ಗುಣಮಟ್ಟದ ನಿದ್ರೆ, ಮಾನಸಿಕ ಆರೋಗ್ಯಕ್ಕೆ ಈ ರೀತಿ ಮಾಡಿ
ಮೊಬೈಲ್, ಕಂಪ್ಯೂಟರ್, ಟಿವಿ ಸ್ಕ್ರೀನ್ನಿಂದ ಹೊರಸೂಸುವ ಕಟುವಾದ ನೀಲಿ ಬೆಳಕು ನಿಮ್ಮ ಸಿರ್ಕಾಡಿಯನ್ ಲಯವನ್ನು ಅಡ್ಡಿಪಡಿಸುತ್ತದೆ. ಇದರಿಂದ ನಿದ್ರಿಸಲು ಕಷ್ಟವಾಗುತ್ತದೆ. ಹೀಗಾಗಿ, ಮಲಗುವ ಸಮಯಕ್ಕೆ ಕನಿಷ್ಠ 1 ಗಂಟೆ ಮೊದಲು ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸದಿರುವುದು ಉತ್ತಮ.
ನಿದ್ರೆ ಮಾಡುವಾಗ ನಮ್ಮ ದೇಹ ಮಾತ್ರವಲ್ಲದೆ ಮನಸಿಗೂ ವಿಶ್ರಾಂತಿ ಸಿಗುತ್ತದೆ. ಇಡೀ ದಿನದ ಆಯಾಸವನ್ನೆಲ್ಲ ನೀಗಿಸಲು ನಿದ್ರೆ ಬಹಳ ಅತ್ಯಗತ್ಯ. ಕೆಲವರಿಗೆ ನಿದ್ರೆ ಮಾಡಲು ಬಹಳ ಕಿರಿಕಿರಿ ಆಗುತ್ತದೆ. ರಾತ್ರಿಯಿಂದ ಬೆಳಗ್ಗೆವರೆಗೆ ದೀರ್ಘಾವಧಿ ನಿದ್ರೆ ಮಾಡಲು ಬಹುತೇಕ ಜನರು ಪರದಾಡುತ್ತಾರೆ. ಇದಕ್ಕೆ ಹಲವು ಕಾರಣಗಳಿವೆ. ಡಿಜಿಟಲ್ ಯುಗದಲ್ಲಿ ರಾತ್ರಿ ಮಲಗುವಾಗ ಮೊಬೈಲ್ ನೋಡದೆ ಮಲಗುವವರು ಬಹಳ ಕಡಿಮೆ. ಇದು ಕೂಡ ನಮ್ಮ ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ.
ಮೊಬೈಲ್, ಕಂಪ್ಯೂಟರ್, ಟಿವಿ ಸ್ಕ್ರೀನ್ನಿಂದ ಹೊರಸೂಸುವ ಕಟುವಾದ ನೀಲಿ ಬೆಳಕು ನಿಮ್ಮ ಸಿರ್ಕಾಡಿಯನ್ ಲಯವನ್ನು ಅಡ್ಡಿಪಡಿಸುತ್ತದೆ. ಇದರಿಂದ ನಿದ್ರಿಸಲು ಕಷ್ಟವಾಗುತ್ತದೆ. ಹೀಗಾಗಿ, ಮಲಗುವ ಸಮಯಕ್ಕೆ ಕನಿಷ್ಠ 1 ಗಂಟೆ ಮೊದಲು ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸದಿರುವುದು ಉತ್ತಮ. ಅದರ ಬದಲಾಗಿ ಪುಸ್ತಕವನ್ನು ಓದುವುದು, ಧ್ಯಾನ ಮಾಡುವುದು ಅಥವಾ ಬೆಚ್ಚಗಿನ ಸ್ನಾನ ಮಾಡುವುದರಿಂದ ನಿದ್ರೆ ಚೆನ್ನಾಗಿ ಬರುತ್ತದೆ. ಇದರಿಂದ ನೀವು ಒತ್ತಡ ರಹಿತ ಮನಸ್ಥಿತಿಯಿಂದ ಉತ್ತಮವಾಗಿ ನಿದ್ರಿಸಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: ಯಾವ ಭಂಗಿಯಲ್ಲಿ ನಿದ್ರೆ ಮಾಡಬೇಕು: ಯಾವ ಮಲಗುವ ಭಂಗಿಯು ಆರೋಗ್ಯಕ್ಕೆ ಒಳ್ಳೆಯದು?
