AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿರಿಯ ನಾಗರಿಕರ ಜೀವನಶೈಲಿ ಹೇಗಿರಬೇಕು?; ಮುಪ್ಪನ್ನು ಮುಂದೂಡುವುದು ಹೇಗೆ?

ಕೆಲವರು ಕಡಿಮೆ ವಯಸ್ಸಿನಲ್ಲೇ ಮುಪ್ಪಾದಂತೆ ಕಾಣುತ್ತಾರೆ, ಇನ್ನು ಕೆಲವರು 70 ವರ್ಷವಾದರೂ ಮಧ್ಯ ವಯಸ್ಕರಂತೆ ಕಾಣುತ್ತಾರೆ. ಅದಕ್ಕೆ ಕಾರಣಗಳ ಬಗ್ಗೆ ವಯೋಮಾನಸ ಸಂಜೀವಿನಿ ಆರೋಗ್ಯ ಸರಣಿಯಲ್ಲಿ ಖ್ಯಾತ ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ್ ನೀಡಿರುವ ಮಾಹಿತಿಗಳು ಇಲ್ಲಿವೆ.

ಹಿರಿಯ ನಾಗರಿಕರ ಜೀವನಶೈಲಿ ಹೇಗಿರಬೇಕು?; ಮುಪ್ಪನ್ನು ಮುಂದೂಡುವುದು ಹೇಗೆ?
ಡಾ. ಸಿ.ಆರ್. ಚಂದ್ರಶೇಖರ್Image Credit source: Indian Express
ಸುಷ್ಮಾ ಚಕ್ರೆ
|

Updated on:Jan 29, 2024 | 6:20 PM

Share

ಬಹಳಷ್ಟು ಹಿರಿಯ ನಾಗರಿಕರು ತಮ್ಮ ಮೊಮ್ಮಕ್ಕಳಿಂದ ಅಜ್ಜ-ಅಜ್ಜಿ ಎಂದು ಕರೆಸಿಕೊಳ್ಳಲು ಇಷ್ಟಪಡುವುದಿಲ್ಲ. ನಮಗೆ ವಯಸ್ಸಾಗಿದೆ ಎಂಬುದನ್ನು ನಾವು ಮಾನಸಿಕವಾಗಿ ಸ್ವೀಕರಿಸಬೇಕು, ಅದನ್ನು ಒಪ್ಪಿಕೊಳ್ಳಬೇಕು. ಮುಪ್ಪು ಒಂದೇ ಬಾರಿ ಇದ್ದಕ್ಕಿದ್ದಂತೆ ಆಗುವ ಪ್ರಕ್ರಿಯೆಯಲ್ಲ. ಹಲವು ಮಜಲುಗಳನ್ನು ದಾಟಿ ನಿಧಾನವಾಗಿ ನಾವು ಮುಪ್ಪಿಗೊಳಗಾಗುತ್ತೇವೆ. ಆದರೆ, ಮುಪ್ಪಾದವರೆಲ್ಲರೂ ಒಂದೇ ರೀತಿ ಕಾಣುವುದಿಲ್ಲ. ಕೆಲವರು ಕಡಿಮೆ ವಯಸ್ಸಿನಲ್ಲೇ ಮುಪ್ಪಾದಂತೆ ಕಾಣುತ್ತಾರೆ, ಇನ್ನು ಕೆಲವರು 70 ವರ್ಷವಾದರೂ ಮಧ್ಯ ವಯಸ್ಕರಂತೆ ಕಾಣುತ್ತಾರೆ. ಅದಕ್ಕೆ ಕಾರಣಗಳ ಬಗ್ಗೆ ವಯೋಮಾನಸ ಸಂಜೀವಿನಿ ಆರೋಗ್ಯ ಸರಣಿಯಲ್ಲಿ ಖ್ಯಾತ ಮನೋವೈದ್ಯ ಹಾಗೂ ನಿಮ್ಹಾನ್ಸ್​ನ ನಿವೃತ್ತ ಪ್ರಾಧ್ಯಾಪಕರಾದ ಡಾ. ಸಿ.ಆರ್. ಚಂದ್ರಶೇಖರ್ ನೀಡಿರುವ ಮಾಹಿತಿಗಳು ಇಲ್ಲಿವೆ.

– ಜೀನ್ಸ್​ ನಮ್ಮ ಮುಪ್ಪನ್ನು ನಿರ್ಧರಿಸುವ ಮೊದಲ ಅಂಶವಾಗಿದೆ. ಕೆಲವರಿಗೆ ಅನುವಂಶಿಕವಾಗಿ ಬಂದ ಬಳುವಳಿಗಳಿಂದ ಕೂದಲು ಬೇಗ ಬಿಳಿಯಾಗುವುದಿಲ್ಲ, ಬೊಜ್ಜು ಉಂಟಾಗುವುದಿಲ್ಲ, ಮುಖದಲ್ಲಿ ಸುಕ್ಕು ಬರುವುದಿಲ್ಲ.

– ನಾವು ಯಾವ ದೇಶದಲ್ಲಿ ವಾಸಿಸುತ್ತಿದ್ದೇವೆ ಎಂಬುದು ಕೂಡ ಮುಪ್ಪನ್ನು ನಿರ್ಧರಿಸುತ್ತದೆ. ಆ ದೇಶದ ಜೀವನಶೈಲಿ ನಮ್ಮ ದೇಹದ ಮುಪ್ಪಿನ ಮೇಲೆ ಪರಿಣಾಮ ಬೀರುತ್ತದೆ.

– ಆಹಾರ ಪದ್ಧತಿಯೂ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸಾತ್ವಿಕ ಆಹಾರ ಸೇವಿಸುವ ಜನರು ನಿಧಾನವಾಗಿ ಮುಪ್ಪಿಗೊಳಗಾಗುತ್ತಾರೆ, ತಾಮಸ ಆಹಾರ ಸೇವಿಸುವವರು ಬೇಗ ವಯಸ್ಸಾದಂತೆ ಕಾಣುತ್ತಾರೆ.

ಇದನ್ನೂ ಓದಿ: ಗುಣಮಟ್ಟದ ನಿದ್ರೆ, ಮಾನಸಿಕ ಆರೋಗ್ಯಕ್ಕೆ ಈ ರೀತಿ ಮಾಡಿ

– ನಮ್ಮ ಮಾನಸಿಕ ಚಟುವಟಿಕೆ ಕೂಡ ಮುಪ್ಪನ್ನು ನಿರ್ಧರಿಸುತ್ತದೆ. ನಾವು ಹೆಚ್ಚು ದೈಹಿಕವಾಗಿ ಮತ್ತು ಮಾನಸಿಕವಾಗಿ ಚಟುಟವಿಕೆಯಿಂದ ಇದ್ದರೆ ಅವರಿಗೆ ನಿಧಾನವಾಗಿ ಮುಪ್ಪು ಬರುತ್ತದೆ. ಸೋಮಾರಿಯಾಗಿದ್ದರೆ ಬೇಗ ಮುಪ್ಪು ಆವರಿಸುತ್ತದೆ. ಹೀಗಾಗಿ, ಯೌವನದಲ್ಲಿ ಮತ್ತು ಮಧ್ಯ ವಯಸ್ಸಿನಲ್ಲಿ ಸಕ್ರಿಯವಾಗಿದ್ದವರಿಗೆ ಮುಪ್ಪು ನಿಧಾನವಾಗಿ ಬರುತ್ತದೆ.

– ನಮ್ಮ ಆಚಾರ, ವಿಚಾರ, ಆಲೋಚನೆಗಳು, ವಿಹಾರ ಕೂಡ ಮುಪ್ಪನ್ನು ನಿರ್ಧರಿಸುವ ಅಂಶಗಳಾಗಿವೆ. ನಾವು ಪಾಸಿಟಿವ್ ಆಲೋಚನೆಯನ್ನು ರೂಢಿಸಿಕೊಂಡರೆ ಅದು ಮಾನಸಿಕವಾಗಿ ನಮ್ಮನ್ನು ಸದೃಢಗೊಳಿಸುತ್ತದೆ. ಹಾಗೇ, ವಾಕಿಂಗ್, ಯೋಗ ಮುಂತಾದ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು.

