಗೆ ನೀಡುವ ಬೆಂಬಲ ಹಾಗೂ ಜವಾಬ್ದಾರಿಗಳ ಹಂಚಿಕೆಯನ್ನು ಮಕ್ಕಳಿಗೆ ತಿಳಿಸಿಕೊಡುತ್ತಾರೆ.

* ಕಷ್ಟಪಟ್ಟು ದುಡಿಯುವುದನ್ನು ಕಲಿಸುವುದು: ಭಾರತೀಯ ಪೋಷಕರು ಉತ್ತಮ ಎನಿಸಿಕೊಳ್ಳಲು ಮತ್ತೊಂದು ಕಾರಣವೆಂದರೆ ಮಕ್ಕಳಿಗೆ ಕಷ್ಟ ಪಟ್ಟು ದುಡಿಯುವುದು ಕಲಿಸಿಕೊಡುವುದು. ಸುಲಭವಾಗಿ ಯಾವುದು ಸಿಗುವುದಿಲ್ಲ. ಕಷ್ಟ ಪಟ್ಟು ದುಡಿದರೆ ಮಾತ್ರ ಬೇಕಾದದ್ದು ಪಡೆಯಲು ಸಾಧ್ಯ ಎನ್ನುವ ಮಾತುಗಳು ಮಕ್ಕಳಿಗೆ ಕೆಲಸ ಮಾಡಲು ಪ್ರೇರಣೆ ನೀಡುತ್ತದೆ. ಅದರೊಂದಿಗೆ ದೃಢತೆ, ಬದ್ಧತೆ ಮತ್ತು ಶ್ರದ್ಧೆಯಿಂದ ಮಾತ್ರ ಯಶಸ್ಸಿನ ದಾರಿ ಎನ್ನುವ ಸೂತ್ರವನ್ನು ಹೇಳಿಕೊಡುತ್ತಾರೆ.

* ಮಕ್ಕಳ ಮದುವೆ ಜೀವನದ ಬಗ್ಗೆ ಮಹತ್ವದ ನಿರ್ಧಾರ: ಮಕ್ಕಳ ಮದುವೆಯನ್ನು ಕುಟುಂಬ ಸೇರಿಕೊಂಡು ಅದ್ದೂರಿಯಾಗಿ ಮಾಡುತ್ತದೆ. ಕುಟುಂಬದ ಸದಸ್ಯರ ಅಭಿಪ್ರಾಯ, ಬೆಂಬಲ ಹಾಗೂ ನಿರ್ದೇಶನವನ್ನು ಪಡೆದುಕೊಂಡು ವವ್ಯವಸ್ಥಿತವಾಗಿ ಮಕ್ಕಳಿಗೆ ವೈವಾಹಿಕ ಜೀವನವನ್ನು ಕಟ್ಟಿಕೊಡುತ್ತಾರೆ.

* ನೈತಿಕ ಮತ್ತು ಸಾಂಸ್ಕೃತಿಕ ಮೌಲ್ಯ ಗಳತ್ತ ಹೆಚ್ಚು ಗಮನ : ಭಾರತೀಯ ಪೋಷಕರು ತಮ್ಮ ಮಕ್ಕಳಿಗೆ ನೈತಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಕಲಿಸಲು ಹೆಚ್ಚು ಒತ್ತು ನೀಡುತ್ತಾರೆ. ಇದು ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡುತ್ತದೆ.

* ಹಿರಿಯರನ್ನು ಗೌರವಿಸುವುದು : ಭಾರತೀಯ ಸಂಸ್ಕೃತಿಯಲ್ಲಿ ಹಿರಿಯರನ್ನು ಗೌರವಿಸುವುದು ಅತ್ಯಂತ ಮಹತ್ವದ್ದಾಗಿದೆ. ಹೀಗಾಗಿ ಮಕ್ಕಳ ಪೋಷಣೆಯ ವೇಳೆಯಲ್ಲಿ ತಮಗಿಂತ ವಯಸ್ಸಿಗಿಂತ ದೊಡ್ಡವರನ್ನು ಗೌರವಿಸುವುದು, ಕಿರಿಯರ ಜೊತೆಗೆ ಉತ್ತಮ ಒಡನಾಟವನ್ನು ಹೊಂದಬೇಕು ಎನ್ನುವ ಬೋಧನೆಯೂ ಸದಾ ಇರುತ್ತದೆ.

ಇದನ್ನೂ ಓದಿ: ಮುಖದ ಅಂದವನ್ನು ಹೆಚ್ಚಿಸುತ್ತೆ ಈ ಅಕ್ಕಿಹಿಟ್ಟು ಫೇಸ್ ಪ್ಯಾಕ್

* ಗುಣಮಟ್ಟದ ಶಿಕ್ಷಣ: ಸಾಮಾನ್ಯವಾಗಿ ಭಾರತೀಯ ಪೋಷಕರು ಶಿಕ್ಷಣದ ಬಗ್ಗೆ ಹೆಚ್ಚು ಯೋಚಿಸುವ, ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ಶಾಲೆಗಳನ್ನೇ ಆಯ್ಕೆ ಮಾಡುತ್ತಾರೆ. ಅದಲ್ಲದೇ ಮಕ್ಕಳು ತರಗತಿಗೆ ಗೈರು ಹಾಕುವುದನ್ನು ಬಯಸುವುದಿಲ್ಲ. ಶಾಲೆಯಲ್ಲಿ ಒಳ್ಳೆಯ ವಿದ್ಯಾರ್ಥಿ ಎನ್ನುವ ಹೆಸರು ತರಲಿ ಎಂದು ಬಯಸುತ್ತಾರೆ.

* ಭಾವನಾತ್ಮಕ ಬೆಂಬಲ: ಮಕ್ಕಳಿಗೆ ದೈಹಿಕ ಬೆಂಬಲ ಹಾಗೂ ಭಾವನಾತ್ಮಕ ಬೆಂಬಲ ನೀಡುವ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ. ಕಷ್ಟದ ಸಮಯದಲ್ಲಿ ಮಕ್ಕಳಿಗೆ ಧೈರ್ಯ ತುಂಬುತ್ತ ನಾವಿದ್ದೇವೆ ಎಂದು ಸದಾ ಮಾರ್ಗದರ್ಶನವನ್ನು ನೀಡುತ್ತಾರೆ.

* ತ್ಯಾಗಮಾಡುವ ಮನೋಭಾವ: ಭಾರತೀಯ ತಂದೆ ತಾಯಂದಿರು ಮಕ್ಕಳಿಗಾಗಿ ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಲು ಸಿದ್ದವಾಗಿರುತ್ತಾರೆ. ಮಕ್ಕಳ ಶಿಕ್ಷಣಕ್ಕಾಗಿ, ಭವಿಷ್ಯಕ್ಕಾಗಿ ತಮ್ಮ ಖುಷಿಯನ್ನು ಬದಿಗಿರಿಸಿ ಅವರಿಗಾಗಿಯೇ ಸಮಯವನ್ನು ನೀಡುತ್ತಾರೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