AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Quick and Easy Recipe: ಕೇವಲ ಮೂರು ಪದಾರ್ಥ ಬಳಸಿ ತಯಾರಿಸುವ ಈ ಕ್ವಿಕ್​​ ರೆಸಿಪಿಯನ್ನು ನೀವೂ ಪ್ರಯತ್ನಿಸಿ

ಕೇವಲ ಈರುಳ್ಳಿ, ಟೊಮೆಟೊ ಮತ್ತು ಕೊತ್ತಂಬರಿ ಸೊಪ್ಪನ್ನು ಬಳಸಿಕೊಂಡು ರುಚಿಕರವಾದ ಅಡುಗೆಯನ್ನು ಮಾಡಬಹುದು. ಈ ಕುರಿತ ಇನ್ನಷ್ಟು ಮಾಹಿತಿ ಇಲ್ಲಿದೆ.

Quick and Easy Recipe: ಕೇವಲ ಮೂರು ಪದಾರ್ಥ ಬಳಸಿ ತಯಾರಿಸುವ ಈ  ಕ್ವಿಕ್​​ ರೆಸಿಪಿಯನ್ನು ನೀವೂ ಪ್ರಯತ್ನಿಸಿ
ಸಾಂದರ್ಭಿಕ ಚಿತ್ರImage Credit source: NDTV FOOD
TV9 Web
| Edited By: |

Updated on: Feb 18, 2023 | 7:30 AM

Share

ಕೆಲವೊಮ್ಮೆ ಮನೆಯಲ್ಲಿ ತರಕಾರಿಗಳು ಇಲ್ಲದಂತಹ ಸಂದರ್ಭಗಳಲ್ಲಿ ಹಾಗೂ ಸಮಯದ ಅಭಾವವಿದ್ದಾಗ ಕ್ವಿಕ್ ಆಗಿ ಏನಾದರೂ ತಿಂಡಿ ಮಾಡಬೇಕೆಂದೆನಿಸಿದರೆ ಕೇವಲ ಈ ಮೂರು ವಸ್ತುಗಳನ್ನು ರುಚಿಕರವಾದ ಪಾಕವನ್ನು ತಯಾರಿಸಬಹುದು. ಎಲ್ಲರ ಮನೆಯಲ್ಲೂ ಈರುಳ್ಳಿ, ಟೊಮೆಟೊ, ಕೊತ್ತಂಬರಿ ಸೊಪ್ಪು ಇದ್ದೇ ಇರುತ್ತದೆ. ಈ ಕಡಿಮೆ ಸಾಮಾಗ್ರಿಗಳನ್ನು ಬಳಸಿಕೊಂಡು ತಯಾರಿಸಬಹುದಾದ ಸುಲಭ ಮತ್ತು ತ್ವರಿತ ಪಾಕ ವಿಧಾನಗಳ ಬಗ್ಗೆ ತಿಳಿಸಿಕೊಡುತ್ತೇವೆ.

ಟೊಮೆಟೊ-ಈರುಳ್ಳಿ ಸೂಪ್:

ಟೊಮೆಟೊ ಸೂಪ್ ತಯಾರಿಸುವುದು ಸುಲಭ ಪಾಕವಿಧಾನವಾಗಿದೆ. ಮೊದಲಿಗೆ ನೀವು ಕತ್ತರಿಸಿದ ಟೊಮೆಟೊ ಮತ್ತು ಈರುಳ್ಳಿಯನ್ನು ಹುರಿಯಿರಿ. ನಂತರ ಅದಕ್ಕೆ ಕೊತ್ತಂಬರಿ ಸೊಪ್ಪು, ಉಪ್ಪು ಕರಿಮೆಣಸು, ಉಪ್ಪು, ಬೆಣ್ಣೆ ಹಾಗೂ ನೀರನ್ನು ಸೇರಿಸಿ ಮಿಶ್ರಣ ಮಾಡಿ. ಈ ಸೂಪ್‌ನ್ನು ಕಡಿಮೆ ಸಮಯದಲ್ಲಿ ಮಾಡಬಹುದು.

ಟೊಮೆಟೊ ಈರುಳ್ಳಿ ಆಮ್ಲೆಟ್:

ಇದು ಆರೋಗ್ಯಕರವಾದ ಪಾಕ ವಿಧಾನವಾಗಿದೆ ನೀವು ಈರುಳ್ಳಿ, ಟೊಮೆಟೊ ಹಾಗೂ ಕೊತ್ತಂಬರಿ ಸೊಪ್ಪನ್ನು ನುಣ್ಣಗೆ ಕತ್ತರಿಸಿ ನಂತರ ಅದಕ್ಕೆ ಮೊಟ್ಟೆಯನ್ನು ಹಾಕಿ ಹಾಗೂ ಕರಿಮೆಣಸಿನ ಪುಡಿ, ಸ್ವಲ್ಪ ಉಪ್ಪುನ್ನು ಸೇರಿಸಿ ಚೆನ್ನಾಗಿ ವಿಪ್ ಮಾಡಿ ಬಿಸಿ ಪ್ಯಾನ್‌ನಲ್ಲಿ ಫ್ರೈ ಮಾಡಿ. ಕಡಿಮೆ ಸಮಯದಲ್ಲಿ ಈ ರುಚಿಕರವಾದ ಖಾದ್ಯವನ್ನು ತಯಾರಿಸಬಹುದು.