– 60 ವಯಸ್ಸಾದಂತೆ ಆದಷ್ಟೂ ಉತ್ತಮ ಆಹಾರಶೈಲಿಯನ್ನು ರೂಢಿಸಿಕೊಳ್ಳಬೇಕು. ಮೃದು ಹಾಗೂ ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು. ಬೆಳಗ್ಗೆ 8ರಿಂದ 8.30ರೊಳಗೆ ತಿಂಡಿ ಮಾಡಬೇಕು. 1ರಿಂದ 1.30ರ ಒಳಗೆ ಮಧ್ಯಾಹ್ನದ ಊಟ ಮಾಡಬೇಕು. ರಾತ್ರಿ 8.30ರೊಳಗೆ ರಾತ್ರಿಯ ಊಟ ಮಾಡಬೇಕು. ದಿನವೂ ಒಂದೇ ಸಮಯದಲ್ಲಿ ಊಟ ಮಾಡುವ ವೇಳಾಪಟ್ಟಿ ಹಾಕಿಕೊಳ್ಳಬೇಕು. ಆದಷ್ಟೂ ಉಪ್ಪು, ಖಾರ, ಸಿಹಿ, ಹುಳಿಯ ಆಹಾರವನ್ನು ಕಡಿಮೆ ತಿನ್ನಬೇಕು.

– ವಯಸ್ಸಾದಂತೆ ನಮಗೆ ಬೊಜ್ಜು ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಇದಕ್ಕೆ ಆದಷ್ಟೂ ಕಡಿಮೆ ಆಹಾರ ಸೇವಿಸಬೇಕು. ಬೊಜ್ಜು ಹೆಚ್ಚಾದರೆ ನಮ್ಮ ದೇಹದ ಭಾರ ಹೊರಲು ನಮಗೇ ಕಷ್ಟವಾಗುತ್ತದೆ. ತೂಕ ಹೆಚ್ಚಾಗದಂತೆ ಎಚ್ಚರ ವಹಿಸಬೇಕು.

– ನಿದ್ರಾಹೀನತೆ ಹಿರಿಯ ವಯಸ್ಸಿನವರಲ್ಲಿ ಕಾಡುತ್ತಿರುವ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ, ಆದಷ್ಟೂ ಬೆಳಗ್ಗೆ ಬೇಗ ಏಳುವ ಅಭ್ಯಾಸ ಮಾಡಿಕೊಳ್ಳಿ. ಹೊರಗೆ ಹೋಗಿ ವಾಕಿಂಗ್ ಮಾಡಿ. ರಾತ್ರಿ ಬೇಗ ಮಲಗುವ ಅಭ್ಯಾಸ ಇಟ್ಟುಕೊಳ್ಳಿ. ಬಹಳ ಜನ ವಯಸ್ಸಾದವರು ರಾತ್ರಿ ನಿದ್ರೆ ಬರುವುದಿಲ್ಲವೆಂದು ಹಗಲು ನಿದ್ರೆ ಮಾಡುತ್ತಾರೆ. ಆದರೆ, ಇದು ಒಳ್ಳೆಯ ಅಭ್ಯಾಸವಲ್ಲ. ಹಗಲು ಮಲಗುವುದಾದರೆ 10-15 ನಿಮಿಷಗಳ ಸಣ್ಣ ವಿಶ್ರಾಂತಿ ತೆಗೆದುಕೊಳ್ಳಿ. ಹಗಲು ತುಂಬ ಹೊತ್ತು ಮಲಗಿದರೆ ರಾತ್ರಿಯ ನಿದ್ರೆಗೆ ತೊಂದರೆ ಆಗುತ್ತದೆ.

