Viral Posts: ಬಂಗಾಳದ ಮೊದಲ ಗವರ್ನರ್ ಕಾಲದ ಕಬಾಬ್​​ ರೆಸಿಪಿ ವೈರಲ್​​

|

Updated on: Feb 25, 2023 | 3:46 PM

ಬಂಗಾಳದ ಮೊದಲ ಗವರ್ನರ್ ಜನರಲ್ ವಾರೆನ್ ಹೇಸ್ಟಿಂಗ್ಸ್ ಅವರ ಖಾಸಗಿ ಡೈರಿಯಿಂದ ಕಬಾಬ್ ಪಾಕವಿಧಾನದ ಹಳೆಯ ಫೋಟೋವನ್ನು ಇತ್ತೀಚೆಗೆ ಬರಹಗಾರದ ಇರಾ ಮುಖೋಟಿ ಟ್ವಿಟರ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Viral Posts: ಬಂಗಾಳದ ಮೊದಲ ಗವರ್ನರ್ ಕಾಲದ ಕಬಾಬ್​​ ರೆಸಿಪಿ ವೈರಲ್​​
ಕಬಾಬ್ ಪಾಕವಿಧಾನದ ಹಳೆಯ ಫೋಟೋ
Image Credit source: Twitter
Follow us on

ಬಂಗಾಳದ ಮೊದಲ ಗವರ್ನರ್ ಜನರಲ್ ವಾರೆನ್ ಹೇಸ್ಟಿಂಗ್ಸ್ ಅವರ ಖಾಸಗಿ ಡೈರಿಯಿಂದ ಕಬಾಬ್ ಪಾಕವಿಧಾನ(Kebab Recipe) ದ ಹಳೆಯ ಫೋಟೋವನ್ನು ಇತ್ತೀಚೆಗೆ, ಬರಹಗಾರದ ಇರಾ ಮುಖೋಟಿ (Ira Mukhoty) ಟ್ವಿಟರ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇಂದಿನ ಕಾಲದಿಂದಲೂ ಭಾರತೀಯ ಪಾಕ ಪದ್ದತಿಯಲ್ಲಿ ಕಬಾಬ್​​ಗೆ ಹಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ ಎಂದು ಇದರಿಂದ ತಿಳಿದುಬರುತ್ತದೆ. ಇರಾ ಮುಖೋಟಿ ತಮ್ಮ ಟ್ವಿಟರ್​​ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್​​ ಇಲ್ಲಿದೆ.

ಈ ಫೋಟೋದಲ್ಲಿ ಮಾಂಸ, ಬೆಳ್ಳುಳ್ಳಿ, ಮೆಣಸಿನಕಾಯಿ, ಮೊಟ್ಟೆಯ ಹಳದಿ, ಮುಂತಾದ ಪದಾರ್ಥಗಳನ್ನು ಬರೆದಿರುವುದನ್ನು ಕಾಣಬಹುದು. ಜೊತೆಗೆ ಪಾಕವಿಧಾನವನ್ನು ಕೂಡ ಹಂಚಿಕೊಳ್ಳಲಾಗಿದೆ. ಮೇಲೆ ನೀಡಿರುವ ಎಲ್ಲಾ ಪದಾರ್ಥಗಳನ್ನು 5 ಅಥವಾ 6 ಗ್ಲಾಸ್ ನೀರಿನಲ್ಲಿ ಚೆನ್ನಾಗಿ ಮಿಶ್ರಣ ಮಾಡಿ, ನಂತರ ಇದನ್ನು ಬಾಣಲೆಯಲ್ಲಿ ಹಾಕಿ ಚೆನ್ನಾಗಿ ಕುದಿಸಿ. ನಂತರ ಇದನ್ನು ಕಲ್ಲಿನ ಮೇಲೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಇದಾದ ನಂತರ ಬೆಣ್ಣೆಯಲ್ಲಿ ಫ್ರೈ ಮಾಡಿ, ಅವು ಬಾಣಲೆಗೆ ಅಂಟಿಕೊಳ್ಳದಂತೆ ನೋಡಿಕೊಳ್ಳಿ ಎಂದು ಬರೆಯಲಾಗಿದೆ.

ಇದನ್ನೂ ಓದಿ:  ಪುದೀನಾ ಬಳಸಿ ಮೊಸರು ಬಜ್ಜಿ ತಯಾರಿಸಿ, ರೆಸಿಪಿ ಇಲ್ಲಿದೆ

ಟ್ವಿಟರ್​​ ಖಾತೆಯಲ್ಲಿ ಹಂಚಿಕೊಂಡ ನಂತರ, ಟ್ವೀಟ್ 114. 6ಸಾವಿರ ವೀಕ್ಷಣೆಗಳನ್ನು ಮತ್ತು 1287 ಲೈಕ್ಸ್​​ ಸ್ವೀಕರಿಸಿದೆ. ಕಬಾಬ್ ರೆಸಿಪಿಯ ಈ ಹಳೆಯ ಟಿಪ್ಪಣಿಯಿಂದ ಇಂಟರ್ನೆಟ್ ಬಳಕೆದಾರರು ಸಾಕಷ್ಟು ಆಸಕ್ತಿ ಹೊಂದಿ ಕಾಮೆಂಟ್​ ಮೂಲಕ ಪ್ರತಿಕ್ರಿಯಿಸಿದ್ದಾರೆ. ವಿಶ್ವದ ಕೆಲವು ರುಚಿಕರವಾದ ಕಬಾಬ್‌ಗಳು ಲಕ್ನೋದಲ್ಲಿ ಇನ್ನೂ ಕಂಡುಬರುತ್ತವೆ ಎಂದು ಮತ್ತೊಬ್ಬರು ಬಳಕೆದಾರರು ಬರೆದುಕೊಂಡಿದ್ದಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 3:46 pm, Sat, 25 February 23