ಇದನ್ನೂ ಓದಿ: ಕರ್ನಾಟಕದಲ್ಲಿನ ಈ ಪ್ರಸಿದ್ಧ ಭಕ್ಷ್ಯಗಳನ್ನು ನೀವು ಮಿಸ್​​ ಮಾಡಲೇ ಬೇಡಿ

ಟೊಮೆಟೊ ಸಾಲ್ಸಾ:

ಮೆಕ್ಸಿಕನ್ ಪಾಕಪದ್ಧತಿಯಾಗಿರುವ ಈ ಟೊಮೆಟೊ ಸಾಲ್ಸಾವನ್ನು ತಯಾರಿಸುವುದು ಬಲು ಸುಲಭವಾಗಿದೆ. ನೀವು ಮೊದಲಿಗೆ ಟೊಮೆಟೊ, ಈರುಳ್ಳಿ, ಕೊತ್ತಂಬರಿ ಸೊಪ್ಪನ್ನು ನುಣ್ಣಗೆ ಕತ್ತರಿಸಿ ಅದಕ್ಕೆ ನಿಂಬೆ ರಸ ಮತ್ತು ಉಪ್ಪನ್ನು ಸೇರಿಸಿ ಮಿಶ್ರಣ ಮಾಡಿ ಇಟ್ಟುಕೊಳ್ಳಿ. ಇದನ್ನು ನೀವು ನ್ಯಾಚೋಸ್ ಜೊತೆಗೂ ತಿನ್ನಬಹುದು ಅಥವಾ ಬ್ರೆಡ್ ಟೋಸ್ಟ್ ಜೊತೆಗೆ ಹರಡಿ ಕೂಡಾ ತಿನ್ನಬಹುದು.

ಮೆಕ್ಸಿಕನ್ ರೈಸ್:

ನೀವು ಸಾಲ್ಸಾದ ಜೊತೆಗೆ ಮೆಕ್ಸಿಕನ್ ರೈಸ್‌ನ್ನು ಕೂಡಾ ಮಾಡಿ ತಿನ್ನಬಹುದು. ಇದಕ್ಕಾಗಿ ನೀವು ಮಾಡಬೇಕಾದುದು ಏನೆಂದರೆ ಅನ್ನವನ್ನು ಕತ್ತರಿಸಿದ ಈರುಳ್ಳಿ ಮತ್ತು ಟೊಮೆಟೊದೊಂದಿಗೆ ಹುರಿಯಿರಿ. ಅದಕ್ಕೆ ಉಪ್ಪು, ನಿಂಬೆ ರಸ ಮತ್ತು ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿ ಬೆರೆಸಿ. ಈ ರುಚಿಕರವಾದ ಭಕ್ಷ್ಯವನ್ನು ಮನೆಯಲ್ಲಿಯೇ ತಯಾರಿಸಿ ಸವಿಯಬಹುದು.

ಕರಿ:

ಇದು ಅತ್ಯಂತ ಸುಲಭವಾದ ಭಾರತೀಯ ಪಾಕವಿಧಾನವಾಗಿದೆ. ಇದನ್ನು ನೀವು ಅನ್ನ, ಚಪಾತಿ, ರೋಟಿ ಹೀಗೆ ಎಲ್ಲದರೊಂದಿಗೆ ಸೇರಿಸಿ ಸಮಿಯಬಹುದು. ಈ ಗ್ರೇವಿಯ ರುಚಿಯನ್ನು ಹೆಚ್ಚಿಸಲು ನೀವು ನಿಮ್ಮ ಆಯ್ಕೆಯ ಪನೀರ್, ಮೊಟ್ಟೆ ಅಥವಾ ತರಕಾರಿ ಯಾವುದನ್ನಾದರೂ ಸೇರಿಸಬಹುದು. ಈ ಕರಿಯನ್ನು ಮಾಡಲು ನೀವು ಮೊದಲು ಈರುಳ್ಳಿಯನ್ನು ಹುರಿದು ನಂತರ ಅದಕ್ಕೆ ಟೊಮೆಟೊ, ಜೀರಿಗೆ, ಕೊತ್ತಂಬರಿ, ಕೆಂಪು ಮೆನಸಿನಕಾಯಿ, ಉಪ್ಪು ಹಾಗೂ ಇನ್ನಿತರ ಮಸಾಲೆಗಳನ್ನು ಸೇರಿಸಿ ರುಬ್ಬಿ. ನಂತರ ತಯಾರಾದ ಗ್ರೇವಿಯನ್ನು ಎಣ್ಣೆ ಬಿಡುವವರೆಗೆ ಪ್ಯಾನ್‌ನಲ್ಲಿ ಬೇಯಿಸಿ. ನಂತರ ಕೊತ್ತಂಬರಿ ಸೊಪ್ಪಿನೊಂಗೆ ಅಲಂಕರಿಸಿದರೆ ಗ್ರೇವಿ ಸವಿಯಲು ಸಿದ್ಧ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Follow Us
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