ಇದನ್ನೂ ಓದಿ: ನಿದ್ರೆ ಮಾಡಲು ಪರದಾಡುತ್ತೀರಾ?; ನಿದ್ರಾಹೀನತೆ ಕ್ಯಾನ್ಸರ್​ಗೂ ಕಾರಣವಾದೀತು ಎಚ್ಚರ!

– ಹಣ್ಣುಗಳನ್ನು ಹೆಚ್ಚು ಸೇವಿಸಿ. ಆಯಾ ಸೀಸನ್​ನಲ್ಲಿ ಯಾವ ಹಣ್ಣುಗಳು ಸಿಗುತ್ತವೆಯೋ ಅದನ್ನು ತಿನ್ನುವ ಅಭ್ಯಾಸ ರೂಢಿಸಿಕೊಳ್ಳಿ. ಏಕೆಂದರೆ, ವಯಸ್ಸಾದಂತೆ ಶುಗರ್, ಬಿಪಿ ಎಂದೆಲ್ಲ ಮಾತ್ರೆಗಳನ್ನು ಸೇವಿಸುವವರು ಹೆಚ್ಚು. ಹೀಗಿದ್ದಾಗ ನಿಮ್ಮ ದೇಹಕ್ಕೆ ಹಣ್ಣುಗಳಿಂದ ಪೌಷ್ಟಿಕಾಂಶ ಸಿಗುತ್ತದೆ.

– ಇಡೀ ದಿನ ಟಿವಿ ನೋಡುತ್ತಲೋ, ಮೊಬೈಲ್ ನೋಡುತ್ತಲೋ ಸಮಯ ಕಳೆಯುವ ಬದಲು ಸಂಗೀತ, ಪುಸ್ತಕ ಹಾಗೂ ಪೇಪರ್ ಓದುವುದು, ಗೆಳೆಯರೊಂದಿಗೆ ಮಾತನಾಡುವುದು. ತೋಟಗಾರಿಕೆ, ಗಾರ್ಡನಿಂಗ್ ಮುಂತಾದ ಹವ್ಯಾಸಗಳನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಮಾನಸಿಕ ನೆಮ್ಮದಿ ಹೆಚ್ಚುತ್ತದೆ. ಇತ್ತೀಚೆಗೆ ವೃದ್ಧಾಶ್ರಮಗಳಲ್ಲಿ ಈ ಅಭ್ಯಾಸಗಳನ್ನು ರೂಢಿ ಮಾಡಿಕೊಳ್ಳಲು ಪ್ರೇರಣೆ ನೀಡಲಾಗುತ್ತಿದೆ.

– ನಾವು ಅತಿಯಾಗಿ ಯಾರ ಬಗ್ಗೆಯೂ ಮೋಹ ಬೆಳೆಸಿಕೊಳ್ಳಬಾರದು. ಮಕ್ಕಳು, ಸೊಸೆ, ಮೊಮ್ಮಕ್ಕಳು, ತಮ್ಮಂದಿರು, ತಂಗಿಯರು ಹೀಗೆ ನಮ್ಮವರ ಬಗ್ಗೆ ವಯಸ್ಸಾದಂತೆ ನಮಗೆ ಮೋಹ ಬೆಳೆಯಲಾರಂಭಿಸುತ್ತದೆ. ಆದರೆ, ನಮಗೆ ವಯಸ್ಸಾದಾಗ ಅವರಿಗೆ ನಮ್ಮ ಅಗತ್ಯ ಕಡಿಮೆಯಾಗುತ್ತಾ ಬರುತ್ತಿದೆ. ಇದೇ ಯೋಚನೆಯಲ್ಲಿ ಅನೇಕ ವಯಸ್ಸಾದವರು ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಇಂತಹ ಮೋಹದಿಂದ ನಿರಾಸೆಯಾಗುತ್ತದೆ. ಈ ಯಾವುದರ ಬಗ್ಗೆಯೂ ನಿರೀಕ್ಷೆ ಇಟ್ಟುಕೊಳ್ಳಬೇಡಿ.