ನಿಮ್ಮ ಮಲಗುವ ಕೋಣೆ ವಿಶ್ರಾಂತಿಗೆ ಮೀಸಲಾಗಿರಬೇಕು. ನಿಮ್ಮ ನಿದ್ರೆಯ ವಾತಾವರಣವು ತಂಪಾಗಿರುವ, ಗಾಢವಾದ ಮತ್ತು ಶಾಂತವಾಗಿರುವುದರ ಮೂಲಕ ಗುಣಮಟ್ಟದ ನಿದ್ರೆಗೆ ಅನುಕೂಲಕರವಾಗಿರುವಂತೆ ನೋಡಿಕೊಳ್ಳಿ. ಆರಾಮದಾಯಕವಾದ ಹಾಸಿಗೆ ಮತ್ತು ದಿಂಬುಗಳನ್ನು ಬಳಸಿ. ಹೊರಗಿನ ಶಬ್ದಗಳು ನಿದ್ರಿಸಲು ತೊಂದರೆ ಮಾಡುತ್ತಿದ್ದರೆ ಇಯರ್ ಫೋನ್ ಹಾಕಿಕೊಂಡು ಒಳ್ಳೆಯ ಮ್ಯೂಸಿಕ್ ಕೇಳಿ.
ನಮ್ಮ ದೇಹಕ್ಕೂ ಒಂದು ಟೈಂ ಟೇಬಲ್ ಅಭ್ಯಾಸ ಮಾಡಿಸಬೇಕು. ದಿನವೂ ಒಂದೇ ಸಮಯದಲ್ಲಿ ಮಲಗುವುದು ಮತ್ತು ಏಳುವುದರಿಂದ ದೇಹ ಅದಕ್ಕೆ ಹೊಂದಿಕೊಳ್ಳುತ್ತದೆ. ಇದು ನಮ್ಮ ಸಿರ್ಕಾಡಿಯನ್ ಲಯವನ್ನು ಬಲಪಡಿಸುತ್ತದೆ, ಇದರಿಂದ ನಿದ್ರಿಸಲು ಮತ್ತು ತನ್ನಷ್ಟಕ್ಕೆ ತಾನೇ ಒಂದೇ ಸಮಯದಲ್ಲಿ ಎಚ್ಚರಗೊಳ್ಳಲು ಸುಲಭವಾಗುತ್ತದೆ.
ಇದನ್ನೂ ಓದಿ: ಬಿಸಿ ಹಾಲು ಕುಡಿದರೆ ನಿಜಕ್ಕೂ ಚೆನ್ನಾಗಿ ನಿದ್ರೆ ಬರುತ್ತಾ?
ಪ್ರತಿ ರಾತ್ರಿ 7-9 ಗಂಟೆಗಳ ನಿದ್ರೆ ಮಾಡಿ. ಮಲಗುವ ಮುನ್ನ ಒಂದು ಕಪ್ ಗಿಡಮೂಲಿಕೆ ಚಹಾವನ್ನು ಕುಡಿಯುವುದು ಉತ್ತಮ. ಕ್ಯಾಮೊಮೈಲ್, ವ್ಯಾಲೇರಿಯನ್ ರೂಟ್ ಅಥವಾ ಲ್ಯಾವೆಂಡರ್ ಚಹಾದಂತಹ ಕೆಫೀನ್ ಮುಕ್ತ ಚಹಾಗಳನ್ನು ಸೇವಿಸಿ. ಈ ಗಿಡಮೂಲಿಕೆಗಳ ಕಷಾಯವು ವಿಶ್ರಾಂತಿಯನ್ನು ಉತ್ತೇಜಿಸುವುದು ಮಾತ್ರವಲ್ಲದೆ ನಿಮ್ಮ ದೇಹಕ್ಕೆ ನಿದ್ರೆಗಾಗಿ ತಯಾರಿ ಮಾಡುವ ಸಮಯ ಎಂದು ಸಂಕೇತ ನೀಡುತ್ತದೆ. ಸಂಜೆಯ ಸಮಯದಲ್ಲಿ ಕೆಫೀನ್ ಹೊಂದಿರುವ ಪಾನೀಯಗಳಿಂದ ದೂರವಿರಿ. ಏಕೆಂದರೆ ಅದು ನಿಮ್ಮ ನಿದ್ರೆಯ ಚಕ್ರವನ್ನು ಅಡ್ಡಿಪಡಿಸಬಹುದು.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