– ವಯಸ್ಸಾದವರು ಯಾರ ಮೇಲೂ ಅವಲಂಬಿತರಾಗಬಾರದು. ನಮಗೆ ಬೇಕಾದುದನ್ನು ನಾವೇ ವ್ಯವಸ್ಥೆ ಮಾಡಿಕೊಳ್ಳಬೇಕು. ಸಾವಿನ ಬಗ್ಗೆ ಎಂದಿಗೂ ಆತಂಕ ಹಾಗೂ ಭಯ ಪಡಬೇಡಿ. ಸಾವನ್ನು ಸ್ನೇಹಿತನಂತೆ ಎದುರುಗೊಳ್ಳಿ.

– ನಮ್ಮ ಮುಂದಿನ ಪೀಳಿಗೆಗೆ ಎಂದು ಎಲ್ಲವನ್ನೂ ಮಕ್ಕಳ ಕೈಗೆ ಒಪ್ಪಿಸಿ ನೀವು ಬರಿಗೈಯಾಗಬೇಡಿ. ನೀವು ಆರ್ಥಿಕವಾಗಿ ಮಕ್ಕಳ ಮೇಲೆ ಅವಲಂಬಿತರಾದರೆ ಅವರು ನಿಮ್ಮನ್ನು ಕಾಣುವ ರೀತಿ ಬದಲಾಗಬೇಡಿ. ಮಕ್ಕಳಿಗೆ ಸೇರಬೇಕಾದ ಆಸ್ತಿಯ ಬದಲು ವಿಲ್ ಮಾಡಿ. ಸಾಯುವವರೆಗೂ ಆಸ್ತಿ, ಮನೆಯ ಆರ್ಥಿಕ ವ್ಯವಹಾರ ನಿಮ್ಮ ನಿಯಂತ್ರಣದಲ್ಲೇ ಇರಲಿ. ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂದು ಡಾ. ಚಂದ್ರಶೇಖರ್ ತಿಳಿಸಿದ್ದಾರೆ.

ಯಾರಿಗಾದರೂ ಮಾನಸಿಕ ಸಮಸ್ಯೆಗೆ ಕೌನ್ಸೆಲಿಂಗ್ ಬೇಕೆಂದರೆ ಕೇಂದ್ರ ಸರ್ಕಾರದಿಂದಲೇ ಸೆಲ್​ಗಳನ್ನು ಸ್ಥಾಪಿಸಲಾಗಿದೆ. 14416 ಇದು ಕೇಂದ್ರ ಸರ್ಕಾರದ ಉಚಿತ ಕೌನ್ಸಿಲಿಂಗ್​ನ ಫೋನ್ ನಂಬರ್. ಇದರಲ್ಲಿ ಎಂಎ, ಎಂಎಸ್​ಸಿ ಮಟ್ಟದ ತಜ್ಞ ಕೌನ್ಸಿಲರ್​ಗಳಿರುತ್ತಾರೆ. ಅವರು ನಿಮಗೆ ಸಲಹೆಗಳನ್ನು ನೀಡಿ, ಕೌನ್ಸಿಲಿಂಗ್ ಮಾಡುತ್ತಾರೆ. ಸುಮಾರು 3 ಸಾವಿರ ಜನ ದಿನವೂ ಫೋನ್ ಮಾಡಿ ಈ ಸೆಲ್​ನ ಪ್ರಯೋಜನ ಪಡೆಯುತ್ತಿದ್ದಾರೆ. 20 ಭಾಷೆಗಳಲ್ಲಿ ಕೌನ್ಸಿಲಿಂಗ್ ನೀಡಲಾಗುತ್ತಿದೆ. ಯಾವ ಭಾಷೆಯಲ್ಲಿ ಬೇಕಾದರೂ ಮಾತನಾಡಬಹುದು. ದಿನದ 24 ಗಂಟೆಯೂ ಕೌನ್ಸಿಲಿಂಗ್ ಲಭ್ಯವಿರುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:19 pm, Mon, 29 January 24

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್